‘ಕೆಜಿಎಫ್’ ಸಿನಿಮಾ ಸೂಪರ್ ಹಿಟ್ ಆದ ಬಳಿಕ ನಟಿ ಶ್ರೀನಿಧಿ ಶೆಟ್ಟಿ (Srinidhi Shetty) ಅವರಿಗೆ ಅಪಾರ ಜನಪ್ರಿಯತೆ ಸಿಕ್ಕಿತು. ಅದು ಅವರು ನಟಿಸಿದ ಮೊದಲ ಸಿನಿಮಾ. ಆ ಸಿನಿಮಾದಿಂದ ಶ್ರೀನಿಧಿ ಶೆಟ್ಟಿ ಅವರಿಗೆ ಸಿಕ್ಕ ಜನಪ್ರಿಯತೆ ಅಷ್ಟಿಷ್ಟಲ್ಲ. ಹಾಗಿದ್ದರೂ ಕೂಡ ಅವರು ಹೊಸ ಸಿನಿಮಾ (Srinidhi Shetty New Movie) ಒಪ್ಪಿಕೊಳ್ಳುವಲ್ಲಿ ಅವಸರ ತೋರಲಿಲ್ಲ. ಸಿನಿಮಾಗಳ ಸಂಖ್ಯೆಗಿಂತ ಗುಣಮಟ್ಟವೇ ಮುಖ್ಯ ಎಂಬ ಪಾಲಿಸಿ ಅವರದ್ದು. ಅದೇ ಕಾರಣಕ್ಕೆ ಅವರು ಈತನಕ ಮಾಡಿದ್ದು ಮೂರು ಚಿತ್ರಗಳು ಮಾತ್ರ. ಇಂದು (ಅಕ್ಟೋಬರ್ 21) ಶ್ರೀನಿಧಿ ಶೆಟ್ಟಿ ಅವರಿಗೆ ಜನ್ಮದಿನದ (Srinidhi Shetty Birthday) ಸಂಭ್ರಮ. ಅವರ ಹುಟ್ಟುಹಬ್ಬದ ಪ್ರಯುಕ್ತ ಎಲ್ಲರೂ ಶುಭ ಕೋರುತ್ತಿದ್ದಾರೆ. ಈ ವೇಳೆ ಶ್ರೀನಿಧಿ ಶೆಟ್ಟಿ ಅವರ ಹೊಸ ಸಿನಿಮಾ ಕೂಡ ಅನೌನ್ಸ್ ಆಗಿದೆ.
ಬಣ್ಣದ ಲೋಕದಲ್ಲಿ ಹೀರೋಯಿನ್ಗಳಿಗೆ ಇರುವ ಕಾಲಾವಕಾಶ ಕಡಿಮೆ ಎಂಬ ಮಾತಿದೆ. ಬೇಡಿಕೆ ಇದ್ದಾಗಲೇ ಹೆಚ್ಚು ಸಿನಿಮಾಗಳನ್ನು ಒಪ್ಪಿಕೊಳ್ಳಬೇಕು ಎಂಬ ಪಾಲಿಸಿ ಅನೇಕ ನಟಿಯರದ್ದು. ಆದರೆ ಶ್ರೀನಿಧಿ ಶೆಟ್ಟಿ ಅವರು ಸಿನಿಮಾಗಳ ಆಯ್ಕೆಯ ವಿಚಾರದಲ್ಲಿ ಗಡಿಬಿಡಿ ಮಾಡಿಲ್ಲ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ‘ಕೆಜಿಎಫ್ 1’, ‘ಕೆಜಿಎಫ್ 2’ ಬಳಿಕ ಅವರು ಮಾಡಿದ್ದು ‘ಕೋಬ್ರಾ’ ಸಿನಿಮಾ ಮಾತ್ರ. ಆ ನಂತರ ಅವರೀಗ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಅದು ಕೂಡ ತೆಲುಗಿನಲ್ಲಿ.
ಕೆಜಿಎಫ್ ಚೆಲುವೆ ಶ್ರೀನಿಧಿ ಶೆಟ್ಟಿಯ ಹೊಸ ಸಿನಿಮಾ: ನಾಯಕ ಯಾರು?
ಶ್ರೀನಿಧಿ ಶೆಟ್ಟಿ ಅವರಿಗೆ ಈಗ 31 ವರ್ಷ ವಯಸ್ಸು. ಅವರ ಹುಟ್ಟುಹಬ್ಬದ ಸಲುವಾಗಿ ಎಲ್ಲರೂ ಶುಭಾಶಯ ತಿಳಿಸುತ್ತಿದ್ದಾರೆ. ತೆಲುಗಿನಲ್ಲಿ ‘ತೆಲುಸು ಕದಾ’ ಸಿನಿಮಾವನ್ನು ಅವರು ಈಗ ಒಪ್ಪಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಶ್ರೀನಿಧಿ ಶೆಟ್ಟಿ ಜೊತೆ ರಾಶಿ ಖನ್ನಾ, ಸಿದ್ದು ಜೊನ್ನಲಗಡ್ಡ ಅವರು ನಟಿಸುತ್ತಿದ್ದಾರೆ. ಮುಹೂರ್ತದ ಫೋಟೋಗಳು ವೈರಲ್ ಆಗಿವೆ. ಮುಂದಿನ ದಿನಗಳಲ್ಲಾದರೂ ಶ್ರೀನಿಧಿ ಅವರು ತಮ್ಮ ಸಿನಿಮಾ ಆಯ್ಕೆಯ ಸೂತ್ರವನ್ನು ಬದಲಾಯಿಸುತ್ತಾರಾ ಎಂಬುದನ್ನು ಕಾದು ನೋಡಬೇಕು. ಅವರು ಹೆಚ್ಚು ಸಿನಿಮಾಗಳನ್ನು ಮಾಡಲಿ ಎಂಬುದು ಅಭಿಮಾನಿಗಳ ಆಸೆ.
To beautiful new beginnings ✨️🌸#TelusuKada 🤍@NeerajaKona #SiddhuJonnalagadda #RaashiiKhanna @SrinidhiShetty7 @MusicThaman @vishwaprasadtg @vivekkuchibotla @sreekar_prasad @dopyuvraj @artkolla pic.twitter.com/1SPJZI5itw
— Srinidhi Shetty (@SrinidhiShetty7) October 19, 2023
ಮಾಡೆಲಿಂಗ್ ಕ್ಷೇತ್ರದಿಂದ ಬಂದವರು ಶ್ರೀನಿಧಿ ಶೆಟ್ಟಿ. ‘ಕೆಜಿಎಫ್: ಚಾಪ್ಟರ್ 1’ ಸಿನಿಮಾದಲ್ಲಿ ನಟಿಸುವುದಕ್ಕೂ ಮುನ್ನ ಅವರು ‘ಮಿಸ್ ಸುಪ್ರಾನ್ಯಾಷನಲ್ 2016’ ಕಿರೀಟ ಗೆದ್ದಿದ್ದರು. ಅಲ್ಲಿಂದ ಅವರಿಗೆ ಚಿತ್ರರಂಗದ ಬಾಗಿಲು ತೆರೆಯಿತು. ಆರಂಭದಲ್ಲೇ ಯಶ್ ಜೊತೆ ನಟಿಸುವ ಅವಕಾಶ ಸಿಕ್ಕಿತು. 2022ರಲ್ಲಿ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ಮಾಡಿದ ಸಾಧನೆ ಏನು ಎಂಬುದನ್ನು ಹೊಸದಾಗಿ ಹೇಳಬೇಕಾಗಿಲ್ಲ. ಆ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆದರೂ ಕೂಡ ಶ್ರೀನಿಧಿ ಅವರು ನಿರೀಕ್ಷಿತ ಪ್ರಮಾಣದಲ್ಲಿ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.