AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಟಾಕ್ಸಿಕ್’ ನೋಡಲು ಬಂದವರಿಗೆ ಸಿಗಲಿದೆ ‘ಜಾಕಿ 42’ ಸಿನಿಮಾದ ಟ್ರೇಲರ್

ಕಿರಣ್ ರಾಜ್ ಅವರು ‘ಜಾಕಿ 42’ ಸಿನಿಮಾದಲ್ಲಿ ನಟಿಸಿದ್ದು, ಚಿತ್ರಮಂದಿರಗಳಲ್ಲಿ ಇದರ ಟ್ರೇಲರ್ ಬಿತ್ತರ ಆಗಲಿದೆ. ಆಗಸ್ಟ್ 26ರಂದು ‘ಟಾಕ್ಸಿಕ್’ ಸಿನಿಮಾ ಬಿಡುಗಡೆ ಆಗುತ್ತಿದ್ದು, ಈ ಚಿತ್ರದ ಜೊತೆಯಲ್ಲೇ ‘ಜಾಕಿ 42’ ಟ್ರೇಲರ್ ಪ್ರದರ್ಶನ ಮಾಡಲು ತೀರ್ಮಾನಿಸಲಾಗಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

‘ಟಾಕ್ಸಿಕ್’ ನೋಡಲು ಬಂದವರಿಗೆ ಸಿಗಲಿದೆ ‘ಜಾಕಿ 42’ ಸಿನಿಮಾದ ಟ್ರೇಲರ್
Kiran Raj, Yash
ಮದನ್​ ಕುಮಾರ್​
|

Updated on: Aug 25, 2026 | 3:53 PM

Share

ಸದ್ಯಕ್ಕಂತೂ ಎಲ್ಲ ಕಡೆಗಳಲ್ಲಿ ‘ಟಾಕ್ಸಿಕ್’ (Toxic) ಸಿನಿಮಾದ ಹವಾ ಜೋರಾಗಿದೆ. ಯಶ್ ನಟನೆಯ ಈ ಚಿತ್ರವನ್ನು ನೋಡಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತು ಕಾದಿದ್ದಾರೆ. ಕೆಲವೇ ಗಂಟೆಗಳಲ್ಲಿ ‘ಟಾಕ್ಸಿಕ್’ ಸಿನಿಮಾದ ಫಸ್ಟ್ ಶೋ ಆರಂಭ ಆಗಲಿದೆ. ವಿಶೇಷ ಏನೆಂದರೆ, ‘ಟಾಕ್ಸಿಕ್’ ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕರಿಗೆ ‘ಜಾಕಿ 42’ (Jockey 42) ಸಿನಿಮಾದ ಟ್ರೇಲರ್ ನೋಡಲು ಸಿಗಲಿದೆ. ಈ ಬಗ್ಗೆ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ಈ ಸಿನಿಮಾದಲ್ಲಿ ‘ಕನ್ನಡತಿ’ ಖ್ಯಾತಿಯ ನಟ ಕಿರಣ್ ರಾಜ್ (Kiran Raj) ಅವರು ಅಭಿನಯಿಸಿದ್ದಾರೆ.

ಆಗಸ್ಟ್ 26ರ ಮುಂಜಾನೆಯಿಂದಲೇ ಎಲ್ಲ ಕಡೆಗಳಲ್ಲೂ ‘ಟಾಕ್ಸಿಕ್’ ಸಿನಿಮಾ ಅಬ್ಬರಿಸಲಿದೆ. ಕರ್ನಾಟಕದ ಬಹುತೇಕ ಎಲ್ಲ ಚಿತ್ರಮಂದಿರಗಳನ್ನೂ ‘ಟಾಕ್ಸಿಕ್’ ಸಿನಿಮಾ ಆವರಿಸಿಕೊಳ್ಳಲಿದೆ. ಆ ಎಲ್ಲ ಚಿತ್ರಮಂದಿರಗಳಲ್ಲಿ ‘ಟಾಕ್ಸಿಕ್’ ಸಿನಿಮಾದ ನಡುವೆ ‘ಜಾಕಿ 42’ ಚಿತ್ರದ ಟ್ರೇಲರ್ ಬಿತ್ತರ ಮಾಡಲು ಪ್ಲ್ಯಾನ್ ಆಗಿದೆ. ಇದರಿಂದ ‘ಜಾಕಿ 42’ ಸಿನಿಮಾಗೆ ಭರ್ಜರಿ ಪ್ರಚಾರ ಸಿಗಲಿದೆ.

‘ಗೋಲ್ಡನ್ ಗೇಟ್ ಸ್ಟುಡಿಯೋ’ ಮೂಲಕ ಭಾರತಿ ಸತ್ಯನಾರಾಯಣ ನಿರ್ಮಿಸಿರುವ ‘ಜಾಕಿ 42’ ಸಿನಿಮಾಗೆ ಗುರುತೇಜ್ ಶೆಟ್ಟಿ ಅವರು ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದು ನಿರ್ದೇಶನ ಕೂಡ ಮಾಡಿದ್ದಾರೆ. ಶೀರ್ಷಿಕೆಯೇ ಸೂಚಿಸುವಂತೆ ಇದು ಕುದುರೆ ರೇಸ್ ಹಿನ್ನೆಲೆಯ ಸಾಗುವ ಕಥಾಹಂದರವನ್ನು ಹೊಂದಿರುವ ಸಿನಿಮಾ. ಟ್ರೇಲರ್ ಮೂಲಕ ಕಥೆಯ ಬಗ್ಗೆ ಇನ್ನಷ್ಟು ಸುಳಿವು ಸಿಗಲಿದೆ.

‘ಜಾಕಿ 42’ ಸಿನಿಮಾದಲ್ಲಿ ಗುಣಮಟ್ಟದ ಮೇಕಿಂಗ್ ಹಾಗೂ ವಿಶಿಷ್ಠವಾದ ಚಿತ್ರಕಥೆ ಇದೆ ಎಂದು ಚಿತ್ರತಂಡ ಹೇಳಿದೆ. ‘ಟಾಕ್ಸಿಕ್’ ನೋಡಲು ಬರುವ ಪ್ರೇಕ್ಷಕರಿಗೆ ‘ಜಾಕಿ 42’ ಸಿನಿಮಾದ ಟ್ರೇಲರ್​ನಿಂದ ಕುತೂಹಲ ಹೆಚ್ಚಾಗಲಿದೆ. ಚಿತ್ರಮಂದಿರದಲ್ಲೇ ‘ಜಾಕಿ 42’ ಸಿನಿಮಾವನ್ನ ನೋಡಬೇಕು ಎಂಬ ಹಂಬಲ ಹೆಚ್ಚಲಿದೆ ಎಂದು ಚಿತ್ರತಂಡ ಭರವಸೆ ಇಟ್ಟುಕೊಂಡಿದೆ.

ಇದನ್ನೂ ಓದಿ: ‘ಟಾಕ್ಸಿಕ್’ ಸಿನಿಮಾದ ಟಿಕೆಟ್ ಖರೀದಿಸಿದ ಬಾಲಿವುಡ್ ನಿರ್ದೇಶಕ ಸಿದ್ದಾರ್ಥ್ ಆನಂದ್

‘ಜಾಕಿ 42’ ಸಿನಿಮಾದಲ್ಲಿ ಕಿರಣ್ ರಾಜ್ ಜೊತೆ ಹೃತಿಕಾ ಶ್ರೀನಿವಾಸ್, ಯುಕ್ತಾ, ರಾಜೇಂದ್ರ ಕಾರಂತ್, ದೀಪಕ್ ರೈ, ಚೇತನ್ ರೈ ಮಣಿ, ಮಧುಸೂಧನ್ ರಾವ್, ಅರುಣ್ ಆಚಾರ್, ಗಿರೀಶ್ ಹೆಗಡೆ ಮುಂತಾದವರು ನಟಿಸಿದ್ದಾರೆ. ಈಗಾಗಲೇ ಈ ಚಿತ್ರದ ಎರಡು ಹಾಡುಗಳು ಗಮನ ಸೆಳೆದಿವೆ. ಟ್ರೇಲರ್ ಬಳಿಕ ಮತ್ತೊಂದು ಹಾಡನ್ನು ರಿಲೀಸ್ ಮಾಡಲು ಸಿದ್ಧತೆ ನಡೆಯುತ್ತಿದೆ. ಸಿನಿಮಾದ ರಿಲೀಸ್ ದಿನಾಂಕ ಸದ್ಯದಲ್ಲೇ ಗೊತ್ತಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಲಂಚ ಸ್ವೀಕರಿಸುತ್ತಿದ್ದಾಗ ಗುಬ್ಬಿ ಆರ್‌ಎಫ್‌ಒ ಲೋಕಾಯುಕ್ತ ಬಲೆಗೆ
ಲಂಚ ಸ್ವೀಕರಿಸುತ್ತಿದ್ದಾಗ ಗುಬ್ಬಿ ಆರ್‌ಎಫ್‌ಒ ಲೋಕಾಯುಕ್ತ ಬಲೆಗೆ
ಕರ್ತವ್ಯ ಲೋಪ ಕೇಸ್​: ಶಾಸಕ ಉಮೇಶ್ ಮೇಟಿ ಸೊಸೆ ಡಾ ಅಂಕಿತಾ ಯರಗಲ್​​ ವಜಾ
ಕರ್ತವ್ಯ ಲೋಪ ಕೇಸ್​: ಶಾಸಕ ಉಮೇಶ್ ಮೇಟಿ ಸೊಸೆ ಡಾ ಅಂಕಿತಾ ಯರಗಲ್​​ ವಜಾ
ಗಣಪತಿ ಮೆರವಣಿಗೆಗೆ ಇರುವ ಕಂಡೀಷನ್​​, ಈದ್​ ಮಿಲಾದ್​ಗೆ ಯಾಕಿಲ್ಲ?: ಅಶೋಕ್​
ಗಣಪತಿ ಮೆರವಣಿಗೆಗೆ ಇರುವ ಕಂಡೀಷನ್​​, ಈದ್​ ಮಿಲಾದ್​ಗೆ ಯಾಕಿಲ್ಲ?: ಅಶೋಕ್​
ವಿಜಯಪುರದಲ್ಲಿ ಅಗ್ನಿವೀರ್​ ನೇಮಕಾತಿ: 11 ಜಿಲ್ಲೆಗಳಿಂದ ಅಭ್ಯರ್ಥಿಗಳು ಭಾಗಿ
ವಿಜಯಪುರದಲ್ಲಿ ಅಗ್ನಿವೀರ್​ ನೇಮಕಾತಿ: 11 ಜಿಲ್ಲೆಗಳಿಂದ ಅಭ್ಯರ್ಥಿಗಳು ಭಾಗಿ
ಚಾಮರಾಜನಗರದಲ್ಲಿ ಕಾಡಾನೆ ದಾಳಿಗೆ ರೈತ ಬಲಿ
ಚಾಮರಾಜನಗರದಲ್ಲಿ ಕಾಡಾನೆ ದಾಳಿಗೆ ರೈತ ಬಲಿ
ಬಿಗ್ ಬಾಸ್ ಮನೆಯಲ್ಲಿ ಮಿತಿ ಮೀರಿದ ಜಗಳ: ಸೌಂದರ್ಯಾ-ಮಂಜು ನಡುವೆ ಗಲಾಟೆ
ಬಿಗ್ ಬಾಸ್ ಮನೆಯಲ್ಲಿ ಮಿತಿ ಮೀರಿದ ಜಗಳ: ಸೌಂದರ್ಯಾ-ಮಂಜು ನಡುವೆ ಗಲಾಟೆ
ಹುಬ್ಬಳ್ಳಿಯಲ್ಲಿ ಈದ್ಗಾ ಮೈದಾನದಲ್ಲಿ ಎಲ್ಲರ ಗಮನ ಸೆಳೆದ ಕೇಸರಿ ಗಣೇಶ
ಹುಬ್ಬಳ್ಳಿಯಲ್ಲಿ ಈದ್ಗಾ ಮೈದಾನದಲ್ಲಿ ಎಲ್ಲರ ಗಮನ ಸೆಳೆದ ಕೇಸರಿ ಗಣೇಶ
ಮೈಸೂರಿನಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶೋತ್ಸವ
ಮೈಸೂರಿನಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶೋತ್ಸವ
ಬಿಜೆಪಿ ಹೇಳಿದಂಗೆ ಇನ್ಸ್​ಪೆಕ್ಟರ್​ ಧನಂಜಯ್​ನ ಸಸ್ಪೆಂಡ್ ಮಾಡೋಕ್ಕಾಗಲ್ಲ
ಬಿಜೆಪಿ ಹೇಳಿದಂಗೆ ಇನ್ಸ್​ಪೆಕ್ಟರ್​ ಧನಂಜಯ್​ನ ಸಸ್ಪೆಂಡ್ ಮಾಡೋಕ್ಕಾಗಲ್ಲ
ಡಿಕೆಶಿ ನೇತೃತ್ವದ ಸರ್ಕಾರಕ್ಕೆ ಶತದಿನದ ಸಂಭ್ರಮ: ವಿಧಾನಸೌಧಕ್ಕೆ ದೀಪಾಲಂಕಾರ
ಡಿಕೆಶಿ ನೇತೃತ್ವದ ಸರ್ಕಾರಕ್ಕೆ ಶತದಿನದ ಸಂಭ್ರಮ: ವಿಧಾನಸೌಧಕ್ಕೆ ದೀಪಾಲಂಕಾರ