ಹೆಂಡತಿ ಜೊತೆಗಿನ ಫೋಟೋ ನೋಡಿ ತುಕಾಲಿ ಸಂತೋಷ್ ಕಂಗಾಲು; ಅಂಥದ್ದೇನಾಯ್ತು?
ಬಿಗ್ ಬಾಸ್ ಮನೆಗೆ ಒಂದು ಫೋಟೋ ಕಳಿಸಲಾಗಿದೆ. ಹೆಂಡತಿ ಜೊತೆ ತಾವು ನಿಂತಿರುವ ಆ ಫೋಟೋವನ್ನು ನೋಡಿ ತುಕಾಲಿ ಸಂತೋಷ್ಗೆ ಶಾಕ್ ಆಗಿದೆ. ‘ಆ ಫೋಟೋವನ್ನು ಯಾಕೆ ಕಳಿಸಿದ್ದೀರಿ? ನಮ್ಮ ತಾಯಾಣೆಗೂ ಅದು ಚೆನ್ನಾಗಿಲ್ಲ. ನನ್ನ ಹೆಂಡತಿಗೆ ಗೊತ್ತಾಗಬಾರದಾ’ ಎಂದು ತುಕಾಲಿ ಸಂತೋಷ್ ಅವರು ತಲೆ ಚಚ್ಚಿಕೊಂಡಿದ್ದಾರೆ.
ಕಾಮಿಡಿ ನಟ ತುಕಾಲಿ ಸಂತೋಷ್ ಅವರು ಹೆಂಡತಿ (Tukali Santosh Wife) ಜೊತೆ ನಿಂತಿರುವ ಹಳೇ ಫೋಟೋವನ್ನು ಬಿಗ್ ಬಾಸ್ ಮನೆಗೆ ಕಳಿಸಲಾಗಿದೆ. ಆ ಫೋಟೋ ಚೆನ್ನಾಗಿಲ್ಲ ಎಂದು ತುಕಾಲಿ ಸಂತೋಷ್ (Tukali Santosh) ಅವರು ಬೇಸರ ಮಾಡಿಕೊಂಡಿದ್ದಾರೆ. ಆ ಫೋಟೋ ನೋಡಿ ಅವರಿಗೆ ಶಾಕ್ ಆಗಿದೆ. ‘ಆ ಫೋಟೋವನ್ನು ಯಾಕೆ ಕಳಿಸಿದ್ದೀರಿ? ನಮ್ಮ ತಾಯಾಣೆಗೂ ಅದು ಚೂರೂ ಚೆನ್ನಾಗಿಲ್ಲ. ನನ್ನ ಹೆಂಡತಿಗೆ ಗೊತ್ತಾಗಬಾರದಾ’ ಎಂದು ತುಕಾಲಿ ಸಂತೋಷ್ ಅವರು ತಲೆ ಚಚ್ಚಿಕೊಂಡಿದ್ದಾರೆ. ‘ಈ ಫೋಟೋವನ್ನು ಕರ್ನಾಟಕದ ಜನತೆ ನೋಡಬೇಕು’ ಎಂದು ಕಾರ್ತಿಕ್ ಮಹೇಶ್ ಅವರು ಕ್ಯಾಮೆರಾಗೆ ಫೋಟೋ ತೋರಿಸಿದ್ದಾರೆ. ಈ ಸಂದರ್ಭದ ಪ್ರೋಮೋವನ್ನು ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿದೆ. ‘ಜಿಯೋ ಸಿನಿಮಾ’ ಒಟಿಟಿಯಲ್ಲಿ ಉಚಿತವಾಗಿ 24 ಗಂಟೆಯೂ ಬಿಗ್ ಬಾಸ್ (Bigg Boss Kannada) ನೋಡಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos