ಬಿಕಿನಿಯಲ್ಲಿ ಬೇಬಿ ಬಂಪ್ ತೋರಿಸಿದ ‘ದಿ ವಿಲನ್’ ಬೆಡಗಿ ಆ್ಯಮಿ ಜಾಕ್ಸನ್

ಬ್ರಿಟಿಷ್ ನಟಿ ಆ್ಯಮಿ ಜಾಕ್ಸನ್ ಅವರು ಎರಡನೇ ಬಾರಿಗೆ ಗರ್ಭಿಣಿಯಾಗಿದ್ದಾರೆ. 'ದಿ ವಿಲನ್' ಸಿನಿಮಾದ ಮೂಲಕ ಕನ್ನಡ ಪ್ರೇಕ್ಷಕರಿಗೆ ಪರಿಚಯವಾದ ಅವರು, 2024ರಲ್ಲಿ ನಟ ಎಡ್ ವೆಸ್ಟ್​ವಿಕ್ ಅವರನ್ನು ವಿವಾಹವಾದರು. ಅವರ ಮೊದಲ ಮಗುವಿನ ನಂತರ ಇದು ಎರಡನೇ ಬಾರಿ ಪ್ರೆಗ್ನೆಂಟ್ ಆಗಿದ್ದಾರೆ.

ಬಿಕಿನಿಯಲ್ಲಿ ಬೇಬಿ ಬಂಪ್ ತೋರಿಸಿದ ‘ದಿ ವಿಲನ್’ ಬೆಡಗಿ ಆ್ಯಮಿ ಜಾಕ್ಸನ್
ಆ್ಯಮಿ ಜಾಕ್ಸನ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Jan 23, 2025 | 8:50 AM

ನಟಿ ಆ್ಯಮಿ ಜಾಕ್ಸನ್ ಕಿಚ್ಚ ಸುದೀಪ್ ಹಾಗೂ ಶಿವರಾಜ್​ಕುಮಾರ್ ನಟನೆಯ ‘ದಿ ವಿಲನ್’ ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರ ಯಶಸ್ಸು ಕಾಣಲಿಲ್ಲ. ಆದರೆ, ಆ್ಯಮಿ ಜಾಕ್ಸನ್ ಪರಿಚಯ ಕನ್ನಡದ ಮಂದಿಗೆ ಆಯಿತು. ಬ್ರಿಟಿಷ್ ನಟಿ ಆಗಿರೋ ಇವರು ಈಗ ವಿದೇಶದಲ್ಲಿ ಸೆಟಲ್ ಆಗಿದ್ದಾರೆ. ಈ ಮೊದಲು ಲಿವ್-ಇನ್ ರಿಲೇಶನ್​ಶಿಪ್​ನಲ್ಲಿ ಇದ್ದ ಅವರು ಅದನ್ನು ಬ್ರೇಕ್ ಮಾಡಿ ಬೇರೆ ವ್ಯಕ್ತಿ ಜೊತೆ 2024ರಲ್ಲಿ ಮದುವೆ ಆದರು. ಈಗ ಅವರು ಎರಡನೇ ಬಾರಿಗೆ ಪ್ರೆಗ್ನೆಂಟ್ ಆಗಿದ್ದಾರೆ.

ಹೊಟೆಲ್ ಉದ್ಯಮಿ ಜಾರ್ಜ್ ಪನಾಯೊಟೌ ಜೊತೆ ಆ್ಯಮಿ ಜಾಕ್ಸನ್ 2015ರಿಂದ 2021ರವರೆಗೆ ರಿಲೇಶನ್​ಶಿಪ್​ನಲ್ಲಿ ಇದ್ದರು. ಇವರು ಜಾರ್ಜ್​​ನಿಂದ ಮಗುವನ್ನು ಕೂಡ ಪಡೆದರು. 2019ರಲ್ಲಿ ಆ್ಯಮಿ ಹಾಗೂ ಜಾರ್ಜ್ ಎಂಗೇಜ್​​ಮೆಂಟ್ ಮಾಡಿಕೊಂಡರು. ಅದೇ ವರ್ಷ ಆ್ಯಮಿಗೆ ಮಗು ಜನಿಸಿತು. ಇವರು ಮದುವೆ ಆಗಿಲ್ಲ. 2021ರಲ್ಲಿ ಇಬ್ಬರೂ ಬೇರೆ ಆದರು.

ಆ ಬಳಿಕ ಇಂಗ್ಲಿಷ್ ಆ್ಯಕ್ಟರ್ ಎಡ್ ವೆಸ್ಟ್​ವಿಕ್ ಜೊತೆ ಅವರು ಡೇಟಿಂಗ್ ಆರಂಭಿಸಿದರು. ಇವರು ಕಳೆದ ವರ್ಷ ಆಗಸ್ಟ್​ ತಿಂಗಳಲ್ಲಿ ಮದುವೆ ಆದರು. ಅಕ್ಟೋಬರ್​ನಲ್ಲಿ ಆ್ಯಮಿ ಅವರು ತಾವು ಪ್ರೆಗ್ನೆಂಟ್ ಎನ್ನುವ ವಿಚಾರ ಘೋಷಣೆ ಮಾಡಿದ್ದಾರೆ. ಈಗ ಅವರು ಹೊಸ ಫೋಟೋಗಳನ್ನು ಹಂಚಿಕೊಂಡಿದ್ದು, ಬಿಕಿನಿಯಲ್ಲಿ ಬೇಬಿ ಬಂಪ್ ತೋರಿಸಿದ್ದಾರೆ.

ಆ್ಯಮಿ ಅವರು 2010ರಲ್ಲಿ ‘ಮದ್ರಾಸಪಟ್ಟಣಿಮ್’ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಇದು ತಮಿಳು ಸಿನಿಮಾ ಆಗಿತ್ತು. ಆ ಬಳಿಕ ಅವರು ದಕ್ಷಿಣದಲ್ಲೇ ಹೆಚ್ಚು ಬ್ಯುಸಿ ಆದರು. 2018ರಲ್ಲಿ ‘ದಿ ವಿಲನ್’ ಸಿನಿಮಾ ಮಾಡಿದರು. ಈ ಚಿತ್ರದಲ್ಲಿ ಸೀತಾ ಹೆಸರಿನ ಪಾತ್ರ ಅವರದ್ದಾಗಿತ್ತು. ಅವರು ಇತ್ತೀಚೆಗೆ ಸಿನಿಮಾ ರಂಗದಿಂದ ದೂರ ಇದ್ದಾರೆ. ವಿದೇಶದಲ್ಲಿ ಸೆಟಲ್ ಆಗಿರುವ ಅವರು ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ.

ಇದನ್ನೂ ಓದಿ: ‘ದಿ ವಿಲನ್​’ ನಟಿ ಆ್ಯಮಿ ಜಾಕ್ಸನ್​ ಐಷಾರಾಮಿ ಬದುಕಿಗೆ ಈ ಫೋಟೋಗಳೇ ಸಾಕ್ಷಿ

ಆ್ಯಮಿ ಅವರು ಲಂಡನ್​ನಲ್ಲಿ ಉಳಿದುಕೊಂಡಿದ್ದಾರೆ ಎನ್ನಲಾಗಿದೆ. ಕೆಲ ವರ್ಷ ಅವರು ಮುಂಬೈನಲ್ಲಿ ತಂಗಿದ್ದರು. ಅವರು ಮಾಡೆಲ್ ಕೂಡ ಹೌದು. ಎರಡನೇ ಮಗು ಜನಿಸಿದ ಬಳಿಕ ಬ್ರೇಕ್ ಪಡೆಯಲು ಆಲೋಚಿಸಿರೋ ಅವರು ಮತ್ತೆ ನಟನೆಗೆ ಮರಳುತ್ತಾರಾ ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.