Kichcha Sudeep: ಉಪ್ಪಿ ಹೇಳಿದ್ದನ್ನು ಗಂಭೀರವಾಗಿ ತೆಗೆದುಕೊಂಡಿದ್ದಕ್ಕೇ ನಾನು ಹೀರೋ ಆದೆ: ಸುದೀಪ್

ಉಪೇಂದ್ರ ಅವರು ಕಾರಣಾಂತರಗಳಿಂದ ಇಂದು ಕಾರ್ಯಕ್ರಮಕ್ಕೆ ಬಂದಿರಲಿಲ್ಲ. ಆದಾಗ್ಯೂ ಉಪೇಂದ್ರ ಅವರನ್ನು ನೆನೆಯೋಕೆ ಸುದೀಪ್​​ ಮರೆತಿಲ್ಲ.

Kichcha Sudeep: ಉಪ್ಪಿ ಹೇಳಿದ್ದನ್ನು ಗಂಭೀರವಾಗಿ ತೆಗೆದುಕೊಂಡಿದ್ದಕ್ಕೇ ನಾನು ಹೀರೋ ಆದೆ: ಸುದೀಪ್
ಸುದೀಪ್​-ಉಪೇಂದ್ರ
Edited By:

Updated on: Mar 15, 2021 | 9:21 PM

ನಟ ಕಿಚ್ಚ ಸುದೀಪ್​ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು 25 ವರ್ಷ ಕಳೆದ ಖುಷಿಯಲ್ಲಿದ್ದಾರೆ. ವಿಶೇಷ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್​ ಅವರನ್ನು ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರು ಸನ್ಮಾನ ಮಾಡಿದ್ದಾರೆ. ಈ ವೇಳೆ ಸುದೀಪ್ ನಾಯಕನಾಗೋಕೆ ಕಾರಣವಾದ ಉಪೇಂದ್ರ ಅವರನ್ನು ನೆನೆದಿದ್ದಾರೆ.

ಉಪೇಂದ್ರ ಅವರು ಕಾರಣಾಂತರಗಳಿಂದ ಇಂದು ಕಾರ್ಯಕ್ರಮಕ್ಕೆ ಬಂದಿರಲಿಲ್ಲ. ಆದಾಗ್ಯೂ ಉಪೇಂದ್ರ ಅವರನ್ನು ನೆನೆಯೋಕೆ ಸುದೀಪ್​​ ಮರೆತಿಲ್ಲ. ಉಪೇಂದ್ರ ಅವರಿಂದ ನಾನು ತುಂಬಾ ಕದಿಯೋದಿದೆ. ಅದು ಗೊತ್ತಾಗಿಯೇ ಅವರು ಬಂದಿಲ್ಲ ಅನಿಸುತ್ತೆ. ನಾನು ಕಲಾವಿದ ಆಗಬಹುದು ಎಂದು ತೋರಿಸಿಕೊಟ್ಟಿದ್ದೇ ಅವರು. ಸಹ ನಿರ್ದೇಶಕ- ನಿರ್ದೇಶಕನಾಗಬೇಕು ಎಂದು ಓಡಾಡುವಾಗ ಉಪೇಂದ್ರ ನೀವು ಇಷ್ಟೆಲ್ಲ ಇಟ್ಟುಕೊಂಡು ನಿರ್ದೇಶಕನಾಗ್ತೀನಿ ಅಂತೀರಲ್ಲ. ಹೋಗಿ ಹೀರೋ ಆಗಿ ಅಂದಿದ್ರು. ಅವತ್ತಿಗೆ ಆ ಮಾತನ್ನು ತುಂಬಾ ಗಂಭೀರವಾಗಿ ಪರಿಗಣಿಸಿದ್ದೆ. ನಾನು ನಟನಾಗಬಹುದು ಎಂದು ಮೊದಲು ಗುರುತಿಸಿದ್ದೇ ಅವರು. ನಿರ್ದೇಶನ ಮಾಡೋದಕ್ಕೂ ಅವರ ಸ್ಫೂರ್ತಿ ಇದೆ ಎಂದರು.

ಎಲ್ಲದಕ್ಕೂ ನೀವೇ ಕಾರಣ
ನಾನು ಚಿತ್ರರಂಗಕ್ಕೆ ಬಂದು 25 ವರ್ಷ ಆಯ್ತು ಎನಿಸಲೇ ಇಲ್ಲ. ಹಾಗೆ ಅನಿಸೋಕೆ ನೀವು ಬಿಟ್ಟಿಲ್ಲ. ನಾವು ಎಷ್ಟು ಸಿನಿಮಾ ಮಾಡಿದ್ದೇವೆ ಎನ್ನುವುದು ಒಂದು ಲೆಕ್ಕ ಆದರೆ, ಬಾಕ್ಸ್​ ಆಫೀಸ್​ನಲ್ಲಿ ಒಳ್ಳೆ ಕಲೆಕ್ಷನ್​ ಮಾಡಿದ ಸಿನಿಮಾಗಳೆಷ್ಟು ಎನ್ನುವುದು ಮತ್ತೊಂದು ಲೆಕ್ಕ. ಸಿನಿಮಾ ರಂಗ ಹಾಗೂ ಅಭಿಮಾನಿಗಳು ಕೊಟ್ಟ ಪ್ರೀತಿ ಎದುರಿಗೆ ಬಾಕ್ಸ್​ ಆಫೀಸ್​ ಗಳಿಕೆ ಏನು ಅಲ್ಲ ಎಂದರು.

ಚಿತ್ರರಂಗದಲ್ಲಿ 25 ವರ್ಷ ಕಳೆದ ಸುದೀಪ್​
1997ರಲ್ಲಿ ತೆರೆಕಂಡ ‘ತಾಯವ್ವ’ ಸಿನಿಮಾ ಮೂಲಕ ಸುದೀಪ್​​ ಸ್ಯಾಂಡಲ್​ವುಡ್​ಗೆ ಕಾಲಿಟ್ಟರು. ನಂತರ ಅವರು ಸಾಲು ಸಾಲು ಚಿತ್ರಗಳಲ್ಲಿ ನಟಿಸಲು ಆರಂಭಿಸಿದರು. ಅವರ ನಟನೆಯನ್ನು ನೋಡಿ ಪರಭಾಷೆಯವರು ಕೂಡ ಸುದೀಪ್​ಗೆ ಆಹ್ವಾನ ನೀಡಿದ್ದರು. ಸದ್ಯ ಸುದೀಪ್​ ಕೋಟಿಗೊಬ್ಬ 3, ವಿಕ್ರಾಂತ್​ ರೋಣ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಉಪೇಂದ್ರ ನಟನೆಯ ಕಬ್ಜಾ ಚಿತ್ರದಲ್ಲಿ ಸುದೀಪ್​ ವಿಶೇಷ ಪಾತ್ರ ನಿರ್ವಹಿಸುತ್ತಿದ್ದಾರೆ. ಕಿಚ್ಚ ಸುದೀಪ್​ ನಟನೆಯ ಕೋಟಿಗೊಬ್ಬ 3 ಸಿನಿಮಾ ಶೀಘ್ರವೇ ತೆರೆಗೆ ಬರುತ್ತಿದೆ. ಮಡೋನಾ ಸೆಬಾಸ್ಟಿಯನ್ ಹಾಗೂ ಶ್ರದ್ಧಾ ದಾಸ್ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಅರ್ಜುನ್​ ಜನ್ಯಾ ಸಿನಿಮಾಗೆ ಸಂಗೀತ ನೀಡಿದ್ದಾರೆ.

ಇದನ್ನೂ ಓದಿ: Kichcha Sudeep: ನೀವು ಕೊಟ್ಟ ಪ್ರೀತಿ ಎದುರು ಬಾಕ್ಸ್​ ಆಫೀಸ್​ ಗಳಿಕೆ ಏನೂ ಅಲ್ಲ; ಕಿಚ್ಚ ಸುದೀಪ್​

Published On - 9:20 pm, Mon, 15 March 21

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us