KCN Mohan: ಊರ್ವಶಿ ಥಿಯೇಟರ್​ ಮಾಲಿಕ, ನಿರ್ಮಾಪಕ ಕೆಸಿಎನ್​ ಮೋಹನ್​ ನಿಧನ: ಕಂಬನಿ ಮಿಡಿದ ಚಿತ್ರರಂಗ

KCN Mohan Death: ಕೆಸಿಎನ್​ ಮೋಹನ್​ ಅವರಿಗೆ ಇತ್ತೀಚೆಗೆ ಆರೋಗ್ಯ ಕೈ ಕೊಟ್ಟಿತ್ತು. ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

KCN Mohan: ಊರ್ವಶಿ ಥಿಯೇಟರ್​ ಮಾಲಿಕ, ನಿರ್ಮಾಪಕ ಕೆಸಿಎನ್​ ಮೋಹನ್​ ನಿಧನ: ಕಂಬನಿ ಮಿಡಿದ ಚಿತ್ರರಂಗ
ಕೆಸಿಎನ್​ ಮೋಹನ್​

Updated on: Jul 02, 2023 | 2:50 PM

ಸ್ಯಾಂಡಲ್​ವುಡ್​ನಲ್ಲಿ ಹಲವು ವರ್ಷಗಳಿಂದ ಸಕ್ರಿಯರಾಗಿದ್ದ ಹಿರಿಯ ನಿರ್ಮಾಪಕ, ಪ್ರದರ್ಶಕ ಕೆಸಿಎನ್​ ಮೋಹನ್​ (KCN Mohan) ಅವರು ನಿಧನರಾಗಿದ್ದಾರೆ. ಅವರು ಕೊನೆಯುಸಿರೆಳೆದ (KCN Mohan Death) ಸುದ್ದಿ ಕೇಳಿ ಕನ್ನಡ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಸಂತಾಪ ಸೂಚಿಸಿದ್ದಾರೆ. ಹಲವಾರು ಸಿನಿಮಾಗಳನ್ನು ಕೆಸಿಎನ್​ ಮೋಹನ್​ ನಿರ್ಮಾಣ ಮಾಡಿದ್ದರು. ನವರಂಗ್​, ಊರ್ವಶಿ ಚಿತ್ರಮಂದಿರಗಳ ಮಾಲೀಕರಾಗಿದ್ದ ಅವರು ಪ್ರದರ್ಶಕರಾಗಿ ಕನ್ನಡ ಚಿತ್ರರಂಗಕ್ಕೆ ಕೊಡುಗೆ ನೀಡಿದ್ದರು. ಇತ್ತೀಚೆಗೆ ಮೋಹನ್​ ಅವರಿಗೆ ಆರೋಗ್ಯ ಕೈ ಕೊಟ್ಟಿತ್ತು. ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಿಡ್ನಿ ವೈಫಲ್ಯದಿಂದ (Kidney Failure) ಕೆಸಿಎನ್​ ಮೋಹನ್​ ನಿಧನರಾಗಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಅವರಿಗೆ 63 ವರ್ಷ ವಯಸ್ಸಾಗಿತ್ತು.

ರಮ್ಯಾ ದಿವ್ಯ ಸ್ಪಂದನಾ ನಟನೆಯ ‘ಜೂಲಿ’, ‘ರಾಮರಾಜ್ಯದಲ್ಲಿ ರಾಕ್ಷಸರು’, ‘ಜಯಸಿಂಹ’, ‘ಧರ್ಮ ಯುದ್ಧ’, ಶಂಕರ್​ ನಾಗ್​ ನಟನೆ ‘ಭಲೇ ಚತುರು’  ಮುಂತಾದ ಸಿನಿಮಾಗಳನ್ನು ಕೆಸಿಎನ್​ ಮೋಹನ್​ ಅವರು ನಿರ್ಮಾಣ ಮಾಡಿದ್ದರು. ಸಿನಿಮಾ ವಿತರಣೆಯಲ್ಲಿ ಅವರು ಪಳಗಿದ್ದರು. ಮೋಹನ್​ ಅವರ ತಂದೆ ಕೆಸಿಎನ್​ ಗೌಡ ಕೂಡ ನಿರ್ಮಾಪಕರಾಗಿ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು. ಡಾ. ರಾಜ್​ಕುಮಾರ್​ ನಟನೆಯ ಹಲವು ಸಿನಿಮಾಗಳಿಗೆ ಕೆಸಿಎನ್​ ಗೌಡ ಅವರು ಬಂಡವಾಳ ಹೂಡಿದ್ದರು.

ಇದನ್ನೂ ಓದಿ: Jo Lindner: 30ನೇ ವಯಸ್ಸಿಗೆ ಜೋ ಲಿಂಡ್ನರ್​ ನಿಧನ; ‘ಪೊಗರು’ ಚಿತ್ರದಲ್ಲಿ ನಟಿಸಿದ್ದ ಬಾಡಿ ಬಿಲ್ಡರ್​ ಅನುಮಾನಾಸ್ಪದ ಸಾವು

ಕಪ್ಪು ಬಿಳುಪಿನಲ್ಲಿ ಮೂಡಿಬಂದಿದ್ದ ರಾಜ್​ಕುಮಾರ್​ ನಟನೆಯ ‘ಸತ್ಯ ಹರಿಶ್ಚಂದ್ರ’ ಮತ್ತು ‘ಕಸ್ತೂರಿ ನಿವಾಸ’ ಸಿನಿಮಾವನ್ನು ಕಲರ್​ಗೆ ಪರಿವರ್ತಿಸಿ ಬಿಡುಗಡೆ ಮಾಡಿದ ಖ್ಯಾತಿ ಕೆಸಿಎನ್​ ಮೋಹನ್​ ಅವರಿಗೆ ಸಲ್ಲುತ್ತದೆ. ಮೋಹನ್​ ಅವರ ಪತ್ನಿ ರೇಣುಕಾ ಮೋಹನ್ ಅವರು ನಿರ್ದೇಶಕಿಯಾಗಿ ಗುರುತಿಸಿಕೊಂಡಿದ್ದರು. ‘ಜೂಲಿ’ ಸಿನಿಮಾ ಮೂಡಿಬಂದಿದ್ದು ರೇಣುಕಾ ಅವರ ನಿರ್ದೇಶನದಲ್ಲಿ. 2017ರಲ್ಲಿ ರೇಣುಕಾ ನಿಧನರಾದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 2:32 pm, Sun, 2 July 23

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us