ಬಿಡುಗಡೆಗೆ ಮುಂಚೆಯೇ ‘ಕಾಂತಾರ: ಚಾಪ್ಟರ್ 1’ ಬಂಡವಾಳ ವಾಪಸ್

Kantara Chapter 1: ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ‘ಕಾಂತಾರ ಚಾಪ್ಟರ್ 1’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದ್ದು, ಹೊಂಬಾಳೆ ಫಿಲಮ್ಸ್​​ನವರು ಸಿನಿಮಾದ ಬ್ಯುಸಿನೆಸ್​​ನಲ್ಲಿ ತೊಡಗಿಕೊಂಡಿದ್ದಾರೆ. ಮಾರ್ಕೆಟಿಂಗ್​ ನಲ್ಲಿ ಶಕ್ತರಾದ ಹೊಂಬಾಳೆ ಫಿಲಮ್ಸ್​​ನವರು ಸಿನಿಮಾ ಬಿಡುಗಡೆ ಆಗುವ ಮುಂಚೆಯೇ ಸಿನಿಮಾಕ್ಕೆ ಹಾಕಿರುವ ಬಂಡವಾಳವನ್ನು ಮರಳಿ ಪಡೆದುಕೊಂಡಿದ್ದಾರೆ.

ಬಿಡುಗಡೆಗೆ ಮುಂಚೆಯೇ ‘ಕಾಂತಾರ: ಚಾಪ್ಟರ್ 1’ ಬಂಡವಾಳ ವಾಪಸ್
Rishab Shetty

Updated on: Sep 12, 2025 | 3:27 PM

ರಿಷಬ್ ಶೆಟ್ಟಿ (Rishab Shetty) ನಟಿಸಿ, ನಿರ್ದೇಶನ ಮಾಡಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಇದೆ. ಅಕ್ಟೋಬರ್ 2 ರಂದು ಸಿನಿಮಾ ಬಿಡುಗಡೆ ಆಗಲಿದೆ. ಹೊಂಬಾಳೆ ಫಿಲಮ್ಸ್ ನಿರ್ಮಾಣ ಮಾಡಿರುವ ಈ ಸಿನಿಮಾದ ಪ್ರಿ ರಿಲೀಸ್ ಸೇಲ್ಸ್ ಚಾಲ್ತಿಯಲ್ಲಿದ್ದು, ಸಿನಿಮಾ ಬಿಡುಗಡೆ ಆಗಲು ಇನ್ನೂ ಮೂರು ವಾರಗಳಿರುವಾಗಲೇ ಸಿನಿಮಾಕ್ಕೆ ಹಾಕಿರುವ ಬಂಡವಾಳವನ್ನು ಹೊಂಬಾಳೆ ಮರಳಿ ಪಡೆದುಕೊಂಡಿದೆ.

ಸಿನಿಮಾದ ವಿತರಣೆ ಹಕ್ಕು ಮಾರಾಟ, ಆಡಿಯೋ ಹಕ್ಕು ಮಾರಾಟ, ಡಿಜಿಟಲ್ ಹಕ್ಕು ಮಾರಾಟಗಳನ್ನು ಹೊಂಬಾಳೆ ಫಿಲಮ್ಸ್ ಈಗಾಗಲೇ ಮಾಡಿದೆ. ಇವುಗಳಿಂದಲೇ ಸಿನಿಮಾಕ್ಕೆ ಹಾಕಿರುವ ಅಷ್ಟೂ ಬಂಡವಾಳವನ್ನು ಈಗಾಗಲೇ ಹೊಂಬಾಳೆ ಫಿಲಮ್ಸ್ ಮರಳಿ ಪಡೆದುಕೊಂಡಿದೆ. ಅದರಲ್ಲೂ ಒಟಿಟಿ ಹಕ್ಕು ಮಾರಾಟ ಒಂದರಿಂದಲೇ ಸಿನಿಮಾಕ್ಕೆ 125 ಕೋಟಿ ರೂಪಾಯಿ ಲಾಭ ಬಂದಿದೆ. ಸಿನಿಮಾದ ಆಡಿಯೋ ಹಕ್ಕುಗಳು ಸಹ ದೊಡ್ಡ ಮೊತ್ತಕ್ಕೆ ಮಾರಾಟ ಆಗಿವೆ ಎನ್ನಲಾಗುತ್ತಿದೆ. ಇದರ ಜೊತೆಗೆ ವಿವಿಧ ರಾಜ್ಯಗಳ ವಿತರಣೆ ಹಕ್ಕುಗಳನ್ನು ಹೊಂಬಾಳೆ ಫಿಲಮ್ಸ್ ಮಾರಾಟ ಮಾಡಿದ್ದು ಅವುಗಳಿಂದಲೂ ಸಹ ದೊಡ್ಡ ಮೊತ್ತದ ಹಣವನ್ನು ಪಡೆದುಕೊಂಡಿದೆ.

ಕೆಲ ಸುದ್ದಿಗಳ ಪ್ರಕಾರ ‘ಕಾಂತಾರ: ಚಾಪ್ಟರ್ 1’ ಸಿನಿಮಾಕ್ಕೆ ಹೊಂಬಾಳೆ ಫಿಲಮ್ಸ್​​ನವರು 250 ಕೋಟಿ ರೂಪಾಯಿ ಬಜೆಟ್ ಹೂಡಿಕೆ ಮಾಡಿದ್ದಾರಂತೆ. ಈಗ ಹೂಡಿಕೆ ಮಾಡಿರುವ ಅಷ್ಟೂ ಬಜೆಟ್ ಈಗಾಗಲೇ ಹೊಂಬಾಳೆಗೆ ಮುಂಚಿತವಾಗಿಯೇ ಮರಳಿ ಬಂದಿದೆ. ಸಿನಿಮಾದ ಬಿಡುಗಡೆ ಅಕ್ಟೋಬರ್ 2 ರಂದು ಆಗಲಿದ್ದು, ಆ ದಿನ ಕರ್ನಾಟಕ ಸೇರಿದಂತೆ ಇನ್ನೂ ಕೆಲವೆಡೆ ಆಗುವ ಕಲೆಕ್ಷನ್ ಹೊಂಬಾಳೆ ಪಾಲಿಗೆ ಲಾಭ ಆಗಿರಲಿದೆ.

ಇದನ್ನೂ ಓದಿ:ಯಶ್, ರಿಷಬ್ ಶೆಟ್ಟಿಯನ್ನು ಕೊಂಡಾಡಿದ ರುಕ್ಮಿಣಿ ವಸಂತ್, ನಟಿ ಹೇಳಿದ್ದೇನು?

ಸಿನಿಮಾದ ಓವರ್​​ಸೀಸ್ ಬಿಡುಗಡೆಗೂ ಸಹ ದೊಡ್ಡ ಮಟ್ಟದ ಬೇಡಿಕೆ ಇದೆ. ಸಿನಿಮಾ ಅಮೆರಿಕ, ದುಬೈ ಸೇರಿದಂತೆ ಕನ್ನಡ ಸಿನಿಮಾಗಳು ಹೆಚ್ಚಾಗಿ ಬಿಡುಗಡೆ ಆಗದ ನ್ಯೂಜಿಲೆಂಡ್, ಆಸ್ಟ್ರೇಲಿಯಾ, ರಷ್ಯಾ ಇನ್ನೂ ಕೆಲ ದೇಶಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಆಗಲಿದೆ. ಈಗ ಆಗಿರುವ ಪ್ರೀ ರಿಲೀಸ್ ಸೇಲ್ಸ್ ಮತ್ತು ಸಿನಿಮಾಕ್ಕೆ ಇರುವ ನಿರೀಕ್ಷೆ ಗಮನಿಸಿದರೆ ಹೊಂಬಾಳೆ ಫಿಲಮ್ಸ್ ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಮೇಲೆ ಹಾಕಿರುವ ಬಂಡವಾಳದ 8 ರಿಂದ 10 ಪಟ್ಟು ಲಾಭ ಗಳಿಸುವ ಸಾಧ್ಯತೆ ಇದೆ.

2022 ರಲ್ಲಿ ಬಿಡುಗಡೆ ಆಗಿದ್ದ ‘ಕಾಂತಾರ’ ಸಿನಿಮಾದ ಪ್ರೀಕ್ವೆಲ್ ಕತೆ ಇದಾಗಿದ್ದು, ಸಿನಿಮಾನಲ್ಲಿ ರಿಷಬ್ ಶೆಟ್ಟಿ ಜೊತೆಗೆ ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾಕ್ಕಾಗಿ ಹಲವು ಹಾಲಿವುಡ್ ತಂತ್ರಜ್ಞರು ಕೆಲಸ ಮಾಡಿದ್ದಾರೆ. ಸಿನಿಮಾ ಅಕ್ಟೋಬರ್ 2 ರಂದು ತೆರೆಗೆ ಬರಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ