AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಪತಿಯ ಎಲಿಮಿನೇಷನ್​ಗೆ​ ಆ ಇಬ್ಬರೇ ಕಾರಣ’; ಸುದೀಪ್ ಎದುರೇ ಆರೋಪಿಸಿದ ಸುಧಿ ಪತ್ನಿ

ಬಿಗ್ ಬಾಸ್ ಕನ್ನಡದ 7ನೇ ವಾರದಲ್ಲಿ ಸುಧಿ ಎಲಿಮಿನೇಟ್ ಆಗಿದ್ದಾರೆ. ವೇದಿಕೆ ಮೇಲೆ ಸುದೀಪ್ ಜೊತೆ ಚರ್ಚಿಸುವಾಗ ಸುಧಿ ಪತ್ನಿ, ಅಶ್ವಿನಿ ಮತ್ತು ಜಾನ್ವಿ ಗುಂಪಿನಿಂದ ಹೊರಬಂದು ಆಡಬೇಕಿತ್ತು ಎಂದು ಆರೋಪಿಸಿದ್ದಾರೆ. ವಿಲನ್ ಪಾತ್ರಗಳ ಮೂಲಕ ಖಡಕ್ ವ್ಯಕ್ತಿತ್ವ ಎನಿಸಿದ್ದರೂ, ಮನೆಯಲ್ಲಿ ಸುಧಿ ಮೃದುವಾಗಿ ವರ್ತಿಸಿದ್ದರು.

‘ಪತಿಯ ಎಲಿಮಿನೇಷನ್​ಗೆ​ ಆ ಇಬ್ಬರೇ ಕಾರಣ’; ಸುದೀಪ್ ಎದುರೇ ಆರೋಪಿಸಿದ ಸುಧಿ ಪತ್ನಿ
ಸುದೀಪ್ ಎದುರೇ ಆರೋಪಿಸಿದ ಸುಧಿ ಪತ್ನಿ
ರಾಜೇಶ್ ದುಗ್ಗುಮನೆ
|

Updated on:Nov 17, 2025 | 7:22 AM

Share

ಬಿಗ್ ಬಾಸ್​ನ (Bigg Boss) ಏಳನೇ ವಾರದಲ್ಲಿ ಸುಧಿ ಅವರು ಎಲಿಮಿನೇಟ್ ಆಗಿದ್ದಾರೆ. ಬಿಗ್ ಬಾಸ್ ಎಪಿಸೋಡ್ 50ನೇ ದಿನ ಸಮೀಪಿಸುತ್ತಿರುವ ಸಮಯಧಲ್ಲೇ ಸುಧಿ ಅವರು ಹೊರ ಹೋದರು. ಬಿಗ್ ಬಾಸ್​ನಿಂದ ಹೋಗುವುದಕ್ಕೂ ಮೊದಲು ವೇದಿಕೆ ಮೇಲೆ ಸುದೀಪ್ ಜೊತೆ ಅವರು ಚರ್ಚೆ ಮಾಡಿದರು. ಈ ವೇಳೆ ವೇದಿಕೆ ಮೇಲೆ ಅವರ ಪತ್ನಿ ಕೂಡ ಇದ್ದರು. ಈ ಸಂದರ್ಭದಲ್ಲಿ ಸುಧಿ ಪತ್ನಿ ಇಬ್ಬರ ಮೇಲೆ ನೇರ ಆರೋಪ ಮಾಡಿದರು.

ಸುಧಿ ಅವರು ವಿಲನ್ ಪಾತ್ರಗಳ ಮೂಲಕ ಸಾಕಷ್ಟು ಫೇಮಸ್ ಆದವರು. ವಿಲನ್ ಪಾತ್ರ ಮಾಡುವುದರಿಂದ ಅವರು ಖಡಕ್ ಆಗಿ ನಡೆದುಕೊಳ್ಳಬಹುದು ಎಂಬುದು ಅನೇಕರ ಊಹೆ ಆಗಿತ್ತು. ಆದರೆ, ಅವರು ಮಾಡುವ ಪಾತ್ರಕ್ಕೂ ವ್ಯಕ್ತಿತ್ವಕ್ಕೂ ಯಾವುದೇ ಸಂಬಂಧ ಇಲ್ಲ. ಅದು ಬಿಗ್ ಬಾಸ್ ಮನೆಯಲ್ಲಿ ಸಾಬೀತಾಗಿದೆ. ಅವರು ಮೃದುವಾಗಿ ನಡೆದುಕೊಂಡಿದ್ದೇ ಹೆಚ್ಚು. ಅಲ್ಲದೆ, ಅಶ್ವಿನಿ ಹಾಗೂ ಜಾನ್ವಿ ಜೊತೆ ಹೆಚ್ಚು ಸಮಯ ಕಳೆದರು. ಇದು ಅವರಿಗೆ ನೆಗೆಟಿವ್ ಆಯಿತು ಎಂದು ಅವರ ಪತ್ನಿ ಅಭಿಪ್ರಾಯಪಟ್ಟರು.

ಸುಧಿ ಪತ್ನಿ ಸುದೀಪ್ ಅವರ ದೊಡ್ಡ ಅಭಿಮಾನಿಯಂತೆ. ಈ ಕಾರಣದಿಂದಲೇ ಸುದೀಪ್ ಅವರು ಸುಧಿ ಪತ್ನಿಯನ್ನು ವೇದಿಕೆ ಮೇಲೆ ಕರೆದರು. ಈ ವೇಳೆ ಸುದೀಪ್ ಅವರು, ‘ಎಲ್ಲಿ ತಪ್ಪಾಯಿತು ಎಂದು ನಿಮಗೆ ಅನಿಸುತ್ತದೆ’ ಎಂದು ಪ್ರಶ್ನೆ ಮಾಡಿದರು. ಇದಕ್ಕೆ ಅವರು ಮುಚ್ಚುಮರೆ ಇಲ್ಲದೆ ಉತ್ತರ ನೀಡಿದರು.

‘ಇನ್ನೂ ಎಫರ್ಟ್​ ಹಾಕಿ ಆಡಬೇಕಿತ್ತು. ಅವರಲ್ಲಿ ಆ ಸಾಮರ್ಥ್ಯ ಇತ್ತು. ಅಶ್ವಿನಿ, ಜಾನ್ವಿ ಅವರ ಗುಂಪಿನಿಂದ ಹೊರ ಬಂದು ಆಡಬೇಕಿತ್ತು’ ಎಂದು ಸುದೀಪ್ ಎದುರು ನೇರವಾಗಿ ಹೇಳಿದರು ಸುಧಿ ಪತ್ನಿ. ಈ ಮೂಲಕ ಅವರಿಬ್ಬರ ಸಹವಾಸ ಕಡಿಮೆ ಮಾಡಿದ್ದರೆ ಪತಿ ಇನ್ನೂ ಕೆಲವು ದಿನ ಇರುತ್ತಿದ್ದರು ಎಂಬುದು ಅವರ ಅಭಿಪ್ರಾಯ ಆಗಿದೆ.

ಇದನ್ನೂ ಓದಿ: ಯಾರೂ ಒಪ್ಪದ ಕೆಲಸ ಮಾಡಿದ ಜಾನ್ವಿ ಆ್ಯಂಡ್ ಟೀಂ; ಬಿಗ್ ಬಾಸ್ ದೊಡ್ಡ ಶಿಕ್ಷೆ  

ಕಳೆದ ವಾರ ನಡೆದ ನಾಮಿನೇಷನ್ ಪ್ರಕ್ರಿಯೆಯಲ್ಲಿ ಸುಧಿ ಅವರು ನಾಮಿನೇಷನ್​ನಿಂದ ಬಚಾವ್ ಆಗುತ್ತಾ ಬಂದಿದ್ದರು. ಕೊನೆಗೆ ಕ್ಯಾಪ್ಟನ್ ಮಾಳು ಬಳಿ ಅವರು ಸಿಕ್ಕಿ ಬಿದ್ದರು. ಮಾಳು ಅವರು ಸುಧಿಯನ್ನು ನೇರವಾಗಿ ನಾಮಿನೇಟ್ ಮಾಡಿದರು. ಇದು ಅವರಿಗೆ ದುಬಾರಿ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:06 am, Mon, 17 November 25

ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು
ಮಹಾರಾಷ್ಟ್ರ ಪೊಲೀಸರ ಹೇಳಿಕೆ ಸತ್ಯಕ್ಕೆ ದೂರವಾಗಿದೆ; ಜಿ ಪರಮೇಶ್ವರ್
ಮಹಾರಾಷ್ಟ್ರ ಪೊಲೀಸರ ಹೇಳಿಕೆ ಸತ್ಯಕ್ಕೆ ದೂರವಾಗಿದೆ; ಜಿ ಪರಮೇಶ್ವರ್
ಹಾಲು ಕುಡಿಯಬೇಕಿದ್ದ 5 ವರ್ಷದ ಮೊಮ್ಮಗನಿಗೆ ಮದ್ಯ ಕುಡಿಸಿದ ಅಜ್ಜ!
ಹಾಲು ಕುಡಿಯಬೇಕಿದ್ದ 5 ವರ್ಷದ ಮೊಮ್ಮಗನಿಗೆ ಮದ್ಯ ಕುಡಿಸಿದ ಅಜ್ಜ!
ಟಿ20 ಕ್ರಿಕೆಟ್​ನಲ್ಲಿ ಅತೀ ವೇಗದ ಅರ್ಧಶತಕ ಸಿಡಿಸಿದ ಲಾರಾ ಹ್ಯಾರಿಸ್
ಟಿ20 ಕ್ರಿಕೆಟ್​ನಲ್ಲಿ ಅತೀ ವೇಗದ ಅರ್ಧಶತಕ ಸಿಡಿಸಿದ ಲಾರಾ ಹ್ಯಾರಿಸ್
ಅಲ್ಲಾ ತೆಗೆದುಕೊಳ್ಳುವ ನಿರ್ಧಾರವೇ ಅಂತಿಮ: ಮುಫ್ತಿ
ಅಲ್ಲಾ ತೆಗೆದುಕೊಳ್ಳುವ ನಿರ್ಧಾರವೇ ಅಂತಿಮ: ಮುಫ್ತಿ