[lazy-load-videos-and-sticky-control id=”kNLZ4vgn9Zc”]
ಬೆಂಗಳೂರು:ಕೊರೊನಾ ಸೋಂಕಿನಿಂದ ತನ್ನೆಲ್ಲಾ ಚಟುವಟಿಕೆಗಳಿಗೂ ಬ್ರೇಕ್ ಹಾಕಿದ್ದ ಸ್ಯಾಂಡಲ್ವುಡ್ ಈಗ ಕೊಂಚ ಕೊಂಚವೇ ಚಟುವಟಿಕೆಗಳನ್ನ ಶುರುಮಾಡಿದೆ. ಅಂತೆಯೇ ಇದೀಗ, ಸ್ಯಾಂಡಲ್ವುಡ್ನ ಬಹು ನಿರೀಕ್ಷಿತ KGF-2 ಚಿತ್ರದ ಶೂಟಿಂಗ್ ಸಹ ಶುರುವಾಗಿದೆ.
ಈಗಾಗಲೇ KGF-1 ಸಿನಿಮಾ ಇಡೀ ವಿಶ್ವದ ಗಮನವನ್ನ ತನ್ನತ್ತ ಸೆಳೆದಿದ್ದು ಈಗ ಎಲ್ಲರ ಚಿತ್ತ KGFನ ಎರಡನೇ ಭಾಗದ ಮೇಲಿದೆ. ಸ್ವಾಭಾವಿಕವಾಗಿಯೇ ಚಿತ್ರದ ಮೇಲೆ ನಿರೀಕ್ಷೆಗಳಿದ್ದು, ಅಭಿಮಾನಿಗಳ ನಿರೀಕ್ಷೆಯನ್ನು ಹುಸಿಗೊಳಿಸುವುದಿಲ್ಲವೆಂದು ಚಿತ್ರದ ನಾಯಕ ಯಶ್ ಹಾಗೂ ನಿರ್ದೇಶಕ ಪ್ರಶಾಂತ್ ನೀಲ್ ಭರವಸೆ ನೀಡಿದ್ದಾರೆ.
ಇದರ ಬೆನ್ನಲ್ಲೆ, KGF-2 ನ ಚಿತ್ರೀಕರಣ ಕಂಠೀರವ ಸ್ಟುಡಿಯೋದಲ್ಲಿ ಪ್ರಾರಂಭವಾಗಿದೆ. ಸದ್ಯ ಮಾಳವಿಕಾ ಅವಿನಾಶ್ ಹಾಗೂ ಪ್ರಕಾಶ್ ರಾಜ್ ಕಾಂಬಿನೇಶನ್ನ ದೃಶ್ಯವನ್ನು ಚಿತ್ರೀಕರಿಸಲಾಗುತ್ತದೆ. KGF-1ನಲ್ಲಿ ಅನಂತನಾಗ್ ಅಭಿನಯಿಸಿದ್ದ ಪಾತ್ರಕ್ಕೆ ಪ್ರಕಾಶ್ ರಾಜ್ ಜೀವ ತುಂಬಲಿದ್ದು ಬೆಳ್ಳಿ ತೆರೆ ಮೇಲೆ ಮಿಂಚಲಿದ್ದಾರೆ.
Published On - 2:58 pm, Wed, 26 August 20