‘ವಿಕ್ರಾಂತ್ ರೋಣ’ (Vikrant Rona) ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸುತ್ತಿರುವ ಚಿತ್ರ. ಕಿಚ್ಚ ಸುದೀಪ್ ಅಭಿನಯದ ಈ ಚಿತ್ರದ ಟೀಸರ್ ಹಾಗೂ ಪೋಸ್ಟರ್ಗಳು ನಿರೀಕ್ಷೆಯನ್ನು ನೂರ್ಮಡಿಗೊಳಿಸಿದ್ದವು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಫೆಬ್ರವರಿಯಲ್ಲಿ ಚಿತ್ರ ತೆರೆಕಾಣಬೇಕಿತ್ತು. ಆದರೆ ಹಲವು ಅನಿವಾರ್ಯ ಕಾರಣದಿಂದ ರಿಲೀಸ್ ಮುಂದೂಡಲಾಗಿದೆ. ಆದರೆ ಚಿತ್ರತಂಡ ಅಭಿಮಾನಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ. ಇಂದು (ಮಾ.29) ಚಿತ್ರತಂಡ ಹೊಸ ಅಪ್ಡೇಟ್ ನೀಡುವುದಾಗಿ ಘೋಷಿಸಿತ್ತು. ಅದರಂತೆ ಹೊಸ ಸಮಾಚಾರ ಹಂಚಿಕೊಂಡಿದೆ. ನಿರ್ದೇಶಕ ಅನೂಪ್ ಭಂಡಾರಿ ಟ್ವೀಟ್ ಮಾಡಿ, ಯುಗಾದಿಗೆ ಸಂಭ್ರಮಿಸಲು ಅಭಿಮಾನಿಗಳಿಗೆ ಮತ್ತೊಂದು ಕಾರಣ ನೀಡಿದ್ದಾರೆ. ‘ಏಪ್ರಿಲ್ 2ರಂದು ಬೆಳಗ್ಗೆ 9.55ಕ್ಕೆ ವಿಕ್ರಾಂತ್ ರೋಣದ ರಿಲೀಸ್ ಟೀಸರ್ ಬಿಡುಗಡೆ ಮಾಡುತ್ತೇವೆ’ ಎಂದು ಅನೂಪ್ ಟ್ವೀಟ್ ಮೂಲಕ ಘೋಷಿಸಿದ್ದಾರೆ.
ಅನೂಪ್ ಭಂಡಾರಿ ಟ್ವೀಟ್:
Announcing the arrival of the Devil! #VikrantRonaReleaseTeaser at 9:55 AM on Apr 2nd. #VikrantRona @KicchaSudeep @nirupbhandari @neethaofficial@Asli_Jacqueline @JackManjunath @shaliniartss @Alankar_Pandian @ZeeStudios_ pic.twitter.com/0OY1dBuAh4
— Anup Bhandari (@anupsbhandari) March 29, 2022
‘ವಿಕ್ರಾಂತ್ ರೋಣ’ ಇಂಗ್ಲೀಷ್ ಅವತರಣಿಕೆಗೆ ಧ್ವನಿ ನೀಡಿರುವ ಕಿಚ್ಚ:
ವಿಕ್ರಾಂತ್ ರೋಣ ಇಂಗ್ಲೀಷ್ನಲ್ಲೂ ತೆರೆಗೆ ಬರುತ್ತಿದೆ. ವಿಶೇಷವೆಂದರೆ ಇಂಗ್ಲೀಷ್ನಲ್ಲಿ ತಮ್ಮ ಪಾತ್ರಕ್ಕೆ ಸುದೀಪ್ ಅವರೇ ಧ್ವನಿ ನೀಡಿದ್ದಾರೆ. ‘ಕನ್ನಡದ ಸೂಪರ್ ಸ್ಟಾರ್ ಒಬ್ಬರು ತಮ್ಮ ಇಂಗ್ಲೀಷ್ ಚಿತ್ರಕ್ಕೆ ತಮ್ಮದೇ ಧ್ವನಿ ನೀಡುತ್ತಿರೋದು ಇದೇ ಮೊದಲ ಬಾರಿ. ಅಷ್ಟೇ ಅಲ್ಲ, ಭಾರತ ಮಟ್ಟದಲ್ಲೂ ಇಂತಹ ನಾಯಕರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ’ ಎಂದು ಈ ಹಿಂದೆ ಟ್ವೀಟ್ ಮಾಡಿ ಸಂಭ್ರಮ ಹಂಚಿಕೊಂಡಿದ್ದರು ಅನೂಪ್ ಭಂಡಾರಿ. ಮಲಯಾಳಂ ಬಿಟ್ಟು ಉಳಿದ ಎಲ್ಲಾ ಭಾಷೆಗಳಲ್ಲೂ ಸ್ವತಃ ಸುದೀಪ್ ಧ್ವನಿ ನೀಡಿದ್ದಾರೆ ಎಂದು ಹೇಳಲಾಗಿದೆ.
ಈ ಹಿಂದೆ ಚಿತ್ರತಂಡ ‘ವಿಕ್ರಾಂತ್ ರೋಣ’ ಚಿತ್ರದ ಪ್ರಚಾರ ಕಾರ್ಯ ಹೇಗಿರಲಿದೆ ಎಂಬ ಮಾಹಿತಿ ಹಂಚಿಕೊಂಡಿತ್ತು. ಜತೆಗೆ ಚಿತ್ರದ ಹಾಡುಗಳು ಹಾಗೂ ಅವುಗಳ ಬಿಡುಗಡೆ ಸರದಿಯ ಮ್ಯಾಪ್ ಹಂಚಿಕೊಳ್ಳಲಾಗಿತ್ತು. ಅದರಂತೆ ಇದೀಗ ಟೀಸರ್ನ ಮೊದಲ ಅಪ್ಡೇಟ್ ಬಂದಿದೆ. ಇದರ ಬೆನ್ನಲ್ಲೇ ಮತ್ತಷ್ಟು ಅಪ್ಡೇಟ್ ಸಿಗುವ ನಿರೀಕ್ಷೆಯಲ್ಲಿದ್ದಾರೆ ಅಭಿಮಾನಿಗಳು.
‘ವಿಕ್ರಾಂತ್ ರೋಣ’ ಬಿಡುಗಡೆ ಹಾದಿಯ ನಕಾಶೆ ಹೀಗಿದೆ:
Here starts the journey of #VikrantRona towards its release.
Excited and Happy to share this with all you friends.
1st announcement from @anupsbhandari at 10.05am on 29th of this month.@shaliniartss @Kichchacreatiin @JackManjunath @nirupbhandari @neethaofficial @Asli_Jacqueline pic.twitter.com/L7MreCg1gP— Kichcha Sudeepa (@KicchaSudeep) March 26, 2022
ವಿಕ್ರಾಂತ್ ರೋಣ ಚಿತ್ರದಲ್ಲಿ ಬಾಲಿವುಡ್ ಬೆಡಗಿ ಜಾಕ್ವೆಲಿನ್ ಫೆರ್ನಾಂಡಿಸ್ ಕೂಡ ಕಾಣಿಸಿಕೊಂಡಿದ್ದಾರೆ. ಜಾಕ್ ಮಂಜು ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ಬಿ.ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ವಿಲಿಯಂ ಡೇವಿಡ್ ಛಾಯಾಗ್ರಹಣ ಮಾಡಿದ್ದಾರೆ.
ಇದನ್ನೂ ಓದಿ:
Vikrant Rona: ವಿಕ್ರಾಂತ್ ರೋಣದ ‘ಡೆಡ್ ಮ್ಯಾನ್ಸ್ ಆಂಥಮ್’ ರಿಲೀಸ್; ಕಿಚ್ಚನ ನೂತನ ಅವತಾರಕ್ಕೆ ಅಭಿಮಾನಿಗಳು ಫಿದಾ
KGF 2: ಅಧೀರನ ಫ್ಯಾನ್ ಅಂತೆ ರಾಕಿ! ಸಂಜಯ್ ದತ್ ಬಗ್ಗೆ ಯಶ್ ವಿಶೇಷ ಮಾತು
Published On - 10:11 am, Tue, 29 March 22