‘ಒಂದು ಬಂಡೆ ಒಡೆಯಬೇಕಾದರೆ ನಿರಂತರ ಪ್ರಯತ್ನ ಬೇಕು’; ದಕ್ಷಿಣದ ಸಿನಿಮಾಗಳ ಬಗ್ಗೆ ಯಶ್ ಮಾತು

TV9kannada Web Team

TV9kannada Web Team | Edited By: Kiran Hanumant Madar

Updated on: Nov 07, 2022 | 4:28 PM

ದಕ್ಷಿಣ ಭಾರತದ ಚಿತ್ರಗಳಿಗೆ ಈ ಮೊದಲು ಪ್ರಾಮುಖ್ಯತೆ ಕೊಡುತ್ತಿರಲಿಲ್ಲ. ಆಗ ಪ್ರಾದೇಶಿಕ ಸಿನಿಮಾಗಳ ಡಬ್ಬಿಂಗ್ ಹಕ್ಕು ಕನಿಷ್ಠ ಬೆಲೆಗೆ ಮಾರಾಟವಾಗುತ್ತಿತ್ತು. ಜತೆಗೆ ಕಳಪೆ ಮಟ್ಟದಲ್ಲಿ ಡಬ್​ ಮಾಡಲಾಗುತ್ತಿತ್ತು ಎಂಬುದನ್ನು ಯಶ್ ಹೇಳಿದ್ದಾರೆ. ಇಂಡಿಯಾ ಟುಡೆ ನಡೆಸಿದ ಕಾರ್ಯಕ್ರಮದಲ್ಲಿ ಅವರು ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ.

‘ಒಂದು ಬಂಡೆ ಒಡೆಯಬೇಕಾದರೆ ನಿರಂತರ ಪ್ರಯತ್ನ ಬೇಕು’; ದಕ್ಷಿಣದ ಸಿನಿಮಾಗಳ ಬಗ್ಗೆ ಯಶ್ ಮಾತು
ಯಶ್

ಸದ್ಯ ದಕ್ಷಿಣ ಭಾರತದ ಸಿನಿಮಾಗಳು ಸದ್ದು ಮಾಡುತ್ತಿವೆ. ಹಲವು ಚಿತ್ರಗಳು ಅಬ್ಬರಿಸಿವೆ. ‘ಕೆಜಿಎಫ್ ‘ಕಾಂತಾರ’, ‘ಆರ್​ಆರ್​ಆರ್​’ ಚಿತ್ರಗಳು ಇದಕ್ಕೆ ಇತ್ತೀಚಿನ ಉದಾಹರಣೆ. ದಕ್ಷಿಣ ಭಾರತದ ಚಿತ್ರಗಳ ಅಬ್ಬರದಿಂದ ಬಾಲಿವುಡ್ ಮಂದಿಗೆ ಚಿಂತೆ ಶುರುವಾಗಿದೆ. ಎಲ್ಲರೂ ದಕ್ಷಿಣ ಭಾರತದ ಫಾರ್ಮುಲಾ ಏನು ಎಂಬುದನ್ನು ಕಲಿಯಲು ಮುಂದಾಗುತ್ತಿದ್ದಾರೆ. ಆದರೆ, ಮೊದಲು ಪರಿಸ್ಥಿತಿ ಹೀಗೆ ಇರಲಿಲ್ಲ. ಈ ಬಗ್ಗೆ ಯಶ್ ಅವರು ಮಾತನಾಡಿದ್ದಾರೆ. ‘ಕೆಜಿಎಫ್ 2’ ಯಶಸ್ಸಿನ ಅಲೆಯಲ್ಲಿರುವ ಅವರು ಈ ಬಗ್ಗೆ ಮಾತನಾಡಿದ್ದಾರೆ.

‘10 ವರ್ಷಗಳ ಹಿಂದೆ ಡಬ್ಬಿಂಗ್​ ಚಿತ್ರಗಳು ಉತ್ತರ ಭಾರತದಲ್ಲಿ ಬಹಳ ಜನಪ್ರಿಯವಾಗಿದ್ದವು. ಆರಂಭದಲ್ಲಿ ಎಲ್ಲರೂ ವಿವಿಧ ಅಭಿಪ್ರಾಯಗಳೊಂದಿಗೆ ಈ ಚಿತ್ರಗಳನ್ನು ನೋಡಲು ಶುರುಮಾಡಿದರು. ದಕ್ಷಿಣ ಭಾರದ ಸಿನಿಮಾಗಳ ಬಗ್ಗೆ ಗೇಲಿ ಮಾಡುತ್ತಿದ್ದರು. ‘ಏನಿದು ಸಿನಿಮಾ, ಎಲ್ಲವೂ ಹಾರುತ್ತಿದೆ’ ಎಂದು ನಗುತ್ತಿದ್ದರು. ನಂತರ ಇದನ್ನು ಅರ್ಥೈಸಿಕೊಳ್ಳಲು ಶುರುಮಾಡಿದರು. ಇದು ಕಲೆಯ ಭಾಗ ಎಂಬುದು ಅವರಿಗೆ ಅರ್ಥವಾಯಿತು. ದಕ್ಷಿಣದ ಸಿನಿಮಾಗಳ ಡಬ್ಬಿಂಗ್ ಉತ್ತಮವಾಗಿರುತ್ತಿರಲಿಲ್ಲ. ಕನಿಷ್ಠ ಬೆಲೆಗೆ ಅವು ಮಾರಾಟವಾಗುತ್ತಿದ್ದ್ದವು. ಈ ಚಿತ್ರಗಳಿಗೆ ತಮಾಷೆಯ ಹೆಸರುಗಳನ್ನು ಕರೆಯುತ್ತಿದ್ದರು’ ಎಂದು ಯಶ್ ಮಾತನಾಡಿದ್ದಾರೆ.

ತಾಜಾ ಸುದ್ದಿ

ನಿರ್ದೇಶಕ ರಾಜಮೌಳಿ ಅವರು ‘ಬಾಹುಬಲಿ’, ‘ಆರ್​ಆರ್​ಆರ್’ ಸಿನಿಮಾಗಳ ಮೂಲಕ ಎಲ್ಲರ ಗಮನ ಸೆಳೆದರು. ಈ ಬಗ್ಗೆ ಯಶ್ ಮಾತನಾಡಿದ್ದಾರೆ. ‘ಚಿತ್ರದ ನಿರ್ದೇಶಕ ರಾಜಮೌಳಿ ಅವರು ತಮ್ಮ ಪ್ಯಾನ್​ ಇಂಡಿಯಾ ಸಿನಿಮಾಗಳಿಂದ ದಕ್ಷಿಣ ಚಿತ್ರರಂಗ ಎಲ್ಲರಿಗೂ ಪರಿಚಿತರಾಗುವಂತೆ ಮಾಡಿದರು. ಇದರ ಕ್ರೆಡಿಟ್​ ರಾಜಮೌಳಿ ಅವರಿಗೆ ಸಲ್ಲುತ್ತದೆ. ಒಂದು ಬಂಡೆ ಒಡೆಯಬೇಕಾದರೆ ನಿರಂತರ ಪ್ರಯತ್ನಬೇಕು. ಬಾಹುಬಲಿ ಸಿನಿಮಾ ಅದಕ್ಕೆ ನಾಂದಿ​ ಹಾಡಿತು. ಕೆಜಿಎಫ್​ ಸಿನಿಮಾ ವಿಭಿನ್ನ ಉದ್ದೇಶದಿಂದ ಮಾಡಲಾಗಿತ್ತು. ಈ ಸಿನಿಮಾ ಭಯಹುಟ್ಟಿಸಲು ಅಲ್ಲ, ಸ್ಫೂರ್ತಿ ನೀಡಲು ಮಾಡಲಾಗಿತ್ತು. ಜನರು ಈಗ ಸೌತ್ ಸಿನಿಮಾವನ್ನು ಗಮನಿಸಲು ಶುರು ಮಾಡಿದ್ದಾರೆ’ ಎಂದಿದ್ದಾರೆ ಅವರು.

ಇನ್ನು ಇವುಗಳ ಮಧ್ಯೆ ಎಲ್ಲರನ್ನೂ ಮೆಚ್ಚಿಸಿದ ಮತ್ತೊಂದು ಪ್ರಾದೇಶಿಕ ಚಿತ್ರ ರಿಷಬ್​ ಶೆಟ್ಟಿ ಅಭಿನಯದ ಕಾಂತಾರ ಸಿನಿಮಾ ಈ ಚಿತ್ರದ ಓಟಕ್ಕೆ ಇನ್ನು ಬ್ರೇಕ್​ ಬಿದ್ದಿಲ್ಲ. ಕಾಂತಾರ ಸಿನಿಮಾವು  2022 ರಲ್ಲಿ ಅತೀ ಹೆಚ್ಚು ಗಳಿಕೆ ಮಾಡಿದ  ಭಾರತೀಯ ಚಿತ್ರರಂಗದಲ್ಲಿ ಒಂದಾಗಿದೆ.

ಮತ್ತಷ್ಟು ಮನರಂಜನಾ ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada