‘ಸಲಾರ್’ ಸಿನಿಮಾದಲ್ಲಿ ಕನ್ನಡ ಕಲಾವಿದರ ದಂಡು; ಎಲ್ಲ ಪಾತ್ರಕ್ಕೂ ಸಿಕ್ಕಿದೆ ಆದ್ಯತೆ

Salaar Movie: ‘ಸಲಾರ್’ ಸಿನಿಮಾ ಇಂದು (ಡಿಸೆಂಬರ್ 22) ರಿಲೀಸ್ ಆಗಿದೆ. ಪ್ರಭಾಸ್, ಪೃಥ್ವಿರಾಜ್ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ಪ್ರಶಾಂತ್ ನೀಲ್ ನಿರ್ದೇಶನ ಮಾಡಿದ್ದಾರೆ. ಕನ್ನಡದ ಹಲವರು ಇದರಲ್ಲಿ ನಟಿಸಿದ್ದಾರೆ.

‘ಸಲಾರ್’ ಸಿನಿಮಾದಲ್ಲಿ ಕನ್ನಡ ಕಲಾವಿದರ ದಂಡು; ಎಲ್ಲ ಪಾತ್ರಕ್ಕೂ ಸಿಕ್ಕಿದೆ ಆದ್ಯತೆ
‘ಸಲಾರ್’ ಸಿನಿಮಾದಲ್ಲಿ ಕನ್ನಡ ಕಲಾವಿದರ ದಂಡು

Updated on: Dec 22, 2023 | 12:11 PM

‘ಸಲಾರ್’ ಸಿನಿಮಾಗೂ ಕನ್ನಡ ಚಿತ್ರರಂಗಕ್ಕೂ ಕನೆಕ್ಷನ್ ಇದೆ. ಈ ಚಿತ್ರವನ್ನು ನಿರ್ಮಾಣ ಮಾಡಿದ್ದು ಕನ್ನಡದ ‘ಹೊಂಬಾಳೆ ಫಿಲ್ಮ್ಸ್​’. ಈ ಚಿತ್ರವನ್ನು ನಿರ್ದೇಶನ ಮಾಡಿರೋ ಪ್ರಶಾಂತ್ ನೀಲ್ (Prashanth Neel) ಕೂಡ ಕರ್ನಾಟಕದವರು. ಈ ಚಿತ್ರದಲ್ಲಿ ಕೆಲಸ ಮಾಡಿದ ಬಹುತೇಕ ತಂತ್ರಜ್ಞರು ಕನ್ನಡದವರು. ಈ ಚಿತ್ರದಲ್ಲಿ ನಟಿಸಿದ ಹಲವು ಕಲಾವಿದರು ಕನ್ನಡದವರು ಅನ್ನೋದು ವಿಶೇಷ. ಹಲವು ಪ್ರಮುಖ ಪಾತ್ರಗಳಲ್ಲಿ ಕನ್ನಡದ ಕಲಾವಿದರು ನಟಿಸಿದ್ದಾರೆ. ಈ ಮೂಲಕ ಟಾಲಿವುಡ್​ನಲ್ಲಿ ನಮ್ಮ ಕಲಾವಿದರು ಮಿಂಚಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.

‘ಸಲಾರ್’ ಸಿನಿಮಾ ಇಂದು (ಡಿಸೆಂಬರ್ 22) ರಿಲೀಸ್ ಆಗಿದೆ. ಪ್ರಭಾಸ್, ಪೃಥ್ವಿರಾಜ್ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ಪ್ರಶಾಂತ್ ನೀಲ್ ನಿರ್ದೇಶನ ಮಾಡಿದ್ದಾರೆ. ಕನ್ನಡದ ಹಲವರು ಇದರಲ್ಲಿ ನಟಿಸಿದ್ದಾರೆ. ದೇವರಾಜ್ ಅವರು ಕನ್ನಡದ ಹಿರಿಯ ಕಲಾವಿದ. ಅವರು ಪರಭಾಷೆಯಲ್ಲಿ ಈಗಾಗಲೇ ನಟಿಸಿದ್ದಾರೆ. ‘ಸಲಾರ್’ ಸಿನಿಮಾದಲ್ಲಿ ಅವರು ಪ್ರಮುಖ ಪಾತ್ರ ಮಾಡಿದ್ದಾರೆ. ಅವರ ಪಾತ್ರ ಗಮನ ಸೆಳೆಯುತ್ತಿದೆ. ‘ರತ್ನನ್ ಪ್ರಪಂಚ’ ಮೂಲಕ ಗಮನ ಸೆಳೆದ ಪ್ರಮೋದ್ ಅವರು ‘ಸಲಾರ್’ ಚಿತ್ರದಲ್ಲಿ ಮುಖ್ಯ ಪಾತ್ರ ಮಾಡಿದ್ದಾರೆ. ಪೃಥ್ವಿರಾಜ್​ ಸುಕುಮಾರನ್ ಅವರ ತಮ್ಮನ ಪಾತ್ರದಲ್ಲಿ ಅವರು ಗಮನ ಸೆಳೆದಿದ್ದಾರೆ. ಅವರು ಭರವಸೆಯ ನಟನಾಗಿ ಕಾಣಿಸುತ್ತಾರೆ.

‘ಗುಳ್ಟು’ ಮೂಲಕ ನವೀನ್ ಶಂಕರ್ ಅವರು ಕನ್ನಡದ ಭರವಸೆಯ ನಟ ಎನಿಸಿಕೊಂಡರು. ಅವರು ಡಾಲಿ ಧನಂಜಯ್ ನಟನೆಯ ‘ಗುರದೇವ ಹೊಯ್ಸಳ’ ಸಿನಿಮಾದಲ್ಲಿ ಆ್ಯಕ್ಷನ್ ಮೆರೆದಿದ್ದರು. ‘ಸಲಾರ್’ ಸಿನಿಮಾದಲ್ಲಿ ಅವರು ಒಂದು ಪಾತ್ರ ಮಾಡಿದ್ದಾರೆ. ಅವರಿಗೆ ಹೆಚ್ಚು ಸಂಭಾಷಣೆ ಸಿಕ್ಕಿಲ್ಲ. ಆದಾಗ್ಯೂ ಅವರ ಪಾತ್ರಕ್ಕೆ ತೂಕ ಇದೆ. ಗರುಡ ರಾಮ್ ಅವರು ‘ಕೆಜಿಎಫ್’ ಸಿನಿಮಾ ಮೂಲಕ ಗಮನ ಸೆಳೆದರು. ಅವರೂ ‘ಸಲಾರ್’ ಚಿತ್ರದಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: ‘ಪ್ರಭಾಸ್ ಮಾಸ್ ಕಂಬ್ಯಾಕ್’; ‘ಸಲಾರ್’ ನೋಡಿ ಟ್ವಿಟರ್​ನಲ್ಲಿ ವಿಮರ್ಶೆ ತಿಳಿಸಿದ ಫ್ಯಾನ್ಸ್

ಉಳಿದಂತೆ ರವಿ ಭಟ್, ಮಧು ಗುರುಸ್ವಾಮಿ, ಭಜರಂಗಿ ಲೋಕಿ, ಅಶ್ವಿನ್​ ಹಾಸನ್ ಅವರು ‘ಸಲಾರ್’ ಸಿನಿಮಾದಲ್ಲಿ ನಟಿಸಿದ್ದಾರೆ. ಕನ್ನಡದ ಕಲಾವಿದರಿಗೆ ಹೆಚ್ಚಿನ ಅವಕಾಶ ಸಿಕ್ಕಿರುವುದರಿಂದ ಕನ್ನಡದ ಸಿನಿಪ್ರಿಯರು ಖುಷಿಪಟ್ಟಿದ್ದಾರೆ. ಕನ್ನಡ ನಿರ್ಮಾಣ ಸಂಸ್ಥೆಯಿಂದ ಈ ರೀತಿಯ ಕಾರ್ಯಗಳು ಮತ್ತಷ್ಟು ಆಗಲಿ ಎಂದು ಅನೇಕರು ಆಶಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us