ನಟ ದರ್ಶನ್ ಅವರಿಗೆ ಕರ್ನಾಟಕ ಹೈಕೋರ್ಟ್ ಜಾಮೀನು ನೀಡಿದೆ. ಅವರು ಈಗಾಗಲೇ ಮಧ್ಯಂತರ ಜಾಮೀನು ಪಡೆದು ಹೊರಗೆ ಇರುವುದರಿಂದ ಅವರಿಗೆ ಯಾವುದೇ ಹೆಚ್ಚಿನ ಚಿಂತೆ ಇಲ್ಲ. ತುರ್ತು ಆಪರೇಷನ್ ಅಗತ್ಯ ಎಂದು ದರ್ಶನ್ ಮಧ್ಯಂತರ ಜಾಮೀನು ಪಡೆದಿದ್ದರು. ವೈದ್ಯರು ಡಿಸೆಂಬರ್ 11ಕ್ಕೆ ಆಪರೇಷನ್ ನಿಗದಿ ಮಾಡಿದ್ದರು. ಆದರೆ, ಈಗ ಪೂರ್ಣ ಪ್ರಮಾಣದ ಜಾಮೀನು ಸಿಕ್ಕಿರುವುದರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಿಕೊಳ್ಳುತ್ತಾರಾ ಅಥವಾ ಆಪರೇಷನ್ ಮಾಡಿಸಿಕೊಳ್ಳುತ್ತಾರಾ ಎನ್ನುವ ಪ್ರಶ್ನೆ ಮೂಡಿದೆ.
ದರ್ಶನ್ ಸದ್ಯಕ್ಕೆ ಕನ್ಸರ್ವೇಟಿವ್ ಟ್ರೀಟ್‌ಮೆಂಟ್ ಪಡೆಯುತ್ತಿದ್ದಾರೆ. ಸಿನಿಮಾ ನಟ ಆದ ಕಾರಣ ಭವಿಷ್ಯವನ್ನು ದೃಷ್ಟಿಯಾಗಿಟ್ಟುಕೊಂಡು ಆಪರೇಷನ್ ಮಾಡಿಸಿಕೊಳ್ಳೋದು ಡೌಟ್ ಎಂದು ಹೇಳಲಾಗುತ್ತಿದೆ. ಸದ್ಯ ವೈದ್ಯರು ಕನ್ಸರ್ವೇಟಿವ್ ಟ್ರೀಟ್‌ಮೆಂಟ್ ಜೊತೆಗೆ ಪಿಜಿಯೋಥೆರಪಿ ಮಾಡಿ ದರ್ಶನ್ ಬೆನ್ನು ನೋವು ಗುಣ ಮುಖ ಮಾಡುವ ಪ್ರಯತ್ನದಲ್ಲಿ ಇದ್ದಾರೆ.
ಜಾಮೀನು ಸಿಕ್ಕ ಬಳಿಕವೂ ದರ್ಶನ್ಗೆ ಒಂದು ವಾರಗಳ ಕಾಲ ಬಿಜಿಎಸ್ ಆಸ್ಪತ್ರೆಯಲ್ಲಿ ಟ್ರೀಟ್ ಮೆಂಟ್ ಪಡೆಯೋ ಸಾಧ್ಯತೆ ಇದೆ. ವಾರಗಳ ಚಿಕಿತ್ಸೆ ಬಳಿಕ ಅವರು ಡಿಸ್ಸಾರ್ಜ್ ಆಗ್ತಾರೆ ಅನ್ನೋ ಮಾಹಿತಿ ಇದೆ. ಹೀಗಾಗಿ, ಸದ್ಯಕ್ಕೆ ಆಪರೇಷನ್ ಮೊರೆ ಹೋಗೋದು ಡೌಟ್ ಎನ್ನಲಾಗಿದೆ.
ಶಸ್ತ್ರಚಿಕಿತ್ಸೆ ಬದಲು ಅನುಸರಿಸುವ ಪರ್ಯಾಯ ಚಿಕಿತ್ಸಾ ಪದ್ಧತಿಗೆ ಕನ್ಸರ್ವೇಟಿವ್ ಟ್ರೀಟ್‌ಮೆಂಟ್ ಎಂದು ಕರೆಯಲಾಗುತ್ತದೆ. ಸರ್ಜರಿ ಮಾಡದೇ ಬೆನ್ನು ನೋವಿಗೆ ಮಾತ್ರೆ ಮತ್ತು ಔಷದಿಗಳನ್ನ ನೀಡಿ ಗುಣಮುಖ ಮಾಡುವ ಪ್ರಯತ್ನ ಇದಾಗಿದೆ.
ದರ್ಶನ್ ಬೆನ್ನು ನೋವಗೆ ಫಿಜಿಯೋಥೆರಪಿ ನೀಡಿ ಗುಣ ಮುಖ ಮಾಡುವ ಪ್ರಯತ್ನ ಮಾಡಬಹುದು. ಆಪರೇಷನ್ ಮಾಡದೇ ವ್ಯಾಯಾಮಗಳನ್ನು ಮಾಡಿಸಿ ಬೆನ್ನು ನೋವನ್ನ ಗುಣಮುಖ ಮಾಡುವ ಪ್ರಯತ್ನ ನಡೆಬಹುದು. ಆಪರೇಷನ್ ಮಾಡದೇ ಅಲ್ಟ್ರಾ ಸೌಂಡ್ ಚಿಕಿತ್ಸಾ ಪದ್ಧತಿ ಮೂಲಕ ಟ್ರೀಟ್‌ಮೆಂಟ್ ನೀಡುವ ಪ್ರಯತ್ನ ನಡೆಯಲಿದೆ.
ಇದನ್ನೂ ಓದಿ: ದರ್ಶನ್ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ಪೊಲೀಸರ ಬಿಗಿ ಭದ್ರತೆ
ಸೊಂಟದ ಭಾಗದಲ್ಲಿ ಇರುವ ಬೆನ್ನು ಮೂಳೆ ಸರಿದಿದೆ. ಈ ಕಾರಣ ನರದ ಮೇಲೆ ಒತ್ತಡ ಉಂಟಾಗಿ ತೀವ್ರ ನೋವು ಉಂಟಾಗುತ್ತಿದೆ. ಸ್ಪೈನಲ್ ಕಾರ್ಡ್ ಹಾದು ಹೋಗಿರುವ ಭಾಗದಲ್ಲಿ ನರಗಳ ಮೇಲೆ ಒತ್ತಡ ಬೀಳುತ್ತಿದೆ. ಬೆನ್ನಿನ ನರಹುರಿಯ ಮೇಲೆ ಒತ್ತಡ ಹಿನ್ನೆಲೆ ಬೆನ್ನು ನೋವು ಜಾಸ್ತಿ ಆಗ್ತಿದೆ. ನರದ ಮೇಲೆ ಒತ್ತಡ ಆಗ್ತಿರುವ ಕಾರಣ ಪಿಜಿಯೋಥೆರಪಿ ಮತ್ತು ವ್ಯಾಯಾಮ ಅಗತ್ಯವಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.