AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕಾಟೇರ’ ಯಶಸ್ಸಿನ ಸಂಭ್ರಮ; ದರ್ಶನ್​ಗೆ ‘ಭೂಮಿಪುತ್ರ’ ಬಿರುದು: ಇಲ್ಲಿದೆ ಲೈವ್​ ವಿಡಿಯೋ..

‘ಕಾಟೇರ’ ಯಶಸ್ಸಿನ ಸಂಭ್ರಮ; ದರ್ಶನ್​ಗೆ ‘ಭೂಮಿಪುತ್ರ’ ಬಿರುದು: ಇಲ್ಲಿದೆ ಲೈವ್​ ವಿಡಿಯೋ..

ಮದನ್​ ಕುಮಾರ್​
|

Updated on: Jan 26, 2024 | 6:13 PM

Share

ಪಾಂಡವಪುರದಲ್ಲಿ ‘ಕಾಟೇರ’ ಸಿನಿಮಾದ ಸಕ್ಸಸ್​ ಸಮಾರಂಭ ನಡೆಯುತ್ತಿದೆ. ಚಿತ್ರತಂಡವನ್ನು ಅಭಿನಂದಿಸಲಾಗುತ್ತಿದೆ. ಕಲಾ ತಂಡಗಳು ಜತೆ ಜೋಡೆತ್ತಿನ ಮೆರವಣಿಗೆ ಮಾಡಲಾಗುತ್ತಿದೆ. ಇದರಲ್ಲಿ ದರ್ಶನ್​ ಭಾಗಿ ಆಗಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿಗಳು ನೆರೆದಿದ್ದಾರೆ. ಸಂಜೆ ಮನರಂಜನಾ ಕಾರ್ಯಕ್ರಮ ನಡೆಯಲಿದೆ. ಅದರ ಲೈವ್​ ವಿಡಿಯೋ ಇಲ್ಲಿದೆ.

‘ಚಾಲೆಂಜಿಂಗ್​ ಸ್ಟಾರ್​’ ದರ್ಶನ್​ (Darshan) ನಟನೆಯ ‘ಕಾಟೇರ’ ಸಿನಿಮಾದಲ್ಲಿ ತೋರಿಸಿದ ರೈತರ ಕಥೆ ಎಲ್ಲರಿಗೂ ಇಷ್ಟ ಆಗಿದೆ. ಈ ಸಿನಿಮಾದ ಯಶಸ್ಸನ್ನು ಚಿತ್ರತಂಡದವರು ಸಂಭ್ರಮಿಸುತ್ತಿದ್ದಾರೆ. ಇದರ ಜೊತೆಗೆ ದರ್ಶನ್​ ಅವರಿಗೆ ‘ಕರ್ನಾಟಕ ರಾಜ್ಯ ರೈತ ಸಂಘ’ದ ಪರವಾಗಿ ‘ಭೂಮಿಪುತ್ರ’ ಎಂಬ ಹೊಸ ಬಿರುದನ್ನು ನೀಡಲಾಗುತ್ತಿದೆ. ಕಾಟೇರ’ (Kaatera) ಯಶಸ್ಸಿಗಾಗಿ ಚಿತ್ರತಂಡವನ್ನು ಅಭಿನಂದಿಸಲಾಗುತ್ತಿದೆ. ಈ ಸಮಾರಂಭ ಇಂದು (ಜನವರಿ 26) ಪಾಂಡವಪುರದಲ್ಲಿ ನಡೆಯುತ್ತಿದೆ. ಕಲಾ ತಂಡಗಳು ಜೊತೆ ಜೋಡೆತ್ತಿನ ಮೆರವಣಿಗೆ ಮಾಡಲಾಗುತ್ತಿದೆ. ಅಪಾರ ಸಂಖ್ಯೆ ಅಭಿಮಾನಿಗಳು ಇದರಲ್ಲಿ ಭಾಗಿ ಆಗಿದ್ದಾರೆ. ಸಂಜೆ ನಡೆಯುವ ವೇದಿಕೆ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಪಾಲ್ಗೊಂಡು ಮನರಂಜನೆ ನೀಡಲಿದ್ದಾರೆ. ಈ ಸಮಾರಂಭದ ಲೈವ್​ ವಿಡಿಯೋ ಇಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More