AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್ ಮನೆಯಿಂದ ಮಲ್ಲಮ್ಮ ಹೊರ ಹೋಗಲು ಕಾರಣವಾಯ್ತು ಆ ಒಂದು ವಂದಂತಿ?

Mallamma Elimination: ಬಿಗ್ ಬಾಸ್ ಕನ್ನಡ 12 ರ ಐದನೇ ವಾರದಲ್ಲಿ ಮಲ್ಲಮ್ಮ ಹೊರಬಿದ್ದಿದ್ದಾರೆ. ಇತರ ಸ್ಪರ್ಧಿಗಳು ಅವರನ್ನು ತಾಯಿಯಂತೆ ಕಂಡಿದ್ದು, ಸ್ಪರ್ಧಿಯಾಗಿ ನೋಡದಿರುವುದು ಅವರು ಹೊರ ಹೋಗಲು ಒಂದು ಪ್ರಮುಖ ಕಾರಣ. ಎಲಿಮಿನೇಷನ್ ಬಗ್ಗೆ ಹಬ್ಬಿದ ಸುಳ್ಳು ಸುದ್ದಿ ವೋಟಿಂಗ್ ಮೇಲೆ ಪರಿಣಾಮ ಬೀರಿರಬಹುದು ಎಂದು ಹೇಳಲಾಗುತ್ತಾ ಇದೆ.

ಬಿಗ್ ಬಾಸ್ ಮನೆಯಿಂದ ಮಲ್ಲಮ್ಮ ಹೊರ ಹೋಗಲು ಕಾರಣವಾಯ್ತು ಆ ಒಂದು ವಂದಂತಿ?
ಮಲ್ಲಮ್ಮ
ರಾಜೇಶ್ ದುಗ್ಗುಮನೆ
|

Updated on: Nov 03, 2025 | 7:04 AM

Share

‘ಬಿಗ್ ಬಾಸ್ ಕನ್ನಡ ಸೀಸನ್ 12’ರ (BBk 12) ಆಟದಿಂದ ಮಲ್ಲಮ್ಮ ಅವರು ಹೊರ ಬಂದಿದ್ದಾರೆ. ಐದನೇ ವಾರದಲ್ಲಿ ಅವರು ಎಲಿಮಿನೇಟ್ ಆಗಿದ್ದಾರೆ. ಇಷ್ಟು ದಿನ ತಮ್ಮ ಮಾತಿನ ಮೂಲಕ ಎಲ್ಲರ ಗಮನ ಸೆಳೆದ ಅವರು ದೊಡ್ಮನೆಯಿಂದ ಹೊರ ಹೋಗಿದ್ದಾರೆ. ಈಗ ಮಲ್ಲಮ್ಮ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಲು ಕೆಲವು ವಿಚಾರಗಳು ಕಾರವಾಗಿದೆ. ಆ ಬಗ್ಗೆ ಇಲ್ಲಿದೆ ವಿವರ.

ಮಲ್ಲಮ್ಮ ಅವರು ‘ಬಿಗ್ ಬಾಸ್ ಕನ್ನಡ’ಕ್ಕೆ ಬರುತ್ತಾರೆ ಎಂದಾಗಲೇ ಸಾಕಷ್ಟು ಕುತೂಹಲಗಳು ಮೂಡಿದವು. ಅವರು ಯಾರು ಎಂಬ ಪ್ರಶ್ನೆ ಎಲ್ಲರನ್ನೂ ಕಾಡಿತ್ತು. ನಂತರ ಅವರ ಬಗ್ಗೆ ಒಂದೊಂದೇ ವಿವರಗಳು ಸಿಗಲು ಶುರುವಾದವು. ಮಲ್ಲಮ್ಮ ಅವರು ಉತ್ತರ ಕರ್ನಾಟಕದ ಪ್ರತಿಭೆ. ಯಾದಗಿರಿ ಜಿಲ್ಲೆಯ, ಸುರಪುರ ತಾಲೂಕಿನ ಸಣ್ಣ ಹಳ್ಳಿಯವರು. ಕೆಲಸಕ್ಕೆಂದು ಬೆಂಗಳೂರಿಗೆ ಬಂದ ಅವರು, ಮಾತಿನ ಮೂಲಕ ಗಮನ ಸೆಳೆದರು. ಈ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟು ಅವರನ್ನು ಫೇಮಸ್ ಆಯಿತು.

ಮಲ್ಲಮ್ಮ ಅವರಿಗೆ ದೊಡ್ಮನೆಯಲ್ಲಿ ಸಾಕಷ್ಟು ಮುಳುವಾಗಿದ್ದು ಇತರ ಸ್ಪರ್ಧಿಗಳು. ಮಲ್ಲಮ್ಮ ಅವರನ್ನು ಎಲ್ಲರೂ ತಾಯಿ ಸ್ಥಾನದಲ್ಲಿ ನೋಡಿದರೇ ಹೊರತು ಅವರು ಸ್ಪರ್ಧಿ ಎಂದು ನೋಡಲೇ ಇಲ್ಲ. ರಘು ಕ್ಯಾಪ್ಟನ್ ಆಗಿದ್ದಾಗ ಮಲ್ಲಮ್ಮ ಅವರ ಬಳಿ ಯಾವುದೇ ಕೆಲಸ ಮಾಡಲು ಅವಕಾಶ ನೀಡಲಿಲ್ಲ. ಈ ವಿಚಾರವಾಗಿ ಸುದೀಪ್ ಕೂಡ ಎಚ್ಚರಿಕೆ ನೀಡಿದ್ದರು.

ಇದನ್ನೂ ಓದಿ
Image
ಬಿಗ್ ಬಾಸ್​ನಲ್ಲಿ ಕನ್ನಡದ ಕಂಪು; ವಿಶ್ ತಿಳಿಸಿದ ಸುದೀಪ್
Image
ಟಾಲಿವುಡ್​ಗೆ 50 ಕೆಜಿ ಚಿನ್ನ ಧರಿಸಿ ಬಂದ ನಟಿ ಸೋನಾಕ್ಷಿ ಸಿನ್ಹಾ
Image
‘ಸಾವಿರ ಭಾಷೆ ನಾಲಿಗೆಯಲ್ಲಿರಲಿ, ಕನ್ನಡ ಭಾಷೆ ಹೃದಯದಲ್ಲಿರಲಿ’: ಯಶ್  
Image
ಸುದೀಪ್ ಹೇಳಿದ ‘ಗೌರವ’ದ ಪಾಠ ಮರೆತು ಮತ್ತೆ ಕಿತ್ತಾಟಕ್ಕೆ ಇಳಿದ ಅಶ್ವಿನಿ

ಇನ್ನು, ಮಲ್ಲಮ್ಮ ಎಲಿಮಿನೇಟ್ ಆದರು ಎಂಬ ಸುದ್ದಿ ಒಂದು ಜೋರಾಗಿ ಹಬ್ಬಿತ್ತು. ಈ ವಿಚಾರದದಿಂದಲೂ ಅವರಿಗೆ ಹಿನ್ನಡೆ ಆಗಿರೋ ಸಾಧ್ಯತೆ ಇದೆ. ಮಲ್ಲಮ್ಮ ಹೇಗೂ ಹೊರಕ್ಕೆ ಹೋಗಿದ್ದಾರೆ ಎಂದು ಕೆಲವರು ವೋಟ್ ಮಾಡೋದನ್ನೇ ನಿಲ್ಲಿಸಿದ್ದರಬಹುದು. ಈ ಕಾರಣಕ್ಕೂ ಮಲ್ಲಮ್ಮಗೆ ಸಮಸ್ಯೆ ಆಗಿರಬಹುದು ಎಂದು ಅನೇಕರು ಊಹಿಸಿದ್ದಾರೆ. ಆದರೆ, ಆ ಸುದ್ದಿ ಹಬ್ಬಲು ಕಾರಣ ಏನು ಎಂಬ ವಿಚಾರ ಇನ್ನೂ ಸ್ಪಷ್ಟವಾಗಿಲ್ಲ.

ಇದನ್ನೂ ಓದಿ: ಬಿಗ್​​ಬಾಸ್ ಕನ್ನಡ ಸೀಸನ್ 12ರಿಂದ ಮಲ್ಲಮ್ಮ ಹೊರಕ್ಕೆ: ವಿಶೇಷ ಬೀಳ್ಕೊಡುಗೆ ಕೊಟ್ಟ ಬಿಗ್​​ಬಾಸ್

ಮಲ್ಲಮ್ಮಗೆ ಬಿಗ್ ಬಾಸ್ ವಿಶೇಷವಾಗಿ ಬೀಳ್ಕೊಟ್ಟಿದೆ. ಅವರನ್ನು ಹೊರಕ್ಕೆ ಕಳುಹಿಸುವಾಗ ಗಾರ್ಡನ್ ಏರಿಯಾದಲ್ಲಿ ಲೈಟ್​ನಿಂದ ಅಲಂಕಾರ ಮಾಡಲಾಗಿತ್ತು. ಸ್ಪರ್ಧಿಗಳು ಕೂಡ ಪುಷ್ಪವೃಷ್ಟಿ ಸುರಿಸಿದರು. ಅವರು ಎಲಿಮಿನೇಟ್ ಆದ ವಿಚಾರ ಕೇಳಿ ಧ್ರುವಂತ್, ರಕ್ಷಿತಾ ಶೆಟ್ಟಿ ಸೇರಿದಂತೆ ಅನೇಕರು ಕಣ್ಣೀರು ಹಾಕಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.