ಕಾಂಟ್ಯಾಕ್ಟ್​ ಲೆನ್ಸ್ ಎಡವಟ್ಟು; ಕನ್ನಡ ಸಿನಿಮಾದಲ್ಲಿ ನಟಿಸಿದ್ದ ಈ ನಟಿಗೆ ಕಣ್ಣೇ ಹೋಯ್ತಾ?

| Updated By: ರಾಜೇಶ್ ದುಗ್ಗುಮನೆ

Updated on: Jul 22, 2024 | 9:00 AM

ಅನೇಕ ನಟಿಯರು ಕಾಂಟ್ಯಾಕ್ಟ್ ಲೆನ್ಸ್ ಬಳಸುತ್ತಾರೆ. ಈಗ ಜಾಸ್ಮಿನ್ ಭಾಸಿನ್ ಅವರು ಈಗ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಸ್ವತಃ ಈ ಬಗ್ಗೆ ಅವರೇ ಮಾಹಿತಿ ಹಂಚಿಕೊಂಡಿದ್ದಾರೆ. ಒಂದು ಕಣ್ಣಿಗೆ ಅವರು ಬ್ಯಾಂಡೇಜ್ ಹಾಕಿಕೊಂಡು ಫೋಟೋನ ಅಪ್​ಲೋಡ ಮಾಡಿದ್ದಾರೆ. 

ಕಾಂಟ್ಯಾಕ್ಟ್​ ಲೆನ್ಸ್ ಎಡವಟ್ಟು; ಕನ್ನಡ ಸಿನಿಮಾದಲ್ಲಿ ನಟಿಸಿದ್ದ ಈ ನಟಿಗೆ ಕಣ್ಣೇ ಹೋಯ್ತಾ?
ಜಾಸ್ಮಿನ್
Follow us on

ಕನ್ನಡ, ಹಿಂದಿ ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆಗಿರುವ ಜಾಸ್ಮಿನ್ ಭಾಸಿನ್ ಅವರು ಈಗ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಸ್ವತಃ ಈ ಬಗ್ಗೆ ಅವರೇ ಮಾಹಿತಿ ಹಂಚಿಕೊಂಡಿದ್ದಾರೆ. ಕಣ್ಣಿಗೆ ಲೆನ್ಸ್ ಹಾಕುವ ಪ್ರಯತ್ನದಲ್ಲಿ ಇದ್ದ ಅವರು ಕಣ್ಣಿನ ಕಾರ್ನಿಯಲ್​ಗೆ ಹಾನಿ ಮಾಡಿಕೊಂಡಿದ್ದಾರೆ. ಇದರಿಂದ ಅವರ ದೃಷ್ಟಿಗೆ ತೊಂದರೆ ಆಗಿದೆ. ಇದರಿಂದ ಕಣ್ಣು ಸರಿಯಾಗಿ ಕಾಣಿಸುತ್ತಿಲ್ಲ. ಒಂದು ಕಣ್ಣಿಗೆ ಅವರು ಬ್ಯಾಂಡೇಜ್ ಹಾಕಿಕೊಂಡು ಫೋಟೋನ ಅಪ್​ಲೋಡ ಮಾಡಿದ್ದಾರೆ.

ಈ ಬಗ್ಗೆ ಅವರು ಬಾಂಬೆ ಟೈಮ್ಸ್​ಗೆ ಮಾಹಿತಿ ನೀಡಿದ್ದಾರೆ. ‘ಜುಲೈ 17ರಂದು ನಾನು ದೆಹಲಿಯಲ್ಲಿ ಇದ್ದೆ. ಕಾರ್ಯಕ್ರಮ ಒಂದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೆ. ನನ್ನ ಕಾಂಟ್ಯಾಕ್ಟ್ ಲೆನ್ಸ್​ನಲ್ಲಿ ಏನು ಸಮಸ್ಯೆ ಆಯಿತು ಅನ್ನೋದು ಗೊತ್ತಿಲ್ಲ. ಅದನ್ನು ಧರಿಸಿದೆ. ಆಗ ನನ್ನ ಕಣ್ಣಿಗೆ ತೊಂದರೆ ಆಗೋಕೆ ಆರಂಭ ಆಯಿತು. ಕಣ್ಣು ಉರಿಯೋಕೆ ಆರಂಭಿಸಿತು. ನಂತರ ನಿಧಾನವಾಗಿ ಆ ಉರಿ ಹೆಚ್ಚಾಯಿತು’ ಎಂದಿದ್ದಾರೆ ಅವರು.

‘ನಾನು ವೈದ್ಯರ ನೋಡಬೇಕು ಎಂದುಕೊಂಡೆ. ಆದರೆ ಕೆಲಸದ ಕಾರಣದಿಂದ ಅದು ಸಾಧ್ಯವಾಗಿಲ್ಲ. ನಾನು ಮೊದಲು ಕಾರ್ಯಕ್ರಮದಲ್ಲಿ ಭಾಗಿ ಆಗಿ ಆ ಬಳಿಕ ವೈದ್ಯರನ್ನು ನೋಡಬೇಕು ಎಂದುಕೊಂಡೆ. ಹೀಗಾಗಿ ಈವೆಂಟ್​ನಲ್ಲಿ ನಾನು ಸನ್​ಗ್ಲಾಸ್ ಧರಿಸಿದೆ. ಈ ವಿಚಾರವನ್ನು ನನ್ನ ಟೀಂನವರು ಒಳ್ಳೆಯ ರೀತಿಯಲ್ಲಿ ಹ್ಯಾಂಡಲ್ ಮಾಡಿದರು. ಈ ಘಟನೆ ಬಳಿಕ ನನಗೆ ಸರಿಯಾಗಿ ಕಾಣುತ್ತಿಲ್ಲ. ನಾನು ಕಣ್ಣಿನ ಆಸ್ಪತ್ರೆಗೆ ಭೇಟಿ ನೀಡಿದ್ದೇನೆ. ಅವರು ಪರೀಕ್ಷೆ ಮಾಡಿ ಹೇಳಿದ ಪ್ರಕಾರ ನನ್ನ ಕಾರ್ನಿಯಲ್​ಗೆ ಡ್ಯಾಮೇಜ್ ಆಗಿದೆಯಂತೆ. ಅವರು ಕಣ್ಣಿಗೆ ಬ್ಯಾಡ್ಜ್ ಹಾಕಿದ್ದಾರೆ’ ಎಂದಿದ್ದಾರೆ ಅವರು.

‘ನಾನು ಸಾಕಷ್ಟು ನೋವಿನಲ್ಲಿ ಇದ್ದೇನೆ. ನಾನು ನಾಲ್ಕೈದು ದಿನದಲ್ಲಿ ಚೇತರಿಕೆ ಕಾಣುತ್ತೇನೆ ಎಂದು ವೈದ್ಯರು ಹೇಳಿದ್ದಾರೆ. ಅಲ್ಲಿಯವರೆಗೆ ನಾನು ನನ್ನ ಕಣ್ಣಿನ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಿದೆ. ನನಗೆ ಯಾವುದೂ ಸರಿಯಾಗಿ ಕಾಣುತ್ತಿಲ್ಲ. ಕಣ್ಣಿನ ನೋವಿನಿಂದ ನಿದ್ದೆ ಕೂಡ ಸರಿಯಾಗಿ ಮಾಡಲು ಸಾಧ್ಯವಾಗುತ್ತಿಲ್ಲ’ ಎಂದಿದ್ದಾರೆ ಅವರು. ಸದ್ಯ ಜಾಸ್ಮಿನ್ ಅವರು ಶೀಘ್ರವೇ ಕೆಲಸಕ್ಕೆ ಬರುವ ಆಲೋಚನೆಯಲ್ಲಿ ಇದ್ದಾರೆ.

ಇದನ್ನೂ ಓದಿ: ‘ಮೌರ್ಯ’ ಸಿನಿಮಾ ಚೆಲುವೆ ಮೀರಾ ಜಾಸ್ಮಿನ್ ಈಗೇನು ಮಾಡುತ್ತಿದ್ದಾರೆ?

ಜಾಸ್ಮಿನ್ ಅವರು ಸಿನಿಮಾ ಹಾಗೂ ಕಿರುತೆರೆಯಲ್ಲಿ ನಟಿಸಿದ್ದಾರೆ. ಜಾಸ್ಮಿನ್ ಅವರು ಕನ್ನಡದ ‘ಕ್ರೋರ್​ಪತಿ’ ಸಿನಿಮಾದಲ್ಲಿ ನಟಿಸಿದ್ದರು. ಕೋಮಲ್ ಅವರು ಈ ಸಿನಿಮಾದಲ್ಲಿ ಮುಖ್ಯಭೂಮಿಕೆ ನಿರ್ವಹಿಸಿದ್ದರು. ಇದರ ಜೊತೆಗೆ ಹಿಂದಿ ಬಿಗ್ ಬಾಸ್​ನಲ್ಲೂ ಅವರು ಭಾಗಿ ಆಗಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.