ಕಿಚ್ಚ ಸುದೀಪ್ ಅವರಿಗೆ ಸೆಪ್ಟೆಂಬರ್ 2 ಜನ್ಮದಿನ. ಅವರ ಬರ್ತ್ಡೇ ಆಚರಣೆಗೆ ಫ್ಯಾನ್ಸ್ ಕಾದಿದ್ದಾರೆ. ಈ ಬಾರಿ ಅವರು ಮನೆಯ ಸಮೀಪ ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ. ಜನ ಬರುವುದರಿಂದ ತೊಂದರೆ ಆಗುತ್ತದೆ ಎಂದು ಅಕ್ಕ-ಪಕ್ಕದ ಮನೆಯವರು ದೂರಿದ್ದರು. ಈ ಕಾರಣಕ್ಕೆ ಬೇರೆ ಕಡೆ ಬರ್ತ್ಡೇ ಆಚರಣೆ ಮಾಡಲು ಸುದೀಪ್ ನಿರ್ಧರಿಸಿದ್ದಾರೆ. ಈ ಬಗ್ಗೆ ಅವರು ಸುದ್ದಿಗೋಷ್ಠಿ ಮಾಹಿತಿ ನೀಡಿದ್ದಾರೆ.
‘ಕಳೆದ ತಿಂಗಳು ಬರ್ತ್ಡೇ ಸಂದರ್ಭದಲ್ಲಿ ಸಾಕಷ್ಟು ಗೊಂದಲ ಆಯ್ತು. ಅಕ್ಕ-ಪಕ್ಕದ ಮನೆಯವರು ರಿಕ್ವೆಸ್ಟ್ ಮಾಡಿದ್ದರು. ಮನೆಯ ಬಳಿ ಆಚರಣೆ ಬೇಡ. ಜಯನಗರದಲ್ಲಿರುವ ಟೆಲಿಫೋನ್ ಎಕ್ಸ್ಚೇಂಜ್ ಎದುರು MES ಗ್ರೌಂಡ್ ಇದೆ. ಬೆಳಿಗ್ಗೆ 10 ಗಂಟೆಯಿಂದ 12ವರೆಗೆ ಇರುತ್ತೇನೆ. ಬರುವ ಸ್ನೇಹಿತರು ಅಲ್ಲಿ ಭೇಟಿ ಮಾಡುತ್ತೇನೆ. ಇದಾದಮೇಲೂ ಮನೆಯವರ ಬಳಿ ಬರುತ್ತಾರೆ. ಆದರೆ, ಅಲ್ಲಿ ಒಪ್ಪಿಗೆ ಇಲ್ಲ. ಎಂಇಎಸ್ ಗ್ರೌಂಡ್ನಲ್ಲೂ ಪ್ರೋಟೋಕಾಲ್ ಇದೆ’ ಎಂದಿದ್ದಾರೆ ಸುದೀಪ್.
‘ಕಳೆದ ಬಾರಿ ಬ್ಯಾರಿಕೇಡ್ ಒಡೆದು ಫ್ಯಾನ್ಸ್ ಬಂದಿದ್ದರು. ಅನೇಕರಿಗೆ ಭೇಟಿ ಸಾಧ್ಯವಾಗಿರಲಿಲ್ಲ. ಅದಕ್ಕೆ ನಾನು ಕ್ಷಮೆ ಕೇಳುತ್ತೇನೆ. ಈ ಬಾರಿ ಶಾಸಕ ಸಿಕೆ ರಾಮಮೂರ್ತಿ ಅವರು ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಅವರಿಗೆ ಧನ್ಯವಾದ’ ಎಂದು ಕೇಳಿದ್ದಾರೆ ಸುದೀಪ್. ‘ಕೇಕ್ ತರಬೇಡಿ. ಕಟ್ ಮಾಡಿದಮೇಲೆ ಅದರಷ್ಟು ಅನಾಥ ಮತ್ತೊಬ್ಬರು ಇಲ್ಲ. ಆತರಹ ಸಂಭ್ರಮ ಬೇಡ. ಆ ಹಣದಲ್ಲಿ ಯಾರಿಗಾದರೂ ಊಟ ಹಾಕಿ’ ಎಂದು ಕೋರಿದ್ದಾರೆ ಅವರು.
ಇದನ್ನೂ ಓದಿ: ಕಿಚ್ಚ ಸುದೀಪ್ ಬರ್ತ್ಡೇ ಅನೂಪ್ ಭಂಡಾರಿ ಜೊತೆಗಿನ ಹೊಸ ಸಿನಿಮಾ ಅನೌನ್ಸ್
‘ನಿರ್ಮಾಪಕರು, ನಿರ್ದೇಶಕರು ಇದ್ದಾರೆ. ಅವರು ನಿರ್ಧಾರ ಮಾಡುತ್ತಾರೆ. ಇಷ್ಟು ವರ್ಷ ಒಂದೇ ಸಿನಿಮಾ ಮಾಡಿಕೊಂಡು ಬರ್ತಾ ಇದ್ದೆ. 2-3 ಸಿನಿಮಾ ಒಟ್ಟಿಗೆ ಮಾಡ್ತೀನಿ. ನನಗೂ ಬೇಗ ಬರಬೇಕು ಎಂದಿದೆ. ಶೀಘ್ರವೇ ರಿಲೀಸ್ ಮಾಡುತ್ತೇವೆ. ಸಿನಿಮಾ ಕೆಲಸ ಕೊನೆಯ ಹಂತದಲ್ಲಿದೆ ಇದೆ’ ಎಂದಿದ್ದಾರೆ ಅವರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.