AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್ಯ ಚಲನಚಿತ್ರ ಪ್ರಶಸ್ತಿ ಘೋಷಣೆ: ಇಲ್ಲಿದೆ ಪೂರ್ಣ ಪಟ್ಟಿ

Karnataka State Film Awards 2019: ಕರ್ನಾಟಕ ಸರ್ಕಾರವು 2019ರ ರಾಜ್ಯ ಸಿನಿಮಾ ಪ್ರಶಸ್ತಿಗಳನ್ನು ಘೋಷಣೆ ಮಾಡಿದೆ. 2019 ರಲ್ಲಿ ಬಿಡುಗಡೆ ಆದ ಸಿನಿಮಾಗಳಿಗೆ ಪ್ರಶಸ್ತಿಗಳನ್ನು ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಸುದೀಪ್​ಗೆ ಅತ್ಯುತ್ತಮ ನಟ ಪ್ರಶಸ್ತಿ ನೀಡಿರುವುದು ವಿಶೇಷ. ಆರು ವರ್ಷದ ಹಿಂದೆ ಬಿಡುಗಡೆ ಆದ ಸಿನಿಮಾಗಳಿಗೆ ಈಗ ಪ್ರಶಸ್ತಿ ಘೋಷಣೆ ಮಾಡಲಾಗಿದೆ.

ರಾಜ್ಯ ಚಲನಚಿತ್ರ ಪ್ರಶಸ್ತಿ ಘೋಷಣೆ: ಇಲ್ಲಿದೆ ಪೂರ್ಣ ಪಟ್ಟಿ
State Film Awards 2019
ಮಂಜುನಾಥ ಸಿ.
|

Updated on:Jan 22, 2025 | 5:39 PM

Share

ಕರ್ನಾಟಕ ರಾಜ್ಯ ಸರ್ಕಾರವು 2019ನೇ ಸಾಲಿನ ವಾರ್ಷಿಕ ಚಲನಚಿತ್ರ ಪ್ರಶಸ್ತಿಯನ್ನು ಇಂದು (ಜನವರಿ 22) ಘೋಷಣೆ ಮಾಡಿದೆ. 2019 ರಲ್ಲಿ ಬಿಡುಗಡೆ ಆದ ಅಥವಾ ಸೆನ್ಸಾರ್ ಆದ ಸಿನಿಮಾಗಳಿಗೆ ಆರು ವರ್ಷಗಳ ಬಳಿಕ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ನಟ ಸುದೀಪ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ನೀಡಲಾಗಿದೆ. ಅನುಪಮಾ ಗೌಡಗೆ ಅತ್ಯುತ್ತಮ ನಟಿ ಪ್ರಶಸ್ತಿ ದೊರೆತಿದೆ. ಯಾವ ಯಾವ ಸಿನಿಮಾಗಳು, ನಟ-ನಟಿ ಮತ್ತು ತಂತ್ರಜ್ಞರಿಗೆ ಪ್ರಶಸ್ತಿ ನೀಡಲಾಗಿದೆ ಎಂಬ ಪೂರ್ಣ ಪಟ್ಟಿ ಇಲ್ಲಿ.

ಅತ್ಯುತ್ತಮ ನಟ ಸುದೀಪ್ (ಪೈಲ್ವಾನ್)

ಅತ್ಯುತ್ತಮ ನಟಿ ಅನುಪಮಾ ಗೌಡ (ತ್ರಯಂಬಕಂ)

ಅತ್ಯುತ್ತಮ ಸಿನಿಮಾ (1st) ಮೋಹನದಾಸ (ಪಿ ಶೇಷಾದ್ರಿ)

ಅತ್ಯುತ್ತಮ ಸಿನಿಮಾ (2nd) ಲವ್ ಮಾಕ್ಟೆಲ್ (ಡಾರ್ಲಿಂಗ್ ಕೃಷ್ಣ)

ಅತ್ಯುತ್ತಮ ಸಿನಿಮಾ (3rd) ಅರ್ಘ್ಯಂ (ವೈ ಶ್ರೀನಿವಾಸ್)

ಸಾಮಾಜಿಕ ಕಳಕಳಿ ಚಿತ್ರ ಕನ್ನೇರಿ (ಮಂಜುನಾಥ ಎಸ್)

ಮನರಂಜನಾ ಸಿನಿಮಾ ಇಂಡಿಯಾ vs ಇಂಗ್ಲೆಂಡ್ (ನಾಗತಿಹಳ್ಳಿ ಚಂದ್ರಶೇಖರ್)

ಮಕ್ಕಳ ಸಿನಿಮಾ ಎಲ್ಲಿ ಆಡೋದು ನಾವು ಎಲ್ಲಿ ಆಡೋದು (ಅರುಣ್ ಕುಮಾರ್)

ನಿರ್ದೇಶಕನ ಮೊದಲ ಚಿತ್ರ ಗೋಪಾಲ ಗಾಂಧಿ (ನಾಗೇಶ್)

ಪ್ರಾದೇಶಿಕ ಸಿನಿಮಾ ಟ್ರಿಬಲ್ ತಲಾಖ್ (ಬ್ಯಾರಿ ಭಾಷೆ-ನಿರ್ದೇಶಕ: ಯಾಕೂಬ್)

ಅತ್ಯುತ್ತಮ ಪೋಷಕ ನಟಿ ಅನೂಷಾ ಕೃಷ್ಣ (ಬ್ರಾಹ್ಮಿ)

ಅತ್ಯುತ್ತಮ ಪೋಷಕ ನಟ ತಬಲಾ ನಾಣಿ (ಕೆಮಿಸ್ಟ್ರಿ ಆಫ್ ಕರಿಯಪ್ಪ)

ಅತ್ಯುತ್ತಮ ಕತೆ ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ (ಜಯಂತ್ ಕಾಯ್ಕಿಣಿ)

ಅತ್ಯುತ್ತಮ ಚಿತ್ರಕತೆ ಲವ್ ಮಾಕ್ಟೆಲ್ (ಡಾರ್ಲಿಂಗ್ ಕೃಷ್ಣ)

ಅತ್ಯುತ್ತಮ ಸಂಭಾಷಣೆ ಅಮೃತಮತಿ (ಬರಗೂರು ರಾಮಚಂದ್ರಪ್ಪ)

ಅತ್ಯುತ್ತಮ ಛಾಯಾಗ್ರಹಣ ಮೋಹನದಾಸ (ಜಿಎಸ್ ಭಾಸ್ಕರ್)

ಅತ್ಯುತ್ತಮ ಸಂಕಲನ ಝಾನ್ಸಿ ಐಪಿಎಸ್ (ಬಸವರಾಜ್ ಅರಸ್)

ಅತ್ಯುತ್ತಮ ಬಾಲನಟ ಪ್ರೀತಂ (ಮಿಂಚು ಹುಳ)

ಅತ್ಯುತ್ತಮ ಬಾಲನಟಿ ಸುಗಂಧಿ (ಬೇಬಿ ವೈಷ್ಣವಿ ಅಡಿಗ)

ಅತ್ಯುತ್ತಮ ಕಲಾ ನಿರ್ದೇಶನ ಮೋಹನದಾಸ (ಹೊಸ್ಮನೆ ಮೂರ್ತಿ)

ಅತ್ಯುತ್ತಮ ಗೀತ ರಚನೆ ಪೆನ್ಸಿಲ್ ಬಾಕ್ಸ್ (ರಝಾಕ್ ಪುತ್ತೂರು)

ಅತ್ಯುತ್ತಮ ಗಾಯಕ ರಘು ದೀಕ್ಷಿತ್ (ಲವ್ ಮಾಕ್ಟೆಲ್)

ಅತ್ಯುತ್ತಮ ಗಾಯಕಿ ಜಯದೇವಿ ಶೆಟ್ಟಿ (ರಾಗ ಭೈರವಿ)

ತೀರ್ಪುಗಾರರ ಪ್ರಶಸ್ತಿ ಅಮೃತಮತಿ, ತಮಟೆ ನರಸಿಂಹಯ್ಯ, ಮಕ್ಕಡ್ ಮನಸು

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:37 pm, Wed, 22 January 25

ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ