Yash: ಮಲ್ಟಿಸ್ಟಾರರ್ ಸಿನಿಮಾದಲ್ಲಿ ಯಶ್? ಹೈ ಬಜೆಟ್ ಚಿತ್ರಕ್ಕೆ ನಿರ್ದೇಶಕರು ಇವರೇ

ಯಶ್ ಹಾಗೂ ರಾಮ್ ಚರಣ್ ಒಟ್ಟಾಗಿ ಸಿನಿಮಾ ಮಾಡಲಿದ್ದಾರೆ ಎಂಬ ವದಂತಿ ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿದೆ. ಈ ಚಿತ್ರಕ್ಕೆ ಆ್ಯಕ್ಷನ್​ಕಟ್ ಹೇಳುತ್ತಿರುವುದು ಖ್ಯಾತ ನಿರ್ದೇಶಕ ನರ್ತನ್.

Yash: ಮಲ್ಟಿಸ್ಟಾರರ್ ಸಿನಿಮಾದಲ್ಲಿ ಯಶ್? ಹೈ ಬಜೆಟ್ ಚಿತ್ರಕ್ಕೆ ನಿರ್ದೇಶಕರು ಇವರೇ
ಯಶ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Sep 14, 2022 | 4:35 PM

ಯಶ್ (Yash) ನಟನೆಯ ‘ಕೆಜಿಎಫ್ 2’ ಸಿನಿಮಾ ತೆರೆಗೆ ಬಂದು ಐದು ತಿಂಗಳು ಕಳೆದಿದೆ. ಯಶ್ ಮುಂದಿನ ಸಿನಿಮಾ ಯಾವುದು ಎಂಬ ಕುತೂಹಲ ಅಭಿಮಾನಿಗಳನ್ನು ಕಾಡುತ್ತಲೇ ಇದೆ. ಆದರೆ, ಈ ವರೆಗೆ ಆ ಬಗ್ಗೆ ಅಪ್​ಡೇಟ್ ಸಿಕ್ಕಿಲ್ಲ. ಅವರ ಹೊಸ ಸಿನಿಮಾ ಆದಷ್ಟು ಬೇಗ  ಘೋಷಣೆ ಆಗಲಿ ಎಂದು ಎಲ್ಲರೂ ಕಾಯುತ್ತಿದ್ದಾರೆ. ಅದಕ್ಕೂ ಮೊದಲು ಯಶ್ ಮುಂದಿನ ಸಿನಿಮಾ ಬಗ್ಗೆ ಸಾಕಷ್ಟು ವದಂತಿಗಳು ಹುಟ್ಟಿಕೊಂಡಿವೆ. ಈಗ ಕೇಳಿ ಬರುತ್ತಿರುವ ಲೇಟೆಸ್ಟ್​ ವಿಚಾರ ಕೇಳಿ ಫ್ಯಾನ್ಸ್ ಸಾಕಷ್ಟು ಖುಷಿಪಟ್ಟಿದ್ದಾರೆ. ಅದು ನಿಜವಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ.

ಯಶ್ ಹಾಗೂ ರಾಮ್ ಚರಣ್ ಒಟ್ಟಾಗಿ ಸಿನಿಮಾ ಮಾಡಲಿದ್ದಾರೆ ಎಂಬ ವದಂತಿ ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿದೆ. ಈ ಚಿತ್ರಕ್ಕೆ ಆ್ಯಕ್ಷನ್​ಕಟ್ ಹೇಳುತ್ತಿರುವುದು ಖ್ಯಾತ ನಿರ್ದೇಶಕ ನರ್ತನ್. ಈಗಾಗಲೇ ಎರಡು ಸ್ಟಾರ್​​ಗಳನ್ನು ಇಟ್ಟುಕೊಂಡು ಸಿನಿಮಾ ಮಾಡಿ ಅವರು ಗೆದ್ದು ತೋರಿಸಿದ್ದಾರೆ. ‘ಮಫ್ತಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಹಾಗೂ ಶ್ರೀಮುರಳಿ ಪಾತ್ರಗಳನ್ನು ಬ್ಯಾಲೆನ್ಸ್ ಮಾಡಿ ತೆಗೆದುಕೊಂಡು ಹೋಗಿದ್ದರು. ಈ ಚಿತ್ರ ಗೆದ್ದಿತ್ತು. ಈಗ ನರ್ತನ್ ಅದೇ ಮಾದರಿಯ ಸಾಹಸಕ್ಕೆ ಮುಂದಾಗುತ್ತಿದ್ದಾರೆ ಎನ್ನಲಾಗಿದೆ.

ಯಶ್ ಹಾಗೂ ನರ್ತನ್ ಸಿನಿಮಾ ಮಾಡುತ್ತಾರೆ ಎಂಬ ವಿಚಾರ ಈ ಮೊದಲಿನಿಂದಲೂ ಸುದ್ದಿಯಲ್ಲಿದೆ. ಆದರೆ, ಇದನ್ನು ಏಕೆ ಘೋಷಿಸಿಲ್ಲ ಎಂಬ ಬಗ್ಗೆ ಅಭಿಮಾನಿಗಳಲ್ಲಿ ಪ್ರಶ್ನೆ ಮೂಡಿತ್ತು. ಈ ಸಿನಿಮಾ ಸೆಟ್ಟೇರುವುದಿಲ್ಲ ಎಂಬ ಮಾತುಗಳು ಕೂಡ ಹರಿದಾಡಿದವು. ಆದರೆ, ಈ ಸಿನಿಮಾ ಘೋಷಣೆ ಆಗದಿರಲು ಕಾರಣ ಬೇರೆಯದೇ ಇತ್ತು ಎಂಬ ವಿಚಾರ ಈಗ ಗೊತ್ತಾಗಿದೆ.

ಇದನ್ನೂ ಓದಿ
Image
ಬಾಲ್ಯ ಸ್ನೇಹಿತನ ಮದುವೆಗೆ ಪತ್ನಿ ಸಮೇತ ಬಂದು ಹರಸಿದ ಯಶ್​; ಸಲಾಂ ರಾಕಿ ಭಾಯ್​ ಎಂದ ಫ್ಯಾನ್ಸ್​
Image
ಗೋವಾ ಸಿಎಂ ಪ್ರಮೋದ್​ ಸಾವಂತ್​ ಭೇಟಿ ಮಾಡಿದ ಯಶ್​-ರಾಧಿಕಾ ಪಂಡಿತ್​; ಮುಂದಿನ ಸಿನಿಮಾ ಬಗ್ಗೆ​ ಕುತೂಹಲ
Image
‘ಕೆಜಿಎಫ್​ 2’ ಹಿಟ್​ ಆಗಿದ್ದಕ್ಕೆ ಕಬ್ಬಿನ ಹಾಲು ಟ್ರೀಟ್​ ಕೇಳಿದ ‘ಗೂಗ್ಲಿ’ ನಟಿ ಕೃತಿ ಕರಬಂಧ: ಯಶ್​ ಏನಂದ್ರು?
Image
‘ಕೆಜಿಎಫ್​ 2’ಗೆ ಕೆಟ್ಟ ವಿಮರ್ಶೆ ಮಾಡಿ, ಯಶ್​ ಬಗ್ಗೆ ವ್ಯಂಗ್ಯದ ಮಾತಾಡಿದ ‘ದೇಶದ್ರೋಹಿ’ ನಟ:​ ಸಿಡಿದೆದ್ದ ಫ್ಯಾನ್ಸ್​

ಈ ಚಿತ್ರದಲ್ಲಿ ನಟಿಸಲು ರಾಮ್ ಚರಣ್​ ಅವರಿಗೆ ಆಫರ್ ನೀಡಲಾಗಿತ್ತು. ಈ ಸಿನಿಮಾದ ಸ್ಕ್ರಿಪ್ಟ್​​ಅನ್ನು ಚಿರಂಜೀವಿ ಓದಿರಲಿಲ್ಲ. ಈಗ ಸಿನಿಮಾ ಕಥೆಯನ್ನು ಕೇಳಿರುವ ಚಿರಂಜೀವಿ ಅವರು ಮುಂದುವರಿಯಲು ಓಕೆ ಎಂದಿದ್ದಾರೆ ಎಂದು ವರದಿ ಆಗಿದೆ. ಶೀಘ್ರವೇ ಈ ಬಗ್ಗೆ ಘೋಷಣೆ ಆಗಲಿದೆ.

ಇದನ್ನೂ ಓದಿ: Yash: ಯಶ್​ ಗೆಟಪ್​ ಕಾಪಿ ಮಾಡಿದ್ರಾ ಸಲ್ಮಾನ್​ ಖಾನ್​; ಬಿ-ಟೌನ್​ ತುಂಬ ಹಬ್ಬಿದೆ ಈ ಮಾತು

ಇದು ಹೈ ಬಜೆಟ್ ಸಿನಿಮಾ ಆಗಿದ್ದು, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ರಿಲೀಸ್ ಆಗಲಿದೆ. ‘ಕೆಜಿಎಫ್ 2’ ಚಿತ್ರದಿಂದ ಯಶ್ ಖ್ಯಾತಿ ವಿಶ್ವ ಮಟ್ಟದಲ್ಲಿ ಹಬ್ಬಿದೆ. ‘ಆರ್​ಆರ್​ಆರ್’ ಚಿತ್ರದಿಂದ ದೊಡ್ಡ ಯಶಸ್ಸು ಕಂಡಿದ್ದಾರೆ ರಾಮ್ ಚರಣ್. ಇಬ್ಬರೂ ಒಟ್ಟಾಗಿ ನಟಿಸಿದರೆ ಸಿನಿಮಾ ಸಖತ್ ಹೈಪ್​ ಪಡೆದುಕೊಳ್ಳಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ