AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಾಯದಿಂದ ಚೇತರಿಸಿಕೊಂಡ ರಶ್ಮಿಕಾ ಮಂದಣ್ಣ; ಶೀಘ್ರದಲ್ಲೇ ಶೂಟಿಂಗ್‌ಗೆ ವಾಪಸ್

‘ಮೈಸಾ’ ಸಿನಿಮಾದ ಶೂಟಿಂಗ್ ವೇಳೆ ತೊಡೆಯ ಭಾಗಕ್ಕೆ ಗಾಯ ಮಾಡಿಕೊಂಡಿದ್ದ ನಟಿ ರಶ್ಮಿಕಾ ಮಂದಣ್ಣ ಈಗ ಸಂಪೂರ್ಣ ಚೇತರಿಸಿಕೊಂಡಿದ್ದಾರೆ. ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಅವರು ಶೀಘ್ರದಲ್ಲೇ ಶೂಟಿಂಗ್ ಅಖಾಡಕ್ಕೆ ಮರಳುವುದಾಗಿ ತಿಳಿಸಿದ್ದಾರೆ. ನೆಚ್ಚಿನ ನಟಿ ಗುಣಮುಖರಾಗಿ ಕೆಲಸಕ್ಕೆ ಮರಳುತ್ತಿರುವುದಕ್ಕೆ ಅಭಿಮಾನಿಗಳು ತೀವ್ರ ಸಂತಸ ಮತ್ತು ಸಮಾಧಾನ ವ್ಯಕ್ತಪಡಿಸಿದ್ದಾರೆ.

ಗಾಯದಿಂದ ಚೇತರಿಸಿಕೊಂಡ ರಶ್ಮಿಕಾ ಮಂದಣ್ಣ; ಶೀಘ್ರದಲ್ಲೇ ಶೂಟಿಂಗ್‌ಗೆ ವಾಪಸ್
ರಶ್ಮಿಕಾ
 ಶ್ರೀಲಕ್ಷ್ಮೀ ಎಚ್
| Edited By: |

Updated on: Aug 31, 2026 | 7:57 AM

Share

ಮುಖ್ಯಾಂಶಗಳು

  • ಶೂಟಿಂಗ್‌ಗೆ ಮರಳುವ ಸಂತಸ ಹಂಚಿಕೊಂಡ ರಶ್ಮಿಕಾ
  • ತೊಡೆಯ ಗಾಯದ ಬಗ್ಗೆ ನಟಿ ನೀಡಿದ್ದ ಸ್ಪಷ್ಟನೆ
  • ಆಕ್ಷನ್ ಅವತಾರದಲ್ಲಿ ಮಿಂಚಲು ಕಾಯುತ್ತಿರುವ ‘ಮೈಸಾ’

ಸ್ಟಾರ್ ನಟಿ ರಶ್ಮಿಕಾ ಮಂದಣ್ಣ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ತಮ್ಮ ಮುಂಬರುವ ‘ಮೈಸಾ’ ಸಿನಿಮಾದ ಚಿತ್ರೀಕರಣದ ವೇಳೆ ಅವರು ತೊಡೆಯ ಭಾಗಕ್ಕೆ ಗಂಭೀರ ಗಾಯ ಮಾಡಿಕೊಂಡಿದ್ದರು. ಕಳೆದ ಒಂದು ತಿಂಗಳಿನಿಂದ ಅವರು ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದರು. ಇದೀಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಶೀಘ್ರದಲ್ಲೇ ಮತ್ತೆ ಕೆಲಸಕ್ಕೆ ಹಾಜರಾಗುವುದಾಗಿ ತಮ್ಮ ಅಭಿಮಾನಿಗಳೊಂದಿಗೆ ಸಂತಸ ಹಂಚಿಕೊಂಡಿದ್ದಾರೆ.

ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ರಶ್ಮಿಕಾ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ವಿಶ್ರಾಂತಿಯ ಸಮಯದಲ್ಲಿ ಮನೆಯಲ್ಲಿ ಕಾಲ ಕಳೆದ ಸುಂದರ ಕ್ಷಣಗಳನ್ನು ಅವರು ಪೋಸ್ಟ್ ಮಾಡಿದ್ದಾರೆ. ಮನೆಯಲ್ಲಿ ಪೂಜೆ ಮಾಡುವುದು, ಸಾಕು ನಾಯಿಯೊಂದಿಗೆ ಆಟವಾಡುವುದು ಮತ್ತು ತಂಗಿಯೊಂದಿಗೆ ಸಮಯ ಕಳೆದ ಚಿತ್ರಗಳು ಅದರಲ್ಲಿವೆ. ಶೀಘ್ರದಲ್ಲೇ ಶೂಟಿಂಗ್‌ಗೆ ಮರಳಲಿದ್ದು, ಮನೆಯ ಈ ಕ್ಷಣಗಳನ್ನು ನೆನಪಿಸಿಕೊಳ್ಳುವುದಾಗಿ ಅವರು ಬರೆದುಕೊಂಡಿದ್ದಾರೆ.

ರಶ್ಮಿಕಾ ಅವರ ಈ ಪೋಸ್ಟ್ ನೋಡಿ ಅಭಿಮಾನಿಗಳು ತೀವ್ರ ಸಂತಸ ವ್ಯಕ್ತಪಡಿಸಿದ್ದಾರೆ. ನೆಚ್ಚಿನ ನಟಿ ಗುಣಮುಖರಾಗಿ ಮತ್ತೆ ಶೂಟಿಂಗ್‌ಗೆ ಮರಳುತ್ತಿರುವುದು ಅವರಲ್ಲಿ ಸಮಾಧಾನ ತಂದಿದೆ. ರಶ್ಮಿಕಾ ಅವರ ಕಮೆಂಟ್ ಬಾಕ್ಸ್‌ನಲ್ಲಿ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ. ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಅಭಿಮಾನಿಗಳು ಪ್ರೀತಿಯಿಂದ ಸಲಹೆ ನೀಡಿದ್ದಾರೆ.

‘ಮೈಸಾ’ ಸಿನಿಮಾದ ಡ್ಯಾನ್ಸ್ ಸನ್ನಿವೇಶದ ಶೂಟಿಂಗ್ ವೇಳೆ ರಶ್ಮಿಕಾ ಅವರಿಗೆ ಗಾಯವಾಗಿತ್ತು. ತೊಡೆಯ ಭಾಗದ ಸ್ನಾಯುವಿನ ಸಮಸ್ಯೆಯಿಂದಾಗಿ ಅವರು ವಿಶ್ರಾಂತಿ ಪಡೆಯಬೇಕಾಯಿತು. ತಮ್ಮ ದೇಹವನ್ನು ಯಂತ್ರದಂತೆ ದಂಡಿಸದೆ ಮನುಷ್ಯನಂತೆ ನೋಡಿಕೊಳ್ಳುವುದನ್ನು ಕಲಿಯಬೇಕಿದೆ ಎಂದು ಅವರು ಈ ಹಿಂದೆ ಹೇಳಿದ್ದರು. ದೇವರು ತಮಗೆ ಬಲವಂತವಾಗಿ ವಿಶ್ರಾಂತಿ ನೀಡಿದ್ದಾನೆ ಎಂದು ಅವರು ತಮಾಷೆಯಾಗಿ ಹೇಳಿಕೊಂಡಿದ್ದರು.

ಇದನ್ನೂ ಓದಿ: ಇರುಮುಡಿ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ಮೆಚ್ಚುಗೆ: ‘ಟಾಕ್ಸಿಕ್’ ಸಿನಿಮಾಗೂ ನಟಿಯಿಂದ ಸಿಗುತ್ತಾ ಹೊಗಳಿಕೆ?

ರವೀಂದ್ರ ಪುಲ್ಲೆ ನಿರ್ದೇಶನದ ‘ಮೈಸಾ’ ಚಿತ್ರದಲ್ಲಿ ರಶ್ಮಿಕಾ ಗೊಂಡ್ ಬುಡಕಟ್ಟು ಮಹಿಳೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ಅವರ ಮೊದಲ ಮಹಿಳಾ ಪ್ರಧಾನ ಪ್ಯಾನ್-ಇಂಡಿಯಾ ಆಕ್ಷನ್ ಸಿನಿಮಾವಾಗಿದೆ. ಇದರ ಹೊರತಾಗಿ ವಿಜಯ್ ದೇವರಕೊಂಡ ಜೊತೆಗಿನ ‘ರಣಬಾಲಿ’ ಸಿನಿಮಾದಲ್ಲೂ ಅವರು ನಟಿಸಿದ್ದು, ಸೆಪ್ಟೆಂಬರ್ 11 ರಂದು ಬಿಡುಗಡೆಯಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಇಂದು ಹೇರಂಭ ಸಂಕಷ್ಟ ಚತುರ್ಥಿ; ಸಿಂಹವಾಹನಸ್ಥ ವಿನಾಯಕನ ಆರಾಧನೆಯ ದಿನ
ಇಂದು ಹೇರಂಭ ಸಂಕಷ್ಟ ಚತುರ್ಥಿ; ಸಿಂಹವಾಹನಸ್ಥ ವಿನಾಯಕನ ಆರಾಧನೆಯ ದಿನ
ಮೋದಿ ಮೆಚ್ಚಿದ ಬೆಂಗಳೂರಿನ ನಿಂಗಮ್ಮನಿಗೆ ಒತ್ತುವರಿ ತೆರವು ಭಯ!
ಮೋದಿ ಮೆಚ್ಚಿದ ಬೆಂಗಳೂರಿನ ನಿಂಗಮ್ಮನಿಗೆ ಒತ್ತುವರಿ ತೆರವು ಭಯ!
ಬಿಗ್​​ಬಾಸ್ ಶುರುವಾಗಿ 13 ಸೀಸನ್ ಆದ್ರೂ ಗೆದ್ದವ್ರಿಗೆ 50 ಲಕ್ಷ ಮಾತ್ರ ಏಕೆ?
ಬಿಗ್​​ಬಾಸ್ ಶುರುವಾಗಿ 13 ಸೀಸನ್ ಆದ್ರೂ ಗೆದ್ದವ್ರಿಗೆ 50 ಲಕ್ಷ ಮಾತ್ರ ಏಕೆ?
ಗೃಹಲಕ್ಷ್ಮಿ ಯೋಜನೆ ಅಪ್ಡೇಟ್: ಮತ್ತೆ ಮರುಪರಿಶೀಲನೆಗೆ ಮುಂದಾದ ಸರ್ಕಾರ!
ಗೃಹಲಕ್ಷ್ಮಿ ಯೋಜನೆ ಅಪ್ಡೇಟ್: ಮತ್ತೆ ಮರುಪರಿಶೀಲನೆಗೆ ಮುಂದಾದ ಸರ್ಕಾರ!
ಕೆಪಿಎಸ್​ಸಿ ನೇಮಕಾತಿ ಹಗರಣ: ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಜೈಲಿಗೆ!
ಕೆಪಿಎಸ್​ಸಿ ನೇಮಕಾತಿ ಹಗರಣ: ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಜೈಲಿಗೆ!
Bigg Boss Kannada: ಬಿಗ್​​ಬಾಸ್ ಕನ್ನಡ ಸೀಸನ್ 13 ಸುದ್ದಿಗೋಷ್ಠಿ ಲೈವ್
Bigg Boss Kannada: ಬಿಗ್​​ಬಾಸ್ ಕನ್ನಡ ಸೀಸನ್ 13 ಸುದ್ದಿಗೋಷ್ಠಿ ಲೈವ್
‘ಅವರಿಗೆಲ್ಲ ಮೆಂಟಲ್ ಪ್ರಾಬ್ಲಂ’: ಟಾಕ್ಸಿಕ್ ಟ್ರೋಲ್ ಬಗ್ಗೆ ಪುಷ್ಪ ಮಾತು
‘ಅವರಿಗೆಲ್ಲ ಮೆಂಟಲ್ ಪ್ರಾಬ್ಲಂ’: ಟಾಕ್ಸಿಕ್ ಟ್ರೋಲ್ ಬಗ್ಗೆ ಪುಷ್ಪ ಮಾತು
ಸಿಐಡಿ ಅಧಿಕಾರಿಗಳ ಪ್ರಶ್ನೆಗೆ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಕಂಗಾಲು
ಸಿಐಡಿ ಅಧಿಕಾರಿಗಳ ಪ್ರಶ್ನೆಗೆ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಕಂಗಾಲು
ನಾಗೇಂದ್ರ ರಾಜೀನಾಮೆ ಅಂಗೀಕರಿಸಿದ ರಾಜ್ಯಪಾಲರು ಸಿಎಂ ಡಿಕೆಶಿಗೆ ಪತ್ರ
ನಾಗೇಂದ್ರ ರಾಜೀನಾಮೆ ಅಂಗೀಕರಿಸಿದ ರಾಜ್ಯಪಾಲರು ಸಿಎಂ ಡಿಕೆಶಿಗೆ ಪತ್ರ
ಪಾವನಾ ಕೊರಳಿಗೆ ತಾಳಿ ಕಟ್ಟಿದ ನಟ ಚಿಕ್ಕಣ್ಣ; ಮದುವೆಯ ಸುಂದರ ವಿಡಿಯೋ ನೋಡಿ..
ಪಾವನಾ ಕೊರಳಿಗೆ ತಾಳಿ ಕಟ್ಟಿದ ನಟ ಚಿಕ್ಕಣ್ಣ; ಮದುವೆಯ ಸುಂದರ ವಿಡಿಯೋ ನೋಡಿ..