
ಸ್ಯಾಂಡಲ್ವುಡ್ ಸ್ಟಾರ್ ಕಿಚ್ಚ ಸುದೀಪ್ ಅವರಿಗೆ ಬೇರೆ ಭಾಷೆಯಲ್ಲೂ ಅಭಿಮಾನಿಗಳಿದ್ದಾರೆ. ‘ಬಾಹುಬಲಿ’, ‘ಈಗ’ ಮುಂತಾದ ಸಿನಿಮಾಗಳಲ್ಲಿ ನಟಿಸುವ ಮೂಲಕ ಅವರು ತೆಲುಗು ಚಿತ್ರರಂಗದಲ್ಲೂ ಖ್ಯಾತಿ ಹೆಚ್ಚಿಸಿಕೊಂಡಿದ್ದಾರೆ. ಎಲ್ಲ ಭಾಷೆಯ ಚಿತ್ರರಂಗದಲ್ಲೂ ಅವರಿಗೆ ಸ್ನೇಹಿತರು ಇದ್ದಾರೆ. ಅದರಲ್ಲೂ ಟಾಲಿವುಡ್ನಲ್ಲಿ ಅವರ ಫೇವರಿಟ್ ನಟ ಯಾರು? ಈ ಪ್ರಶ್ನೆಗೆ ಸ್ವತಃ ಕಿಚ್ಚ ಸುದೀಪ್ ಉತ್ತರ ನೀಡಿದ್ದರು. ಕೆಲವು ತಿಂಗಳ ಹಿಂದೆ ಅವರು ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ್ದರು. ಆ ವಿಡಿಯೋ ಈಗ ಮತ್ತೆ ವೈರಲ್ ಆಗುತ್ತಿದೆ. ತಮ್ಮ ಇಷ್ಟದ ಹೀರೋ ಜ್ಯೂ. ಎನ್ಟಿಆರ್ ಎಂದು ಸುದೀಪ್ ಹೇಳಿದ್ದರು. ಯಾಕೆ?
ಪ್ರಭಾಸ್, ಮಹೇಶ್ ಬಾಬು, ಜ್ಯೂ. ಎನ್ಟಿಆರ್ ಹಾಗೂ ಚಿರಂಜೀವಿ ಈ ಸ್ಟಾರ್ಗಳಲ್ಲಿ ನಿಮಗೆ ಯಾರು ಇಷ್ಟ ಎಂದು ನಿರೂಪಕಿ ಕೇಳಿದ್ದಕ್ಕೆ ಜ್ಯೂ. ಎನ್ಟಿಆರ್ ಎಂದು ಸುದೀಪ್ ಉತ್ತರಿಸಿದ್ದರು. ‘ಅವರ ಪ್ರಾರಂಭದ ದಿನಗಳಿಂದಲೂ ನಾನು ಅವರನ್ನು ಗಮನಿಸುತ್ತಿದ್ದೇನೆ. ಇತ್ತೀಚೆಗಿನ ಆರ್ಆರ್ಆರ್ ಟೀಸರ್ ಕೂಡ ನೋಡಿದ್ದೇನೆ. ಮೊದಲು ಅವರು ದಪ್ಪ ಇದ್ದರು. ಆದರೆ ಈಗ ಪಾತ್ರಕ್ಕಾಗಿ ದೇಹ ಹುರಿಗೊಳಿಸಿಕೊಂಡಿದ್ದಾರೆ’ ಎಂದು ಸುದೀಪ್ ಹೇಳಿದ್ದರು.
ಅಷ್ಟಕ್ಕೂ ಈ ಹಳೇ ವಿಡಿಯೋ ಈಗ ಯಾಕೆ ವೈರಲ್ ಆಗುತ್ತಿದೆ? ಸದ್ಯ ಜ್ಯೂ. ಎನ್ಟಿಆರ್ ನಟನೆಯ ಆರ್ಆರ್ಆರ್ ಸಿನಿಮಾ ಬಿಡುಗಡೆಗೆ ಹತ್ತಿರ ಆಗುತ್ತಿದೆ. ಕೆಲವೇ ದಿನಗಳ ಹಿಂದೆ ಈ ಸಿನಿಮಾದ ಮೊದಲ ಹಾಡು ಬಿಡುಗಡೆ ಮಾಡಲಾಯಿತು. ನಿಧಾನಕ್ಕೆ ಚಿತ್ರದ ಪ್ರಚಾರ ಕಾರ್ಯಗಳಿಗೆ ತಂಡ ಚಾಲನೆ ನೀಡಿದೆ. ಅತ್ತ ಅಭಿಮಾನಿಗಳು ಕೂಡ ಪ್ರಚಾರದಲ್ಲಿ ಭಾಗವಹಿಸುತ್ತಿದ್ದಾರೆ. ತಮ್ಮ ನೆಚ್ಚಿನ ಹೀರೋ ಜ್ಯೂ. ಎನ್ಟಿಆರ್ಗೆ ಸಂಬಂಧಿಸಿದ ಹಳೇ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುವ ಮೂಲಕ ಪ್ರಚಾರಕ್ಕೆ ಸಹಕಾರಿ ಆಗುತ್ತಿದ್ದಾರೆ. ಅದೇ ಕಾರಣಕ್ಕೆ ಈ ಸಂದರ್ಶನದ ವಿಡಿಯೋ ಮತ್ತೆ ವೈರಲ್ ಆಗುತ್ತಿದೆ.
ಜ್ಯೂ. ಎನ್ಟಿಆರ್ ಮತ್ತು ರಾಮ್ ಚರಣ್ ಮುಖ್ಯಭೂಮಿಕೆ ನಿಭಾಯಿಸಿರುವ ಆರ್ಆರ್ಆರ್ ಚಿತ್ರಕ್ಕೆ ರಾಜಮೌಳಿ ನಿರ್ದೇಶನ ಮಾಡಿದ್ದಾರೆ. ನಾಯಕಿಯಾಗಿ ಬಾಲಿವುಡ್ ಬೆಡಗಿ ಆಲಿಯಾ ಭಟ್ ನಟಿಸಿದ್ದಾರೆ. ಅಜಯ್ ದೇವಗನ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ:
ಕನ್ನಡ ಶಾಲೆಗಾಗಿ ಮತ್ತೊಂದು ಮಹತ್ವದ ಕಾರ್ಯ ಕೈಗೊಂಡ ಕಿಚ್ಚ ಸುದೀಪ್ ಚಾರಿಟೇಬಲ್ ಟ್ರಸ್ಟ್
Roar of RRR: ಅಬ್ಬಬ್ಬಾ… ಆರ್ಆರ್ಆರ್ ಮೇಕಿಂಗ್ ಹೀಗಿದೆ, ಇನ್ನು ಸಿನಿಮಾ ಹೇಗಿರಬಹುದು?