‘ಆಗಲೇ 28 ವರ್ಷಗಳು ಕಳೆದಿವೆ’; ಸಿನಿ ಜರ್ನಿ ನೆನೆದು ಭಾವುಕರಾದ ಕಿಚ್ಚ ಸುದೀಪ್

|

Updated on: Jan 31, 2024 | 10:32 AM

Kichcha Sudeep: ‘ಬ್ರಹ್ಮ’ ಸುದೀಪ್ ಅಭಿನಯದ ಮೊದಲ ಸಿನಿಮಾ. ಈ ಚಿತ್ರದಲ್ಲಿ ಅಂಬರೀಷ್ ಅವರು ನಟಿಸಿದ್ದರು. ಆದರೆ, ಈ ಚಿತ್ರ ರಿಲೀಸ್ ಆಗಲೇ ಇಲ್ಲ. ಸುದೀಪ್ ಈ ಚಿತ್ರಕ್ಕಾಗಿ ಕ್ಯಾಮೆರಾ ಎದುರುಸಿದ ದಿನವನ್ನು ಚಿತ್ರರಂಗದಲ್ಲಿ ಮೊದಲ ದಿನ ಎಂದು ಪರಿಗಣಿಸಿದ್ದಾರೆ.

‘ಆಗಲೇ 28 ವರ್ಷಗಳು ಕಳೆದಿವೆ’; ಸಿನಿ ಜರ್ನಿ ನೆನೆದು ಭಾವುಕರಾದ ಕಿಚ್ಚ ಸುದೀಪ್
ಸುದೀಪ್
Follow us on

ಕಿಚ್ಚ ಸುದೀಪ್ (Kichcha Sudeep) ಅವರು ಚಿತ್ರರಂಗಕ್ಕೆ ಕಾಲಿಟ್ಟು ಬರೋಬ್ಬರಿ 28 ವರ್ಷಗಳು ಕಳೆದಿವೆ. ತಂದೆ ಸಂಜೀವ್ ಅವರು ಹೋಟೆಲ್ ಉದ್ಯಮ ಹೊಂದಿದ್ದರು. ಗಾಂಧಿ ನಗರದಲ್ಲಿ ಈ ಹೋಟೆಲ್ ಇತ್ತು. ಹೀಗಾಗಿ, ಚಿತ್ರರಂಗದವರ ಒಡನಾಟ ಬೆಳೆಯಿತು. ಸುದೀಪ್​ಗೂ ಸಿನಿಮಾಗೆ ಕಾಲಿಡಬೇಕು ಎನ್ನುವ ಕನಸು ಹುಟ್ಟಿದ್ದು ಅಲ್ಲಿಯೇ. ಈಗ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟು 28 ವರ್ಷಗಳು ಕಳೆದಿವೆ. ಇದನ್ನು ಕಿಚ್ಚ ಸುದೀಪ್ ಹಾಗೂ ಅವರ ಅಭಿಮಾನಿಗಳು ನೆನಪಿಸಿಕೊಳ್ಳುತ್ತಿದ್ದಾರೆ. ಮೊದಲ ದಿನ ಕ್ಯಾಮೆರಾ ಎದುರಿಸಿದ್ದನ್ನು ಸುದೀಪ್ ನೆನಪಿಸಿಕೊಂಡಿದ್ದಾರೆ.

‘ಬ್ರಹ್ಮ’ ಸುದೀಪ್ ನಟನೆಯ ಮೊದಲ ಸಿನಿಮಾ. ಈ ಸಿನಿಮಾದಲ್ಲಿ ಅಂಬರೀಷ್ ಅವರು ನಟಿಸಿದ್ದರು. ಆದರೆ, ಈ ಚಿತ್ರ ರಿಲೀಸ್ ಆಗಲೇ ಇಲ್ಲ. ಸುದೀಪ್ ಈ ಚಿತ್ರಕ್ಕಾಗಿ ಕ್ಯಾಮೆರಾ ಎದುರುಸಿದ ದಿನವನ್ನು ಚಿತ್ರರಂಗದಲ್ಲಿ ಮೊದಲ ದಿನ ಎಂದು ಪರಿಗಣಿಸಿದ್ದಾರೆ. ಅವರು ಬಣ್ಣದ ಲೋಕಕ್ಕೆ ಕಾಲಿಟ್ಟು ಇಂದಿಗೆ (ಜನವರಿ 31) 28 ವರ್ಷಗಳು ಕಳೆದಿವೆ. ಹಲವು ಸೂಪರ್ ಹಿಟ್ ಚಿತ್ರಗಳನ್ನು ಅವರು ನೀಡಿದ್ದಾರೆ.

‘ನಾನು ಕಂಠೀರವ ಸ್ಟುಡಿಯೋದಲ್ಲಿ ಅಂಬರೀಷ್​ ಅವರೊಂದಿಗೆ ಬ್ರಹ್ಮ ಚಿತ್ರದ ಶೂಟಿಂಗ್ ಆರಂಭಿಸಿದೆ. ಕೆಲವೇ ವರ್ಷಗಳ ಹಿಂದೆ ಇದು ನಡೆದಿದೆ ಎಂಬ ಭಾವನೆ. ಆದರೆ, ಈಗಾಗಲೇ ಇದಕ್ಕೆ 28 ವರ್ಷಗಳು ತುಂಬಿವೆ. ಎಲ್ಲರಿಗೂ ಧನ್ಯವಾದ’ ಎಂದು ಸುದೀಪ್ ಬರೆದುಕೊಂಡಿದ್ದಾರೆ.

‘ಮನರಂಜನಾ ಕ್ಷೇತ್ರದಲ್ಲಿ 28 ವರ್ಷಗಳು ನನ್ನ ಜೀವನದ ಅತ್ಯಂತ ಸುಂದರ ಭಾಗವಾಗಿದೆ. ಈ ಸಾಟಿಯಿಲ್ಲದ ಉಡುಗೊರೆಗಾಗಿ ನಾನು ದೇವರಿಗೆ ಧನ್ಯವಾದ ಹೇಳುತ್ತೇನೆ. ನನ್ನ ಪೋಷಕರು, ಕುಟುಂಬ, ತಂತ್ರಜ್ಞರು, ನಿರ್ಮಾಪಕರು, ಬರಹಗಾರರು, ನನ್ನ ಸಹ-ನಟರು, ಮಾಧ್ಯಮ, ಮನರಂಜನಾ ಚಾನೆಲ್‌ಗಳು, ವಿತರಕರು, ಪ್ರದರ್ಶಕರು ಹಾಗೂ ನನ್ನ ಪ್ರಯಾಣದ ಭಾಗವಾಗಿರುವ ಪ್ರತಿಯೊಬ್ಬರಿಗೂ ಧನ್ಯವಾದಗಳು’ ಎಂದಿದ್ದಾರೆ ಸುದೀಪ್.

ಇದನ್ನೂ ಓದಿ: Kichcha Sudeep: ಇನ್ಮುಂದೆ ಸುದೀಪ್ ಬಿಗ್ ಬಾಸ್ ಹೋಸ್ಟ್ ಮಾಡಲ್ಲ ಎಂಬ ವಿಚಾರದಲ್ಲಿಲ್ಲ ಸತ್ಯ


‘ನಾನು ಜೀವನದಲ್ಲಿ ಗಳಿಸಿದ ಅತ್ಯಂತ ಅಮೂಲ್ಯ ವಿಚಾರ ಎಂದರೆ ಅದು ಫ್ಯಾನ್ಸ್. ಅವರಿಗೂ ಧನ್ಯವಾದ. ಇದು ಏರಿಳಿತದ ಪ್ರಯಾಣ. ನಾನು ಪ್ರತಿ ಕ್ಷಣವನ್ನು ಆನಂದಿಸಿದೆ. ನಾನು ದೋಷರಹಿತನಲ್ಲ, ಪರಿಪೂರ್ಣನಲ್ಲ, ನಾನು ನನ್ನ ಕೈಲಾದಷ್ಟು ಪ್ರಯತ್ನಿಸಿದ್ದೇನೆ. ಅವಕಾಶಗಳು ಬಂದಾಗ ನನ್ನ ಕೈಲಾಗಿದ್ದನ್ನು ನೀಡಿದ್ದೇನೆ. ನಾನು ಹೇಗಿದ್ದೇನೆಯೋ ಹಾಗೆಯೇ ನನ್ನನ್ನು ಸ್ವೀಕರಿಸಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು’ ಎಂದಿದ್ದಾರೆ ಸುದೀಪ್.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ