ಕರ್ನಾಟಕ ರಾಜ್ಯ ಸರ್ಕಾರವು 2019ನೇ ಸಾಲಿನ ವಾರ್ಷಿಕ ಚಲನಚಿತ್ರ ಪ್ರಶಸ್ತಿಯನ್ನು ಇಂದು (ಜನವರಿ 22) ಘೋಷಣೆ ಮಾಡಿದೆ. 2019 ರಲ್ಲಿ ಬಿಡುಗಡೆ ಆದ ಅಥವಾ ಸೆನ್ಸಾರ್ ಆದ ಸಿನಿಮಾಗಳಿಗೆ ಆರು ವರ್ಷಗಳ ಬಳಿಕ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ನಟ ಸುದೀಪ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ನೀಡಲಾಗಿದೆ. ಅನುಪಮಾ ಗೌಡಗೆ ಅತ್ಯುತ್ತಮ ನಟಿ ಪ್ರಶಸ್ತಿ ದೊರೆತಿದೆ. ಯಾವ ಯಾವ ಸಿನಿಮಾಗಳು, ನಟ-ನಟಿ ಮತ್ತು ತಂತ್ರಜ್ಞರಿಗೆ ಪ್ರಶಸ್ತಿ ನೀಡಲಾಗಿದೆ ಎಂಬ ಪೂರ್ಣ ಪಟ್ಟಿ ಇಲ್ಲಿ.
ಅತ್ಯುತ್ತಮ ನಟ ಸುದೀಪ್ (ಪೈಲ್ವಾನ್)
ಅತ್ಯುತ್ತಮ ನಟಿ ಅನುಪಮಾ ಗೌಡ (ತ್ರಯಂಬಕಂ)
ಅತ್ಯುತ್ತಮ ಸಿನಿಮಾ (1st) ಮೋಹನದಾಸ (ಪಿ ಶೇಷಾದ್ರಿ)
ಅತ್ಯುತ್ತಮ ಸಿನಿಮಾ (2nd) ಲವ್ ಮಾಕ್ಟೆಲ್ (ಡಾರ್ಲಿಂಗ್ ಕೃಷ್ಣ)
ಅತ್ಯುತ್ತಮ ಸಿನಿಮಾ (3rd) ಅರ್ಘ್ಯಂ (ವೈ ಶ್ರೀನಿವಾಸ್)
ಸಾಮಾಜಿಕ ಕಳಕಳಿ ಚಿತ್ರ ಕನ್ನೇರಿ (ಮಂಜುನಾಥ ಎಸ್)
ಮನರಂಜನಾ ಸಿನಿಮಾ ಇಂಡಿಯಾ vs ಇಂಗ್ಲೆಂಡ್ (ನಾಗತಿಹಳ್ಳಿ ಚಂದ್ರಶೇಖರ್)
ಮಕ್ಕಳ ಸಿನಿಮಾ ಎಲ್ಲಿ ಆಡೋದು ನಾವು ಎಲ್ಲಿ ಆಡೋದು (ಅರುಣ್ ಕುಮಾರ್)
ನಿರ್ದೇಶಕನ ಮೊದಲ ಚಿತ್ರ ಗೋಪಾಲ ಗಾಂಧಿ (ನಾಗೇಶ್)
ಪ್ರಾದೇಶಿಕ ಸಿನಿಮಾ ಟ್ರಿಬಲ್ ತಲಾಖ್ (ಬ್ಯಾರಿ ಭಾಷೆ-ನಿರ್ದೇಶಕ: ಯಾಕೂಬ್)
ಅತ್ಯುತ್ತಮ ಪೋಷಕ ನಟಿ ಅನೂಷಾ ಕೃಷ್ಣ (ಬ್ರಾಹ್ಮಿ)
ಅತ್ಯುತ್ತಮ ಪೋಷಕ ನಟ ತಬಲಾ ನಾಣಿ (ಕೆಮಿಸ್ಟ್ರಿ ಆಫ್ ಕರಿಯಪ್ಪ)
ಅತ್ಯುತ್ತಮ ಕತೆ ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ (ಜಯಂತ್ ಕಾಯ್ಕಿಣಿ)
ಅತ್ಯುತ್ತಮ ಚಿತ್ರಕತೆ ಲವ್ ಮಾಕ್ಟೆಲ್ (ಡಾರ್ಲಿಂಗ್ ಕೃಷ್ಣ)
ಅತ್ಯುತ್ತಮ ಸಂಭಾಷಣೆ ಅಮೃತಮತಿ (ಬರಗೂರು ರಾಮಚಂದ್ರಪ್ಪ)
ಅತ್ಯುತ್ತಮ ಛಾಯಾಗ್ರಹಣ ಮೋಹನದಾಸ (ಜಿಎಸ್ ಭಾಸ್ಕರ್)
ಅತ್ಯುತ್ತಮ ಸಂಕಲನ ಝಾನ್ಸಿ ಐಪಿಎಸ್ (ಬಸವರಾಜ್ ಅರಸ್)
ಅತ್ಯುತ್ತಮ ಬಾಲನಟ ಪ್ರೀತಂ (ಮಿಂಚು ಹುಳ)
ಅತ್ಯುತ್ತಮ ಬಾಲನಟಿ ಸುಗಂಧಿ (ಬೇಬಿ ವೈಷ್ಣವಿ ಅಡಿಗ)
ಅತ್ಯುತ್ತಮ ಕಲಾ ನಿರ್ದೇಶನ ಮೋಹನದಾಸ (ಹೊಸ್ಮನೆ ಮೂರ್ತಿ)
ಅತ್ಯುತ್ತಮ ಗೀತ ರಚನೆ ಪೆನ್ಸಿಲ್ ಬಾಕ್ಸ್ (ರಝಾಕ್ ಪುತ್ತೂರು)
ಅತ್ಯುತ್ತಮ ಗಾಯಕ ರಘು ದೀಕ್ಷಿತ್ (ಲವ್ ಮಾಕ್ಟೆಲ್)
ಅತ್ಯುತ್ತಮ ಗಾಯಕಿ ಜಯದೇವಿ ಶೆಟ್ಟಿ (ರಾಗ ಭೈರವಿ)
ತೀರ್ಪುಗಾರರ ಪ್ರಶಸ್ತಿ ಅಮೃತಮತಿ, ತಮಟೆ ನರಸಿಂಹಯ್ಯ, ಮಕ್ಕಡ್ ಮನಸು
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:37 pm, Wed, 22 January 25