ಹೊಸ ಲುಕ್​ನಲ್ಲಿ ಪ್ರತ್ಯಕ್ಷರಾದ ಯಶ್; ಹೇಗಿದೆ ನೋಡಿ ಹೇರ್​ಸ್ಟೈಲ್

‘ಕೆಜಿಎಫ್’ ರಿಲೀಸ್ ಆದ ಬಳಿಕ ಅವರು ಗಡ್ಡ ಹಾಗೂ ಕೂದಲಿಗೆ ಕತ್ತರಿ ಹಾಕಿದ್ದರು. ‘ಕೆಜಿಎಫ್ 2’ ಬಿಡುಗಡೆ ಆದ ನಂತರದಲ್ಲಿ ಯಶ್ ಅವರು ಗಡ್ಡಕ್ಕೆ ಹಾಗೂ ತಲೆಕೂದಲನ್ನು ಕತ್ತರಿಸಲಿದ್ದಾರೆ ಎಂದೇ ಭಾವಿಸಲಾಗಿತ್ತು. ಆದರೆ, ಅದು ಸುಳ್ಳಾಗಿದೆ.

ಹೊಸ ಲುಕ್​ನಲ್ಲಿ ಪ್ರತ್ಯಕ್ಷರಾದ ಯಶ್; ಹೇಗಿದೆ ನೋಡಿ ಹೇರ್​ಸ್ಟೈಲ್
Edited By:

Updated on: Nov 07, 2022 | 5:29 PM

‘ಕೆಜಿಎಫ್ 2’ (KGF: Chapter 2) ಗೆದ್ದ ಬಳಿಕ ಯಶ್ ಅವರ ಖ್ಯಾತಿ ದುಪ್ಪಟ್ಟಾಗಿದೆ. ದೇಶ-ವಿದೇಶಗಳಲ್ಲಿ ಅವರ ಖ್ಯಾತಿ ಹೆಚ್ಚಿದೆ. ದೇಶದ ವಿವಿಧ ಕಡೆಗಳಲ್ಲಿ ನಡೆವ ಕಾರ್ಯಕ್ರಮಕ್ಕೆ ಯಶ್ ತೆರಳುತ್ತಿದ್ದಾರೆ. ಈಗ ಅವರ ಹೊಸ ಲುಕ್ ಎಲ್ಲರ ಗಮನ ಸೆಳೆಯುತ್ತಿದೆ. ಹೊಸ ಕೇಶ ವಿನ್ಯಾಸದೊಂದಿಗೆ ಯಶ್ (Yash) ಪ್ರತ್ಯಕ್ಷರಾಗಿದ್ದಾರೆ. ಅವರನ್ನು ನೋಡಿ ಫ್ಯಾನ್ಸ್ ಸಖತ್ ಖುಷಿಪಟ್ಟಿದ್ದಾರೆ. ಯಶ್ ಅವರ ಹೊಸ ಲುಕ್ ನೋಡಿ ಫ್ಯಾನ್ಸ್​ಗೆ ಹಲವು ಅನುಮಾನಗಳು ಮೂಡುತ್ತಿವೆ.

ಯಶ್ ಅವರು ಇತ್ತೀಚೆಗೆ ಹೊರ ರಾಜ್ಯಕ್ಕೆ ತೆರಳಿದ್ದರು. ಅಲ್ಲಿ ಅವರು ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ವೇಳೆ ಅನೇಕರು ಫೋಟೋ ಕ್ಲಿಕ್ ಮಾಡಿಕೊಂಡಿದ್ದಾರೆ. ಯಶ್ ಅವರು ತಮ್ಮ ಹೇರ್​ಸ್ಟೈಲ್ ಬದಲಿಸಿದ್ದಾರೆ. ‘ಕೆಜಿಎಫ್’ ರಿಲೀಸ್ ಆದ ಬಳಿಕ ಅವರು ಗಡ್ಡ ಹಾಗೂ ಕೂದಲಿಗೆ ಕತ್ತರಿ ಹಾಕಿದ್ದರು. ‘ಕೆಜಿಎಫ್ 2’ ಬಿಡುಗಡೆ ಆದ ನಂತರದಲ್ಲಿ ಯಶ್ ಅವರು ಗಡ್ಡಕ್ಕೆ ಹಾಗೂ ತಲೆಕೂದಲನ್ನು ಕತ್ತರಿಸಲಿದ್ದಾರೆ ಎಂದೇ ಭಾವಿಸಲಾಗಿತ್ತು. ಆದರೆ, ಅದು ಸುಳ್ಳಾಗಿದೆ.

ಯಶ್ ಅವರು ತಲೆಕೂದಲನ್ನು ಇನ್ನೂ ಉದ್ದಕ್ಕೆ ಬಿಟ್ಟಿದ್ದಾರೆ. ಅಷ್ಟೇ ಅಲ್ಲ, ತಮ್ಮ ಹೇರ್​ಸ್ಟೈಲ್ ಅನ್ನು ಬದಲಿಸಿದ್ದಾರೆ. ಈ ಫೋಟೋಗಳು ಫ್ಯಾನ್ಸ್ ವಲಯದಲ್ಲಿ ವೈರಲ್ ಆಗಿದೆ. ಇದಕ್ಕೆ ಫ್ಯಾನ್ಸ್ ನಾನಾ ಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಇದು ಯಶ್ ಅವರ ಮುಂದಿನ ಚಿತ್ರದ ಗೆಟಪ್​​ ಇರಬಹುದು ಎಂದು ಫ್ಯಾನ್ಸ್ ಊಹಿಸುತ್ತಿದ್ದಾರೆ.

ಇದನ್ನೂ ಓದಿ: ‘ಒಂದು ಬಂಡೆ ಒಡೆಯಬೇಕಾದರೆ ನಿರಂತರ ಪ್ರಯತ್ನ ಬೇಕು’; ದಕ್ಷಿಣದ ಸಿನಿಮಾಗಳ ಬಗ್ಗೆ ಯಶ್ ಮಾತು

ಯಶ್ ಅವರ ಮುಂದಿನ ಚಿತ್ರದ ಬಗ್ಗೆ ಸಾಕಷ್ಟು ವದಂತಿ ಇದೆ. ‘ಕೆಜಿಎಫ್ 2’ ಬಳಿಕ ಅವರ ಹೊಸ ಸಿನಿಮಾ ಘೋಷಣೆಗಾಗಿ ಎಲ್ಲರೂ ಕಾಯುತ್ತಿದ್ದಾರೆ. ನರ್ತನ್ ಜತೆ ಯಶ್ ಸಿನಿಮಾ ಮಾಡಲಿದ್ದಾರೆ ಎನ್ನಲಾಗಿತ್ತು. ಆ ಬಗ್ಗೆ ಈವರೆಗೆ ಘೋಷಣೆ ಆಗಿಲ್ಲ. ಶಂಕರ್ ಜತೆ ಯಶ್ ಸಿನಿಮಾ ಮಾಡುತ್ತಾರೆ ಎಂಬ ವದಂತಿಯೂ ಹುಟ್ಟಿಕೊಂಡಿತ್ತು. ಯಶ್ ಮುಂದಿನ ಪ್ರಾಜೆಕ್ಟ್ ‘ಕೆಜಿಎಫ್ 3’ ಆಗಿರಲಿದೆ ಎಂಬುದು ಕೆಲವರ ಊಹೆ. ಇದಕ್ಕೆ ಯಶ್ ಕಡೆಯಿಂದಲೇ ಉತ್ತರ ಸಿಗಬೇಕಿದೆ.