AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೆನ್ ಜೀ ಪ್ರೇಕ್ಷಕರ ಮನಗೆಲ್ಲುವ ಪ್ರಯತ್ನ; ಅಗಸ್ತ್ಯ ಹೊಸ ಸಿನಿಮಾ ‘ಡಿಂಚಕ್ ಡಿಂಚಕ್’

ನಟ ಅಗಸ್ತ್ಯ ಅವರ ಹೊಸ ಸಿನಿಮಾ ಶೀರ್ಷಿಕೆ ‘ಡಿಂಚಕ್ ಡಿಂಚಕ್’. ಹೊಸ ತಲೆಮಾರಿನ ಪ್ರೇಕ್ಷಕರನ್ನು ಗಮನದಲ್ಲಿ ಇಟ್ಟುಕೊಂಡು ಈ ಸಿನಿಮಾ ಸಿದ್ಧವಾಗಲಿದೆ. ಈ ಚಿತ್ರಕ್ಕೆ ಅಗಸ್ತ್ಯ ಅವರೇ ಕಥೆ, ಚಿತ್ರಕಥೆ ಬರೆದು ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ‘ಶ್ರೀರತ್ನ ಫಿಲ್ಮ್ ಕಂಪನಿ’ ಮೂಲಕ ಈ ಸಿನಿಮಾ ನಿರ್ಮಾಣ ಆಗಲಿದೆ.

ಜೆನ್ ಜೀ ಪ್ರೇಕ್ಷಕರ ಮನಗೆಲ್ಲುವ ಪ್ರಯತ್ನ; ಅಗಸ್ತ್ಯ ಹೊಸ ಸಿನಿಮಾ ‘ಡಿಂಚಕ್ ಡಿಂಚಕ್’
Agasthya
ಮದನ್​ ಕುಮಾರ್​
|

Updated on: May 11, 2026 | 5:48 PM

Share

‘ಜೊತೆಯಾಗಿ ಹಿತವಾಗಿ’ ಎಂಬ ಕಾವ್ಯಾತ್ಮಕ ಚಿತ್ರದ ಮೂಲಕ ಸದ್ದಿಲ್ಲದೆ ಸ್ಯಾಂಡಲ್‌ವುಡ್ ಪ್ರವೇಶಿಸಿ ಪ್ರೇಕ್ಷಕರ ಗಮನ ಸೆಳೆದಿದ್ದ ಹೊಸ ನಟ ಅಗಸ್ತ್ಯ (Agasthya) ಅವರು ಈಗ ತಮ್ಮ ಎರಡನೇ ಸಿನಿಮಾದೊಂದಿಗೆ ಪ್ರೇಕ್ಷಕರ ಎದುರು ಬರಲು ಸಿದ್ಧತೆ ಮಾಡಿಕೊಂಡಿದ್ದಾರೆ. ವಿಭಿನ್ನ ಶೀರ್ಷಿಕೆಯ ಮೂಲಕ ಕುತೂಹಲ ಮೂಡಿಸುವ ಪ್ರಯತ್ನ ಅವರದ್ದಾಗಿದೆ. ಈ ಸಿನಿಮಾಗೆ ‘ಡಿಂಚಕ್ ಡಿಂಚಕ್’ (Dinchak Dinchak) ಎಂದು ಹೆಸರಿಡಲಾಗಿದೆ. ಹದಿಹರೆಯದವರ ತರಲೆ-ತಮಾಷೆ ಹಾಗೂ ಕೌಟುಂಬಿಕ ಭಾವನೆಗಳನ್ನೊಳಗೊಂಡ ಅಚ್ಚುಕಟ್ಟಾದ ಕಥಾ ಎಳೆಯನ್ನು ಅಗಸ್ತ್ಯ ಸಿದ್ಧಪಡಿಸಿಕೊಂಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ದಕ್ಷಿಣ ಭಾರತದ ಸಿನಿಮಾಗಳಲ್ಲಿ ವಿಚಿತ್ರ ಎನಿಸಿದರೂ, ಇಂದಿನ ತಲೆಮಾರಿಗೆ ಹತ್ತಿರವಾಗುವ ಶೀರ್ಷಿಕೆಗಳು ಹೆಚ್ಚು ಆಕರ್ಷಕ ಎನಿಸಿಕೊಳ್ಳುತ್ತಿವೆ ಎಂಬುದು ಚಿತ್ರತಂಡದ ನಂಬಿಕೆ. ಇದೇ ಹಾದಿಯಲ್ಲಿ ಹೊರಟಿರುವ ‘ಡಿಂಚಕ್ ಡಿಂಚಕ್’ ಚಿತ್ರತಂಡ, ಪ್ರಮುಖವಾಗಿ ಜನ್-ಜೀ (Gen-Z) ಮತ್ತು ಜನ್ ಆಲ್ಫಾ (Gen-Alpha) ವರ್ಗದವರನ್ನು ಗಮನದಲ್ಲಿ ಇಟ್ಟುಕೊಂಡಿದೆ.

ಕಳೆದ ವರ್ಷ ಬಿಡುಗಡೆಯಾಗಿದ್ದ ‘ಜೊತೆಯಾಗಿ ಹಿತವಾಗಿ’ ಸಿನಿಮಾ ಸೀಮಿತ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದರೂ, ಅಗಸ್ತ್ಯ ಅವರ ನಟನೆಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಈಗ ಎರಡನೇ ಚಿತ್ರದಲ್ಲಿ ನಟನೆಯ ಜೊತೆಗೆ ಕಥೆ, ಚಿತ್ರಕಥೆ ಹಾಗೂ ನಿರ್ದೇಶನದ ಜವಾಬ್ದಾರಿಯನ್ನೂ ತಮ್ಮ ತಂಡದೊಂದಿಗೆ ಹಂಚಿಕೊಂಡು ಸಾಗಲು ಅಗಸ್ತ್ಯ ಅಣಿಯಾಗಿದ್ದಾರೆ ಎಂಬುದು ವಿಶೇಷ.

‘ಶ್ರೀರತ್ನ ಫಿಲ್ಮ್ ಕಂಪನಿ’ ಮೂಲಕ ಈ ಸಿನಿಮಾ ನಿರ್ಮಾಣ ಆಗಲಿದೆ. ಆನಂದ್ ರಾಜ ವಿಕ್ರಮ ಅವರು ಸಂಗೀತ ನೀಡುತ್ತಿದ್ದಾರೆ. ಈ ಸಿನಿಮಾದಲ್ಲಿ ವಿಭಿನ್ನ ಶೈಲಿಯ ಹಾಡುಗಳು ಇರಲಿವೆ ಎನ್ನಲಾಗಿದೆ. ಅಭಿರೇಖ ಕೃಷ್ಣ ಅವರು ಕಾಸ್ಟ್ಯೂಮ್ ಡಿಸೈನ್ ಮಾಡಲಿದ್ದಾರೆ. ಉತ್ತಮ ಮೇಕಿಂಗ್ ಸಲುವಾಗಿ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಕ್ಯಾಮೆರಾಗಳನ್ನು ಬಳಸಲಾಗುತ್ತಿದೆ ಎಂದು ಕ್ರಿಯೇಟಿವ್ ಹೆಡ್ ಪ್ರಶಾಂತ್ ಬಾಗೂರು ತಿಳಿಸಿದ್ದಾರೆ.

ಇದನ್ನೂ ಓದಿ: ಕನ್ನಡದ ಕಲಾವಿದರು ನಟಿಸಿದ ‘ಕೃಷ್ಣಾವತಾರಂ’ ಚಿತ್ರಕ್ಕೆ ಉತ್ತರ ಪ್ರದೇಶದಲ್ಲಿ ತೆರಿಗೆ ವಿನಾಯಿತಿ

ಈಗ ‘ಡಿಂಚಕ್ ಡಿಂಚಕ್’ ಸಿನಿಮಾದ ಚಿತ್ರೀಕರಣಕ್ಕೆ ಪೂರ್ವ ಸಿದ್ಧತೆಗಳು ಭರದಿಂದ ಸಾಗುತ್ತಿದೆ. ಉಳಿದ ತಾಂತ್ರಿಕ ವರ್ಗದ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ವಿಭಿನ್ನ ಶೀರ್ಷಿಕೆಯೊಂದಿಗೆ ಸೆಟ್ಟೇರಲಿರುವ ‘ಡಿಂಚಕ್ ಡಿಂಚಕ್’ ಸಿನಿಮಾ ಎಷ್ಟು ಡಿಫರೆಂಟ್ ಆಗಿರಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ಜಂಬೂ ಸವಾರಿಗೆ ಚಾಲನೆ ನೀಡಲು ಮೈಸೂರಿಗೆ ಬಂದ ಸಿಎಂ ಹೇಳಿದ್ದೇನು ನೋಡಿ
ಜಂಬೂ ಸವಾರಿಗೆ ಚಾಲನೆ ನೀಡಲು ಮೈಸೂರಿಗೆ ಬಂದ ಸಿಎಂ ಹೇಳಿದ್ದೇನು ನೋಡಿ
ಮೈಸೂರು ದಸರಾ 2026: ಆನೆಗಳ ಮೈಮೇಲೆ ಮೂಡಿದ ಬಣ್ಣ ಬಣ್ಣದ ಚಿತ್ತಾರ
ಮೈಸೂರು ದಸರಾ 2026: ಆನೆಗಳ ಮೈಮೇಲೆ ಮೂಡಿದ ಬಣ್ಣ ಬಣ್ಣದ ಚಿತ್ತಾರ
ಮೈಸೂರು ದಸರಾ: ಬನ್ನಿ ವೃಕ್ಷಕ್ಕೆ ಪೂಜೆ ಸಲ್ಲಿಸಿದ ಯದುವೀರ್ ಒಡೆಯರ್
ಮೈಸೂರು ದಸರಾ: ಬನ್ನಿ ವೃಕ್ಷಕ್ಕೆ ಪೂಜೆ ಸಲ್ಲಿಸಿದ ಯದುವೀರ್ ಒಡೆಯರ್
ಮೈಸೂರು ದಸರಾ 2026: ಗೊಂದಲಗಳ ನಡುವೆ ವಜ್ರಮುಷ್ಟಿ ಕಾಳಗ ರದ್ದು!
ಮೈಸೂರು ದಸರಾ 2026: ಗೊಂದಲಗಳ ನಡುವೆ ವಜ್ರಮುಷ್ಟಿ ಕಾಳಗ ರದ್ದು!
ಮೈಸೂರು ದಸರಾ: ಅರಮನೆ ಪ್ರವೇಶಿಸಿದ ತಾಯಿ ಚಾಮುಂಡೇಶ್ವರಿ ಉತ್ಸವ ಮೂರ್ತಿ
ಮೈಸೂರು ದಸರಾ: ಅರಮನೆ ಪ್ರವೇಶಿಸಿದ ತಾಯಿ ಚಾಮುಂಡೇಶ್ವರಿ ಉತ್ಸವ ಮೂರ್ತಿ
ಎಮ್ಮೆಯ ಹೊಟ್ಟೆಯಲ್ಲಿ ಬಿಳಿ ಬಣ್ಣದ ಹೋರಿ ಕರು ಜನನ
ಎಮ್ಮೆಯ ಹೊಟ್ಟೆಯಲ್ಲಿ ಬಿಳಿ ಬಣ್ಣದ ಹೋರಿ ಕರು ಜನನ
ಮೈಸೂರು ದಸರಾ 2026: ಚಿನ್ನದ ಅಂಬಾರಿ ಹೊರುವ ಪ್ರಶಾಂತ ಆನೆಗೆ ವಿಶೇಷ ಮಜ್ಜನ
ಮೈಸೂರು ದಸರಾ 2026: ಚಿನ್ನದ ಅಂಬಾರಿ ಹೊರುವ ಪ್ರಶಾಂತ ಆನೆಗೆ ವಿಶೇಷ ಮಜ್ಜನ
ಡಿಸೆಂಬರ್ 2029ರೊಳಗೆ ಭಾರತ ‘ಡ್ರಗ್ಸ್ ಮುಕ್ತ’ ದೇಶ: ಅಮಿತ್ ಶಾ ಘೋಷಣೆ
ಡಿಸೆಂಬರ್ 2029ರೊಳಗೆ ಭಾರತ ‘ಡ್ರಗ್ಸ್ ಮುಕ್ತ’ ದೇಶ: ಅಮಿತ್ ಶಾ ಘೋಷಣೆ
ವಿಜಯದಶಮಿಯ ಐತಿಹಾಸಿಕ ಮತ್ತು ಪೌರಾಣಿಕ ಮಹತ್ವ: ಡಾ. ಶೆಲ್ವಪಿಳ್ಳೈ ಅಯ್ಯಂಗಾರ್
ವಿಜಯದಶಮಿಯ ಐತಿಹಾಸಿಕ ಮತ್ತು ಪೌರಾಣಿಕ ಮಹತ್ವ: ಡಾ. ಶೆಲ್ವಪಿಳ್ಳೈ ಅಯ್ಯಂಗಾರ್
ಮೈಸೂರು ದಸರಾ: ಆಟೋದಲ್ಲಿ ಸಂಚರಿಸಿ ಗಮನಸೆಳೆದ ಸಚಿವ ಕೃಷ್ಣಭೈರೇಗೌಡ
ಮೈಸೂರು ದಸರಾ: ಆಟೋದಲ್ಲಿ ಸಂಚರಿಸಿ ಗಮನಸೆಳೆದ ಸಚಿವ ಕೃಷ್ಣಭೈರೇಗೌಡ