‘ನನಗೆ ಸಂಭಾವನೆ ಕೊಡುವಾಗ ಅವರು ಅತ್ತರು’; ವೇದಿಕೆ ಮೇಲೆ ಆರ್​. ಚಂದ್ರು ಕಾಲೆಳೆದ ಸುದೀಪ್

ಸುದೀಪ್ ಕೆಲವೊಮ್ಮೆ ಸಖತ್ ಫನ್ನಿಯಾಗಿ ನಡೆದುಕೊಳ್ಳುತ್ತಾರೆ. ಅವರು ಹೇಳುವ ಡೈಲಾಗ್ ಅನೇಕರಿಗೆ ಇಷ್ಟ ಆಗುತ್ತದೆ. ಶ್ರೀಯಾ ಶರಣ್ ಮಾತಿಗೂ ಅವರು ಫನ್ನಿ ಆಗಿ ಉತ್ತರಿಸಿದ್ದಾರೆ.

‘ನನಗೆ ಸಂಭಾವನೆ ಕೊಡುವಾಗ ಅವರು ಅತ್ತರು’; ವೇದಿಕೆ ಮೇಲೆ ಆರ್​. ಚಂದ್ರು ಕಾಲೆಳೆದ ಸುದೀಪ್
ಸುದೀಪ್-ಶ್ರೀಯಾ-ಚಂದ್ರು

Updated on: Mar 10, 2023 | 9:27 AM

ಉಪೇಂದ್ರ, ಕಿಚ್ಚ ಸುದೀಪ್ ಆ್ಯಂಡ್ ಟೀಂ ‘ಕಬ್ಜ’ ಸಿನಿಮಾ (Kabzaa Movie) ಪ್ರಚಾರದಲ್ಲಿ ಬ್ಯುಸಿ ಇದೆ. ಈ ಚಿತ್ರಕ್ಕೆ ದೊಡ್ಡ ಮಟ್ಟದ ಪ್ರಚಾರ ನೀಡುವ ಕೆಲಸ ಆಗುತ್ತಿದೆ. ಮುಂಬೈನಲ್ಲಿ ಮಾರ್ಚ್​ 9ರಂದು ‘ಕಬ್ಜ’ ತಂಡದವರು ಅದ್ದೂರಿಯಾಗಿ ಕಾರ್ಯಕ್ರಮ ನಡೆಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಸುದೀಪ್ (Sudeep) ಅವರು ಆರ್​.ಚಂದ್ರು ಅವರ ಕಾಲೆಳೆದಿದ್ದಾರೆ. ಈ ವಿಡಿಯೋ ಸೋಶೀಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದಕ್ಕೆ ಫ್ಯಾನ್ಸ್ ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

ಆರ್. ಚಂದ್ರು ನಿರ್ದೇಶನದಲ್ಲಿ ಮೂಡಿ ಬಂದ ‘ಕಬ್ಜ’ ಸಿನಿಮಾದ ಟ್ರೇಲರ್ ಭರ್ಜರಿ ಸೌಂಡ್ ಮಾಡಿದೆ. ಪರಭಾಷೆಯಲ್ಲೂ ಈ ಚಿತ್ರದ ಟ್ರೇಲರ್ ಮೆಚ್ಚುಗೆ ಪಡೆದಿದೆ. ಈಗ ಚಿತ್ರಕ್ಕೆ ಪ್ರಚಾರ ನೀಡುವ ಕೆಲಸ ಆಗುತ್ತಿದೆ. ಮಾರ್ಚ್​ 9ರಂದು ಮುಂಬೈನಲ್ಲಿ ‘ಕಬ್ಜ’ ಸಿನಿಮಾ ತಂಡ ಮಾಧ್ಯಮದವರನ್ನು ಎದುರುಗೊಂಡಿತ್ತು. ಹಿಂದಿ ಆವೃತ್ತಿಯ ವಿತರಕ ಆನಂದ್ ಪಂಡಿತ್ ಸಹ ಚಿತ್ರತಂಡದ ಜೊತೆ ಇದ್ದರು.

‘ಕಬ್ಜ ಚಿತ್ರದ ನಾಯಕಿ ಶ್ರೀಯಾ ಶರಣ್ ಅವರು ವೇದಿಕೆ ಮೇಲೆ ತಮ್ಮ ಅನುಭವ ಹಂಚಿಕೊಂಡರು. ಆರ್​. ಚಂದ್ರು ಅವರು ಮೊದಲ ದಿನ ಬಂದು ಕಥೆ ಹೇಳಿದಾಗ ಅತ್ತಿದ್ದರಂತೆ. ‘ಚಂದ್ರು ಅವರು ಕಥೆ ಹೇಳುತ್ತಾ ಅಳುತ್ತಿದ್ದರು. ಇದು ಎಮೋಷನಲ್ ದೃಶ್ಯ ಆಗಿತ್ತು. ಆ ದೃಶ್ಯದಲ್ಲಿ ನಾನು ಇರಲಿಲ್ಲ. ಆದಾಗ್ಯೂ ಅವರು ಅತ್ತರು’ ಎಂದರು ಶ್ರೀಯಾ. ‘ಸುದೀಪ್​ಗೆ ಕಥೆ ಹೇಳುವಾಗಲೂ ಚಂದ್ರು ಅತ್ತಿದ್ದರಂತೆ’ ಎಂದರು ಉಪೇಂದ್ರ. ಈ ಬಗ್ಗೆ ಸುದೀಪ್​ಗೆ ಶ್ರೀಯಾ ಕೇಳಿದ್ದಾರೆ.

ಇದನ್ನೂ ಓದಿ: ‘ಕಬ್ಜ’ ಚಿತ್ರದಲ್ಲಿ ಹೇಗಿದೆ ನೋಡಿ ಭಾರ್ಗವ್ ಭಕ್ಷಿಯ ಲುಕ್; ಸುದೀಪ್ ಫೋಟೋಸ್ ವೈರಲ್

ಸುದೀಪ್ ಕೆಲವೊಮ್ಮೆ ಸಖತ್ ಫನ್ನಿಯಾಗಿ ನಡೆದುಕೊಳ್ಳುತ್ತಾರೆ. ಅವರು ಹೇಳುವ ಡೈಲಾಗ್ ಅನೇಕರಿಗೆ ಇಷ್ಟ ಆಗುತ್ತದೆ. ಶ್ರೀಯಾ ಶರಣ್ ಮಾತಿಗೂ ಅವರು ಫನ್ನಿ ಆಗಿ ಉತ್ತರಿಸಿದ್ದಾರೆ. ‘ಅವರು ಕಥೆ ಹೇಳುವಾಗ ಅತ್ತಿಲ್ಲ. ನನಗೆ ಪೇಮೆಂಟ್ ಕೊಡುವಾಗ ಮಾತ್ರ ಅವರು ಅತ್ತರು’ ಎಂದಿದ್ದಾರೆ ಸುದೀಪ್. ಈ ಮಾತನ್ನು ಕೇಳಿ ಎಲ್ಲರೂ ನಕ್ಕಿದ್ದಾರೆ. ಸದ್ಯ ಈ ವಿಡಿಯೋ ಟ್ರೋಲ್ ಪೇಜ್​ಗಳಲ್ಲಿ ವೈರಲ್ ಆಗುತ್ತಿದೆ.


ಇದನ್ನೂ ಓದಿ:‘ವಿಕ್ರಾಂತ್​ ರೋಣ’ ಸೂಪರ್​ ಹಿಟ್​; ಕಿಚ್ಚ ಸುದೀಪ್​ ಅಭಿಮಾನಿಗಳಿಗೆ ‘ಕಬ್ಜ’ ಮೇಲೆ ಹೆಚ್ಚಿತು ನಿರೀಕ್ಷೆ

‘ಕಬ್ಜ’ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಬಾಲಿವುಡ್ ಮಂದಿ ಕೂಡ ಚಿತ್ರದ ಟ್ರೇಲರ್ ಮೆಚ್ಚಿಕೊಂಡಿದ್ದಾರೆ. ಚಿತ್ರದ ಮೇಕಿಂಗ್ ಹಾಗೂ ಬಿಜಿಎಂ ಸಾಕಷ್ಟು ಸದ್ದು ಮಾಡುತ್ತಿದೆ. ಭಾನುವಾರದಿಂದ (ಮಾರ್ಚ್ 12) ಚಿತ್ರದ ಅಡ್ವಾನ್ಸ್ ಬುಕಿಂಗ್ ಆರಂಭ ಆಗಲಿದೆ ಎನ್ನಲಾಗುತ್ತಿದೆ. ಭಾರತಾದ್ಯಂತ 4 ಸಾವಿರಕ್ಕೂ ಅಧಿಕ ಸ್ಕ್ರೀನ್​ಗಳಲ್ಲಿ ಈ ಚಿತ್ರ ಪ್ರದರ್ಶನ ಕಾಣಲಿದೆ. ತಮಿಳುನಾಡಿನಲ್ಲಿ ಲೈಕಾ ಪ್ರೊಡಕ್ಷನ್​ ಈ ಚಿತ್ರವನ್ನು ಹಂಚಿಕೆ ಮಾಡುತ್ತಿದೆ. ಮೊದಲ ದಿನ ಈ ಚಿತ್ರ ಎಷ್ಟು ಗಳಿಕೆ ಮಾಡಲಿದೆ ಎನ್ನುವ ಕುತೂಹಲ ಮೂಡಿದೆ. ಈ ಚಿತ್ರ ರೆಟ್ರೋ ಶೈಲಿಯಲ್ಲಿ ಮೂಡಿಬರುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

 

Published On - 9:10 am, Fri, 10 March 23

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us