AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

11ನೇ ದಿನವೂ ಅದ್ಭುತ ಕಲೆಕ್ಷನ್ ಮಾಡಿದ ‘ಲವ್ ಮಾಕ್ಟೇಲ್ 3’ ಸಿನಿಮಾ; ಒಟ್ಟಾರೆ ಗಳಿಕೆ ಎಷ್ಟು?

'ಲವ್ ಮಾಕ್ಟೇಲ್ 3' ಸಿನಿಮಾ 11 ದಿನಗಳಲ್ಲಿ 11.15 ಕೋಟಿ ರೂಪಾಯಿ ಗಳಿಸಿ ಭರ್ಜರಿ ಯಶಸ್ಸು ಕಂಡಿದೆ. 'ಧುರಂಧರ್ 2' ಅಂತಹ ದೊಡ್ಡ ಚಿತ್ರದ ಪೈಪೋಟಿ ನಡುವೆಯೂ ಫ್ಯಾಮಿಲಿ ಆಡಿಯನ್ಸ್ ಮೆಚ್ಚುಗೆ ಗಳಿಸಿ ಲಾಭದ ಹಾದಿಯಲ್ಲಿದೆ. ಸಿಗರೇಟ್, ಮದ್ಯ, ಡಬಲ್ ಮೀನಿಂಗ್ ಇಲ್ಲದ ಶುದ್ಧ ಮನರಂಜನೆ, ಚಿತ್ರದ ಯಶಸ್ಸಿಗೆ ಕಾರಣವಾಗಿದೆ.

11ನೇ ದಿನವೂ ಅದ್ಭುತ ಕಲೆಕ್ಷನ್ ಮಾಡಿದ ‘ಲವ್ ಮಾಕ್ಟೇಲ್ 3’ ಸಿನಿಮಾ; ಒಟ್ಟಾರೆ ಗಳಿಕೆ ಎಷ್ಟು?
ಲವ್ ಮಾಕ್ಟೇಲ್ 3
ರಾಜೇಶ್ ದುಗ್ಗುಮನೆ
|

Updated on: Mar 30, 2026 | 7:25 AM

Share

‘ಧುರಂಧರ್ 2’ ಸಿನಿಮಾ ರಿಲೀಸ್ ಆಗುವಾಗ ಎಷ್ಟು ನಿರೀಕ್ಷೆಗಳು ಇದ್ದವು ಎಂಬುದನ್ನು ಹೊಸದಾಗಿ ಹೇಳಬೇಕಿಲ್ಲ. ಈ ಚಿತ್ರದ ಎದುರು ಮತ್ತೊಂದು ಸಿನಿಮಾ ತೆರೆಗೆ ಬರಬೇಕು ಎಂದರೆ ಅದು ಸಣ್ಣ ವಿಷಯ ಅಲ್ಲ. ಆದಾಗ್ಯೂ ಇಂತಹ ಚಾಲೆಂಜ್​​​ ಅನ್ನು ‘ಲವ್ ಮಾಕ್ಟೇಲ್ 3’ ಸಿನಿಮಾ (Love Mocktail 3) ಸ್ವೀಕರಿಸಿತು. ಈ ಚಿತ್ರ ಫ್ಯಾಮಿಲಿ ಆಡಿಯನ್ಸ್​​ಗೆ ಇಷ್ಟ ಆಗಿದೆ. ಹೀಗಾಗಿ, ಸಿನಿಮಾದ ಕಲೆಕ್ಷನ್ ಒಳ್ಳೆಯ ರೀತಿಯಲ್ಲೇ ಆಗಿದೆ. ಎರಡನೇ ಭಾನುವಾರವೂ ಸಿನಿಮಾ ಉತ್ತಮ ಗಳಿಕೆ ಮಾಡಿದೆ.

‘ಧುರಂಧರ್ 2’ ಸಿನಿಮಾ ಸಾವಿರಾರು ಕೋಟಿ ರೂಪಾಯಿ ಗಳಿಕೆ ಮಾಡುತ್ತಿದೆ. ಈ ಚಿತ್ರದಲ್ಲಿ ದೊಡ್ಡ ದೊಡ್ಡ ಸ್ಟಾರ್​​ಗಳಿವೆ. ಇದರ ಜೊತೆಗೆ ಇದು ಪ್ಯಾನ್ ಇಂಡಿಯಾ ಸಿನಿಮಾ. ಆದರೆ, ‘ಲವ್ ಮಾಕ್ಟೇಲ್ 3’ ಸಿನಿಮಾ ಆ ರೀತಿ ಅಲ್ಲ. ಇದರ ಬಜೆಟ್ ಕಡಿಮೆ. ಡಾರ್ಲಿಂಗ್ ಕೃಷ್ಣ ಚಿತ್ರದ ಹೀರೋ, ನಿರ್ದೇಶಕ. ‘ಲವ್ ಮಾಕ್ಟೇಲ್’ ಹಾಗೂ ‘ಲವ್ ಮಾಕ್ಟೇಲ್ 2’ ಚಿತ್ರದ ಗೆಲುವು ‘ಲವ್ ಮಾಕ್ಟೇಲ್ 3’ ಸಿನಿಮಾ ಮೇಲೆ ನಿರೀಕ್ಷೆ ಮೂಡಲು ಪ್ರಮುಖ ಕಾರಣ.

‘ಲವ್ ಮಾಕ್ಟೇಲ್ 3’ ಚಿತ್ರ 11 ದಿನಕ್ಕೆ 11.15 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ. ಭಾನುವಾರ ಸಿನಿಮಾ 1.23 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಮುಂದಿನ ದಿನಗಳಲ್ಲಿ ಸಿನಿಮಾದ ಕಲೆಕ್ಷನ್ ತಗ್ಗುವ ಸಾಧ್ಯತೆ ಇದೆ. ಸದ್ಯ ಸಿನಿಮಾ ಈಗಾಗಲೇ ಲಾಭದಲ್ಲೇ ಇದೆ ಎಂದು ಹೇಳಲಾಗುತ್ತಾ ಇದೆ.

‘ಲವ್ ಮಾಕ್ಟೇಲ್ 3’ ಚಿತ್ರದಲ್ಲಿ ಸಿಗರೇಟ್, ಮದ್ಯ ಬಳಕೆಯ ದೃಶ್ಯ ಇಲ್ಲ. ಯಾವುದೇ ಡಬಲ್ ಮೀನಿಂಗ್ ಜೋಕ್ ಇಲ್ಲ. ಹೊಡೆದಾಟ-ಬಡಿದಾಟಕ್ಕಂತೂ ಅವಕಾಶವೇ ಇಲ್ಲ. ಈ ಎಲ್ಲಾ ಕಾರಣದಿಂದ ಸಿನಿಮಾ ಫ್ಯಾಮಿಲಿ ಆಡಿಯನ್ಸ್​ಗೆ ಇಷ್ಟ ಆಗಿದೆ. ಈ ಚಿತ್ರದ ಒಟಿಟಿ ಹಾಗೂ ಟಿವಿ ಹಕ್ಕು ಒಳ್ಳೆಯ ರೇಟ್​​ಗೆ ಮಾರಾಟ ಆಗಿವೆ ಎಂದು ಹೇಳಲಾಗುತ್ತಾ ಇದೆ. ಈ ಚಿತ್ರದ ಹಾಡುಗಳು ಕೂಡ ಪ್ರೇಕ್ಷಕರಿಗೆ ಇಷ್ಟ ಆಗಿದೆ.

ಇದನ್ನೂ ಓದಿ:‘ಧುರಂಧರ್ 2’ ಎದುರು ತೆರೆಕಂಡರೂ ಸೂಪರ್ ಹಿಟ್ ಆದ ‘ಲವ್ ಮಾಕ್ಟೇಲ್ 3’ 

ಇತ್ತೀಚೆಗೆ ‘ಲವ್ ಮಾಕ್ಟೇಲ್ 3’ ಸಿನಿಮಾ ವಿವಾದ ಸೃಷ್ಟಿ ಮಾಡಿತ್ತು. ಈ ಚಿತ್ರದ ಕಥೆ ನಮ್ಮದು ಎಂದು ರಾಘವೇಂದ್ರ ನಾಯ್ಕ್ ಅವರು ದೂರಿದ್ದರು. ಗುರು ದೇಶಪಾಂಡೆ ಕೂಡ ರಾಘವೇಂದ್ರ ಅವರಿಗೆ ಧ್ವನಿಯಾದರು. ಈ ಪ್ರಕರಣ ನಂತರ ಸುಖಾಂತ್ಯ ಕಂಡಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More