‘ಕಾಂತಾರ’ ಸಿನಿಮಾ ಹಿಟ್ ಆದ ಬಳಿಕ ನಿರ್ದೇಶಕ, ನಟ ರಿಷಬ್ ಶೆಟ್ಟಿ ಅವರು ‘ಕಾಂತಾರ: ಚಾಪ್ಟರ್ 1’ ಚಿತ್ರದ ಕೆಲಸಗಳಲ್ಲಿ ತೊಡಗಿಕೊಂಡರು. ಈ ಸಿನಿಮಾ ಬಗ್ಗೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಸಿನಿಮಾಗೆ ಸದ್ದಿಲ್ಲದೆ ಶೂಟಿಂಗ್ ನಡೆಯುತ್ತಿದೆ. ರಿಷಬ್ ಅವರು ಉದ್ದ ಕೂದಲು ಹಾಗೂ ಗಡ್ಡ ಬಿಟ್ಟು ಕಾಣಿಸಿಕೊಳ್ಳಬಹುದು ಎಂಬುದು ಅವರ ಲುಕ್ನಿಂದಲೇ ರಿವೀಲ್ ಆಗಿದೆ. ಈಗ ಚಿತ್ರಕ್ಕೆ ನಾಲ್ಕನೇ ಹಂತದ ಶೂಟಿಂಗ್ ಶೀಘ್ರವೇ ಆರಂಭ ಆಗಲಿದೆ.
ರಿಷಬ್ ಶೆಟ್ಟಿ ಅವರು ‘ಕಾಂತಾರ’ ಮುಗಿದ ಬಳಿಕ ಹೊಸ ಸಿನಿಮಾ ಘೋಷಣೆ ಮಾಡಲು ಸಾಕಷ್ಟು ಸಮಯ ತೆಗೆದುಕೊಂಡರು. ಅವರು ಸ್ಕ್ರಿಪ್ಟ್ ಕೆಲಸದಲ್ಲಿ ತೊಡಗಿಕೊಂಡಿದ್ದರು. ಆ ಬಳಿಕ ಕುಂದಾಪುರದಲ್ಲಿ ಸೆಟ್ ಹಾಕಿ ಸೈಲೆಂಟ್ ಆಗಿ ಶೂಟಿಂಗ್ ಮಾಡುತ್ತಿದ್ದಾರೆ. ಈ ಸಿನಿಮಾಗೆ ನಾಲ್ಕನೇ ಹಂತದ ಶೂಟಿಂಗ್ ಶೀಘ್ರವೇ ಆರಂಭ ಆಗಲಿದೆ.
ಆಗಸ್ಟ್ ಅಂತ್ಯದ ವೇಳೆಗೆ ನಾಲ್ಕನೇ ಹಂತದ ಶೂಟ್ ಆರಂಭ ಆಗಲಿದೆ. ಭರ್ಜರಿ ಆ್ಯಕ್ಷನ್ ದೃಶ್ಯಗಳನ್ನು ಶೂಟ್ ಮಾಡಲು ಪ್ಲ್ಯಾನಿಂಗ್ ನಡೆದಿದೆ. ಈ ಸಿನಿಮಾಗೆ ಶೂಟಿಂಗ್ ಕೊನೆಯ ಹಂತ ತಲುಪಿದೆ ಎಂದು ಹೇಳಲಾಗುತ್ತಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಈ ಸಿನಿಮಾ ಕಣ್ತುಂಬಿಕೊಳ್ಳಲು ಫ್ಯಾನ್ಸ್ ಕಾದಿದ್ದಾರೆ.
‘ಕಾಂತಾರ: ಚಾಪ್ಟರ್ 1’ ಸಿನಿಮಾ ‘ಕಾಂತಾರ’ದ ಪ್ರೀಕ್ವೆಲ್. ರಿಷಬ್ ಶೆಟ್ಟಿ ಅವರು ನಟಿಸಿ, ನಿರ್ದೇಶಿಸುತ್ತಿದ್ದಾರೆ. ಅಜನೀಶ್ ಲೋಕನಾಥ್ ಅವರು ಈ ಸಿನಿಮಾಗೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಈ ಸಿನಿಮಾ ಬಗ್ಗೆ ಫ್ಯಾನ್ಸ್ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಇದನ್ನೂ ಓದಿ: ‘ಕಾಂತಾರ’ ಪ್ಯಾನ್ ಇಂಡಿಯಾ ಮಾಡುವಂತೆ ರಿಷಬ್ಗೆ ಮೊದಲು ಹೇಳಿದ್ಯಾರು? ಯಾರಾದರೂ ಊಹಿಸ್ತೀರಾ?
‘ಕಾಂತಾರ’ ಸಿನಿಮಾಗೆ ‘ಅತ್ಯತ್ತಮ ಮನರಂಜನಾ ಸಿನಿಮಾ’ ಹಾಗೂ ‘ಕಾಂತಾರ’ ಚಿತ್ರದ ನಟನೆಗೆ ರಿಷಬ್ ಶೆಟ್ಟಿ ಅವರಿಗೆ ಅತ್ಯುತ್ತಮ ನಟ ಅವಾರ್ಡ್ ಸಿಕ್ಕಿದೆ. ಈ ಸಿನಿಮಾದಿಂದ ರಿಷಬ್ ಶೆಟ್ಟಿ ಅವರ ಖ್ಯಾತಿ ಹೆಚ್ಚಾಗಿದೆ. ಇದರಿಂದ ಕನ್ನಡ ಚಿತ್ರರಂಗಕ್ಕೆ ಖುಷಿ ಸಿಕ್ಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.