ದೀಪಾವಳಿಗೆ ಕಿಚ್ಚನ ಧಮಾಲ್​: ಹಬ್ಬದಂದು ‘ಪಟಾಕಿ ಪೋರಿ’ ಹಿಂದೆ ಬಿದ್ದ ಸುದೀಪ್​!

| Updated By: ಆಯೇಷಾ ಬಾನು

Updated on: Nov 24, 2020 | 6:39 AM

ಸ್ಯಾಂಡಲ್​ವುಡ್​ ಅಭಿನಯ ಚಕ್ರಚರ್ತಿ ಕಿಚ್ಚ ಸುದೀಪ್​ ಅಭಿನಯದ ಬಹು ನಿರೀಕ್ಷಿತ ಚಿತ್ರ ಕೋಟಿಗೊಬ್ಬ 3 ಈಗಾಗಲೇ ತನ್ನ ವಿಭಿನ್ನ ಟೀಸರ್​ಗಳಿಂದ ಕಿಚ್ಚನ ಅಭಿಮಾನಿಗಳಲ್ಲಿ ಹಾಗೂ ಕರ್ನಾಟಕದ ಚಿತ್ರ ರಸಿಕರಲ್ಲಿ ಸಾಕಷ್ಟು ನಿರೀಕ್ಷೆ ಹೆಚ್ಚಿಸಿದೆ. ಕಿಚ್ಚ ಸುದೀಪ್ ಈ ಹಿಂದೆ​ ನಟಿಸಿದ್ದ ಕೋಟಿಗೊಬ್ಬ 2 ಚಿತ್ರ ಬಾಕ್ಸ್​ ಆಫೀಸ್​ನಲ್ಲಿ ಧೂಳ್​ ಎಬ್ಬಿಸಿದ್ದಲದೆ ಹಲವು ದಾಖಲೆಗಳನ್ನ ನಿರ್ಮಿಸಿತ್ತು. ಇದರಿಂದಾಗಿ ದೇಶದ ಇತರ ಸಿನಿಮಾ ಇಂಡಸ್ಟ್ರಿಗಳಲ್ಲಿ ಕಿಚ್ಚನ ಬೇಡಿಕೆಯು ಹೆಚ್ಚಾಯಿತು. ಜೊತೆಗೆ ಕನ್ನಡ ನಟರು ಕೇವಲ ಕನ್ನಡಕ್ಕೆ ಸಿಮಿತವಾಗಿದ್ದನು ಸುದೀಪ್​ ತೊಡೆದು […]

ದೀಪಾವಳಿಗೆ ಕಿಚ್ಚನ ಧಮಾಲ್​: ಹಬ್ಬದಂದು ‘ಪಟಾಕಿ ಪೋರಿ’ ಹಿಂದೆ ಬಿದ್ದ ಸುದೀಪ್​!
Follow us on

ಸ್ಯಾಂಡಲ್​ವುಡ್​ ಅಭಿನಯ ಚಕ್ರಚರ್ತಿ ಕಿಚ್ಚ ಸುದೀಪ್​ ಅಭಿನಯದ ಬಹು ನಿರೀಕ್ಷಿತ ಚಿತ್ರ ಕೋಟಿಗೊಬ್ಬ 3 ಈಗಾಗಲೇ ತನ್ನ ವಿಭಿನ್ನ ಟೀಸರ್​ಗಳಿಂದ ಕಿಚ್ಚನ ಅಭಿಮಾನಿಗಳಲ್ಲಿ ಹಾಗೂ ಕರ್ನಾಟಕದ ಚಿತ್ರ ರಸಿಕರಲ್ಲಿ ಸಾಕಷ್ಟು ನಿರೀಕ್ಷೆ ಹೆಚ್ಚಿಸಿದೆ.

ಕಿಚ್ಚ ಸುದೀಪ್ ಈ ಹಿಂದೆ​ ನಟಿಸಿದ್ದ ಕೋಟಿಗೊಬ್ಬ 2 ಚಿತ್ರ ಬಾಕ್ಸ್​ ಆಫೀಸ್​ನಲ್ಲಿ ಧೂಳ್​ ಎಬ್ಬಿಸಿದ್ದಲದೆ ಹಲವು ದಾಖಲೆಗಳನ್ನ ನಿರ್ಮಿಸಿತ್ತು. ಇದರಿಂದಾಗಿ ದೇಶದ ಇತರ ಸಿನಿಮಾ ಇಂಡಸ್ಟ್ರಿಗಳಲ್ಲಿ ಕಿಚ್ಚನ ಬೇಡಿಕೆಯು ಹೆಚ್ಚಾಯಿತು. ಜೊತೆಗೆ ಕನ್ನಡ ನಟರು ಕೇವಲ ಕನ್ನಡಕ್ಕೆ ಸಿಮಿತವಾಗಿದ್ದನು ಸುದೀಪ್​ ತೊಡೆದು ಹಾಕಿ ದೇಶದ ಎಲ್ಲಾ ಚಿತ್ರ ರಂಗದಲ್ಲೂ ತಮ್ಮ ಛಾಪೂ ಮೂಡಿಸಿದರು.

ಕೋಟಿಗೊಬ್ಬ 2 ಚಿತ್ರದ ಯಶಸ್ಸಿನ ನಂತರ ಚಿತ್ರ ತಂಡ ಕೋಟಿಗೊಬ್ಬ 3 ಚಿತ್ರವನ್ನು ಕೈಗೆತ್ತಿಕೊಂಡಿದ್ದು, ಈಗಾಗಲೇ ಚಿತ್ರದ ಬಾಗಶಃ ಚಿತ್ರಿಕರಣ ಮುಕ್ತಾಯಗೊಂಡಿದ್ದು, ಈಗ ಚಿತ್ರತಂಡ ಸಿನಿಮಾದ ಮೊಸ್ಟ್​ ಪಾಪ್ಯುಲರ್​ ಸಾಂಗ್ ಪಟ್ಟಾಕಿ ಪೊರಿಯೋ ಸಾಂಗ್​ನ ಮೇಕಿಂಗ್​ ವಿಡಿಯೋವನ್ನು ಬಿಡುಗಡೆಗೊಳಿಸಿದೆ.

ಪಟಾಕಿ ಪೋರಿಯೋ ಅನ್ನೋ ಈ ಹಾಡಿನಲ್ಲಿ ಸ್ಯಾಂಡಲ್​ವುಡ್​ನಲ್ಲಿ ಯುವಕರ ಹೃದಯ ಗೆದ್ದಿರುವ ನಟಿ ಆಶಿಕ ರಂಗನಾಥ್​ ಮೈಚಳಿ ಬಿಟ್ಟು ನೃತ್ಯ ಮಾಡಿದ್ದಾರೆ. ಜೊತೆಗೆ ಸುದೀಪ್​ ಸಹ ನಾನೇನೂ ಕಡಿಮೆ ಇಲ್ಲವೆಂಬಂತೆ ಡಾನ್ಸ್ ಮಾಡಿದ್ದಾರೆ. ಒಟ್ಟಾರೆ ದೀಪಾವಳಿ ಹಬ್ಬದಂದು ಈ ಸಾಂಗ್​ನ ಮೇಕಿಂಕ್​ ವಿಡಿಯೋ ರಿಲೀಸ್​ ಆಗಿರುವುದು ಸುದೀಪ್ ಅಭಿಮಾನಿಗಳ ಸಂಭ್ರಮ ಹೆಚ್ಚಿಸಿದೆ.

Published On - 2:01 pm, Sun, 15 November 20