ನಿಮಗೊಂದು ಸಿಹಿ ಸುದ್ದಿ: ಇದು ಪುರುಷನೊಬ್ಬನ ‘ಗರ್ಭಾ’ವಸ್ಥೆಯ ಕಥೆ!

ಭಾರತೀಯ ಚಿತ್ರರಂಗದಲ್ಲಿ LGBTQ ಸಮುದಾಯದ ಕುರಿತು ಕಥಾ ಹಂದರವಿರುವ ಸಾಕಷ್ಟು ಸಿನಿಮಾಗಳು ರೂಪುಗೊಂಡಿವೆ. ಈಗ  ಕನ್ನಡದಲ್ಲಿ ಮೊಟ್ಟ ಮೊದಲ ಬಾರಿಗೆ ಗರ್ಭ ಧರಿಸಿದ ಪುರುಷನ ವಿಚಿತ್ರ ಕಥೆಯೊಂದು ವೆಬ್ ಸಿರೀಸ್ ರೂಪದಲ್ಲಿ ಅನಾವರಣಗೊಳ್ಳಲು ತಯಾರಿ ನಡೆಸಿದೆ! ಹೆಣ್ಣು ಗರ್ಭ ಧರಿಸಿದಾಗ, ಪರೀಕ್ಷಿಸಿದ ವೈದ್ಯರು ʻಎ ಸ್ವೀಟ್ ನ್ಯೂಸ್ ಫಾರ್ ಯೂʼ ಅನ್ನೋದು ವಾಡಿಕೆ. ಅದೇ ಒಬ್ಬ ಪುರುಷನನ್ನು ಗರ್ಭ ಪರೀಕ್ಷೆಗೆ ಒಳಪಡಿಸಿದ ನಂತರ ʻನಿಮಗೊಂದು ಸಿಹಿ ಸುದ್ದಿʼ ಅಂದರೆ, ಎಂಥವರಿಗಾದರೂ ಆಶ್ಚರ್ಯವಾಗುವುದಿಲ್ವಾ? ಒಬ್ಬ ಗಂಡು ಗರ್ಭ ಧರಿಸುತ್ತಾನೆ […]

ನಿಮಗೊಂದು ಸಿಹಿ ಸುದ್ದಿ: ಇದು ಪುರುಷನೊಬ್ಬನ ‘ಗರ್ಭಾ’ವಸ್ಥೆಯ ಕಥೆ!
Follow us
ಆಯೇಷಾ ಬಾನು
| Updated By: KUSHAL V

Updated on: Aug 26, 2020 | 3:32 PM

ಭಾರತೀಯ ಚಿತ್ರರಂಗದಲ್ಲಿ LGBTQ ಸಮುದಾಯದ ಕುರಿತು ಕಥಾ ಹಂದರವಿರುವ ಸಾಕಷ್ಟು ಸಿನಿಮಾಗಳು ರೂಪುಗೊಂಡಿವೆ. ಈಗ  ಕನ್ನಡದಲ್ಲಿ ಮೊಟ್ಟ ಮೊದಲ ಬಾರಿಗೆ ಗರ್ಭ ಧರಿಸಿದ ಪುರುಷನ ವಿಚಿತ್ರ ಕಥೆಯೊಂದು ವೆಬ್ ಸಿರೀಸ್ ರೂಪದಲ್ಲಿ ಅನಾವರಣಗೊಳ್ಳಲು ತಯಾರಿ ನಡೆಸಿದೆ!

ಹೆಣ್ಣು ಗರ್ಭ ಧರಿಸಿದಾಗ, ಪರೀಕ್ಷಿಸಿದ ವೈದ್ಯರು ʻಎ ಸ್ವೀಟ್ ನ್ಯೂಸ್ ಫಾರ್ ಯೂʼ ಅನ್ನೋದು ವಾಡಿಕೆ. ಅದೇ ಒಬ್ಬ ಪುರುಷನನ್ನು ಗರ್ಭ ಪರೀಕ್ಷೆಗೆ ಒಳಪಡಿಸಿದ ನಂತರ ʻನಿಮಗೊಂದು ಸಿಹಿ ಸುದ್ದಿʼ ಅಂದರೆ, ಎಂಥವರಿಗಾದರೂ ಆಶ್ಚರ್ಯವಾಗುವುದಿಲ್ವಾ? ಒಬ್ಬ ಗಂಡು ಗರ್ಭ ಧರಿಸುತ್ತಾನೆ ಅನ್ನೋ ಕಲ್ಪನೆಯೇ ಒಂಥರಾ ವಿಲಕ್ಷಣ ಭಾವನೆ ಉಂಟುಮಾಡುತ್ತದೆ. ಹೀಗಿರುವಾಗ ಅದನ್ನು ವೆಬ್ ಸರಣಿಯ ಸರಕಾಗಿಸಿರುವ ತಂಡದ ಧೈರ್ಯ ನಿಜಕ್ಕೂ ಬಲು ದೊಡ್ಡದು. ಸದ್ಯ ಲೋಕಾರ್ಪಣೆಗೊಂಡಿರುವ ʻನಿಮಗೊಂದು ಸಿಹಿ ಸುದ್ದಿʼಯ ಪೋಸ್ಟರ್​ ವ್ಯಾಪಕವಾಗಿ ವೈರಲ್ ಆಗಿದೆ.

ಈ ಯುವಕ ಗರ್ಭ ಧರಿಸಿದ್ದು ಹೇಗೆ? ಕನ್ನಡದ ಮಟ್ಟಿಗೆ ಇದು ಹೊಚ್ಚಹೊಸ ಕಾನ್ಸೆಪ್ಟ್ ಆಗಿರುವುದರಿಂದ ನೋಡಿದ ಎಲ್ಲರ ಗಮನ ಸೆಳೆದಿದೆ. ಒಂದೇ ದಿನದಲ್ಲಿ ಈ ಪೋಸ್ಟರ್ 8 ಲಕ್ಷಕ್ಕೂ ಅಧಿಕ views ಪಡೆದಿದೆ. ವೆಬ್​ ಸಿರೀಸ್​ನಲ್ಲಿ ಅರ್ಜುನ್ ಮತ್ತು ಡಿಡಿ ಎಂಬುವ ಇಬ್ಬರು ಒಳ್ಳೇ ದೋಸ್ತಿಗಳು. ಅದರಲ್ಲಿ ಅರ್ಜುನ್ ಸೆಲೆಬ್ರಿಟಿ ಬಾಣಸಿಗನಾಗಿ ಕಾರ್ಯ ನಿರ್ವಹಿಸುತ್ತಿರುತ್ತಾರೆ. ಅದೊಂದು ದಿನ ಅರ್ಜುನ್ ಉದರದಲ್ಲಿ ಕೂಸೊಂದು ಪ್ರತಿಷ್ಠಾಪನೆಗೊಂಡಿರುತ್ತದೆ. ಈ ಯುವಕ ಗರ್ಭ ಧರಿಸಿದ್ದು ಹೇಗೆ? ಹಿಂದಿನ ತಿಂಗಳಲ್ಲಿ ಏನೇನು ವಿಚಾರಗಳು ಘಟಿಸಿದವು? ಈ ನಡುವೆ ಗರ್ಭ ಧರಿಸಿದ ಹುಡುಗನ ಪ್ರಿಯತಮೆ ಇದಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾಳೆ? ಏನೆಲ್ಲಾ ಅವಾಂತರಗಳು ಎದುರಾಗುತ್ತವೆ? ಎಂದು ಹೀಗೆ ಉದ್ಭವಿಸುವ ಪ್ರತಿಯೊಂದು ಗೊಂದಲಗಳು ಪ್ರೇಕ್ಷಕರನ್ನು ಹೇಗೆ ನಗುವಿನಲ್ಲಿ ಮುಳುಗಿಸುತ್ತದೆ ಅನ್ನೋ ಕೌತುಕಗಳೆಲ್ಲಾ 8 ಸಂಚಿಕೆಗಳ ಈ ರೋಚಕ ಮತ್ತು ಹಾಸ್ಯಭರಿತ ವೆಬ್ ಸರಣಿಯಲ್ಲಿ ಬಿಚ್ಚಿಕೊಳ್ಳಲಿದೆ.

ಗೋಲ್ಡ್ ಚೈನ್ ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ ಹೊಸ ಪ್ರಯೋಗವಿದು. ನಟ ಉಪೇಂದ್ರರ  ಟೋಪಿವಾಲಾ ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿದ್ದ ಸುಧೀಂದ್ರ ನಾಡಿಗರ್ ಆರ್ ಈ ವೆಬ್ ಸಿರೀಸ್ ಮೂಲಕ ನಿರ್ದೇಶಕರಾಗಿದ್ದಾರೆ. ರಂಗಭೂಮಿ ಹಿನ್ನೆಲೆಯ ಹೊಸ ಪ್ರತಿಭೆ ರಘು ಭಟ್ ಗರ್ಭ ಧರಿಸಿದ ಪುರುಷನ ಪಾತ್ರದಿಂದ ಪರಿಚಯಗೊಳ್ಳುತ್ತಿದ್ದಾರೆ. ಇಷ್ಟಕಾಮ್ಯ ಸೇರಿದಂತೆ ಕನ್ನಡದ ಕೆಲವು ಸಿನಿಮಾಗಳಲ್ಲಿ ನಟಿಸಿರುವ ಕಾವ್ಯಾ ಶೆಟ್ಟಿ ನಾಯಕಿಯಾಗಿದ್ದಾರೆ. ಉರ್ವಿ ಸಿನಿಮಾದ ಮೂಲಕ ಛಾಯಾಗ್ರಹಣದಲ್ಲಿ ಹೊಸ ಸಾಧ್ಯತೆಗಳನ್ನು ತೋರಿಸಿಕೊಟ್ಟ ಆನಂದ್ ಸುಂದರೇಶ್ ಛಾಯಾಗ್ರಹಣವಿರುವ ಈ ಸರಣಿಯ ಕ್ರಿಯೇಟೀವ್ ತಂಡದಲ್ಲಿ ಪ್ರಿಯಾಂಕಾ ಎಂ ಆರ್, ಜಗದೀಶ್ ಸಿಂಗ್, ಯೋಗೇಶ್ ನಂಜಪ್ಪ, ಪ್ರಕಾಶ್ ಎಸ್ಆರ್, ಅನಿಲ್ ಕುಮಾರ್, ಅಕ್ಷೋಭ್ಯಾ, ಪ್ರಶಾಂತ್ ಆರ್ ಮತ್ತು ಮಂಜುನಾಥ್ ಸಿಂಗ್, ಪ್ರಜ್ವಲ್ ಮುದ್ದಿ ಕೆಲಸ ಮಾಡಲಿದ್ದಾರೆ.

ಕಾಫಿ ಡೇ ಈ ಸರಣಿಯ ಬ್ರಾಂಡ್ ಪಾರ್ಟ್ನರ್ ಕೂಡಾ ಆಗಿರುವುದರಿಂದ ಅಲ್ಲಿಯೇ ʻನಿಮಗೊಂದು ಸಿಹಿ ಸುದ್ದಿʼಯ ಪೋಸ್ಟರ್​ನ ವಿನೂತನವಾಗಿ ಅನಾವರಣ ಮಾಡಲಾಗಿದೆ. ಜನಸಾಮಾನ್ಯರೇ ಇದ್ದಲ್ಲಿಂದಲೇ ಸ್ಕ್ರಾಚ್ ಕಾರ್ಡ್ ಲಿಂಕ್ ಶೇರ್ ಮಾಡುವ ಮೂಲಕ ಫಸ್ಟ್ ಲುಕ್ ಲಾಂಚ್ ಮಾಡಿದ್ದಾರೆ. ಮೊದಲೇ ಬಿಡುಗಡೆಗೊಂಡಿದ್ದ ಲಿಂಕ್ ಕ್ಲಿಕ್ ಮಾಡಿದರೆ, ಅದು ರೀ ಡೈರೆಕ್ಟ್ ಮಾಡುತ್ತದೆ. ಅಲ್ಲಿ ಸ್ಕ್ರಾಚ್ ಮಾಡಬಹುದು, ಫೇಸ್ ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಬಹುದು. ಹಾಗೆ ಶೇರ್ ಮಾಡಿದ ಕೆಲವರನ್ನು ಆಯ್ಕೆ ಮಾಡಿಕೊಂಡು, ಅವರಿಗೆ ನಡೆಯಲಿರುವ ಸಮಾರಂಭದಲ್ಲಿ ವಿಶೇಷ ಉಡುಗೊರೆಯನ್ನೂ ಸಹ ನೀಡಲಾಗುತ್ತಿದೆ.

ಬದಲಾಗುತ್ತಿರುವ ಕಾಲಘಟ್ಟದಲ್ಲಿ ಜನ ಪ್ರತಿಯೊಂದರಲ್ಲೂ ಹೊಸತನವನ್ನು ನಿರೀಕ್ಷಿಸುತ್ತಿದ್ದಾರೆ. ಹೊಸತು ಅನ್ನೋ ಪದಕ್ಕೇ ಅನ್ವರ್ಥವಾಗಿರುವ ಆಲೋಚನೆಯೊಂದಿಗೆ ಯುವ ಪ್ರತಿಭೆಗಳೆಲ್ಲಾ ಸೇರಿ ʻನಿಮಗೊಂದು ಸಿಹಿ ಸುದ್ದಿʼ ನೀಡಲು ಮುಂದಾಗಿದೆ. ಸದ್ಯ ಕಾನಿ ಸ್ಟುಡಿಯೋ ವಿನ್ಯಾಸಗೊಳಿಸಿರುವ ಪೋಸ್ಟರ್ ಎಲ್ಲರ ಗಮನ ಸೆಳೆದಿರುವುದರೊಂದಿಗೆ, ಚರ್ಚೆಯ ವಸ್ತುವೂ ಆಗಿದೆ!

ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ; ರಾಮಲಲ್ಲಾಗೆ ಮಹಾ ಅಭಿಷೇಕ
ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ; ರಾಮಲಲ್ಲಾಗೆ ಮಹಾ ಅಭಿಷೇಕ
ವಿಜಯೇಂದ್ರ ಸಭೆ ನಡೆಸಿದರೆ ನನಗ್ಯಾಕೆ ಹಿನ್ನಡೆಯಾದೀತು: ಬಸನಗೌಡ ಯತ್ನಾಳ್
ವಿಜಯೇಂದ್ರ ಸಭೆ ನಡೆಸಿದರೆ ನನಗ್ಯಾಕೆ ಹಿನ್ನಡೆಯಾದೀತು: ಬಸನಗೌಡ ಯತ್ನಾಳ್
ತ್ಯಾಗದ ಪ್ರತಿಫಲ;ರಾಮಮಂದಿರ ಪ್ರತಿಷ್ಠಾಪನೆ ವಾರ್ಷಿಕೋತ್ಸವ ಕುರಿತು ಮೋದಿ
ತ್ಯಾಗದ ಪ್ರತಿಫಲ;ರಾಮಮಂದಿರ ಪ್ರತಿಷ್ಠಾಪನೆ ವಾರ್ಷಿಕೋತ್ಸವ ಕುರಿತು ಮೋದಿ
ನಿಖಿಲ್ ರಾಜ್ಯಾಧ್ಯಕ್ಷನಾಗಲಿ ಅಂತ ನನ್ನ ಮಗ ಹೇಳಿದರೆ ತಪ್ಪೇನು? ಜಿಟಿಡಿ
ನಿಖಿಲ್ ರಾಜ್ಯಾಧ್ಯಕ್ಷನಾಗಲಿ ಅಂತ ನನ್ನ ಮಗ ಹೇಳಿದರೆ ತಪ್ಪೇನು? ಜಿಟಿಡಿ
ಜೆಡಿಎಸ್ ಸಭೆಗೂ ಹೋಗಲ್ಲ, ಸಂಘಟನೆಗೂ ಬರಲ್ಲ: ಜಿಟಿ ದೇವೇಗೌಡ ಖಡಕ್ ಮಾತು
ಜೆಡಿಎಸ್ ಸಭೆಗೂ ಹೋಗಲ್ಲ, ಸಂಘಟನೆಗೂ ಬರಲ್ಲ: ಜಿಟಿ ದೇವೇಗೌಡ ಖಡಕ್ ಮಾತು
ಸಿದ್ದರಾಮಯ್ಯ, ನಾನು ಪಕ್ಷ ಹೇಳಿದಂತೆ ಸರ್ಕಾರ ನಡೆಸುತ್ತೇವೆ: ಶಿವಕುಮಾರ್
ಸಿದ್ದರಾಮಯ್ಯ, ನಾನು ಪಕ್ಷ ಹೇಳಿದಂತೆ ಸರ್ಕಾರ ನಡೆಸುತ್ತೇವೆ: ಶಿವಕುಮಾರ್
ಕಾಂಗ್ರೆಸ್ ಮುಖಂಡರಿಗೆ ಹೈಕಮಾಂಡ್ ನೀಡುವ ಆದೇಶವೇ ಅಂತಿಮ: ಪರಮೇಶ್ವರ್
ಕಾಂಗ್ರೆಸ್ ಮುಖಂಡರಿಗೆ ಹೈಕಮಾಂಡ್ ನೀಡುವ ಆದೇಶವೇ ಅಂತಿಮ: ಪರಮೇಶ್ವರ್
ನಕ್ಸಲ್ ನಾಯಕ ವಿಕ್ರಂಗೌಡನ ಎನ್ಕೌಂಟರ್ ಸಹ ಸಂಶಯ ಹುಟ್ಟಿಸುತ್ತಿದೆ: ಅಣ್ಣಾಮಲೈ
ನಕ್ಸಲ್ ನಾಯಕ ವಿಕ್ರಂಗೌಡನ ಎನ್ಕೌಂಟರ್ ಸಹ ಸಂಶಯ ಹುಟ್ಟಿಸುತ್ತಿದೆ: ಅಣ್ಣಾಮಲೈ
ಮುಡಾ ಅಧಿಕಾರಿಗಳು ತಾಯಿಯ ಒಡಲನ್ನು ಬಗೆಯುತ್ತಿದ್ದಾರೆ: ಸ್ನೇಹಮಯಿ ಕೃಷ್ಣ
ಮುಡಾ ಅಧಿಕಾರಿಗಳು ತಾಯಿಯ ಒಡಲನ್ನು ಬಗೆಯುತ್ತಿದ್ದಾರೆ: ಸ್ನೇಹಮಯಿ ಕೃಷ್ಣ
ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ
ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ