AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಟಾಕ್ಸಿಕ್’ ಪಾತ್ರದ ಬಗ್ಗೆ ಮಾತನಾಡಿದ ಕಿಯಾರಾ ಅಡ್ವಾಣಿ: ಹೇಳಿದ್ದೇನು?

Toxic movie: ಕಿಯಾರಾ ಅಡ್ವಾಣಿ, ತಮ್ಮ ಸಿನಿಮಾ, ಖಾಸಗಿ ಜೀವನ, ತಾಯ್ತನ ಇನ್ನೂ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಇದೇ ವೇಳೆ ಅವರು ‘ಟಾಕ್ಸಿಕ್’ ಸಿನಿಮಾದ ತಮ್ಮ ಪಾತ್ರದ ಬಗ್ಗೆಯೂ ಮಾತನಾಡಿದ್ದಾರೆ. ಅವರು ಮಾತುಗಳಿಂದ ‘ಟಾಕ್ಸಿಕ್’ ಸಿನಿಮಾದ ಅವರ ನಾಡಿಯಾ ಪಾತ್ರ ಬಹಳ ಭಿನ್ನವಾದ ಮತ್ತು ಸವಾಲಿನ ಪಾತ್ರ ಹಾಗೂ ಅದು ಮಾಸ್ ಮಸಾಲ ಸಿನಿಮಾದ ನಾಯಕಿಯ ಪಾತ್ರದಂತೆ ಖಂಡಿತ ಇಲ್ಲ ಎಂಬುದು ತಿಳಿಯುತ್ತಿದೆ.

‘ಟಾಕ್ಸಿಕ್’ ಪಾತ್ರದ ಬಗ್ಗೆ ಮಾತನಾಡಿದ ಕಿಯಾರಾ ಅಡ್ವಾಣಿ: ಹೇಳಿದ್ದೇನು?
Kiara Advani
ಮಂಜುನಾಥ ಸಿ.
|

Updated on: Apr 18, 2026 | 2:59 PM

Share

ಯಶ್ (Yash) ನಟನೆಯ ‘ಟಾಕ್ಸಿಕ್’ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಸದ್ಯಕ್ಕೆ ಬಹು ನಿರೀಕ್ಷಿತ ಸಿನಿಮಾ ಎನಿಸಿಕೊಂಡಿದೆ. ಮಾರ್ಚ್ 19ರಂದು ಬಿಡುಗಡೆ ಆಗಬೇಕಿದ್ದ ಸಿನಿಮಾ ಇದೀಗ ಜೂನ್ 4ಕ್ಕೆ ಬಿಡುಗಡೆ ಮುಂದೂಡಿಕೊಂಡಿದ್ದು, ಸಿನಿಮಾದ ಪ್ರಚಾರ ಇದೀಗ ನಿಧಾನಕ್ಕೆ ಆರಂಭವಾಗಿದೆ. ‘ರಾಮಾಯಣ’ ಪ್ರಚಾರಕ್ಕಾಗಿ ಲಾಸ್ ಏಂಜಲ್ಸ್​ನ ಸಿನಿಮಾಕಾನ್ 2026ನಲ್ಲಿ ಭಾಗಿ ಆಗಿರುವ ಯಶ್ ಅವರಿಗೆ ‘ಟಾಕ್ಸಿಕ್’ ಸಿನಿಮಾದ ಬಗ್ಗೆ ಬಹಳ ಪ್ರಶ್ನೆಗಳು ಎದುರಾಗಿದ್ದು, ಯಶ್ ಸಹ ‘ಟಾಕ್ಸಿಕ್’ ಬಗ್ಗೆ ಕುತೂಹಲಕಾರಿ ಅಂಶಗಳನ್ನು ಬಿಟ್ಟುಕೊಟ್ಟಿದ್ದಾರೆ. ಇದೀಗ ಪ್ರತಿಷ್ಠಿತ ಬ್ರ್ಯಾಂಡ್ ಕೊಲ್ಯಾಬರೇಷನ್​​ನಲ್ಲಿ ನಟಿ ಕಿಯಾರಾ ಅಡ್ವಾಣಿ ‘ಟಾಕ್ಸಿಕ್’ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ.

ಕಿಯಾರಾ ಅಡ್ವಾಣಿ, ಇತ್ತೀಚೆಗಷ್ಟೆ ಬ್ರ್ಯಾಂಡ್ ಶೂಟ್ ಒಂದರಲ್ಲಿ ಭಾಗವಹಿಸಿದ್ದ ಕಿಯಾರಾ ಅಡ್ವಾಣಿ, ತಮ್ಮ ಸಿನಿಮಾ, ಖಾಸಗಿ ಜೀವನ, ತಾಯ್ತನ ಇನ್ನೂ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಇದೇ ವೇಳೆ ಅವರು ‘ಟಾಕ್ಸಿಕ್’ ಸಿನಿಮಾದ ತಮ್ಮ ಪಾತ್ರದ ಬಗ್ಗೆಯೂ ಮಾತನಾಡಿದ್ದಾರೆ. ಅವರು ಮಾತುಗಳಿಂದ ‘ಟಾಕ್ಸಿಕ್’ ಸಿನಿಮಾದ ಅವರ ನಾಡಿಯಾ ಪಾತ್ರ ಬಹಳ ಭಿನ್ನವಾದ ಮತ್ತು ಸವಾಲಿನ ಪಾತ್ರ ಹಾಗೂ ಅದು ಮಾಸ್ ಮಸಾಲ ಸಿನಿಮಾದ ನಾಯಕಿಯ ಪಾತ್ರದಂತೆ ಖಂಡಿತ ಇಲ್ಲ ಎಂಬುದು ತಿಳಿಯುತ್ತಿದೆ.

‘ಟಾಕ್ಸಿಕ್’ ಸಿನಿಮಾದ ನಾಡಿಯಾ ಪಾತ್ರ ನಾನು ಈ ವರೆಗೆ ಕೇಳಿರುವ ಭಿನ್ನ ರೀತಿಯ ಪಾತ್ರ. ಬಹಳ ಭಿನ್ನವಾದ ಪೋಷಣೆಯನ್ನು ಆ ಪಾತ್ರ ಒಳಗೊಂಡಿದೆ. ನನ್ನ ಪಾತ್ರಕ್ಕೆ ಅಷ್ಟು ಭಿನ್ನವಾದ ಕ್ಯಾರೆಕ್ಟರ್ ಆರ್ಕ್ ಅನ್ನು ಈ ವರೆಗೆ ನಾನು ನೋಡಿರಲಿಲ್ಲ. ನಿರ್ದೇಶಕಿ ಗೀತು ಮೋಹನ್​​ದಾಸ್ ‘ನಾಡಿಯಾ’ ಪಾತ್ರವನ್ನು ಬರೆದಿರುವ ರೀತಿ ಮತ್ತು ಆ ಪಾತ್ರಕ್ಕೆ ನೀಡಿರುವ ಪ್ರಾಮುಖ್ಯತೆ ಮತ್ತು ಭಿನ್ನತೆ ನನಗೆ ಬಹಳ ಹಿಡಿಸಿತು’ ಎಂದಿದ್ದಾರೆ ಕಿಯಾರಾ ಅಡ್ವಾಣಿ.

ಇದನ್ನೂ ಓದಿ:‘ಟಾಕ್ಸಿಕ್’ ಸಿನಿಮಾವನ್ನು ಆಸ್ಕರ್ ವಿಜೇತ ಸಿನಿಮಾಕ್ಕೆ ಹೋಲಿಸಿದ ಯಶ್

‘ನನ್ನ ವೃತ್ತಿ ಜೀವನದಲ್ಲಿ ನಾನು ಸವಾಲುಗಳನ್ನು ತೆಗೆದುಕೊಳ್ಳಲು ರೆಡಿಯಾಗುತ್ತಿರುವಾಗಲೇ ಈ ಪಾತ್ರ ನನಗೆ ಬಂತು. ಇದು ಸರಿಯಾದ ಸಮಯ ಎನಿಸಿ ಈ ಪಾತ್ರವನ್ನು ನಾನು ಒಪ್ಪಿಕೊಂಡೆ. ನಾನು ‘ನಾಡಿಯಾ’ ಅಂಥಹಾ ಸವಾಲಿನ ಪಾತ್ರದಲ್ಲಿ ಬೆರೆತು ಹೋದೆ, ನನ್ನನ್ನು ನಾನು ನಿರ್ದೇಶಕಿಗೆ ಮತ್ತು ಆ ಪಾತ್ರಕ್ಕೆ ಒಪ್ಪಿಸಿಕೊಂಡು ಬಿಟ್ಟೆ. ಪಾತ್ರ ಚೆನ್ನಾಗಿ ಮೂಡಿಬಂದಿದ್ದು, ಸಿನಿಮಾ ಬಿಡುಗಡೆಗೆ ಉತ್ಸುಕಳಾಗಿದ್ದೇನೆ’ ಎಂದಿದ್ದಾರೆ ಕಿಯಾರಾ ಅಡ್ವಾಣಿ.

ಕಿಯಾರಾ ಅಡ್​ವಾಣಿ ‘ನಾಡಿಯಾ’ ಹೆಸರಿನ ಪಾತ್ರದಲ್ಲಿ ನಟಿಸಿದ್ದಾರೆ. ಅವರಷ್ಟೆ ಅಲ್ಲದೆ, ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ಅವರುಗಳು ಸಹ ‘ಟಾಕ್ಸಿಕ್’ ಸಿನಿಮಾನಲ್ಲಿ ನಟಿಸಿದ್ದಾರೆ. ಸಿನಿಮಾನಲ್ಲಿ ಯಶ್ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ಜೂನ್ 4ಕ್ಕೆ ತೆರೆಗೆ ಬರಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಆರ್​ಎಸ್​ಎಸ್​ನವರು ಪುಕ್ಕಲರು, ಧೈರ್ಯವೇ ಇಲ್ಲ ಎಂದ ಹರಿಪ್ರಸಾದ್!
ಆರ್​ಎಸ್​ಎಸ್​ನವರು ಪುಕ್ಕಲರು, ಧೈರ್ಯವೇ ಇಲ್ಲ ಎಂದ ಹರಿಪ್ರಸಾದ್!
ಇನ್ಮುಂದೆ ನನ್ನನ್ನು ಕೊನೆಯ ಭಾಷಣಕಾರನನ್ನಾಗಿ ಮಾಡಬೇಡಿ ಎಂದ ಸಿದ್ದರಾಮಯ್ಯ
ಇನ್ಮುಂದೆ ನನ್ನನ್ನು ಕೊನೆಯ ಭಾಷಣಕಾರನನ್ನಾಗಿ ಮಾಡಬೇಡಿ ಎಂದ ಸಿದ್ದರಾಮಯ್ಯ
ನೀಟ್ ಪರೀಕ್ಷೆಗೆ ಬಂದ ವಿದ್ಯಾರ್ಥಿಗಳ ಚೈನ್, ಮೂಗುತಿಗೆ ಕತ್ತರಿ
ನೀಟ್ ಪರೀಕ್ಷೆಗೆ ಬಂದ ವಿದ್ಯಾರ್ಥಿಗಳ ಚೈನ್, ಮೂಗುತಿಗೆ ಕತ್ತರಿ
ಅಖಂಡ ಶ್ರೀನಿವಾಸಮೂರ್ತಿ ಘರ್ ವಾಪ್ಸಿ: ಯಾವ ಕ್ಷೇತ್ರದ ಟಿಕೆಟ್ ಆಕಾಂಕ್ಷಿ?
ಅಖಂಡ ಶ್ರೀನಿವಾಸಮೂರ್ತಿ ಘರ್ ವಾಪ್ಸಿ: ಯಾವ ಕ್ಷೇತ್ರದ ಟಿಕೆಟ್ ಆಕಾಂಕ್ಷಿ?
ಹರಿಪ್ರಸಾದ್​​​ಗೆ ಖರ್ಗೆ ಕೊಟ್ಟ ಸಲಹೆಗಳೇನು?
ಹರಿಪ್ರಸಾದ್​​​ಗೆ ಖರ್ಗೆ ಕೊಟ್ಟ ಸಲಹೆಗಳೇನು?
ಗಿಲ್ಲಿ ನಟನ ಮೊದಲ ಸಿನಿಮಾಕ್ಕೆ ಕಾವೂನೇ ನಾಯಕಿ: ಗಿಲ್ಲಿ ಹೇಳಿದ್ದೇನು?
ಗಿಲ್ಲಿ ನಟನ ಮೊದಲ ಸಿನಿಮಾಕ್ಕೆ ಕಾವೂನೇ ನಾಯಕಿ: ಗಿಲ್ಲಿ ಹೇಳಿದ್ದೇನು?
ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರಾಗಿ ಬಿಕೆ ಹರಿಪ್ರಸಾದ್​​​ಗೆ ಪಟ್ಟಾಭಿಷೇಕ
ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರಾಗಿ ಬಿಕೆ ಹರಿಪ್ರಸಾದ್​​​ಗೆ ಪಟ್ಟಾಭಿಷೇಕ
ಈ ಜನ್ಮದಲ್ಲಿ ಚುನಾವಣೆಗೆ ನಿಲ್ಲಬಾರದು ಹಾಗೇ ಮಾಡ್ತೀವಿ:ಅಶೋಕ್
ಈ ಜನ್ಮದಲ್ಲಿ ಚುನಾವಣೆಗೆ ನಿಲ್ಲಬಾರದು ಹಾಗೇ ಮಾಡ್ತೀವಿ:ಅಶೋಕ್
ಹುಲಿಗೆಮ್ಮ ದೇವಾಲಯದ ಹುಂಡಿ ಎಣಿಕೆ: 1 ಕೋಟಿಗೂ ಅಧಿಕ ದೇಣಿಗೆ ಸಂಗ್ರಹ!
ಹುಲಿಗೆಮ್ಮ ದೇವಾಲಯದ ಹುಂಡಿ ಎಣಿಕೆ: 1 ಕೋಟಿಗೂ ಅಧಿಕ ದೇಣಿಗೆ ಸಂಗ್ರಹ!
ಪರಪ್ಪನ ಅಗ್ರಹಾರ ಜೈಲಿನಲ್ಲಿ ಯೋಗ ದಿನಾಚರಣೆ; ದರ್ಶನ್, ಪವಿತ್ರಾ ಗೌಡ ಭಾಗಿ
ಪರಪ್ಪನ ಅಗ್ರಹಾರ ಜೈಲಿನಲ್ಲಿ ಯೋಗ ದಿನಾಚರಣೆ; ದರ್ಶನ್, ಪವಿತ್ರಾ ಗೌಡ ಭಾಗಿ