ಸುದೀಪ್ ಆದ ಗಿಲ್ಲಿ, ಗಿಲ್ಲಿ ಆದ ಸುದೀಪ್: ಮನೆಯಲ್ಲಿ ನಗುವಿನ ಅಲೆ
Bigg Boss Kannada 12: ಶನಿವಾರದ ಎಪಿಸೋಡ್ನಲ್ಲಿ ಸ್ಪರ್ಧಿಗಳು ಸಹ ಗಂಟು ಮುಖ ಹಾಕಿಕೊಂಡೇ ಕೂತಿರುತ್ತಾರೆ. ಆದರೆ ಭಾನುವಾರದ ಎಪಿಸೋಡ್ ಹಾಗಿರುವುದಿಲ್ಲ. ಸುದೀಪ್ ಅವರು ನಗುತ್ತಾ, ಎಲ್ಲರನ್ನು ನಗಿಸುತ್ತಾ ನಿರೂಪಣೆ ಮಾಡುತ್ತಾರೆ. ಈ ಭಾನುವಾರದ ಎಪಿಸೋಡ್ ಸಹ ಹಾಗೆಯೇ ಆಯ್ತು. ಭಾನುವಾರದಂದು ಬಿಗ್ಬಾಸ್ ಮನೆಯಲ್ಲಿ ನಗುವಿನ ಅಲೆ ಜೋರಾಗಿತ್ತು.

ವೀಕೆಂಡ್ ಪಂಚಾಯಿತಿಯಲ್ಲಿ ಶನಿವಾರದ ಎಪಿಸೋಡ್ ಅನ್ನು ಸುದೀಪ್ (Sudeep) ಬಹಳ ಗಂಭೀರವಾಗಿ ನಡೆಸಿಕೊಡುತ್ತಾರೆ. ವಾರದಲ್ಲಿ ನಡೆದ ವಿಷಯಗಳನ್ನು ವಿಶ್ಲೇಷಣೆ ಮಾಡುತ್ತಾರೆ. ತಪ್ಪು ಮಾಡಿದವರನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. ಶನಿವಾರದ ಎಪಿಸೋಡ್ನಲ್ಲಿ ಸ್ಪರ್ಧಿಗಳು ಸಹ ಗಂಟು ಮುಖ ಹಾಕಿಕೊಂಡೇ ಕೂತಿರುತ್ತಾರೆ. ಆದರೆ ಭಾನುವಾರದ ಎಪಿಸೋಡ್ ಹಾಗಿರುವುದಿಲ್ಲ. ಸುದೀಪ್ ಅವರು ನಗುತ್ತಾ, ಎಲ್ಲರನ್ನು ನಗಿಸುತ್ತಾ ನಿರೂಪಣೆ ಮಾಡುತ್ತಾರೆ. ಈ ಭಾನುವಾರದ ಎಪಿಸೋಡ್ ಸಹ ಹಾಗೆಯೇ ಆಯ್ತು. ಭಾನುವಾರದಂದು ಬಿಗ್ಬಾಸ್ ಮನೆಯಲ್ಲಿ ನಗುವಿನ ಅಲೆ ಜೋರಾಗಿತ್ತು.
ಆರಂಭದಲ್ಲಿಯೇ ಈ ವಾರದ ಹಾಸ್ಯಾತ್ಮಕ ದೃಶ್ಯಗಳನ್ನು ಸುದೀಪ್ ತೋರಿಸಿದರು. ಬಳಿಕ ಕಾಕ್ರೂಚ್ ಸುಧಿ ಅವರು, ಸುದೀಪ್ ಅವರನ್ನು ಮಿಮಿಕ್ರಿ ಮಾಡಿ ತೋರಿಸಿದರು. ಸುಧಿ ಅವರು ಸುದೀಪ್ ಅವರ ಅನುಕರಣೆ ಮಾಡುವ ಪ್ರಯತ್ನ ಮಾಡಿದರು. ಬಳಿಕ ಗಿಲ್ಲಿ ಅವರಿಗೆ ಸುದೀಪ್ ಅವಕಾಶ ಕೊಟ್ಟರು. ಕೂಡಲೇ ಗಿಲ್ಲಿ, ರಘು ಅವರಿಂದ ಚೈನ್ ಹಿಡಿದುಕೊಂಡು ಸುದೀಪ್ ಅವರಂತೆ ನಟಿಸಲು ಆರಂಭಿಸಿದರು. ಧ್ರುವಂತ್, ರಾಶಿಕಾ, ರಿಶಾ ಇತರೆ ಅವರುಗಳನ್ನು ಸುದೀಪ್ ಅವರಂತೆಯೇ ಮಾತನಾಡಿಸಿದರು.
ಅದರಲ್ಲೂ ಸುದೀಪ್ ಅವರು ಬಳಸುವ ಕೆಲವು ಪದಗಳನ್ನು ಬಳಸಿ ಮಾತನಾಡಿದ್ದು ಸ್ವತಃ ಸುದೀಪ್ ಅವರಿಗೆ ನಗು ತರಿಸಿತು. ಸುದೀಪ್ ಅವರಂತೆಯೇ ಧ್ವನಿ ಏರಿಳಿತ ಮಾಡಿಕೊಂಡು ಗಿಲ್ಲಿ ಮಾತನಾಡಿದರು. ಬಳಿಕ ಕಾವ್ಯಾ ಬಗ್ಗೆ ಏನಾದರೂ ಹೇಳಿ ಎಂದಾಗ, ಗಿಲ್ಲಿ, ಸುದೀಪ್ ಅವರ ‘ವಾಲಿ’ ಸಿನಿಮಾದ ಹಾಡು ಹಾಡಿದರು. ಬಳಿಕ ಸುದೀಪ್, ಸರಿ ಈಗ ಗಿಲ್ಲಿಗೆ ಏನಾದರೂ ಹೇಳಿ ಎಂದು, ಈಗ ನಾನೇ ಗಿಲ್ಲಿ ಆಗುತ್ತೇನೆ, ನೀವು ಸುದೀಪ್, ನನ್ನನ್ನು ನೋಡಿಕೊಂಡೇ ಹೇಳಿ ಎಂದರು. ಅಲ್ಲದೆ, ನಾನು ಬೇಕಾದರೆ ಬನಿಯನ್ ಅನ್ನು ಹಾಕಿಕೊಂಡು ಬೇಕಾದರೆ ಬರುತ್ತೇನೆ ಎಂದರು. ಆದರೆ ಸುದೀಪ್ ಅವರು ಗಿಲ್ಲಿ ರೀತಿ ನಟನೆ ಮಾಡಿದ್ದು ಸ್ವತಃ ಗಿಲ್ಲಿ ಗಾಬರಿ ಆದರು.
ಗಿಲ್ಲಿಯಂತೆ ಬಟ್ಟೆ ಒಗೆಯಬಲ್ಲಿರಾ?
ಕಳೆದ ವಾರ ಗಿಲ್ಲಿಗೆ ಬಟ್ಟೆ ಒಗೆಯುವ ಶಿಕ್ಷೆಯನ್ನು ಸುದೀಪ್ ನೀಡಿದ್ದರು. ಆದರೆ ಮಾಳುಗೆ ಏನೋ ಕಾರಣ ಹೇಳಿ ಅದರಿಂದ ತಪ್ಪಿಸಿಕೊಂಡಿದ್ದರು ಗಿಲ್ಲಿ. ಈ ಬಾರಿ ಯಾರು ಯಾರು ನಿಮ್ಮ ಬಟ್ಟೆಗಳನ್ನು ಗಿಲ್ಲಿ ಕೈಯಿಂದ ಒಗೆಸಿಕೊಳ್ಳಬೇಕು ಎಂಬ ಆಸೆಯಿದೆ ಎಂದು ಕೇಳಿದರು. ಅದಕ್ಕೆ ಹಲವು ಕೈ ಎತ್ತಿದರು. ಆದರೆ ಕಾವ್ಯಾ ಕೈ ಎತ್ತಲಿಲ್ಲ. ಏಕೆಂದು ಕೇಳಿದಾಗ, ಗಿಲ್ಲಿ ಬಟ್ಟೆ ಒಗೆಯುವ ರೀತಿ ನೋಡಿದರೆ ಯಾರೂ ಸಹ ಅವನಿಂದ ಬಟ್ಟೆ ಒಗಿಸಿಕೊಳ್ಳಲಾರರು ಎಂದರು.
ಬಳಿಕ ಸುದೀಪ್ ಅವರು ವಿಡಿಯೋ ಸಹ ಪ್ಲೇ ಮಾಡಿದರು. ಅದರಲ್ಲಿ ಗಿಲ್ಲಿ, ತನ್ನ ಬಟ್ಟೆಗಳನ್ನು ಬಕೀಟಿಗೆ ಹಾಕಿ ಅದಕ್ಕೆ ನೀರು, ಬಟ್ಟೆ ಒಗೆಯುವ ಪೌಡರ್ ಹಾಕಿ, ಕುಂಬಾರರು ಮಣ್ಣು ತುಳಿವಂತೆ ಕಸ ಕಸನೆ ಕಾಲಿನಿಂದ ಬಟ್ಟೆಗಳನ್ನು ತುಳಿಯಲು ಆರಂಭಿಸಿದರು. ಕಾವ್ಯಾ, ‘ಇದೆಂಥಹಾ ಬಟ್ಟೆ ಒಗೆಯುವ ರೀತಿ’ ಎಂದಿದ್ದಕ್ಕೆ, ವಾಷಿಂಗ್ ಮಷೀನ್ನಲ್ಲೂ ಇದೇ ತಂತ್ರಜ್ಞಾನದಲ್ಲಿಯೇ ಬಟ್ಟೆಗಳು ತೊಳೆಯುವುದು ಎಂದರು. ಆ ವಿಡಿಯೋ ನೋಡಿದ ಬಳಿಕ ಮನೆಯ ಯಾವ ಸದಸ್ಯರೂ ಸಹ ಗಿಲ್ಲಿಯಿಂದ ತಾವು ಬಟ್ಟೆಗಳನ್ನು ಒಗೆಸಿಕೊಳ್ಳುವುದಿಲ್ಲ ಎಂದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




