‘ಪುಣ್ಯಾತ್ಮರು ಯಾವಾಗ ದೊಡ್ಮನಸ್ಸು ಮಾಡ್ತಾರೋ ಗೊತ್ತಿಲ್ಲ’; ‘ಬಿಗ್ ಬಾಸ್’ ವೇದಿಕೆ ಮೇಲೆ  ‘ಮ್ಯಾಕ್ಸ್’ ರಿಲೀಸ್ ಬಗ್ಗೆ ಸುದೀಪ್ ಮಾತು

ಬಿಗ್ ಬಾಸ್ ಕನ್ನಡ ವೇದಿಕೆಯಲ್ಲಿ ಕಿಚ್ಚ ಸುದೀಪ್ ಅವರು ತಮ್ಮ ಮುಂಬರುವ ಚಿತ್ರ ‘ಮ್ಯಾಕ್ಸ್’ ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಅಭಿಮಾನಿಯೊಬ್ಬರೊಂದಿಗಿನ ಸಂವಾದದಲ್ಲಿ, ಚಿತ್ರದ ಬಿಡುಗಡೆಗೆ ಕಾಯುತ್ತಿರುವುದಾಗಿ ಹೇಳಿದ್ದಾರೆ. ಇದು ‘ಮ್ಯಾಕ್ಸ್’ ಚಿತ್ರದ ಬಿಡುಗಡೆಯ ಕುರಿತು ಹೊಸ ಚರ್ಚೆಗಳಿಗೆ ಕಾರಣವಾಗಿದೆ.

‘ಪುಣ್ಯಾತ್ಮರು ಯಾವಾಗ ದೊಡ್ಮನಸ್ಸು ಮಾಡ್ತಾರೋ ಗೊತ್ತಿಲ್ಲ’; ‘ಬಿಗ್ ಬಾಸ್’ ವೇದಿಕೆ ಮೇಲೆ  ‘ಮ್ಯಾಕ್ಸ್’ ರಿಲೀಸ್ ಬಗ್ಗೆ ಸುದೀಪ್ ಮಾತು
ಸುದೀಪ್

Updated on: Nov 18, 2024 | 7:52 AM

ಕಿಚ್ಚ ಸುದೀಪ್ ಅವರು ‘ಮ್ಯಾಕ್ಸ್’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕಾಗಿ ಫ್ಯಾನ್ಸ್ ಕಾದಿದ್ದಾರೆ. ಈ ಚಿತ್ರದ ಕೆಲಸಗಳು ಮುಗಿದು ತುಂಬಾ ಸಮಯ ಕಳೆದಿದೆ. ಶೀಘ್ರವೇ ಹೊಸ ಘೋಷಣೆ ಮಾಡುತ್ತೇವೆ ಎಂದು ನಿರ್ಮಾಪಕರು ಈ ಮೊದಲೇ ಹೇಳಿದ್ದರು. ಆದರೆ, ನಿರ್ಮಾಪಕರ ಕಡೆಯಿಂದ ಯಾವುದೇ ಮಾಹಿತಿ ಹೊರಬಿದ್ದಿಲ್ಲ. ಸುದೀಪ್ ಕೂಡ ಇತ್ತೀಚಿನ ದಿನಗಳಲ್ಲಿ ಈ ಸಿನಿಮಾ ಬಗ್ಗೆ ಮಾತನಾಡಿದ್ದು ಕಡಿಮೆ. ಹೀಗಿರುವಾಗಲೇ ಸುದೀಪ್ ಅವರು ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ‘ಬಿಗ್ ಬಾಸ್ ವೇದಿಕೆ ಮೇಲೆ ಈ ಬಗ್ಗೆ ಮೌನ ಮುರಿದಿದ್ದಾರೆ.

ಸುದೀಪ್ ಅವರಿಗೆ ಅಭಿಮಾನಿಗಳನ್ನು ಕಂಡರೆ ಸಖತ್ ಪ್ರೀತಿ. ಅವರು ಅಭಿಮಾನಿಗಳ ಜೊತೆ ಹಲವು ವಿಚಾರಗಳನ್ನು ಚರ್ಚೆ ಮಾಡುತ್ತಾರೆ. ಸಾರ್ವಜನಿಕವಾಗಿ ಯಾರಾದರೂ ಸೆಲ್ಫಿ ಕೇಳಿದರೆ ಅವರು ಇಲ್ಲ ಎಂದಿದ್ದು ಕಡಿಮೆ. ಹೀಗಿರುವಾಗ ಸುದೀಪ್​ಗೆ ಬಿಗ್ ಬಾಸ್ ವೇದಿಕೆ ಮೇಲೆ ಅಭಿಮಾನಿಯೊಬ್ಬರು ಸಿಕ್ಕಿದ್ದಾರೆ. ಇದನ್ನು ನೋಡಿ ಸುದೀಪ್​ಗೆ ಖುಷಿ ಆಗಿದೆ. ಅಭಿಮಾನಿ ಜೊತೆ ಅವರು ‘ಮ್ಯಾಕ್ಸ್’ ರಿಲೀಸ್ ಬಗ್ಗೆ ಮಾತನಾಡಿದ್ದಾರೆ.

ಅನುಷಾ ರೈ ಅವರು ಬಿಗ್ ಬಾಸ್​ನಿಂದ ಎಲಿಮಿನೇಟ್ ಆಗಿದ್ದಾರೆ. ಅವರ ಜೊತೆ ವೇದಿಕೆ ಮೇಲೆ ಮಾತನಾಡಿದ್ದಾರೆ ಸುದೀಪ್. ಆಗ ಅನುಷಾ ಅವರು ತಮ್ಮ ಸಹೋದರ ಗೋಪಿನ ಪರಿಚಯಿಸಿದರು. ಅಲ್ಲದೆ, ‘ಅವರು ನಿಮ್ಮ ದೊಡ್ಡ ಅಭಿಮಾನಿ’ ಎಂದು ಸಹೋದರನ ಬಗ್ಗೆ ಹೇಳಿದರು. ಇದನ್ನು ಕೇಳಿ ಸುದೀಪ್​ಗೆ ಖುಷಿ ಆಯಿತು. ಗೋಪಿ ಬಳಿ ವೇದಿಕೆಗೆ ಬರುವಂತೆ ಸುದೀಪ್ ಕೋರಿದರು.

ಗೋಪಿ ಅವರು ಖುಷಿ ಖುಷಿಯಿಂದ ಬಿಗ್ ಬಾಸ್ ವೇದಿಕೆ ಏರಿದರು. ‘ನಿಮ್ಮ ಸಿನಿಮಾಗಳನ್ನು ಮಿಸ್ ಮಾಡದೇ ನೋಡ್ತೀನಿ’ ಎಂದರು. ಇದರಿಂದ ಖುಷಿಯಾದ ಸುದೀಪ್, ‘ಮುಂದಿನ ಸಿನಿಮಾಗಳನ್ನು ನೋಡೋಕೆ ಮರೆಬೇಡಿ’ ಎಂದರು. ‘ನಾನು ನಿಮ್ಮ ಮ್ಯಾಕ್ಸ್ ಚಿತ್ರಕ್ಕೆ ಕಾಯುತ್ತಿದ್ದೇನೆ’ ಎಂದು ಗೋಪಿ ಹೇಳಿದರು.

ಇದನ್ನೂ ಓದಿ: ‘ಭವ್ಯಾ, ಎದ್ದೇಳಿ ಭವ್ಯಾ’; ಗಡದ್ದಾಗಿ ನಿದ್ದೆ ಮಾಡಿದ ಕ್ಯಾಪ್ಟನ್ ನೋಡಿ ಸುದೀಪ್ ರಿಯಾಕ್ಷನ್ ಇದು

‘ನಾನೂ ಕಾಯ್ತಾ ಇದ್ದೇನೆ. ಅದ್ಯಾವ್ ಪುಣ್ಯಾತ್ಮರು ಯಾವಾಗ ದೊಡ್ಮನಸ್ಸು ಮಾಡ್ತಾರೋ ಗೊತ್ತಿಲ್ಲ’ ಎಂದು ಸುದೀಪ್ ಹೇಳಿದರು. ‘ಮ್ಯಾಕ್ಸ್’ ನಿರ್ಮಾಪಕರು ಹಾಗೂ ಸುದೀಪ್ ಮಧ್ಯೆ ವೈಮನಸ್ಸು ಮೂಡಿದೆ ಎಂಬ ಮಾತಿದೆ. ಆದರೆ, ಇದನ್ನು ಸುದೀಪ್ ಅಲ್ಲಗಳೆದಿದ್ದರು. ಈಗ ಅವರು ಹೇಳಿರುವ ಮಾತು ಚರ್ಚೆ ಹುಟ್ಟುಹಾಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us