AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾಖಲೆಯ ಗಳಿಕೆ ಮಾಡಿದ ‘ಕೆಡಿ’ ಮೂವಿ; ಒಟ್ಟೂ ಕಲೆಕ್ಷನ್ ಎಷ್ಟು?

KD Movie Box Office Collection: ‘ಕೆಡಿ’ ಸಿನಿಮಾ ಸಾಕಷ್ಟು ಹೈಪ್ ಸೃಷ್ಟಿ ಮಾಡಿತ್ತು. ದೊಡ್ಡ ಬಜೆಟ್​​ನಲ್ಲಿ ಈ ಚಿತ್ರ ಸಿದ್ಧವಾಗಿತ್ತು. ರೆಟ್ರೋ ಕಾಲದ ಕಥೆ ಆಗಿರುವುದರಿಂದ ಇದರಲ್ಲಿ ದೊಡ್ಡ ದೊಡ್ಡ ಸೆಟ್​​ಗಳ ನಿರ್ಮಾಣ ಆಗಿತ್ತು. ಈ ವಿಷಯದಲ್ಲಿ ರಾಜಿ ಆಗದೆ ಕೆವಿಎನ್ ಸಂಸ್ಥೆ ಧಾರಾಳವಾಗಿ ಹಣ ಸುರಿದಿದೆ. ಇದರಿಂದ ಸಿನಿಮಾ ಅದ್ದೂರಿಯಾಗಿ ಮೂಡಿ ಬಂದಿದೆ. ನಾಲ್ಕು ದಿನಗಳಲ್ಲಿ ‘ಕೆಡಿ’ ಚಿತ್ರದ ಕಲೆಕ್ಷನ್ ದೊಡ್ಡ ಮಟ್ಟದಲ್ಲೇ ಆಗಿದೆ.

ದಾಖಲೆಯ ಗಳಿಕೆ ಮಾಡಿದ ‘ಕೆಡಿ’ ಮೂವಿ;  ಒಟ್ಟೂ ಕಲೆಕ್ಷನ್ ಎಷ್ಟು?
ಕೆಡಿ
ರಾಜೇಶ್ ದುಗ್ಗುಮನೆ
|

Updated on:May 05, 2026 | 6:52 AM

Share

ಪ್ರೇಮ್ ನಿರ್ದೇಶನದ ಹಾಗೂ ಧ್ರುವ ಸರ್ಜಾ ನಟನೆಯ ‘ಕೆಡಿ’ ಸಿನಿಮಾ ಏಪ್ರಿಲ್ 30ರಂದು ರಿಲೀಸ್ ಆಯಿತು. ಈ ಸಿನಿಮಾ ಈಗ ದಾಖಲೆಯ ಕಲೆಕ್ಷನ್ ಮಾಡಿ ಬಾಕ್ಸ್ ಆಫೀಸ್​​​ನಲ್ಲಿ ಮುನ್ನುಗ್ಗುತ್ತಿದೆ. ಈ ಚಿತ್ರದ ಒಟ್ಟಾರೆ ಕಲೆಕ್ಷನ್ ಕೇಳಿದ ಅನೇಕರು ಅಚ್ಚರಿ ಹೊರಹಾಕುತ್ತಿದ್ದಾರೆ. ಸಾಲು ಸಾಲು ಹಿನ್ನಡೆ ಅನುಭವಿಸುತ್ತಿದ್ದ ಕೆವಿಎನ್​​ಗೆ ಮೊದಲ ಬಾರಿಗೆ ಖುಷಿ ಸುದ್ದಿ ಸಿಕ್ಕಿದೆ. ಈ ಬೆಳವಣಿಗೆಯಿಂದ ನಿರ್ಮಾಪಕರು ನಿಟ್ಟುಸಿರು ಬಿಡುವಂತೆ ಆಗಿದೆ.

‘ಕೆಡಿ’ ಸಿನಿಮಾ ಸಾಕಷ್ಟು ಹೈಪ್ ಸೃಷ್ಟಿ ಮಾಡಿತ್ತು. ದೊಡ್ಡ ಬಜೆಟ್​​ನಲ್ಲಿ ಈ ಚಿತ್ರ ಸಿದ್ಧವಾಗಿತ್ತು. ರೆಟ್ರೋ ಕಾಲದ ಕಥೆ ಆಗಿರುವುದರಿಂದ ಇದರಲ್ಲಿ ದೊಡ್ಡ ದೊಡ್ಡ ಸೆಟ್​​ಗಳ ನಿರ್ಮಾಣ ಆಗಿತ್ತು. ಈ ವಿಷಯದಲ್ಲಿ ರಾಜಿ ಆಗದೆ ಕೆವಿಎನ್ ಸಂಸ್ಥೆ ಧಾರಾಳವಾಗಿ ಹಣ ಸುರಿದಿದೆ. ಇದರಿಂದ ಸಿನಿಮಾ ಅದ್ದೂರಿಯಾಗಿ ಮೂಡಿ ಬಂದಿದೆ. ನಾಲ್ಕು ದಿನಗಳಲ್ಲಿ ‘ಕೆಡಿ’ ಚಿತ್ರದ ಕಲೆಕ್ಷನ್ ದೊಡ್ಡ ಮಟ್ಟದಲ್ಲೇ ಆಗಿದೆ.

ಗುರುವಾರ 4 ಕೋಟಿ ರೂಪಾಯಿ, ಶುಕ್ರವಾರ 4 ಕೋಟಿ ರೂಪಾಯಿ, ಶನಿವಾರ 2.40 ಕೋಟಿ ರೂಪಾಯಿ, ಭಾನುವಾರ 2.75 ಕೋಟಿ ರೂಪಾಯಿ ಗಳಿಕೆ ಆಗಿದೆ. ಈ ಮೂಲಕ ಭಾರತದಲ್ಲಿ 12 ಕೋಟಿ ರೂಪಾಯಿ ಲೆಕ್ಕ ಗಳಿಸಿದೆ. ಭಾರತದಲ್ಲಿ ಗ್ರಾಸ್ ಕಲೆಕ್ಷನ್ 13 ಕೋಟಿ ರೂಪಾಯಿ ಇದೆ ಎಂದು ಬಾಕ್ಸ್ ಆಫೀಸ್ ಟ್ರ್ಯಾಕಿಂಗ್ ಜಾಲತಾಣ ಸ್ಯಾಕ್ನಿಲ್ಕ್​ ವರದಿ ಮಾಡಿದೆ.

ಕೇವಲ ಭಾರತದಲ್ಲಿ ಮಾತ್ರವಲ್ಲದೆ ವಿಶ್ವ ಮಟ್ಟದಲ್ಲಿಯೂ ಸಿನಿಮಾ ಅದ್ದೂರಿ ಗಳಿಕೆ ಮಾಡುತ್ತಿದೆ. ಈ ಸಿನಿಮಾ ವಿದೇಶದಲ್ಲಿಯೂ  ಗಳಿಸಿದೆ.

ಇದನ್ನೂ ಓದಿ: ಎರಡನೇ ದಿನವೂ ಭರ್ಜರಿ ಗಳಿಕೆ ಮಾಡಿದ ‘ಕೆಡಿ’; ಧ್ರುವ ಸಿನಿಮಾ ಕಲೆಕ್ಷನ್ ಎಷ್ಟು?

‘ಕೆಡಿ’ ಚಿತ್ರಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ಸಿಗುತ್ತಿದೆ. ಹೀಗಾಗಿ, ಹೆಚ್ಚಿನ ಸಂಖ್ಯೆಯಲ್ಲಿ ಜನರು ಥಿಯೇಟರ್​​ಗೆ ಬರುತ್ತಿದ್ದಾರೆ. ಇತ್ತೀಚೆಗೆ ಸೆಲೆಬ್ರಿಟಿ ಶೋ ಆಯೋಜನೆ ಮಾಡಲಾಗಿತ್ತು. ಅನೇಕ ಸೆಲೆಬ್ರಿಟಿಗಳು ಸಿನಿಮಾ ವೀಕ್ಷಣೆ ಮಾಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:15 am, Mon, 4 May 26

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More