AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಾರೂ ಒಪ್ಪದ ಕೆಲಸ ಮಾಡಿದ ಜಾನ್ವಿ ಆ್ಯಂಡ್ ಟೀಂ; ಬಿಗ್ ಬಾಸ್ ದೊಡ್ಡ ಶಿಕ್ಷೆ  

‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಜಾನ್ವಿ ಅವರು ಕಾಫಿ ಪುಡಿಯನ್ನು ಕದ್ದು ಇಟ್ಟುಕೊಂಡಿದ್ದರು. ಜಾನ್ವಿ ಹಾಗೂ ಟೀಂ ಹಾಲನ್ನು ಬಿಸಿ ಮಾಡಿಕೊಂಡು ಕಾಫಿ ಪೌಡರ್ ಮಿಕ್ಸ್ ಮಾಡಿ ಕುಡಿಯುತ್ತಿದ್ದರು. ಈ ವಿಚಾರ ರಿವೀಲ್ ಆಗಿದೆ. ಧನುಷ್ ಅವರಿಗೆ ಈ ವಿಷಯ ಗೊತ್ತಾಗಿದೆ. ಅವರು ಹೋಗಿ ಕ್ಯಾಪ್ಟನ್ ರಘು ಬಳಿ ಈ ವಿಚಾರ ಹೇಳಿದರು. ಆ ಕ್ಷಣಕ್ಕೆ ರಘು ಹೋಗಿ ತನಿಖೆಗೆ ಇಳಿದರು.

ಯಾರೂ ಒಪ್ಪದ ಕೆಲಸ ಮಾಡಿದ ಜಾನ್ವಿ ಆ್ಯಂಡ್ ಟೀಂ; ಬಿಗ್ ಬಾಸ್ ದೊಡ್ಡ ಶಿಕ್ಷೆ  
ಜಾನ್ವಿ
 ಶ್ರೀಲಕ್ಷ್ಮೀ ಎಚ್
| Edited By: |

Updated on: Nov 15, 2025 | 9:37 PM

Share

‘ಬಿಗ್ ಬಾಸ್’ ಮನೆಯಲ್ಲಿ ಬರುವ ದಿನಸಿ ವಿಚಾರ ಸಾಕಷ್ಟು ತುಂಬಾನೇ ಮುಖ್ಯವಾಗುತ್ತದೆ. ಮನೆಯಲ್ಲಿ ಸದಸ್ಯರು ಹೆಚ್ಚಿರುತ್ತಾರೆ. ಹೀಗಾಗಿ, ಬೇಕಾದಾಗ, ಬೇಕಾದಷ್ಟನ್ನು ತಿನ್ನಲು ಸಾಧ್ಯವಿಲ್ಲ. ಈ ಕಾರಣಕ್ಕೆ ಯಾವುದೇ ವಸ್ತು ಬಂದರೂ ಅದನ್ನು ಸರಿಯಾಗಿ ಬಳಕೆ ಮಾಡಬೇಕು. ಆದರೆ, ಈ ಬಾರಿಯ ಸೀಸನ್​ನಲ್ಲಿ ಕಳ್ಳತನ ಶುರುವಾಗಿದೆ. ಜಾನ್ವಿ ಅವರು ಯಾರೂ ಒಪ್ಪದ ಕೆಲಸ ಮಾಡಿದರು. ಪರೋಕ್ಷವಾಗಿ ಬಿಗ್ ಬಾಸ್ ದೊಡ್ಡ ಶಿಕ್ಷೆ ನೀಡಿದ್ದಾರೆ.

‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಜಾನ್ವಿ ಅವರು ಕಾಫಿ ಪುಡಿಯನ್ನು ಕದ್ದು ಇಟ್ಟುಕೊಂಡಿದ್ದರು. ಜಾನ್ವಿ ಹಾಗೂ ಟೀಂ ಹಾಲನ್ನು ಬಿಸಿ ಮಾಡಿಕೊಂಡು ಕಾಫಿ ಪೌಡರ್ ಮಿಕ್ಸ್ ಮಾಡಿ ಕುಡಿಯುತ್ತಿದ್ದರು. ಈ ವಿಚಾರ ರಿವೀಲ್ ಆಗಿದೆ. ಧನುಷ್ ಅವರಿಗೆ ಈ ವಿಷಯ ಗೊತ್ತಾಗಿದೆ. ಅವರು ಹೋಗಿ ಕ್ಯಾಪ್ಟನ್ ರಘು ಬಳಿ ಈ ವಿಚಾರ ಹೇಳಿದರು. ಆ ಕ್ಷಣಕ್ಕೆ ರಘು ಹೋಗಿ ತನಿಖೆಗೆ ಇಳಿದರು.

ಯಾರೊಬ್ಬರೂ ಕಾಫಿ ಪೌಡರ್ ಕದಿದ್ದೇನೆ ಎಂದು ಒಪ್ಪಿಕೊಳ್ಳಲು ರೆಡಿ ಇರಲೇ ಇಲ್ಲ. ಇದೇ ಸಮಯಕ್ಕೆ ಬಿಗ್ ಬಾಸ್ ಒಂದು ಶಿಕ್ಷೆ ಕೊಟ್ಟರು. ಜೈಲಿನಲ್ಲಿರುವ ವ್ಯಕ್ತಿಯ ಹೊರತಾಗಿ ಬೇರೆಯವರು (ರಕ್ಷಿತಾ) ತರಕಾರಿ ಕತ್ತರಿಸಿದ್ದರು. ಈ ಕಾರಣಕ್ಕೆ ಕಾಫಿ ಪೌಡರ್ ಎಲ್ಲವನ್ನೂ ಹಿಂದಿರುಗಿಸುವಂತೆ ಬಿಗ್ ಬಾಸ್ ಸೂಚಿಸಿದರು. ಆಗ ರಘು ಅವರು ಹೋಗಿ ಕದ್ದಿಟ್ಟ ಕಾಫಿ ಪೌಡರ್ ಕೊಡುವಂತೆ ಹೇಳಿದರು.

ಇದನ್ನೂ ಓದಿ: ಸುದೀಪ್​ ಅವರನ್ನೇ ಮ್ಯಾನ್ಯುಪಲೇಷನ್ ಮಾಡಲು ಹೋದ ಜಾನ್ವಿ; ಆಮೇಲೇನಾಗುತ್ತೆ ಗೊತ್ತಲ್ಲ

ಆಗ ಜಾನ್ವಿ ಅವರು ತಾವು ಕದ್ದಿಟ್ಟ ಕಾಫಿ ಪೌಡರ್ ನೀಡಿದರು. ‘ಇಷ್ಟೆಲ್ಲ ಕದ್ದಿಟ್ಟಿದ್ರಾ’ ಎಂದು ಜಾನ್ವಿಗೆ ರಘು ಪ್ರಶ್ನೆ ಮಾಡಿದರು. ಆ ಬಳಿಕ ಜಾನ್ವಿ ಅವರು ಅಶ್ವಿನಿ, ರಾಶಿಕಾ ಮೊದಲಾದವರ ಹೆಸರನ್ನು ತೆಗೆದುಕೊಂಡರು. ನಂತರ ಹಾಲು ಕದ್ದ ವಿಚಾರವೂ ಬೆಳಕಿಗೆ ಬಂತು. ‘ಜಾನ್ವಿ ಅವರು ಎರಡು ಬಾಟಲಿ ಹಾಲನ್ನು ಕದ್ದಿದ್ದಾರೆ’ ಎಂದು ರಿಷಾ ಗೌಡ ಹೇಳಿದರು. ಇದರಿಂದ ಜಾನ್ವಿ ಉರಿದುಕೊಂಡರು. ‘ನೀವು ನಾನು ಕದ್ದ ಹಾಲಲ್ಲಿ ಕಾಫಿ ಕುಡಿದಿದ್ದೀರಿ’ ಎಂದು ನೇರವಾಗಿ ಆರೋಪಿಸಿದರು. ‘ನೀವೇ ಕೆಟ್ಟದಾಗಿ ಕಾಣ್ಸೋದು ನಾನಲ್ಲ’ ಎಂದು ಜಾನ್ವಿ ಹೇಳಿದ ಮಾತು ತುಂಬಾನೇ ಹಾಸ್ಯಾಸ್ಪದವಾಗಿ ಕಾಣಿಸಿದ್ದಂತೂ ನಿಜ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಗ್ಯಾಂಗ್​ಸ್ಟರ್ ಸಂದೀಪ್​ಗೆ ಡ್ರಮ್ ಬಾರಿಸಿ ಸ್ವಾಗತ ಕೋರಿದ ಗ್ರಾಮಸ್ಥರು
ಗ್ಯಾಂಗ್​ಸ್ಟರ್ ಸಂದೀಪ್​ಗೆ ಡ್ರಮ್ ಬಾರಿಸಿ ಸ್ವಾಗತ ಕೋರಿದ ಗ್ರಾಮಸ್ಥರು
ಬೆಂಗಳೂರಿನ ಹಲವೆಡೆ ತಡರಾತ್ರಿ ಮಳೆ ಅಬ್ಬರ: ವಾಹನ ಸವಾರರ ಪರದಾಟ
ಬೆಂಗಳೂರಿನ ಹಲವೆಡೆ ತಡರಾತ್ರಿ ಮಳೆ ಅಬ್ಬರ: ವಾಹನ ಸವಾರರ ಪರದಾಟ
ರವಿ ಕನ್ಯಾ, ಚಂದ್ರ ಧನು ರಾಶಿಯಲ್ಲಿ ಸಂಚಾರ: 12 ರಾಶಿಗಳ ಇಂದಿನ ದಿನ ಭವಿಷ್ಯ
ರವಿ ಕನ್ಯಾ, ಚಂದ್ರ ಧನು ರಾಶಿಯಲ್ಲಿ ಸಂಚಾರ: 12 ರಾಶಿಗಳ ಇಂದಿನ ದಿನ ಭವಿಷ್ಯ
ಸಾಮೂಹಿಕ ಗಣೇಶ ವಿಸರ್ಜನೆ ವೇಳೆ ಕೋಮು ಸೌಹಾರ್ದತೆ ಮೆರೆದ ಮುಸ್ಲಿಂ ಬಾಂಧವರು
ಸಾಮೂಹಿಕ ಗಣೇಶ ವಿಸರ್ಜನೆ ವೇಳೆ ಕೋಮು ಸೌಹಾರ್ದತೆ ಮೆರೆದ ಮುಸ್ಲಿಂ ಬಾಂಧವರು
ಬದರಿನಾಥದ ಮಹಿಳೆಯರ ಜೊತೆ ಜಾನಪದ ನೃತ್ಯ ಮಾಡಿದ ಸಿಎಂ ಪುಷ್ಕರ್ ಸಿಂಗ್ ಧಾಮಿ!
ಬದರಿನಾಥದ ಮಹಿಳೆಯರ ಜೊತೆ ಜಾನಪದ ನೃತ್ಯ ಮಾಡಿದ ಸಿಎಂ ಪುಷ್ಕರ್ ಸಿಂಗ್ ಧಾಮಿ!
ವೇದಿಕೆ ಮೇಲೆಯೇ ಶಿಡ್ಲಘಟ್ಟ ತಹಶೀಲ್ದಾರ್​​ಗೆ ಡಿಸಿ ಕ್ಲಾಸ್
ವೇದಿಕೆ ಮೇಲೆಯೇ ಶಿಡ್ಲಘಟ್ಟ ತಹಶೀಲ್ದಾರ್​​ಗೆ ಡಿಸಿ ಕ್ಲಾಸ್
ಸಿನಿಮಾ ಸೆನ್ಸಾರ್​​ಗೆ ಹೊಸ ಮಾರ್ಗಸೂಚಿ: ಇಲ್ಲಿದೆ ಪೂರ್ಣ ಮಾಹಿತಿ ವಿಡಿಯೋ
ಸಿನಿಮಾ ಸೆನ್ಸಾರ್​​ಗೆ ಹೊಸ ಮಾರ್ಗಸೂಚಿ: ಇಲ್ಲಿದೆ ಪೂರ್ಣ ಮಾಹಿತಿ ವಿಡಿಯೋ
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಸಿ. ಮಹದೇವಪ್ಪ ಟಾಂಗ್
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಸಿ. ಮಹದೇವಪ್ಪ ಟಾಂಗ್
ಜಪಾನ್ ವಾಯುಪಡೆ ಮುಖ್ಯಸ್ಥರಿಂದ ಭಾರತದ ತೇಜಸ್ ಯುದ್ಧವಿಮಾನ ಹಾರಾಟ
ಜಪಾನ್ ವಾಯುಪಡೆ ಮುಖ್ಯಸ್ಥರಿಂದ ಭಾರತದ ತೇಜಸ್ ಯುದ್ಧವಿಮಾನ ಹಾರಾಟ
ಎಲಿಮಿನೇಷನ್​​​ಗೆ ಮುನ್ನ ಬಿಗ್​​ಬಾಸ್ ಮನೆಯಲ್ಲಿ ನಗುವೋ ನಗು: ವಿಡಿಯೋ
ಎಲಿಮಿನೇಷನ್​​​ಗೆ ಮುನ್ನ ಬಿಗ್​​ಬಾಸ್ ಮನೆಯಲ್ಲಿ ನಗುವೋ ನಗು: ವಿಡಿಯೋ