‘ಸುಶಾಂತ್ ಸಾವಿನ ವಿಚಾರದಲ್ಲಿ ನನ್ನ ಹೇಳಿಕೆಗಳು ಸುಳ್ಳಾದರೆ.. ಪದ್ಮಶ್ರೀ ಪ್ರಶಸ್ತಿ ವಾಪಸ್ ಮಾಡುವೆ’
ಬಾಲಿವುಡ್ನ ಉದಯೋನ್ಮುಖ ಪ್ರತಿಭೆ ಸುಶಾಂತ್ ಸಿಂಗ್ ರಜಪೂತ್ ಸಾವಿನ ಸುತ್ತ ಹಲವಾರು ಕಾರಣಗಳು ಮತ್ತು ವದಂತಿಗಳು ಹರಿದಾಡುತ್ತಿವೆ. ಈ ನಡುವೆ ಖ್ಯಾತ ನಟಿ ಕಂಗನಾ ರನೌತ್ ಸುಶಾಂತ್ ಸಾವಿಗೆ ಕೆಲವು ಕಾರಣಗಳನ್ನು ನೀಡಿದ್ದರು. ಇದೀಗ ತಾವು ನೀಡಿರುವ ಕಾರಣಗಳು ಸಮರ್ಪಕವಾಗಿಲ್ಲದಿದ್ದರೆ ಕೇಂದ್ರ ಸರ್ಕಾರ ತಮಗೆ ನೀಡಿದ್ದ ಪದ್ಮಶ್ರೀ ಪ್ರಶಸ್ತಿಯನ್ನ ಹಿಂದಿರುಗಿಸುವುದಾಗಿ ಹೇಳಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಪ್ರಕರಣಕ್ಕೆ ಕುರಿತು ಹಲವಾರು ವಿಡಿಯೋಗಳನ್ನ ಪೋಸ್ಟ್ ಮಾಡಿರುವ ಕಂಗನಾ ಬಾಲಿವುಡ್ ಬಹಳಷ್ಟು ಮಂದಿಯ ವಿರುದ್ಧ ಹರಿಹಾಯ್ದಿದ್ದರು. ಅಗಲಿದ ನಟನ ಮೇಲೆ […]
ಬಾಲಿವುಡ್ನ ಉದಯೋನ್ಮುಖ ಪ್ರತಿಭೆ ಸುಶಾಂತ್ ಸಿಂಗ್ ರಜಪೂತ್ ಸಾವಿನ ಸುತ್ತ ಹಲವಾರು ಕಾರಣಗಳು ಮತ್ತು ವದಂತಿಗಳು ಹರಿದಾಡುತ್ತಿವೆ. ಈ ನಡುವೆ ಖ್ಯಾತ ನಟಿ ಕಂಗನಾ ರನೌತ್ ಸುಶಾಂತ್ ಸಾವಿಗೆ ಕೆಲವು ಕಾರಣಗಳನ್ನು ನೀಡಿದ್ದರು.
ಇದೀಗ ತಾವು ನೀಡಿರುವ ಕಾರಣಗಳು ಸಮರ್ಪಕವಾಗಿಲ್ಲದಿದ್ದರೆ ಕೇಂದ್ರ ಸರ್ಕಾರ ತಮಗೆ ನೀಡಿದ್ದ ಪದ್ಮಶ್ರೀ ಪ್ರಶಸ್ತಿಯನ್ನ ಹಿಂದಿರುಗಿಸುವುದಾಗಿ ಹೇಳಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಪ್ರಕರಣಕ್ಕೆ ಕುರಿತು ಹಲವಾರು ವಿಡಿಯೋಗಳನ್ನ ಪೋಸ್ಟ್ ಮಾಡಿರುವ ಕಂಗನಾ ಬಾಲಿವುಡ್ ಬಹಳಷ್ಟು ಮಂದಿಯ ವಿರುದ್ಧ ಹರಿಹಾಯ್ದಿದ್ದರು. ಅಗಲಿದ ನಟನ ಮೇಲೆ ಬಾಲಿವುಡ್ನ ಕೆಲ ಪ್ರಭಾವಿಗಳಿಂದ ಹೇರಲಾಗಿದ್ದ ಒತ್ತಡ ಹಾಗೂ ಅವಕಾಶಗಳಿಂದ ವಂಚಿತರಾಗಿದ್ದರ ಬಗ್ಗೆ ಕಂಗನಾ ಬೆಳಕು ಚೆಲ್ಲಿದ್ದರು.
ಜೊತೆಗೆ, ಮುಂಬೈ ಪೊಲೀಸರು ತನ್ನ ಹೇಳಿಕೆ ದಾಖಲಿಸಿಕೊಳ್ಳಲು ಸಮನ್ಸ್ ನೀಡಿದ್ದರು. ನಾನು ಮನಾಲಿಯಲ್ಲಿ ಇದ್ದ ಕಾರಣದಿಂದ ಅಲ್ಲಿ ಬರೋಕೆ ಸಾಧ್ಯವಾಗಿರಲಿಲ್ಲ. ಆದರೆ, ನಾನು ಹೇಳಿರುವ ಪ್ರತಿಯೊಂದು ಹೇಳಿಕೆಗೂ ಸಮಜಾಯಿಷಿ ನೀಡೋಕೆ ಅಥವಾ ಸಾಬೀತು ಪಡಿಸೋಕೆ ಆಗಿದಿದ್ದರೆ ನನ್ನ ಪದ್ಮಶ್ರೀ ಪುರಸ್ಕಾರವನ್ನ ವಾಪಸ್ ಮಾಡುತ್ತೇನೆ ಎಂದು ಹೇಳಿಕೊಂಡಿದ್ದಾರೆ.