ಸಂಕ್ರಾಂತಿಗೆ ‘ಮ್ಯಾಂಗೊ ಪಚ್ಚ’, ಪರಭಾಷೆ ಸಿನಿಮಾಗಳೆದುರು ಗೆಲ್ಲುತ್ತಾರಾ ಜೂನಿಯರ್ ಕಿಚ್ಚ?

Mango Pachcha movie: ಸುದೀಪ್ ಅವರ ಅಳಿಯ ಸಂಚಿತ್ ಸಂಜೀವ್ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಸಂಚಿತ್ ಅವರ ಮೊದಲ ಸಿನಿಮಾ ‘ಮ್ಯಾಂಗೊ ಪಚ್ಚ’. ಸಿನಿಮಾದ ಹೆಸರಿನಂತೆ ಕತೆಯೂ ಭಿನ್ನವಾಗಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಇದೀಗ ಚಿತ್ರತಂಡ ಸಿನಿಮಾದ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿದೆ. ಭಾರಿ ಆತ್ಮವಿಶ್ವಾಸದೊಂದಿಗೆ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ ಮಾಡಿದೆ. ಗೆಲ್ಲುತ್ತಾರಾ ಜೂನಿಯರ್ ಸುದೀಪ್.

ಸಂಕ್ರಾಂತಿಗೆ ‘ಮ್ಯಾಂಗೊ ಪಚ್ಚ’, ಪರಭಾಷೆ ಸಿನಿಮಾಗಳೆದುರು ಗೆಲ್ಲುತ್ತಾರಾ ಜೂನಿಯರ್ ಕಿಚ್ಚ?
Mango Pachcha

Updated on: Nov 19, 2025 | 6:23 PM

ನಟ ಸುದೀಪ್ (Sudeep) ಅವರ ಅಳಿಯ ಸಂಚಿತ್ ಸಂಜೀವ್ ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದಾರೆ. ಅವರ ನಟನೆಯ ‘ಮ್ಯಾಂಗೊ ಪಚ್ಚ’ ಸಿನಿಮಾದ ಚಿತ್ರೀಕರಣ ಬಹುತೇಕ ಅಂತ್ಯವಾಗಿದ್ದು, ಪೋಸ್ಟ್ ಪ್ರೊಡಕ್ಷನ್ ಚಾಲ್ತಿಯಲ್ಲಿದೆ. ಜೊತೆಗೆ ಸಿನಿಮಾದ ಪ್ರಚಾರವನ್ನೂ ಸಹ ಚಿತ್ರತಂಡ ಆರಂಭ ಮಾಡಿದೆ. ಸಿನಿಮಾದ ಟೀಸರ್, ಕೆಲ ಲುಕ್​​ಗಳು ಈಗಾಗಲೇ ಬಿಡುಗಡೆ ಆಗಿದ್ದು ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇದೀಗ ಸಿನಿಮಾದ ಬಿಡುಗಡೆ ದಿನಾಂಕವನ್ನೂ ಸಹ ಘೋಷಣೆ ಮಾಡಲಾಗಿದೆ. ಭಾರಿ ಪೈಪೋಟಿ ಇರುವ ದಿನವನ್ನೇ ಬಿಡುಗಡೆಗೆ ಆಯ್ಕೆ ಮಾಡಿಕೊಂಡಿದೆ ಚಿತ್ರತಂಡ.

ಮ್ಯಾಂಗೋ ಪಚ್ಚ ಇದೀಗ ಮುಂದಿನ ವರ್ಷ ಸಂಕ್ರಾಂತಿಗೆ ಅಂದರೆ ಜನವರಿ 15ಕ್ಕೆ ಅದ್ದೂರಿಯಾಗಿ ತೆರೆಗೆ ಬರುಲು ಸಜ್ಜಾಗಿದೆ. ಮುಂದಿನ ವರ್ಷಾರಂಭದಲ್ಲೇ ಸಂಚಿತ್ ಮೊದಲ ಬಾರಿಗೆ ದೊಡ್ಡ ಪರದೆ ಮೇಲೆ ಅಬ್ಬರಿಸಲಿದ್ದಾರೆ. ಸಂಕ್ರಾಂತಿ ಹಬ್ಬಕ್ಕೆ ಸಿನಿಮಾ ಬಿಡುಗಡೆ ಆಗಲಿದ್ದು, ಸಂಕ್ರಾಂತಿಗೆ ತೆಲುಗು ತಮಿಳಿನ ಹಲವು ದೊಡ್ಡ ಬಜೆಟ್​​ನ, ದೊಡ್ಡ ಸ್ಟಾರ್ ನಟರ ಸಿನಿಮಾಗಳು ಸಹ ಬಿಡುಗಡೆ ಆಗಲಿವೆ. ಅವುಗಳ ನಡುವೆ ‘ಮ್ಯಾಂಗೊ ಪಚ್ಚ’ ಮ್ಯಾಜಿಕ್ ಮಾಡಲಿದೆಯೇ ಕಾದು ನೋಡಬೇಕಿದೆ. ಚಿತ್ರತಂಡವು ಭಾರಿ ಆತ್ಮವಿಶ್ವಾಸದಲ್ಲಿಯೇ ಸಿನಿಮಾದ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿದೆ.

ಕಳೆದ ಕೆಲವು ವರ್ಷಗಳಿಂದ ಸಂಕ್ರಾಂತಿ ಹಬ್ಬಕ್ಕೆ ಕನ್ನಡದ ಯಾವ ಸಿನಿಮಾಗಳು ರಿಲೀಸ್ ಆಗುತ್ತಿರಲಿಲ್ಲ. ಸಂಕ್ರಾಂತಿ ಪರಭಾಷೆಯ ಸ್ಟಾರ್ ಸಿನಿಮಾಗಳಿಗೆ ಮಾತ್ರ ಮೀಸಲಾಗಿತ್ತು. ಪರಭಾಷೆಯ ದೊಡ್ಡ ದೊಡ್ಡ ಸ್ಟಾರ್ ಸಿನಿಮಾಗಳು ರಿಲೀಸ್ ಆಗುತ್ತಿತ್ತು. ಹಾಗಾಗಿ ಕನ್ನಡದ ಸಿನಿಮಾಗಳನ್ನು ರಿಲೀಸ್ ಮಾಡಲು ಯಾರು ಮುಂದಾಗುತ್ತಿರಲಿಲ್ಲ. ಆದರೀಗ ಮ್ಯಾಂಗೋ ಪಚ್ಚ ಸಂಕ್ರಾಂತಿಗೆ ಬರ್ತಿದೆ, ಅದರಲ್ಲೂ ಚೊಚ್ಚಲ ನಟನೆಯ ಸಂಚಿತ್ ಜನವರಿ 15ಕ್ಕೆ ತೆರೆಮೇಲೆ ಅಬ್ಬರಿಸುವ ಮೂಲಕ ಈ ಬಾರಿ ಸಂಕ್ರಾಂತಿಗೆ ಕನ್ನಡದಲ್ಲೂ ಸಿನಿಮಾ ಬರ್ತಿದೆ ಎಂದು ಭಾರತೀಯ ಸಿನಿ ಜಗತ್ತಿಗೆ ಹೇಳುತ್ತಿದ್ದಾರೆ.

ಇದನ್ನೂ ಓದಿ:‘ನೀವು ನನ್ನ ಅಣ್ಣನಾಗಲೂ ಅರ್ಹನೇ ಅಲ್ಲ’; ಸುದೀಪ್ ಎದುರೇ ಧ್ರುವಂತ್​ಗೆ ರಕ್ಷಿತಾ ಆವಾಜ್

ಆಡಿಯೋ ಮಾರಾಟದ ವಿಚಾರದಲ್ಲಿ ‘ಮ್ಯಾಂಗೋ ಪಚ್ಚ’ ಸಿನಿಮಾ ದಾಖಲೆ ಬರೆದಿದೆ. ಬರೋಬ್ಬರಿ 1.2 ಕೋಟಿ ರೂಪಾಯಿಗೆ ‘ಮ್ಯಾಂಗೊ ಪಚ್ಚ’ ಸಿನಿಮಾದ ಆಡಿಯೋ ಹಕ್ಕುಗಳು ಮಾರಾಟವಾಗಿದೆ. ಚೊಚ್ಚಲ ಹೀರೋ ಒಬ್ಬರ ಸಿನಿಮಾದ ಆಡಿಯೋ ಈ ಮಟ್ಟಕ್ಕೆ ಮಾರಾಟವಾಗಿರುವುದು ಅಪರೂಪದಲ್ಲಿ ಅಪರೂಪ. ಆಡಿಯೋ ಹಕ್ಕುಗಳು ದೊಡ್ಡ ಮೊತ್ತಕ್ಕೆ ಮಾರಾಟ ಆಗಿರುವುದು ಚಿತ್ರತಂಡಕ್ಕೆ ಹುರುಪು, ಉತ್ಸಾಹ ಮತ್ತು ನಂಬಿಕೆಗಳನ್ನು ಮೂಡಿಸಿದೆ.

ಮ್ಯಾಂಗೋ ಪಚ್ಚ ವಿವೇಕ ನಿರ್ದೇಶನದ ಚೊಚ್ಚಲ ನಿರ್ದೇಶದ ಸಿನಿಮಾ ಆಗಿದೆ. ಸಿನಿಮಾದ ಕತೆ ಮೈಸೂರಿನಲ್ಲಿ ನಡೆಯುವ ಕ್ರೈಂ ಥ್ರಿಲ್ಲರ್ ಕತೆ ಒಳಗೊಂಡಿದೆ. 2001 ರಿಂದ 2011ರ ಅವಧಿಯಲ್ಲಿ ಮೈಸೂರಿನಲ್ಲಿ ನಡೆದ ಪ್ರಮುಖ ಘಟನೆಗಳು ಈ ಸಿನಿಮಾದಲ್ಲಿವೆ. ಸಿನಿಮಾದ ಬಹುತೇಕ ಚಿತ್ರೀಕರಣ ಮೈಸೂರಿನಲ್ಲೇ ಮಾಡಲಾಗಿದೆ.

ಈಗಾಗಲೇ ಚಿತ್ರೀಕರಣ ಮುಗಿಸಿರುವ ಮ್ಯಾಂಗೋ ಪಚ್ಚ ಚಿತ್ರಮಂದಿರಕ್ಕೆ ಎಂಟ್ರಿ ಕೊಡಲು ತಯಾರಿ ನಡೆಸುತ್ತಿದೆ. ಮ್ಯಾಂಗೋ ಪಚ್ಚ ಚಿತ್ರವನ್ನು ಕೆಆರ್‌ಜಿ ಮತ್ತು ಕಿಚ್ಚ ಸುದೀಪ್ ಅವರ ಸುಪ್ರಿಯಾನ್ವಿ ಪ್ರೊಡಕ್ಷನ್ಸ್ ಜಂಟಿಯಾಗಿ ನಿರ್ಮಾಣ ಮಾಡುತ್ತಿರುವುದು ವಿಶೇಷ. ಸಂಚಿತ್ ಮೊದಲ ಸಿನಿಮಾಗೆ ನಾಯಕಿಯಾಗಿ ನಟಿ ಕಾಜಲ್ ಕುಂದರ್ ನಟಿಸಿದ್ದಾರೆ. ಸಂಚಿತ್‌ ಹಾಗೂ ಕಾಜಲ್‌ ಜೊತೆಯಾಗಿ ಮಯೂರ್‌ ಪಟೇಲ್‌, ಭಾವನಾ, ಹಂಸ, ಹರಿಣಿ ಶ್ರೀಕಾಂತ್‌, ವಿಜಯ ರಾಘವೇಂದ್ರ ಅವರ ಅಳಿಯ ಜೈ ಗೋಪಿನಾಥ್‌, ಪ್ರಶಾಂತ್‌ ಹಿರೇಮಠ್‌, ಇನ್ನೂ ಅನೇಕರು ಅಭಿನಯಿಸಿದ್ದಾರೆ. ಇನ್ನು ಶೇಖರ್‌ ಚಂದ್ರ ಕ್ಯಾಮೆರಾ ವರ್ಕ್‌ ಸಿನಿಮಾಗಿದ್ದು ಚರಣ್‌ ರಾಜ್‌ ಸಂಗೀತ ನಿರ್ದೇಶನ ಮಾಡಿದ್ದಾರೆ. ರವಿವರ್ಮ ಹಾಗೂ ರಿಯಲ್‌ ಸತೀಶ್‌ ಮ್ಯಾಂಗೋ ಪಚ್ಚ ಸಿನಿಮಾಗೆ ಸ್ಟಂಟ್‌ ಡೈರೆಕ್ಟ್‌ ಮಾಡಿದ್ದಾರೆ ಎ ಹರ್ಷ ಸಿನಿಮಾದ ಮೆಲೋಡಿ ಹಾಡೊಂದಕ್ಕೆ ನೃತ್ಯ ನಿರ್ದೇಶನ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:14 pm, Wed, 19 November 25