Kaatera Movie: ಆರನೇ ವಾರವೂ ಮುನ್ನುಗ್ಗುತ್ತಿದೆ ‘ಕಾಟೇರ’; ಒಟಿಟಿಗೆ ಕಾಲಿಡೋದು ಯಾವಾಗ?

ರಾಜ್ಯಾದ್ಯಂತ ಈಗಲೂ ‘ಕಾಟೇರ’ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾ ದರ್ಶನ್ ಅಭಿಮಾನಿಗಳಿಗೆ ಇಷ್ಟ ಆಗಿದೆ. ದರ್ಶನ್ ಅವರನ್ನು ಎರಡು ಶೇಡ್​ನ ಪಾತ್ರದಲ್ಲಿ ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಒಮ್ಮೆ ಸಿನಿಮಾ ನೋಡಿದ ಫ್ಯಾನ್ಸ್ ಮರಳಿ ಮರಳಿ ಥಿಯೇಟರ್​ಗೆ ಬರುತ್ತಿದ್ದಾರೆ. ಇದರಿಂದ ಚಿತ್ರದ ಗಳಿಕೆ ಹೆಚ್ಚಿದೆ.

Kaatera Movie: ಆರನೇ ವಾರವೂ ಮುನ್ನುಗ್ಗುತ್ತಿದೆ ‘ಕಾಟೇರ’; ಒಟಿಟಿಗೆ ಕಾಲಿಡೋದು ಯಾವಾಗ?
ದರ್ಶನ್

Updated on: Feb 02, 2024 | 11:10 AM

‘ಕಾಟೇರ’ ಸಿನಿಮಾ (Kaatera Movie) ರಿಲೀಸ್ ಆಗಿ ಒಂದು ತಿಂಗಳ ಮೇಲಾಗಿದೆ. ಆದಾಗ್ಯೂ ಸಿನಿಮಾ ಅಬ್ಬರ ಕಡಿಮೆ ಆಗುತ್ತಿಲ್ಲ. ‘ಕಾಟೇರ’ ರಿಲೀಸ್ ಆದ ಬಳಿಕ ಹಲವು ಚಿತ್ರಗಳು ರಿಲೀಸ್ ಆದವು. ಆದಾಗ್ಯೂ ಹಲವು ಥಿಯೇಟರ್​​ಗಳಲ್ಲಿ ‘ಕಾಟೇರ’ ಚಿತ್ರ ಉತ್ತಮ ಪ್ರದರ್ಶನ ಕಾಣುತ್ತಿದೆ. ಆರನೇ ವಾರಕ್ಕೆ ಕಾಲಿಟ್ಟಿರೋ ‘ಕಾಟೇರ’ ದಾಖಲೆ ಬರೆಯಲು ರೆಡಿ ಆಗಿದೆ. ಈಗಾಗಲೇ ಚಿತ್ರದ ಗಳಿಕೆ 200 ಕೋಟಿ ರೂಪಾಯಿ ದಾಟಿದ್ದು ಬಾಕ್ಸ್ ಆಫೀಸ್​ನಲ್ಲಿ ಇತಿಹಾಸ ಬರೆದಿದೆ.

ರಾಜ್ಯಾದ್ಯಂತ ಈಗಲೂ ‘ಕಾಟೇರ’ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಆರನೇ ವಾರ 196 ಚಿತ್ರಮಂದಿರಗಳಲ್ಲಿ ಮತ್ತು 63 ಮಲ್ಟಿಪ್ಲೆಕ್ಸ್​ಗಳಲ್ಲಿ ಈ ಸಿನಮಾ ಪ್ರದರ್ಶನ ಮುಂದುವರೆಸಿದೆ. ಸಂಕ್ರಾಂತಿ ಸಂದರ್ಭದಲ್ಲಿ ಅಭಿಮಾನಿಗಳು ‘ಮತ್ತೊಮ್ಮೆ ಕಾಟೇರ’ ಎನ್ನುವ ಟ್ರೆಂಡ್ ಆರಂಭಿಸಿದ್ದರು. ಇದರಿಂದ ಸಿನಿಮಾದ ಗಳಿಕೆ ಹೆಚ್ಚಿತ್ತು. ಈಗಾಗಲೇ ಸಿನಿಮಾದ ಕಲೆಕ್ಷನ್ 200 ಕೋಟಿ ರೂಪಾಯಿ ದಾಟಿದೆ. ಈ ಚಿತ್ರದಿಂದ ನಿರ್ಮಾಪಕ ರಾಕ್​​ಲೈನ್ ವೆಂಕಟೇಶ್ ದೊಡ್ಡ ಗೆಲುವು ಕಂಡಿದ್ದಾರೆ. ಅವರಿಗೆ ಈ ಚಿತ್ರದಿಂದ ಹೊಸ ಸ್ಫೂರ್ತಿ ಸಿಕ್ಕಿದೆ. ಫೆಬ್ರವರಿ 9ರಂದು ಜೀ 5 ಒಟಿಟಿ ಮೂಲಕ ಸಿನಿಮಾ ಪ್ರದರ್ಶನ ಆರಂಭಿಸಲಿದೆ.

‘ಕಾಟೇರ’ ಸಿನಿಮಾ ಕುರಿತ ಟ್ವೀಟ್..

ದರ್ಶನ್ ಅಭಿಮಾನಿಗಳಿಗೆ ‘ಕಾಟೇರ’ ಸಿನಿಮಾ ಇಷ್ಟ ಆಗಿದೆ. ದರ್ಶನ್ ಅವರನ್ನು ಎರಡು ಶೇಡ್​ನ ಪಾತ್ರದಲ್ಲಿ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಒಮ್ಮೆ ಸಿನಿಮಾ ನೋಡಿದ ಫ್ಯಾನ್ಸ್ ಮರಳಿ ಮರಳಿ ಥಿಯೇಟರ್​ಗೆ ಬರುತ್ತಿದ್ದಾರೆ. ಇದರಿಂದ ಚಿತ್ರದ ಗಳಿಕೆ ಹೆಚ್ಚಿದೆ. ಸಿನಿಮಾದ ಒಟ್ಟಾರೆ ಕಲೆಕ್ಷನ್ ಎಷ್ಟಾಗಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.

ಇದನ್ನೂ ಓದಿ: ‘ಕಾಟೇರ’ ಯಶಸ್ಸಿನ ಸಂಭ್ರಮ; ದರ್ಶನ್​ಗೆ ‘ಭೂಮಿಪುತ್ರ’ ಬಿರುದು: ಇಲ್ಲಿದೆ ಲೈವ್​ ವಿಡಿಯೋ..

‘ಕಾಟೇರ’ ಸಿನಿಮಾದಲ್ಲಿ ದರ್ಶನ್​ಗೆ ಜೊತೆಯಾಗಿ ಮಾಲಾಶ್ರೀ ಮಗಳು ಆರಾಧನಾ ರಾಮ್ ಕಾಣಿಸಿಕೊಂಡಿದ್ದಾರೆ. ಜಗಪತಿ ಬಾಬು, ಅಚ್ಯುತ್ ಕುಮಾರ್ ಸೇರಿ ದೊಡ್ಡ ಪಾತ್ರವರ್ಗ ಸಿನಿಮಾದಲ್ಲಿ ಕೆಲಸ ಮಾಡಿದೆ. ತರುಣ್ ಸುಧೀರ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಅವರು ‘ಚೌಕ’ ಹಾಗೂ ‘ರಾಬರ್ಟ್’ ಬಳಿಕ ಮತ್ತೊಂದು ಗೆಲುವು ಕಂಡಿದ್ದಾರೆ. ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

 

Published On - 11:10 am, Fri, 2 February 24

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us