
ಕಿಚ್ಚ ಸುದೀಪ್ (Kichcha Sudeep) ಅವರ 46ನೇ ಸಿನಿಮಾ ಮೇಲೆ ಅಭಿಮಾನಿಗಳಿಗೆ ಸಖತ್ ನಿರೀಕ್ಷೆ ಇದೆ. ಆ ನಿರೀಕ್ಷೆಯನ್ನು ಡಬಲ್ ಮಾಡುವ ರೀತಿಯಲ್ಲಿ ಟೀಸರ್ ಬಿಡುಗಡೆ ಮಾಡಲಾಗಿದೆ. ‘ವಿಕ್ರಾಂತ ರೋಣ’ ಸಿನಿಮಾ ಬಳಿಕ ಸುದೀಪ್ ಅವರು ಒಪ್ಪಿಕೊಂಡ ಚಿತ್ರ ಇದು. ಈ ಸಿನಿಮಾಗೆ ‘ವಿ ಕ್ರಿಯೇಷನ್ಸ್’ ಬ್ಯಾನರ್ ಮೂಲಕ ಕಲೈಪುಲಿ ಎಸ್. ಧಾನು (Kalaippuli S Thanu) ಅವರು ಬಂಡವಾಳ ಹೂಡುತ್ತಿದ್ದಾರೆ. ಇತ್ತೀಚೆಗೆ ಈ ಚಿತ್ರ ಸೆಟ್ಟೇರಿತು. ಪ್ರೊಮೋ ಶೂಟಿಂಗ್ನಲ್ಲಿ ಭಾಗಿ ಆಗಿದ್ದರ ಬಗ್ಗೆ ಕಿಚ್ಚ ಸುದೀಪ್ ಅವರು ಅಪ್ಡೇಟ್ ನೀಡಿದ್ದರು. ಈಗ ಟೀಸರ್ ರಿಲೀಸ್ ಆಗಿ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ #Kichcha46 ಹ್ಯಾಶ್ಟ್ಯಾಗ್ ಟ್ರೆಂಡ್ ಆಗಿದೆ. ಸುದೀಪ್ ಅಭಿಮಾನಿಗಳ ವಲಯದಲ್ಲಿ ಈ ಟೀಸರ್ (Kiccha 46 Teaser) ವೈರಲ್ ಆಗಿದೆ.
‘ಕಿಚ್ಚ 46’ ಚಿತ್ರದ ಟೀಸರ್ ನೋಡಲು ಅಭಿಮಾನಿಗಳು ಮಾತ್ರವಲ್ಲದೇ ಚಂದನವನದ ಅನೇಕ ಸೆಲೆಬ್ರಿಟಿಗಳು ಕೂಡ ಕಾದಿದ್ದರು. ಡಾಲಿ ಧನಂಜಯ್, ನಿರೂಪ್ ಭಂಡಾರಿ, ವಾಸುಕಿ ವೈಭವ್, ಸಪ್ತಮಿ ಗೌಡ, ಅನೂಪ್ ಭಂಡಾರಿ, ಡಾರ್ಲಿಂಗ್ ಕೃಷ್ಣ, ಅಮೃತಾ ಅಯ್ಯಂಗಾರ್, ನವೀನ್ ಶಂಕರ್ ಮುಂತಾದವರು ಪ್ರೊಮೋಷನಲ್ ವಿಡಿಯೋದಲ್ಲಿ ಕಾಣಿಸಿಕೊಂಡು ಕೌತುಕ ಹೆಚ್ಚಿಸಿದ್ದರು.
ಹಲವು ಪ್ರಾಜೆಕ್ಟ್ಗಳಿಗೆ ಕಿಚ್ಚ ಸುದೀಪ್ ಅವರು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಮೂರು ಬ್ಯಾಕ್ ಟು ಬ್ಯಾಕ್ ಸಿನಿಮಾವನ್ನು ಒಪ್ಪಿಕೊಂಡಿರುವುದಾಗಿ ತಿಳಿಸುವ ಮೂಲಕ ಅವರು ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದರು. ಆ ಚಿತ್ರಗಳಲ್ಲಿ ಮೊದಲು ಸೆಟ್ಟೇರಿರುವುದು ‘ವಿ ಕ್ರಿಯೇಷನ್ಸ್’ ಜೊತೆಗಿನ ಸಿನಿಮಾ. ಹಲವು ಕಾರಣಗಳಿಂದಾಗಿ ಈ ಚಿತ್ರ ವಿಶೇಷ ಎನಿಸಿಕೊಂಡಿದೆ.
ಇದನ್ನೂ ಓದಿ: ಜೂ ಕಿಚ್ಚನ ಪರಿಚಯಿಸಿದ ಶಿವರಾಜ್ ಕುಮಾರ್ ಮತ್ತು ರವಿಚಂದ್ರನ್
ತುಂಬ ರಗಡ್ ಆಗಿ ‘ಕಿಚ್ಚ 46’ ಟೀಸರ್ ಮೂಡಿಬಂದಿದೆ. ಈ ಸಿನಿಮಾದ ಮೇಕಿಂಗ್ ಕ್ವಾಲಿಟಿ ಬಗ್ಗೆ ಕೆಲವರಿಗೆ ಅನುಮಾನ ಇತ್ತು. ಅದಕ್ಕೆ ತಕ್ಕ ಉತ್ತರ ನೀಡುವ ರೀತಿಯಲ್ಲಿ, ಬಹಳ ಅದ್ದೂರಿಯಾಗಿ ಟೀಸರ್ ಚಿತ್ರೀಕರಿಸಲಾಗಿದೆ. ಇದರಲ್ಲಿನ ಡೈಲಾಗ್ಗಳು ಗಮನ ಸೆಳೆಯುತ್ತಿವೆ. ‘ನಾನು ಯುದ್ಧಕ್ಕೆ ಇಳಿದ ಮೇಲೆ ದಯೆ, ಕ್ಷಮೆ, ಸಂಧಾನ ಇದು ಯಾವುದೂ ಇರೋದಿಲ್ಲ. ನಾನು ಮನುಷ್ಯ ಅಲ್ಲ. ನಾನು ರಾಕ್ಷಸ’ ಎಂದು ಟೀಸರ್ನ ಕೊನೆಯಲ್ಲಿ ಸುದೀಪ್ ಹೇಳುವ ಡೈಲಾಗ್ ಟ್ರೆಂಡ್ ಆಗುತ್ತಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:09 pm, Sun, 2 July 23