ಕೊರೊನಾ ಹೆಚ್ಚುತ್ತಿರುವ ಮಧ್ಯೆಯೇ ಸಿಂಪಲ್​ ಆಗಿ ಮದುವೆ ಆಗಲಿದ್ದಾರೆ ಕಾವ್ಯಾ ಗೌಡ

|

Updated on: Apr 28, 2021 | 4:22 PM

ಇತ್ತೀಚೆಗೆ ದುಬೈಗೆ ತೆರಳಿದ್ದ ಕಾವ್ಯಾ ಅಲ್ಲಿಂದಲೇ ತಮ್ಮ ಲೈಫ್​ ಪಾರ್ಟ್ನರ್​​ಅನ್ನು ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ. ತಾವು ಮದುವೆ ಆಗುತ್ತಿರುವ ಹುಡುಗನ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

ಕೊರೊನಾ ಹೆಚ್ಚುತ್ತಿರುವ ಮಧ್ಯೆಯೇ ಸಿಂಪಲ್​ ಆಗಿ ಮದುವೆ ಆಗಲಿದ್ದಾರೆ ಕಾವ್ಯಾ ಗೌಡ
ಕಾವ್ಯಾ ಗೌಡ ಜತೆ ಸೋಮಶೇಖರ್​
Follow us on

ರಾಧಾ ರಮಣ ಧಾರಾವಾಹಿ ಮೂಲಕ ಚಿರಪರಿಚಿತರಾದ ನಟಿ ಕಾವ್ಯಾ ಗೌಡ ಇತ್ತೀಚೆಗೆ ಪ್ರೀ ವೆಡ್ಡಿಂಗ್ ಫೋಟೋಶೂಟ್​ ಮೂಲಕ ಅಭಿಮಾನಿಗಳಿಗೆ ಸರ್​ಪ್ರೈಸ್​ ನೀಡಿದ್ದರು. ಈಗ ಅವರು ಮದುವೆ ದಿನಾಂಕ ಕೂಡ ಘೋಷಣೆ ಮಾಡಿಕೊಂಡಿದ್ದಾರೆ. ಕೊರೊನಾ ಹೆಚ್ಚುತ್ತಿರುವ ಮಧ್ಯೆಯೇ ಸಿಂಪಲ್​ ಆಗಿ ಹಸೆಮಣೆ ಏರಲು ಕಾವ್ಯಾ ನಿರ್ಧರಿಸಿದ್ದಾರೆ. ಈ ವಿಚಾರ ಕೇಳಿ ಅಭಿಮಾನಿಗಳು ಫುಲ್​ ಖುಷ್​ ಆಗಿದ್ದಾರೆ.

ಇತ್ತೀಚೆಗೆ ದುಬೈಗೆ ತೆರಳಿದ್ದ ಕಾವ್ಯಾ ಅಲ್ಲಿಂದಲೇ ತಮ್ಮ ಲೈಫ್​ ಪಾರ್ಟ್ನರ್​​ಅನ್ನು ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ. ತಾವು ಮದುವೆ ಆಗುತ್ತಿರುವ ಹುಡುಗನ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈಗ ಹುಡುಗನ ಬಗ್ಗೆ ಕಾವ್ಯಾ ಮಾಹಿತಿ ನೀಡಿದ್ದಾರೆ.

ಬೆಂಗಳೂರು ಮೂಲದ ಉದ್ಯಮಿ ಸೋಮಶೇಖರ್​ ಅವರನ್ನು ಕಾವ್ಯಾ ಗೌಡ ಮದುವೆ ಆಗುತ್ತಿದ್ದಾರೆ. ಮೇ 13ರಂದು ಈ ಜೋಡಿ ಬೆಂಗಳೂರಿನಲ್ಲಿ ಹಸೆಮಣೆ ಏರುತ್ತಿದೆ. ಬೆಂಗಳೂರಿನಲ್ಲಿ ಇಬ್ಬರೂ ಸಿಂಪಲ್​ ಆಗಿ ಮದುವೆ ಆಗಲಿದ್ದಾರೆ. ಆಪ್ತರಿಗೆ ಮಾತ್ರ ಮದುವೆಗೆ ಆಮಂತ್ರಣ ಇರಲಿದೆ. ಕಾವ್ಯಾ ಗೌಡ ಅವರದ್ದು ಅರೇಂಜ್​ ಮ್ಯಾರೇಜ್​ ಅನ್ನೋದು ವಿಶೇಷ.

ಇತ್ತೀಚೆಗೆ ಕಾವ್ಯಾ ಗೌಡ ಸಾಮಾಜಿಕ ಜಾಲತಾಣದಲ್ಲಿ ಸೋಮಶೇಖರ್​ ಜತೆ ಇರುವ ಸಾಲು ಸಾಲು ಪೋಟೋಗಳನ್ನು ಪೋಸ್ಟ್​ ಮಾಡಿದ್ದರು. ಅಲ್ಲದೆ, ಉದ್ದನೆಯ ಸಾಲುಗಳನ್ನು ಬರೆದಿದ್ದರು. ಅಲ್ಲದೆ, ನಿನ್ನನ್ನು ಪಡೆಯಲು ನಾನೆಷ್ಟು ಲಕ್ಕಿ ಎಂದು ಹೇಳಿಕೊಂಡಿದ್ದರು.

2015ರಲ್ಲಿ ತೆರೆಕಂಡ ಶುಭ ವಿವಾಹ ಧಾರಾವಾಹಿ ಮೂಲಕ ಕಾವ್ಯಾ ಗೌಡ ತಮ್ಮ ಕಿರುತೆರೆ ಪಯಣ ಆರಂಭಿಸಿದರು. ನಂತರ ರಾಧಾ ರಮಣದಲ್ಲಿ ರಾಧಾ ಆಗಿ ಕಾಣಿಸಿಕೊಂಡರು. ಗಾಂಧಾರಿ ಧಾರಾವಾಹಿಯಲ್ಲೂ ಕಾವ್ಯಾ ನಟಿಸಿದ್ದರು. 2018ರಲ್ಲಿ ತೆರೆಕಂಡ ಬಕಾಸುರ ಸಿನಿಮಾ ಮೂಲಕ ಹಿರಿತೆರೆಗೆ ಕಾಲಿಟ್ಟರು.

ಇದನ್ನೂ ಓದಿ: Kavya Gowda: ಪ್ರೀತಿ ವಿಚಾರ ಬಿಚ್ಚಿಟ್ಟ ಕಿರುತೆರೆ ನಟಿ ಕಾವ್ಯಾ ಗೌಡ; ದುಬೈನಲ್ಲಿ ಸಖತ್​ ಫೋಟೋಶೂಟ್​