‘ಕೆಜಿಎಫ್ 3 ಫೈನಲ್ ಡ್ರಾಫ್ಟ್ ಸಿದ್ಧ’; ಪ್ರಶಾಂತ್ ನೀಲ್ ಪೋಸ್ಟ್ ಹಿಂದಿನ ಅಸಲಿಯತ್ತು ಏನು?

‘ಕೆಜಿಎಫ್ 2’ ಸಿನಿಮಾ ರಿಲೀಸ್ ಆಗಿದ್ದು 2022ರ ಏಪ್ರಿಲ್ 14ರಂದು. ಈ ಸಿನಿಮಾದ ಕ್ಲೈಮ್ಯಾಕ್ಸ್​ನಲ್ಲಿ ಪಾರ್ಟ್​ 3 ಬಗ್ಗೆ ಅಪ್​ಡೇಟ್ ನೀಡಲಾಯಿತು. ಸಿನಿಮಾದ ಕಥೆ ಯಾವ ರೀತಿಯಲ್ಲಿ ಸಾಗುತ್ತದೆ ಎಂಬ ಕುತೂಹಲ ಈಗಲೂ ಇದೆ. ಆದರೆ, ‘ಕೆಜಿಎಫ್ 3’ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಹೀಗಿರುವಾಗಲೇ ಒಂದು ಪೋಸ್ಟರ್ ವೈರಲ್ ಆಗಿದೆ.

‘ಕೆಜಿಎಫ್ 3 ಫೈನಲ್ ಡ್ರಾಫ್ಟ್ ಸಿದ್ಧ’; ಪ್ರಶಾಂತ್ ನೀಲ್ ಪೋಸ್ಟ್ ಹಿಂದಿನ ಅಸಲಿಯತ್ತು ಏನು?
ಪ್ರಶಾತ್ ನೀಲ್

Updated on: Oct 15, 2025 | 12:09 PM

‘ಕೆಜಿಎಫ್ 3 ಸಿನಿಮಾ ಬಗ್ಗೆ ಇನ್ನು ಕೆಲವೇ ತಿಂಗಳಲ್ಲಿ ಅಪ್​​ಡೇಟ್ ಕೊಡ್ತೀವಿ’- ‘ಹೊಂಬಾಳೆ ಫಿಲ್ಮ್ಸ್’ನ  ವಿಜಯ್ ಕಿರಗಂದೂರು ಹೀಗೆ ಹೇಳಿಕೆ ನೀಡಿ ವರ್ಷಗಳೇ ಕಳೆದು ಹೋಗಿವೆ. ಆದರೆ, ಈವರೆಗೆ ಚಿತ್ರದ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಚಿತ್ರದ ನಿರ್ದೇಶಕ, ನಿರ್ಮಾಪಕ ಹಾಗೂ ನಟ ಎಲ್ಲರೂ ಬ್ಯುಸಿ ಆಗಿದ್ದಾರೆ. ಹೀಗಿರುವಾಗಲೇ ‘ಕೆಜಿಎಫ್ 3 (KGF 3) ಫೈನಲ್ ಡ್ರಾಫ್ಟ್ ಎಂಬ ಪೋಸ್ಟರ್’ ವೈರಲ್ ಆಗಿದೆ. ಆದರೆ, ಇದರ ಅಸಲಿಯತ್ತು ಬೇರೆಯದೇ ಇದೆ ಎನ್ನಲಾಗುತ್ತಿದೆ.

‘ಕೆಜಿಎಫ್ 2’ ಸಿನಿಮಾ ರಿಲೀಸ್ ಆಗಿದ್ದು 2022ರ ಏಪ್ರಿಲ್ 14ರಂದು. ಈ ಸಿನಿಮಾದ ಕ್ಲೈಮ್ಯಾಕ್ಸ್​ನಲ್ಲಿ ಪಾರ್ಟ್​ 3 ಬಗ್ಗೆ ಅಪ್​ಡೇಟ್ ನೀಡಲಾಯಿತು. ಸಿನಿಮಾದ ಕಥೆ ಯಾವ ರೀತಿಯಲ್ಲಿ ಸಾಗುತ್ತದೆ ಎಂಬ ಕುತೂಹಲ ಈಗಲೂ ಇದೆ. ಆದರೆ, ‘ಕೆಜಿಎಫ್ 3’ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಹೀಗಿರುವಾಗಲೇ ಒಂದು ಪೋಸ್ಟರ್ ವೈರಲ್ ಆಗಿದೆ.

ಇದನ್ನೂ ಓದಿ
ಗಿಲ್ಲಿ ಜೊತೆಗಿನ ಗೆಳೆತನಕ್ಕಾಗಿ ಫಿನಾಲೆ ಚಾನ್ಸ್ ತ್ಯಾಗ ಮಾಡಿದ ಚಂದ್ರಪ್ರಭ?
ಮಂಗಳವಾರವೂ ‘ಕಾಂತಾರ: ಚಾಪ್ಟರ್ 1’ ಅಧಿಕ ಕಲೆಕ್ಷನ್; 500 ಕೋಟಿ ಇನ್ನೂ ಸನಿಹ
ಸ್ಪರ್ಧಿಗಳಿಗೆ ಕೊನೆಯ ಅವಕಾಶ ಕೊಟ್ಟ ‘ಬಿಗ್ ಬಾಸ್​’; ಮಾಡು ಇಲ್ಲವೇ ಮಡಿ
‘ಕಾಂತಾರ: ಚಾಪ್ಟರ್ 2’ ಯಾವಾಗ? ಕೊನೆಗೂ ಉತ್ತರಿಸಿದ ರಿಷಬ್ ಶೆಟ್ಟಿ

ಪ್ರಶಾಂತ್ ನೀಲ್ ಹೆಸರಿನ ಇನ್​ಸ್ಟಾಗ್ರಾಮ್ ಖಾತೆಯಿಂದ ಖಾಲಿ ಪೇಪರ್ ಮೇಲೆ ‘ಕೆಜಿಎಫ್ 3’ ಎಂದು ಬರೆದಿರುವ ಫೋಟೋನ ಹಾಕಲಾಗಿದೆ. ಇದಕ್ಕೆ, ‘ಕೆಜಿಎಫ್ 3 ಫೈನಲ್ ಡ್ರಾಫ್ಟ್’ ಎಂಬ ಕ್ಯಾಪ್ಶನ್ ನೀಡಲಾಗಿದೆ. ‘ನೀವು ಕಾಯುತ್ತಿದ್ದೀರಾ’ ಎಂಬ ಪ್ರಶ್ನೆಯನ್ನು ಕೂಡ ಕೇಳಲಾಗಿದೆ. ಆದರೆ, ಇದರ ಅಸಲಿಯತ್ತು ಬೇರೆಯೇ ಇದೆ.

ಪ್ರಶಾಂತ್ ನೀಲ್ ಈ ಮೊದಲು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದರು. ಸಿನಿಮಾ ಬಗ್ಗೆ ಅಪ್​​ಡೇಟ್​​ಗಳನ್ನು ನೀಡುತ್ತಿದ್ದರು. ಆದರೆ, ಯಾವಾಗ ಅವರು ತೆಲುಗಿಗೆ ಹೊರಟರೋ ಆಗ ಹೇಟ್ ಮೆಸೇಜ್, ಹೇಟ್ ಕಮೆಂಟ್​ಗಳು ಬರೋಕೆ ಆರಂಭ ಆದವು. ಇದರಿಂದ ಅವರು ಸೋಶಿಯಲ್ ಮೀಡಿಯಾಗೆ ಗುಡ್​ಬೈ ಹೇಳಿದರು.

‘ಕೆಜಿಎಫ್ 3’ ಬಗ್ಗೆ ಪೋಸ್ಟ್

ಈಗ ಪ್ರಶಾಂತ್ ನೀಲ್ ಹೆಸರಲ್ಲಿ ಸಾಕಷ್ಟು ಫೇಕ್ ಖಾತೆಗಳು ಸೃಷ್ಟಿ ಆಗಿವೆ. ಈಗ ‘ಕೆಜಿಎಫ್ 3 ಫೈನಲ್ ಡ್ರಾಫ್ಟ್​’ ಎಂದು ಪೋಸ್ಟ್ ಆಗಿರೋದು ಕೂಡ ಫೇಕ್ ಖಾತೆಯಿಂದಲೇ. ಹೀಗಾಗಿ, ಇದನ್ನು ಯಾರೂ ನಂಬದಂತೆ ಅನೇಕರು ಕೋರಿಕೊಂಡಿದ್ದಾರೆ.

ಇದನ್ನೂ ಓದಿ: ಸಿಕ್ಕಾಪಟ್ಟೆ ಸ್ಲಿಮ್ ಆದ ಜೂನಿಯರ್ ಎನ್​ಟಿಆರ್; ಇದಕ್ಕೆ ಕಾರಣ ಪ್ರಶಾಂತ್ ನೀಲ್

ಪ್ರಶಾಂತ್ ನೀಲ್ ಸದ್ಯ ಜೂನಿಯರ್ ಎನ್​ಟಿಆರ್ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಆ ಬಳಿಕ ‘ಸಲಾರ್ 2’ ಕೂಡ ಮಾಡಬೇಕಿದೆ. ಇನ್ನು, ಯಶ್ ಅವರು ‘ರಾಮಾಯಣ’ ಹಾಗೂ ‘ಟಾಕ್ಸಿಕ್’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 12:00 pm, Wed, 15 October 25