‘ಹೀಗೆ ಮುಂದುವರಿದ್ರೆ ಜನ ಬಿಗ್ ಬಾಸ್ ನೋಡೋದು ಬಿಡ್ತಾರೆ’; ಕೆಲವರ ಬಗ್ಗೆ ಸುದೀಪ್ ಅಸಮಾಧಾನ

ಬಿಗ್ ಬಾಸ್ ಕನ್ನಡ ಮನೆಯಲ್ಲಿ ಜಗಳಗಳು ವಿಪರೀತವಾಗಿ ಹೆಚ್ಚಾಗಿವೆ. ಹಿಂದಿನ ಸೀಸನ್‌ಗಳಲ್ಲಿ ಉಪ್ಪಿನಕಾಯಿಯಂತಿದ್ದ ಜಗಳಗಳು ಈಗ ಊಟವೇ ಆಗಿವೆ. ಅಶ್ವಿನಿ, ರಿಷಾ, ರಕ್ಷಿತಾ, ಕಾವ್ಯಾ ಸೇರಿದಂತೆ ಹಲವು ಸ್ಪರ್ಧಿಗಳ ಏರುಧ್ವನಿಯ ಜಗಳ ವೀಕ್ಷಕರಿಗೆ ಅಸಮಾಧಾನ ಮೂಡಿಸಿದೆ. ಸುದೀಪ್ ಸ್ಪರ್ಧಿಗಳಿಗೆ ಕಿವಿಮಾತು ಹೇಳಿ, "ಬಿಗ್ ಬಾಸ್ ಮನೆಯನ್ನು ಜಗಳದ ಮನೆ ಮಾಡಬೇಡಿ, ವೀಕ್ಷಕರು ನೋಡೋದನ್ನು ನಿಲ್ಲಿಸಬಹುದು" ಎಂದು ಎಚ್ಚರಿಕೆ ನೀಡಿದ್ದಾರೆ.

‘ಹೀಗೆ ಮುಂದುವರಿದ್ರೆ ಜನ ಬಿಗ್ ಬಾಸ್ ನೋಡೋದು ಬಿಡ್ತಾರೆ’; ಕೆಲವರ ಬಗ್ಗೆ ಸುದೀಪ್ ಅಸಮಾಧಾನ
ಬಿಗ್ ಬಾಸ್

Updated on: Nov 03, 2025 | 7:31 AM

ಬಿಗ್ ಬಾಸ್​ನ (Bigg Boss) ಈ ಹಿಂದಿನ ಸೀಸನ್​ಗಳಲ್ಲಿ ಜಗಳಗಳು ಇದ್ದವು. ಆದರೆ, ಅದು ಊಟಕ್ಕೆ ಉಪ್ಪಿನ ಕಾಯಿ ರೀತಿ ಇತ್ತು. ಆದರೆ, ಇತ್ತೀಚಿನ ಸೀಸನ್​ಗಳಲ್ಲಿ ಉಪ್ಪಿನಕಾಯಿಯೇ ಊಟವಾಗಿದೆ. ಈ ವಿಚಾರದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಅನೇಕರು ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಸುದೀಪ್ ಕೂಡ ಈ ವಿಚಾರದಲ್ಲಿ ಸ್ಪರ್ಧಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿರೋ ಅಶ್ವಿನಿ ಗೌಡ, ರಿಷಾ ಗೌಡ, ರಕ್ಷಿತಾ ಶೆಟ್ಟಿ, ಕಾವ್ಯಾ ಶೈವ ಮೊದಲಾದವರು ಜಗಳ ಮಾಡಿಕೊಂಡಿದ್ದರು. ಏರು ಧ್ವನಿಯಲ್ಲಿ ಮಾತನಾಡಿ ಜಗಳದ ಕೇಂದ್ರ ಬಿಂದು ಆಗಿದ್ದರು. ಈ ಜಗಳದ ವಿಚಾರ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಅದರಲ್ಲೂ ಪ್ರತಿ ವಾರ ಒಬ್ಬೊಬ್ಬರು ಏರುಧ್ವನಿಯಲ್ಲಿ ಮಾತನಾಡಿ ವೀಕ್ಷಕರಲ್ಲೂ ಅಸಮಾಧಾನ ಮೂಡುವಂತೆ ಮಾಡಿದ್ದಾರೆ. ಈ ಬಗ್ಗೆ ಸುದೀಪ್ ಮಾತನಾಡಿದ್ದಾರೆ.

ಭಾನುವಾರದ ಎಪಿಸೋಡ್ ಪೂರ್ಣಗೊಳಿಸುವುದಕ್ಕೂ ಮೊದಲು ಮಾತನಾಡಿದ ಅವರು, ‘ನಿಮ್ಮಲ್ಲಿ ಪರಸ್ಪರ ಸ್ನೇಹ, ಪ್ರೀತಿ ಹಂಚಿಕೊಂಡು ಇರೋಕೆ ಬರುತ್ತೆ. ಮಾತನಾಡೋ ಜಾಗದಲ್ಲಿ ಮಾತನಾಡೋಕು ಬರುತ್ತೆ. ಬಿಗ್ ಬಾಸ್ ಮನೆಯನ್ನು ಜಗಳದ ಮನೆ ಮಾಡಬೇಡಿ. ಎಲ್ಲಾ ಸ್ಪೀಕರ್​ಗೆ ಒಂದು ವಾಲ್ಯೂಮ್ ಬಟಮ್ ಇದೆ. ಅದನ್ನು ಹಾಕಿರೋದು ಮನುಷ್ಯ ಎಂದಮೇಲೆ, ನಮ್ಮ ವಾಲ್ಯೂಮ್ ಬಟನ್ ಎಲ್ಲಿದೆ ಎಂಬುದನ್ನು ತಿಳಿದುಕೊಳ್ಳೋದು ಮುಖ್ಯವಾಗುತ್ತದೆ’ ಎಂದು ಸುದೀಪ್ ಕಿವಿಮಾತು ಹೇಳಿದರು.

ಇದನ್ನೂ ಓದಿ
ಬಿಗ್ ಬಾಸ್ ಮನೆಯಿಂದ ಮಲ್ಲಮ್ಮ ಹೊರ ಹೋಗಲು ಕಾರಣವಾಯ್ತು ಆ ಒಂದು ವಂದಂತಿ?
ಬಿಗ್ ಬಾಸ್​ನಲ್ಲಿ ಕನ್ನಡದ ಕಂಪು; ವಿಶ್ ತಿಳಿಸಿದ ಸುದೀಪ್
ಟಾಲಿವುಡ್​ಗೆ 50 ಕೆಜಿ ಚಿನ್ನ ಧರಿಸಿ ಬಂದ ನಟಿ ಸೋನಾಕ್ಷಿ ಸಿನ್ಹಾ
ಸುದೀಪ್ ಹೇಳಿದ ‘ಗೌರವ’ದ ಪಾಠ ಮರೆತು ಮತ್ತೆ ಕಿತ್ತಾಟಕ್ಕೆ ಇಳಿದ ಅಶ್ವಿನಿ

ಇದನ್ನೂ ಓದಿ: ಬಿಗ್ ಬಾಸ್ ಮನೆಯಿಂದ ಮಲ್ಲಮ್ಮ ಹೊರ ಹೋಗಲು ಕಾರಣವಾಯ್ತು ಆ ಒಂದು ವಂದಂತಿ?

ಕೆಲ ವೀಕ್ಷಕರು ಬಿಗ್ ಬಾಸ್ ನೋಡೋದನ್ನು ನಿಲ್ಲಿಸಬಹುದು ಎಂದುಕೂಡ ಅವರು ಎಚ್ಚರಿಕೆ ನೀಡಿದರು. ‘ಆಡ್ತಾ ಇದೀರಿ, ಟ್ಯಾಲೆಂಟ್, ಸಾಮರ್ಥ್ಯ, ಒಳ್ಳೆತನ ಹಾಗೂ ಸ್ಟ್ರೆಟಜಿ ಮಾಡೋ ತಲೆ ಇದೆ. ಆದರೆ, ಜಗಳ-ಕಿರಿಚಾಟ ಎಂಬುದು ಹೀಗೆ ಮುಂದುವರಿದರೆ ಬಿಗ್ ಬಾಸ್​ನ ಕೆಲವರು ನೋಡೋದನ್ನೇ ನಿಲ್ಲಿಸಬಹುದು. ಆ ಹಂತಕ್ಕೆ ತೆಗೆದುಕೊಂಡು ಹೋಗಬೇಡಿ. ಹೇಳಬೇಕು ಅನ್ನಿಸ್ತು ಹೇಳಿದೆ’ ಎಂದು ಸುದೀಪ್ ಅವರು ಕಿವಿಮಾತು ಹೇಳಿದರು. ಇದನ್ನು ಯಾರೆಲ್ಲ ಗಂಭೀರವಾಗಿ ಸ್ವೀಕರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.