AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅಭಿಮಾನಿಗಳಿಗಾಗಿ ಸುಳ್ಳು ಬಾಕ್ಸ್​ ಆಫೀಸ್​ ಲೆಕ್ಕ ಕೊಡ್ತೀವಿ’; ಕೊನೆಗೂ ಒಪ್ಪಿಕೊಂಡ ನಿರ್ಮಾಪಕ

ತೆಲುಗು ಸಿನಿಮಾಗಳ ಪೋಸ್ಟರ್‌ಗಳಲ್ಲಿ ಪ್ರಕಟಿಸುವ ಬಾಕ್ಸ್ ಆಫೀಸ್ ಕಲೆಕ್ಷನ್ ಲೆಕ್ಕಗಳು ಸುಳ್ಳು ಎಂದು ನಿರ್ಮಾಪಕ ನಾಗವಂಶಿ ಒಪ್ಪಿಕೊಂಡಿದ್ದಾರೆ. ಅಭಿಮಾನಿಗಳ ಸಂತೋಷಕ್ಕಾಗಿ ಈ ರೀತಿ ಸಂಖ್ಯೆಗಳನ್ನು ಹೆಚ್ಚಿಸಿ ತೋರಿಸಲಾಗುತ್ತದೆ. ಆದರೆ ಕಲೆಕ್ಷನ್ ಅನ್ನು ತೀರಾ ಅತಿಯಾಗಿ ಹೆಚ್ಚಿಸಿ ಸುಳ್ಳು ಹೇಳುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

‘ಅಭಿಮಾನಿಗಳಿಗಾಗಿ ಸುಳ್ಳು ಬಾಕ್ಸ್​ ಆಫೀಸ್​ ಲೆಕ್ಕ ಕೊಡ್ತೀವಿ’; ಕೊನೆಗೂ ಒಪ್ಪಿಕೊಂಡ ನಿರ್ಮಾಪಕ
ನಾಗ ವಂಶಿ
ರಾಜೇಶ್ ದುಗ್ಗುಮನೆ
|

Updated on: Aug 08, 2026 | 2:53 PM

Share

ಮುಖ್ಯಾಂಶಗಳು

  • ಬಾಕ್ಸ್ ಆಫೀಸ್ ಕಲೆಕ್ಷನ್ ಲೆಕ್ಕ ಸುಳ್ಳು ಎಂದ ಸಿತಾರಾ ಎಂಟರ್‌ಟೈನ್‌ಮೆಂಟ್ಸ್ ನಾಗವಂಶಿ
  • 100 ಕೋಟಿಯನ್ನು 110 ಕೋಟಿ ಎಂದು ತೋರಿಸುವುದರಲ್ಲಿ ತಪ್ಪೇನಿದೆ?
  • ತೆಲುಗು ಚಿತ್ರರಂಗದ ಬಾಕ್ಸ್ ಆಫೀಸ್ ಗಳಿಕೆಯ ಅಸಲಿ ಸತ್ಯವೇನು?

ತೆಲುಗು ಚಿತ್ರರಂಗದ ಪ್ರಸಿದ್ಧ ನಿರ್ಮಾಪಕ ನಾಗವಂಶಿ ಬಾಕ್ಸ್ ಆಫೀಸ್ ಗಳಿಕೆಯ ಸತ್ಯಾಸತ್ಯತೆಯ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಸಿನಿಮಾಗಳ ಪೋಸ್ಟರ್‌ಗಳಲ್ಲಿ ಪ್ರಕಟಿಸುವ ಕಲೆಕ್ಷನ್ ಲೆಕ್ಕಗಳನ್ನು ಹೆಚ್ಚಿಸಿ ತೋರಿಸಲಾಗುತ್ತದೆ ಎಂದು ಅವರು ಒಪ್ಪಿಕೊಂಡಿದ್ದಾರೆ. ನೈಜ ಅಂಕಿಅಂಶಗಳನ್ನು ಪ್ರಕಟಿಸುವ ಅಗತ್ಯವಾದರೂ ಏನಿದೆ ಎಂದು ಅವರು ನೇರವಾಗಿ ಪ್ರಶ್ನಿಸಿದ್ದಾರೆ.

ಅಭಿಮಾನಿಗಳ ಖುಷಿಗಾಗಿ ಕಲೆಕ್ಷನ್ ಹೆಚ್ಚಳ

ಸಿತಾರಾ ಎಂಟರ್‌ಟೈನ್‌ಮೆಂಟ್ಸ್ ಸಂಸ್ಥೆಯ ನಿರ್ಮಾಪಕ ನಾಗವಂಶಿ ಅವರು ಸಂದರ್ಶನವೊಂದರಲ್ಲಿ ಈ ಕುರಿತು ವಿಸ್ತಾರವಾಗಿ ಮಾತನಾಡಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಯಾವುದೇ ಸಿನಿಮಾ ಪೋಸ್ಟರ್ ಕೂಡ ನೈಜ ಲೆಕ್ಕವನ್ನು ನೀಡುವುದಿಲ್ಲ ಎಂದು ಅವರು ಹೇಳಿದ್ದಾರೆ. ‘ಸಿನಿಮಾ ಗಳಿಕೆ ಎಷ್ಟು ಎಂಬುದು ಮುಖ್ಯವಲ್ಲ. ಅಭಿಮಾನಿಗಳಿಗೆ ಖುಷಿ ಕೊಡುವುದಕ್ಕಾಗಿ ಈ ರೀತಿ ಮಾಡಲಾಗುತ್ತದೆ. ದೊಡ್ಡ ನಾಯಕರ ಸಿನಿಮಾಗಳು ಯಶಸ್ವಿಯಾದಾಗ ಅಭಿಮಾನಿಗಳು ಸಂಭ್ರಮಿಸುತ್ತಾರೆ’ ಎಂದಿದ್ದಾರೆ ಅವರು.

ಇದನ್ನೂ ಓದಿ: ‘ವಾರ್ 2’ ಸಿನಿಮಾದಿಂದ ಆದ ನಷ್ಟ ಎಷ್ಟು ಕೋಟಿ? ವಿವರಿಸಿದ ವಿತರಕ

ಆದಾಗ್ಯೂ ಅವರು ಈ ಲೆಕ್ಕಾಚಾರಕ್ಕೆ ಒಂದು ಗಡಿಯನ್ನೂ ನಿರ್ಧರಿಸಿದ್ದಾರೆ. ‘100 ಕೋಟಿ ಗಳಿಸಿದ ಸಿನಿಮಾವನ್ನು 110 ಕೋಟಿ ಎಂದು ಹೇಳಬಹುದು. ಆದರೆ ನೇರವಾಗಿ 200 ಕೋಟಿ ಎಂದು ದೊಡ್ಡ ಮಟ್ಟದಲ್ಲಿ ಸುಳ್ಳು ಹೇಳುವುದಿಲ್ಲ. ಈ ವ್ಯತ್ಯಾಸ ಸಣ್ಣ ಮಟ್ಟದಲ್ಲಿ ಮಾತ್ರ ಇರುತ್ತದೆ’ ಎಂಬುದು ಅವರ ಅಭಿಪ್ರಾಯವಾಗಿದೆ.

ಪೋಸ್ಟರ್ ಹಾಗೂ ನೈಜ ಲೆಕ್ಕಕ್ಕೆ ವ್ಯತ್ಯಾಸ

ಇತ್ತೀಚಿನ ದಿನಗಳಲ್ಲಿ ನಿರ್ಮಾಣ ಸಂಸ್ಥೆ ಪ್ರಕಟಿಸುವ ಲೆಕ್ಕಕ್ಕೂ ಹಾಗೂ ಸ್ವತಂತ್ರ ಟ್ರ್ಯಾಕಿಂಗ್ ವೆಬ್‌ಸೈಟ್‌ಗಳ ಲೆಕ್ಕಕ್ಕೂ ದೊಡ್ಡ ವ್ಯತ್ಯಾಸ ಕಂಡುಬರುತ್ತಿದೆ. ನಾಗವಂಶಿ ನಿರ್ಮಾಣದ ‘ಡಾಕು ಮಹಾರಾಜ್’ ಚಿತ್ರದ ಮೊದಲ ದಿನದ ಗಳಿಕೆಯನ್ನು ಸಂಸ್ಥೆ 56 ಕೋಟಿ ಎಂದು ಹೇಳಿತ್ತು. ಆದರೆ ಸ್ಯಾಕ್ನಿಲ್ಕ್ ವರದಿ ಪ್ರಕಾರ ಅದು 41.24 ಕೋಟಿ ರೂಪಾಯಿ ಮಾತ್ರವಾಗಿತ್ತು. ಐದನೇ ದಿನಕ್ಕೆ ಚಿತ್ರ 114 ಕೋಟಿ ಗಳಿಸಿದೆ ಎಂದು ಪೋಸ್ಟರ್ ಬಿಡಲಾಗಿತ್ತು. ಆದರೆ ಸ್ಯಾಕ್ನಿಲ್ಕ್ ಪ್ರಕಾರ ಗಳಿಕೆ 94.18 ಕೋಟಿ ಆಗಿತ್ತು.

ಇದೇ ರೀತಿ ‘ಕಿಂಗ್‌ಡಮ್’ ಸಿನಿಮಾದ ಗಳಿಕೆಯಲ್ಲೂ ದೊಡ್ಡ ವ್ಯತ್ಯಾಸವಿತ್ತು. ನಿರ್ಮಾಣ ಸಂಸ್ಥೆ 82 ಕೋಟಿ ಎಂದು ಪ್ರಕಟಿಸಿದರೆ, ಟ್ರ್ಯಾಕರ್ಸ್ 65.76 ಕೋಟಿ ಎಂದು ಅಂದಾಜಿಸಿದ್ದರು. ಇಂತಹ ವ್ಯತ್ಯಾಸಗಳು ಚಿತ್ರರಂಗದಲ್ಲಿ ಸಾಮಾನ್ಯ ಸಂಗತಿಯಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಬಿಡದಿ ಟೌನ್​ಶಿಪ್ ವಿರುದ್ಧ ಜೆಡಿಎಸ್, ಬಿಜೆಪಿ ಒಟ್ಟಾಗಿ ಹೋರಾಟ: ಅಶೋಕ್
ಬಿಡದಿ ಟೌನ್​ಶಿಪ್ ವಿರುದ್ಧ ಜೆಡಿಎಸ್, ಬಿಜೆಪಿ ಒಟ್ಟಾಗಿ ಹೋರಾಟ: ಅಶೋಕ್
ಬೆಂಗಳೂರಿನಲ್ಲಿ ಹಿಂದಿ ಮಾತನಾಡದ್ದಕ್ಕೆ ಡೆಲಿವರಿ ಬಾಯ್ ಮೇಲೆ ಹಲ್ಲೆ!
ಬೆಂಗಳೂರಿನಲ್ಲಿ ಹಿಂದಿ ಮಾತನಾಡದ್ದಕ್ಕೆ ಡೆಲಿವರಿ ಬಾಯ್ ಮೇಲೆ ಹಲ್ಲೆ!
ನೂರಾರು ಬಡ ವಿದ್ಯಾರ್ಥಿಗಳ ಆಸರೆ ಆಗ್ಬೇಕಿದ್ದ ವಸತಿ ನಿಲಯದಲ್ಲಿ ಅವ್ಯವಸ್ಥೆ
ನೂರಾರು ಬಡ ವಿದ್ಯಾರ್ಥಿಗಳ ಆಸರೆ ಆಗ್ಬೇಕಿದ್ದ ವಸತಿ ನಿಲಯದಲ್ಲಿ ಅವ್ಯವಸ್ಥೆ
‘ಟಾಕ್ಸಿಕ್’ ಟ್ರೇಲರ್ ಲಾಂಚ್​ಗೆ ಬಂದ ಲೇಡೀಸ್ ಆ್ಯಂಡ್ ಲೇಡೀಸ್
‘ಟಾಕ್ಸಿಕ್’ ಟ್ರೇಲರ್ ಲಾಂಚ್​ಗೆ ಬಂದ ಲೇಡೀಸ್ ಆ್ಯಂಡ್ ಲೇಡೀಸ್
ತುಮಕೂರು ಪಡಿತರದಾರರಿಗೆ ಸರ್ಕಾರ ಶಾಕ್: 14 ಸಾವಿರ ಬಿಪಿಎಲ್ ಕಾರ್ಡ್ ರದ್ದು
ತುಮಕೂರು ಪಡಿತರದಾರರಿಗೆ ಸರ್ಕಾರ ಶಾಕ್: 14 ಸಾವಿರ ಬಿಪಿಎಲ್ ಕಾರ್ಡ್ ರದ್ದು
: ಕಂದಕಕ್ಕೆ ಉರುಳಿದ ಬಸ್, 7 ಪ್ರಯಾಣಿಕರು ಸಾವು
: ಕಂದಕಕ್ಕೆ ಉರುಳಿದ ಬಸ್, 7 ಪ್ರಯಾಣಿಕರು ಸಾವು
ಹಾವನೂರು ಬಡಾವಣೆ ಮನೆಯೊಂದರಲ್ಲಿ ಅಸ್ಥಿಪಂಜರ ಪತ್ತೆ!
ಹಾವನೂರು ಬಡಾವಣೆ ಮನೆಯೊಂದರಲ್ಲಿ ಅಸ್ಥಿಪಂಜರ ಪತ್ತೆ!
ಜೋರಾದ ಖಾತೆ ಹಂಚಿಕೆ ಕಸರತ್ತು: ಸಿದ್ದರಾಮಯ್ಯ ಜೊತೆ ಡಿಕೆಶಿ ಗಂಭೀರ ಚರ್ಚೆ
ಜೋರಾದ ಖಾತೆ ಹಂಚಿಕೆ ಕಸರತ್ತು: ಸಿದ್ದರಾಮಯ್ಯ ಜೊತೆ ಡಿಕೆಶಿ ಗಂಭೀರ ಚರ್ಚೆ
ಮೆಟ್ರೋ ಕಾಮಗಾರಿ ವೇಳೆ ನೆಲಕ್ಕೆ ಬಿದ್ದ ಬೃಹತ್ ಶೀಟ್: ತಪ್ಪಿದ ಭಾರಿ ದುರಂತ
ಮೆಟ್ರೋ ಕಾಮಗಾರಿ ವೇಳೆ ನೆಲಕ್ಕೆ ಬಿದ್ದ ಬೃಹತ್ ಶೀಟ್: ತಪ್ಪಿದ ಭಾರಿ ದುರಂತ
ಕರ್ನಾಟಕ ಎಸ್‌ಐಆರ್ ಅವಧಿ ಆಗಸ್ಟ್ 8ರ ಬದಲು ಆಗಸ್ಟ್ 17ರ ತನಕ ವಿಸ್ತರಣೆ
ಕರ್ನಾಟಕ ಎಸ್‌ಐಆರ್ ಅವಧಿ ಆಗಸ್ಟ್ 8ರ ಬದಲು ಆಗಸ್ಟ್ 17ರ ತನಕ ವಿಸ್ತರಣೆ