ಕಿಚ್ಚ ಸುದೀಪ್ ರೀತಿಯಲ್ಲೇ ಬಿಗ್ ಬಾಸ್ ನಿರೂಪಣೆ ಮಾಡಿದ ಗಿಲ್ಲಿ ನಟ
ನವೆಂಬರ್ 16ರಂದು ಯಾರು ಎಲಿಮಿನೇಟ್ ಆಗುತ್ತಾರೆ ಎಂಬ ಕೌತುಕದ ನಡುವೆ ಗಿಲ್ಲಿ ನಟ ಮಸ್ತ್ ಕಾಮಿಡಿ ಮಾಡಿದ್ದಾರೆ. ಕಿಚ್ಚ ಸುದೀಪ್ ಬಿಗ್ ಬಾಸ್ ಶೋ ನಿರೂಪಣೆ ಮಾಡುವ ಶೈಲಿಯನ್ನು ಗಿಲ್ಲಿ ನಟ ಅವರು ಅನುಕರಣೆ ಮಾಡಿ ತೋರಿಸಿದ್ದಾರೆ. ಪ್ರೋಮೋವನ್ನು ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿದೆ. ಗಿಲ್ಲಿ ನಟ ಅವರ ಕಾಮಿಡಿಗೆ ಸುದೀಪ್ ಕೂಡ ನಕ್ಕಿದ್ದಾರೆ.
ಬಿಗ್ ಬಾಸ್ ಮನೆಯ ಒಳಗೆ ಗಿಲ್ಲಿ ನಟ ಅವರು ಎಲ್ಲರನ್ನೂ ಅನುಕರಣೆ ಮಾಡಿ ತೋರಿಸಿ ಕಾಮಿಡಿ ಕಚಗುಳಿ ನೀಡುತ್ತಾರೆ. ಈಗ ಕಿಚ್ಚ ಸುದೀಪ್ (Kichcha Sudeep) ನಿರೂಪಣೆಯ ಶೈಲಿಯನ್ನೇ ಗಿಲ್ಲಿ ಅನುಕರಣೆ ಮಾಡಿ ತೋರಿಸಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada) ರಿಯಾಲಿಟಿ ಶೋನ ನವೆಂಬರ್ 16ರ ಸಂಚಿಕೆಯಲ್ಲಿ ಈ ಫನ್ನಿ ಸಂಗತಿ ನಡೆದಿದೆ. ಸುದೀಪ್ ಅವರನ್ನು ಅನುಕರಣೆ ಮಾಡುವಾಗಲೂ ಗಿಲ್ಲಿ ನಟ ಅವರು ಕಾವ್ಯಾ ಅಂದವನ್ನು ಹೊಗಳಲು ಮರೆಯಲಿಲ್ಲ. ಕಾವ್ಯ ಮತ್ತು ಗಿಲ್ಲಿ ನಡುವೆ ಒಳ್ಳೆಯ ಬಾಂಧವ್ಯ ಬೆಳೆದಿದೆ. ಇದರಿಂದ ಮುಂದಿನ ದಿನಗಳಲ್ಲಿ ಅವರಿಬ್ಬರ ಆಟಕ್ಕೆ ತೊಂದರೆ ಆದರೂ ಅಚ್ಚರಿ ಏನಿಲ್ಲ. ಸದ್ಯಕ್ಕೆ ಗಿಲ್ಲಿ ನಟ (Gilli Nata) ಅವರು ಬಿಗ್ ಬಾಸ್ ಮನೆಯಲ್ಲಿ ಮಿಂಚುತ್ತಿದ್ದಾರೆ. ಅವರೇ ಫಿನಾಲೆ ಅಭ್ಯರ್ಥಿ ಎಂಬುದು ಮನೆಯಲ್ಲಿ ಬಹುತೇಕ ಎಲ್ಲರ ಅಭಿಪ್ರಾಯ ಆಗಿದೆ. ಭಾನುವಾರ (ನ.16) ಯಾರು ಎಲಿಮಿನೇಟ್ ಆಗುತ್ತಾರೆ ಎಂಬ ಕೌತುಕದ ನಡುವೆ ಗಿಲ್ಲಿ ನಟ ಅವರು ಮಸ್ತ್ ಕಾಮಿಡಿ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

