AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಪೈ ಸಿನಿಮಾಗಳಿಂದ ಸುಸ್ತಾಗಿ ಹಾರರ್ ಸಿನಿಮಾಕ್ಕೆ ಹಾರಿದ ‘ಯಶ್ ರಾಜ್’

Yash Raj Films: ಪ್ರೇಮಕತೆಯೊಂದು ದೊಡ್ಡ ಹಿಟ್ ಆದರೆ ಎಲ್ಲರೂ ಪ್ರೇಮಕತೆಯ ಹಿಂದೆ ಬೀಳುತ್ತಾರೆ. ಅದೇ ಹಾಸ್ಯ ಪ್ರಧಾನ ಸಿನಿಮಾ ಸೂಪರ್ ಹಿಟ್ ಆದರೆ ಎಲ್ಲರೂ ಹಾಸ್ಯಪ್ರಧಾನ ಸಿನಿಮಾಗಳನ್ನೇ ಮಾಡುತ್ತಾರೆ. ಕೆಲ ವರ್ಷಗಳ ಹಿಂದೆ ಬಾಲಿವುಡ್​​ನಲ್ಲಿ‘ಬಯೋಪಿಕ್’ ಜಾನರ್ ಬಲು ಓಡಿತ್ತು. ಒಂದರ ಹಿಂದೊಂದರಂತೆ ಕ್ರೀಡಾಪಟುಗಳ, ರಾಜಕಾರಣಿಗಳ ಬಯೋಪಿಕ್​​ಗಳು ನಿರ್ಮಾಣ ಆದವು. ಆದರೆ ಈಗ ಹಾರರ್ ಸಿನಿಮಾಗಳ ಕಾಲ. ಬಾಲಿವುಡ್​​ನ ಟಾಪ್ ನಿರ್ಮಾಣ ಸಂಸ್ಥೆ ಯಶ್​​ ರಾಜ್ ಫಿಲಮ್ಸ್ ಸಹ ಇದೇ ಮೊದಲ ಬಾರಿಗೆ ಹಾರರ್ ಸಿನಿಮಾ ನಿರ್ಮಿಸಲು ಮುಂದಾಗಿದೆ.

ಸ್ಪೈ ಸಿನಿಮಾಗಳಿಂದ ಸುಸ್ತಾಗಿ ಹಾರರ್ ಸಿನಿಮಾಕ್ಕೆ ಹಾರಿದ ‘ಯಶ್ ರಾಜ್’
Yash Raj Films
ಮಂಜುನಾಥ ಸಿ.
|

Updated on: Aug 08, 2026 | 6:12 PM

Share

ಸಿನಿಮಾ (Cinema) ರಂಗದಲ್ಲಿ ಕಾಲ-ಕಾಲಕ್ಕೆ ಜಾನರ್​​ಗಳು ಬದಲಾಗುತ್ತಲೇ ಇರುತ್ತವೆ. ಪ್ರೇಮಕತೆಯೊಂದು ದೊಡ್ಡ ಹಿಟ್ ಆದರೆ ಎಲ್ಲರೂ ಪ್ರೇಮಕತೆಯ ಹಿಂದೆ ಬೀಳುತ್ತಾರೆ. ಅದೇ ಹಾಸ್ಯ ಪ್ರಧಾನ ಸಿನಿಮಾ ಸೂಪರ್ ಹಿಟ್ ಆದರೆ ಎಲ್ಲರೂ ಹಾಸ್ಯಪ್ರಧಾನ ಸಿನಿಮಾಗಳನ್ನೇ ಮಾಡುತ್ತಾರೆ. ಕೆಲ ವರ್ಷಗಳ ಹಿಂದೆ ಬಾಲಿವುಡ್​​ನಲ್ಲಿ‘ಬಯೋಪಿಕ್’ ಜಾನರ್ ಬಲು ಓಡಿತ್ತು. ಒಂದರ ಹಿಂದೊಂದರಂತೆ ಕ್ರೀಡಾಪಟುಗಳ, ರಾಜಕಾರಣಿಗಳ ಬಯೋಪಿಕ್​​ಗಳು ನಿರ್ಮಾಣ ಆದವು. ಆದರೆ ಈಗ ಹಾರರ್ ಸಿನಿಮಾಗಳ ಕಾಲ. ಬಾಲಿವುಡ್​​ನ ಟಾಪ್ ನಿರ್ಮಾಣ ಸಂಸ್ಥೆ ಯಶ್​​ ರಾಜ್ ಫಿಲಮ್ಸ್ ಸಹ ಇದೇ ಮೊದಲ ಬಾರಿಗೆ ಹಾರರ್ ಸಿನಿಮಾ ನಿರ್ಮಿಸಲು ಮುಂದಾಗಿದೆ.

ದಶಕಗಳಿಂದ ವಿವಿಧ ಪ್ರಕಾರದ ಸಿನಿಮಾಗಳಲ್ಲಿ ಪ್ರಯೋಗ ಮಾಡಿದ ಯಶ್ ರಾಜ್ ಫಿಲ್ಮ್ಸ್, ಇತ್ತೀಚೆಗೆ ಕೇವಲ ಮಾಸ್ ಮಸಾಲ, ಆಕ್ಷನ್ ಸಿನಿಮಾಗಳನ್ನು ಮಾತ್ರ ನೆಚ್ಚಿಕೊಂಡಿತ್ತು. ಅದರಲ್ಲೂ ತನ್ನದೇ ಆದ ‘ಸ್ಪೈ’ ಸಿನಿಮಾ ಯೂನಿವರ್ಸ್ ಅನ್ನು ಸೃಷ್ಟಿಸಿತು. ‘ಟೈಗರ್’ ಸರಣಿ, ‘ಪಠಾಣ್’, ‘ವಾರ್’ ಸರಣಿ, ‘ಆಲ್ಫಾ’ ಸಿನಿಮಾಗಳನ್ನು ನಿರ್ಮಾಣ ಮಾಡಿತ್ತು. ಆದರೆ ಇದೀಗ ಯಶ್ ರಾಜ್ ಫಿಲಮ್ಸ್ ಸ್ಪೈ ಯೂನಿವರ್ಸ್ ಬದಲಿಗೆ ಹಾರರ್ ಸಿನಿಮಾದ ಕಡೆಗೆ ಹೊರಳಿದೆ. ವರದಿಗಳ ಪ್ರಕಾರ, ಈ ನಿರ್ಮಾಣ ಸಂಸ್ಥೆಯು ಇದೇ ಮೊದಲ ಬಾರಿಗೆ ಹಾರರ್ ಸಿನಿಮಾವನ್ನು ನಿರ್ಮಾಣ ಮಾಡಲು ಮುಂದಾಗಿದ್ದು, ಯಶ್ ರಾಜ್ ಅವರ ಮೊದಲ ಹಾರರ್ ಸಿನಿಮಾನಲ್ಲಿ ನಾಯಕನಾಗಿ ವರುಣ್ ಧವನ್ ನಟಿಸಲಿದ್ದಾರೆ.

‘ರಾಕೆಟ್ ಬಾಯ್ಸ್’ ಹೆಸರಿನ ಒಳ್ಳೆಯ ಸಿನಿಮಾ ನಿರ್ದೇಶಿಸಿ ಗಮನ ಸೆಳೆದಿದ್ದ ಅಭಯ್ ಪನ್ನು, ಯಶ್ ರಾಜ್ ಅವರ ಮೊದಲ ಹಾರರ್ ಸಿನಿಮಾ ನಿರ್ದೇಶನ ಮಾಡಲಿದ್ದಾರೆ. ಸಿನಿಮಾಕ್ಕೆ ಚಿತ್ರಕತೆ ಮತ್ತು ಸಂಭಾಷಣೆ ಸಹ ಅವರದ್ದೆ. ವರುಣ್ ಧವನ್ ಅವರು ನಾಯಕನಾಗಿ ನಟಿಸಲಿದ್ದು, ಈ ಸಿನಿಮಾ ಹಾರರ್ ಜೊತೆಗೆ ಸಸ್ಪೆನ್ಸ್ ಥ್ರಿಲ್ಲರ್ ಅಂಶ ಹಾಗೂ ಆಕ್ಷನ್ ಅನ್ನು ಸಹ ಒಳಗೊಂಡಿರಲಿದೆಯಂತೆ. ಇದು ವರುಣ್ ಧವನ್ ಅವರಿಗೆ ಯಶ್ ರಾಜ್ ಫಿಲಮ್ಸ್ ಜೊತೆಗೆ ಎರಡನೇ ಸಿನಿಮಾ ಆಗಿರಲಿದೆ.

ಇದನ್ನೂ ಓದಿ:ರಜನೀಕಾಂತ್ ಸಿನಿಮಾನಲ್ಲಿ ನಾಯಕಿ ಆಗಲಿರುವ ಕನ್ನಡತಿ ಶ್ರೀಲೀಲಾ

ವರುಣ್ ಧವನ್ ಈಗಾಗಲೇ ಹಾರರ್ ಸಿನಿಮಾಗಳಾದ ‘ಭೇಡಿಯಾ’, ‘ಸ್ತ್ರೀ 2’, ‘ಥಾಮ’, ‘ಮುಂಜಿಯಾ’ಗಳಲ್ಲಿ ನಟಿಸಿದ್ದಾರೆ. ಯಶ್ ರಾಜ್ ಫಿಲಮ್ಸ್ ಅವರಿಗೆ ಈ ಹಿಂದೆ ಭಾರಿ ಲಾಭ ಮಾಡಿಕೊಟ್ಟಿದ್ದ ಸ್ಪೈ ಸಿನಿಮಾಗಳು ಇತ್ತೀಚೆಗೆ ಅವರಿಗೆ ತುಸು ನಷ್ಟವನ್ನೇ ಉಂಟು ಮಾಡಿವೆ ಎನ್ನಲಾಗುತ್ತಿದೆ. ಅಲ್ಲದೆ, ಯಶ್ ರಾಜ್ ಅವರ ಸಿದ್ಧ ಸೂತ್ರದ ಸ್ಪೈ ಸಿನಿಮಾಗಳ ಬಗ್ಗೆ ಇತ್ತೀಚೆಗೆ ಸಾಕಷ್ಟು ಟ್ರೋಲಿಂಗ್ ಸಹ ನಡೆಯುತ್ತಿದೆ. ಇದೇ ಕಾರಣಕ್ಕೆ ಯಶ್ ರಾಜ್ ಫಿಲಮ್ಸ್ ಹೊಸ ಜಾನರ್​​ಗೆ ಎಂಟ್ರಿ ನೀಡಿದೆ.

ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯ ಈಗಾಗಲೇ ಚಾಲ್ತಿಯಲ್ಲಿದೆ. ಚಿತ್ರೀಕರಣ ಕೆಲವೇ ತಿಂಗಳುಗಳಲ್ಲಿ ಪ್ರಾರಂಭ ಆಗಲಿದ್ದು, 2027ರ ಆರಂಭದಲ್ಲಿಯೇ ಸಿನಿಮಾ ಬಿಡುಗಡೆ ಆಗಲಿದೆ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us