AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿದೇಶಿ ಉದ್ಯೋಗದ ಆಮಿಷ; ಪೋರ್ಚುಗಲ್‌ನಲ್ಲಿ ಭಾರತೀಯ ಯುವತಿಯನ್ನು ಬಿಯರ್ ಶಾಪ್ ಮಾಲೀಕನಿಗೆ ಮಾರಿದ ಏಜೆನ್ಸಿ!

ಉತ್ತಮ ಸಂಬಳದ ವಿದೇಶಿ ಉದ್ಯೋಗದ ಭರವಸೆ ನೀಡಿ ಸುಮಾರು 11 ಲಕ್ಷ ರೂಪಾಯಿ ವಸೂಲಿ ಮಾಡಿದ ಪುಣೆ ಮೂಲದ ಸಂಸ್ಥೆಯೊಂದು ನಾಗ್ಪುರದ 28 ವರ್ಷದ ಮಹಿಳೆಯನ್ನು ಪೋರ್ಚುಗಲ್‌ಗೆ ಮಾನವ ಕಳ್ಳಸಾಗಣೆ ಮಾಡಿ, ಅಲ್ಲಿನ ಬಿಯರ್ ಶಾಪ್ ಮಾಲೀಕನಿಗೆ ಮಾರಾಟ ಮಾಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಕಳೆದ ತಿಂಗಳು ಈ ಮಹಿಳೆ ಇನ್‌ಸ್ಟಾಗ್ರಾಮ್ ಮೂಲಕ ಪುಣೆಯ 'ವಿ ಮೈಗ್ರೇಟ್' ಎಂಬ ಕನ್ಸಲ್ಟೆನ್ಸಿಯನ್ನು ಸಂಪರ್ಕಿಸಿದಾಗ ಈ ಘಟನೆ ನಡೆದಿದೆ. ಏಜೆನ್ಸಿಯವರು ಆಕೆಗೆ ಪೋರ್ಚುಗಲ್‌ನಲ್ಲಿ ತಿಂಗಳಿಗೆ 1.5 ಲಕ್ಷ ರೂ. ಸಂಬಳದ ಕ್ಯಾಷಿಯರ್ ಉದ್ಯೋಗ ಕೊಡುಸುವುದಾಗಿ ಮತ್ತು ದಿನಕ್ಕೆ ಕೇವಲ 8 ಗಂಟೆಗಳ ಕಾಲ ಕೆಲಸ ಇರಲಿದೆ ಎಂದು ನಂಬಿಸಿದ್ದರು.

ವಿದೇಶಿ ಉದ್ಯೋಗದ ಆಮಿಷ; ಪೋರ್ಚುಗಲ್‌ನಲ್ಲಿ ಭಾರತೀಯ ಯುವತಿಯನ್ನು ಬಿಯರ್ ಶಾಪ್ ಮಾಲೀಕನಿಗೆ ಮಾರಿದ ಏಜೆನ್ಸಿ!
Woman HarassmentImage Credit source: TV9
ಸುಷ್ಮಾ ಚಕ್ರೆ
|

Updated on: Aug 08, 2026 | 6:24 PM

Share

ನವದೆಹಲಿ, ಆಗಸ್ಟ್ 8: ಕೆಲವೊಮ್ಮೆ ಹಣದ ಬಗ್ಗೆ ನಮಗಿರುವ ಅತಿಯಾದ ವ್ಯಾಮೋಹ, ದುರಾಸೆ ನಮ್ಮ ಪ್ರಾಣಕ್ಕೇ ಸಂಚಕಾರ ತಂದುಬಿಡುತ್ತದೆ. ಹೆಚ್ಚಿನ ಸಂಬಳ ಸಿಗುತ್ತದೆ, ಇನ್ನೂ ಚೆನ್ನಾಗಿ ಬದುಕು ಕಟ್ಟಿಕೊಳ್ಳಬಹುದು ಎಂಬ ಆಸೆ, ಕನಸುಗಳಿಂದ ಪೋರ್ಚುಗಲ್​ಗೆ ಹೋಗಿದ್ದ ಭಾರತೀಯ ಯುವತಿಗೆ ದೊಡ್ಡ ಆಘಾತ ಕಾದಿತ್ತು. ಪೋರ್ಚುಗಲ್​ಗೆ ಹೋಗುತ್ತಿದ್ದಂತೆ ಆಕೆಗೆ ಕೆಲಸ ಕೊಡಿಸುವುದಾಗಿ ಕರೆದುಕೊಂಡು ಹೋಗಿದ್ದ ಏಜೆನ್ಸಿ ಆಕೆಯನ್ನು ಅಲ್ಲಿನ ಬಿಯರ್ ಶಾಪ್ ಮಾಲೀಕರಿಗೆ ಮಾರಾಟ ಮಾಡಿದೆ. ಅಷ್ಟೇ ಅಲ್ಲದೆ, ವೀಸಾ ಮತ್ತು ಇತರೆ ದಾಖಲೆಗಳ ಕೆಲಸದ ಹೆಸರಿನಲ್ಲಿ ವಂಚಕರು ಆ ಯುವತಿಯಿಂದ ಹಂತ ಹಂತವಾಗಿ ಒಟ್ಟು 11 ಲಕ್ಷ ರೂ. ಹಣ ಕಿತ್ತುಕೊಂಡಿದೆ.

ಹೊಸ ಉದ್ಯೋಗಕ್ಕೆ ಸೇರುವ ಆಸೆಯಲ್ಲಿ ಆ ಯುವತಿ ಪೋರ್ಚುಗಲ್‌ಗೆ ತಲುಪಿದ ತಕ್ಷಣ, ಅಲ್ಲಿದ್ದ ಏಜೆಂಟ್‌ಗಳು ಆಕೆಯ ಪಾಸ್‌ಪೋರ್ಟ್‌ ಅನ್ನು ಕಸಿದುಕೊಂಡು, ಕೊಠಡಿಯೊಂದರಲ್ಲಿ 2 ದಿನಗಳ ಕಾಲ ಬಂಧನದಲ್ಲಿಟ್ಟಿದ್ದರು. ನಂತರ ಆಕೆಯನ್ನು ಬಿಯರ್ ಶಾಪ್ ಮಾಲೀಕನಿಗೆ ಮಾರಾಟ ಮಾಡಲಾಗಿದ್ದು, ಅಲ್ಲಿ ಆಕೆಯಿಂದ ಬಲವಂತವಾಗಿ ಕೆಲಸ ಮಾಡಿಸಿಕೊಂಡು, ತೀವ್ರ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಲಾಗಿದೆ. ಆ ಯುವತಿ ತನ್ನ ಪಾಸ್‌ಪೋರ್ಟ್‌ ಅನ್ನು ಹಿಂತಿರುಗಿಸುವಂತೆ ವಂಚಕರನ್ನು ಕೇಳಿದಾಗ, ಅವರು ಮತ್ತಷ್ಟು ಹಣ ನೀಡುವಂತೆ ಬೇಡಿಕೆ ಇಟ್ಟಿದ್ದರು.

ಇದನ್ನೂ ಓದಿ: ಇನ್‌ಸ್ಟಾಗ್ರಾಮ್ ಗೆಳೆಯನಿಂದ ಪಿಯುಸಿ ಬಾಲಕಿ ಮೇಲೆ ಅತ್ಯಾಚಾರ; ಆನ್‌ಲೈನ್ ಫುಡ್ ಆರ್ಡರ್​ನಿಂದ ಸಿಕ್ಕಿಬಿದ್ದ ಆರೋಪಿ

ಯುವತಿ ಬಚಾವಾಗಿದ್ದು ಹೇಗೆ?:

ಬಿಯರ್ ಶಾಪ್ ಮಾಲೀಕರ ಬಳಿ ಸುಮಾರು 1 ತಿಂಗಳ ಕಾಲ ತೀವ್ರ ಕಿರುಕುಳ ಅನುಭವಿಸಿದ ನಂತರ, ಆ ಯುವತಿ ಅಲ್ಲಿಂದ ತಪ್ಪಿಸಿಕೊಳ್ಳಲು ಉಪಾಯ ಹೂಡಿದ್ದಾರೆ. ಮೊದಲು ಬಸ್ ಮೂಲಕ ಲಿಸ್ಬನ್‌ಗೆ ಓಡಿಹೋದ ಆಕೆ, ನಂತರ ಮ್ಯಾಡ್ರಿಡ್‌ಗೆ ತಲುಪಿದ್ದಾರೆ. ಅಲ್ಲಿಂದ ದೋಹಾ ಮಾರ್ಗವಾಗಿ ಭಾರತಕ್ಕೆ ಮರಳುವಲ್ಲಿ ಯಶಸ್ವಿಯಾಗಿದ್ದಾರೆ. ಆಕೆ ಭಾರತಕ್ಕೆ ಬಂದಿಳಿಯುತ್ತಿದ್ದಂತೆ ಮಾಲ್ಟಾದಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಅದೇ ವಂಚಕರು ಮತ್ತೆ 3 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಾರೆ. ಆ ಯುವತಿ ಹಣ ನೀಡಲು ನಿರಾಕರಿಸಿದಾಗ, ಆಕೆಯ ಗಂಡನನ್ನು ಕೊಲೆ ಮಾಡುವುದಾಗಿ ಮತ್ತು ಆಕೆಯ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸುವುದಾಗಿ ಬೆದರಿಕೆ ಹಾಕಲು ಪ್ರಾರಂಭಿಸಿದ್ದಾರೆ. ಇದರಿಂದ ರೋಸಿಹೋದ ಮಹಿಳೆ ಪುಣೆ ಪೊಲೀಸರನ್ನು ಸಂಪರ್ಕಿಸಿದ್ದಾರೆ.

ಇದನ್ನೂ ಓದಿ: ‘ವರ್ಕ್ ಫ್ರಂ ಹೋಂ’ ಹೆಸರಲ್ಲಿ ಕೋಟಿ ಕೋಟಿ ವಂಚಿಸಿದ್ದ ಖತರ್ನಾಕ್ ದಂಪತಿ ಪೊಲೀಸರ ವಶ!

ಮಾನವ ಕಳ್ಳಸಾಗಣೆ, ವಂಚನೆ ಮತ್ತು ಸುಲಿಗೆ ಆರೋಪದಡಿ ‘ವಿ ಮೈಗ್ರೇಟ್’ ಸಂಸ್ಥೆಯ ನಿರ್ವಾಹಕರು ಸೇರಿದಂತೆ 8 ಮಂದಿ ಆರೋಪಿಗಳ ವಿರುದ್ಧ ಈ ವಾರದ ಆರಂಭದಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಂತ್ರಸ್ತೆ ನಾಗಪುರದ ಕಾಲೇಜೊಂದರಲ್ಲಿ ಬಿ.ಕಾಂ ಪದವಿ ಪೂರ್ಣಗೊಳಿಸಿದ್ದು, ಆಯುರ್ವೇದ ಔಷಧ ಮಾರಾಟ ಮಾಡುವ ವ್ಯಕ್ತಿಯನ್ನು ಮದುವೆಯಾಗಿದ್ದಾರೆ. ಉತ್ತಮ ಭವಿಷ್ಯ ಮತ್ತು ವಿದೇಶದಲ್ಲಿ ಉದ್ಯೋಗದ ಆಸೆಯಲ್ಲಿದ್ದ ಯುವತಿಗೆ ಪುಣೆ ಮೂಲದ ಜಾಬ್ ಏಜೆನ್ಸಿ ಈ ರೀತಿ ವಂಚನೆ ಮಾಡಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
ಸ್ಟಿಂಗ್​ ಆಪರೇಷನ್​ ಯಾರು ಮಾಡುತ್ತಿದ್ದಾರೆಂದು ಗೊತ್ತಿದೆ ಎಂದ ಸಿದ್ದರಾಮಯ್ಯ
ಸ್ಟಿಂಗ್​ ಆಪರೇಷನ್​ ಯಾರು ಮಾಡುತ್ತಿದ್ದಾರೆಂದು ಗೊತ್ತಿದೆ ಎಂದ ಸಿದ್ದರಾಮಯ್ಯ
ಸ್ಟಿಂಗ್ ಆಪರೇಷನ್ ಮಾಂತ್ರಿಕ ಯಾರು? ಹೋಟೆಲ್ ಸೀಕ್ರೆಟ್ ಬಿಚ್ಚಿಟ್ಟ ಕುಮಾರಣ್ಣ
ಸ್ಟಿಂಗ್ ಆಪರೇಷನ್ ಮಾಂತ್ರಿಕ ಯಾರು? ಹೋಟೆಲ್ ಸೀಕ್ರೆಟ್ ಬಿಚ್ಚಿಟ್ಟ ಕುಮಾರಣ್ಣ
‘ಪ್ರೇಮದ ಊರಲಿ’ ಸಿನಿಮಾಕ್ಕೆ ನಟಿ ರಮಿಕಾ ಡಬ್ಬಿಂಗ್: ವಿಡಿಯೋ ನೋಡಿ
‘ಪ್ರೇಮದ ಊರಲಿ’ ಸಿನಿಮಾಕ್ಕೆ ನಟಿ ರಮಿಕಾ ಡಬ್ಬಿಂಗ್: ವಿಡಿಯೋ ನೋಡಿ
‘ಪ್ರೇಮದ ಊರಲಿ’ ಸಿನಿಮಾ ಗಳಿಸಿರುವುದೆಷ್ಟು? ನಟ ಶ್ರೀರಾಮ್ ಹೇಳಿದ್ದೇನು?
‘ಪ್ರೇಮದ ಊರಲಿ’ ಸಿನಿಮಾ ಗಳಿಸಿರುವುದೆಷ್ಟು? ನಟ ಶ್ರೀರಾಮ್ ಹೇಳಿದ್ದೇನು?
11 ದಿನ ದಸರಾ ವಿಶೇಷತೆ ಬಗ್ಗೆ ಇತಿಹಾಸ ತಜ್ಞ ಡಾ.ಶೆಲ್ವಪಿಳೈ ಹೇಳಿದ್ದಿಷ್ಟು
11 ದಿನ ದಸರಾ ವಿಶೇಷತೆ ಬಗ್ಗೆ ಇತಿಹಾಸ ತಜ್ಞ ಡಾ.ಶೆಲ್ವಪಿಳೈ ಹೇಳಿದ್ದಿಷ್ಟು
ಅಜ್ಜಿ ಸಾವಿನ ಸುದ್ದಿ ತಿಳಿದರೂ ಮನೆಗೆ ತೆರಳಲು ನಿರಾಕರಿಸಿದ ಅಭಿಜೀತ್ ದಿಪ್ಕೆ
ಅಜ್ಜಿ ಸಾವಿನ ಸುದ್ದಿ ತಿಳಿದರೂ ಮನೆಗೆ ತೆರಳಲು ನಿರಾಕರಿಸಿದ ಅಭಿಜೀತ್ ದಿಪ್ಕೆ
ರೂಪಗೊಳ್ಳುತ್ತಿದೆ ಮೈ ಹೋಂ ಗ್ರೂಪ್​​​ನ ಮತ್ತೊಂದು ಅಲ್ಟ್ರಾ ಲಕ್ಸುರಿ ಯೋಜನೆ
ರೂಪಗೊಳ್ಳುತ್ತಿದೆ ಮೈ ಹೋಂ ಗ್ರೂಪ್​​​ನ ಮತ್ತೊಂದು ಅಲ್ಟ್ರಾ ಲಕ್ಸುರಿ ಯೋಜನೆ
ರೇವಣ್ಣ ಬೆನ್ನಲ್ಲೇ ಹಾಸನ ಜಿಲ್ಲಾಧಿಕಾರಿ ವಿರುದ್ಧ ಸಮರಕ್ಕಿಳಿದ ಕುಮಾರಸ್ವಾಮಿ
ರೇವಣ್ಣ ಬೆನ್ನಲ್ಲೇ ಹಾಸನ ಜಿಲ್ಲಾಧಿಕಾರಿ ವಿರುದ್ಧ ಸಮರಕ್ಕಿಳಿದ ಕುಮಾರಸ್ವಾಮಿ
ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಕುಮಾರಸ್ವಾಮಿಯ ಸ್ಟಿಂಗ್ ಆಪರೇಷನ್ ಮಾತು
ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಕುಮಾರಸ್ವಾಮಿಯ ಸ್ಟಿಂಗ್ ಆಪರೇಷನ್ ಮಾತು
'ನನ್ನನ್ನು ಬಂಧಿಸಿರಲಿಲ್ಲ, ಅಪಹರಿಸಿದ್ದರು'; ಯೂಟ್ಯೂಬರ್ ಧ್ರುವ್ ರಾಠೀ
'ನನ್ನನ್ನು ಬಂಧಿಸಿರಲಿಲ್ಲ, ಅಪಹರಿಸಿದ್ದರು'; ಯೂಟ್ಯೂಬರ್ ಧ್ರುವ್ ರಾಠೀ