ಅಧಿಕ ಪ್ರಸಂಗ, ಓವರ್ ಕಾನ್ಫಿಡೆನ್ಸ್ ಬೇಡ; ಗಿಲ್ಲಿ ನಟನಿಗೆ ಕಿಚ್ಚನ ವಾರ್ನಿಂಗ್
ಈ ವಾರ ನಾಮಿನೇಷನ್ ನಡೆಯಿತು. ಈ ನಾಮಿನೇಷನ್ ಮಾಡುವ ಅಧಿಕಾರ ಕ್ಯಾಪ್ಟನ್ ಮಾಳುವಿಗೆ ಇತ್ತು. ಆಗ ಮಾಳು ಅವರು ಒಂದಷ್ಟು ಹೆಸರನ್ನು ನಾಮಿನೇಟ್ ಮಾಡಿದರು. ಅವರು ನೀಡಿದ ಕಾರಣ ಸರಿ ಇಲ್ಲ ಎಂಬ ಕಾರಣಕ್ಕೆ ಅವರಿಗೆ ಕಳಪೆ ಸಿಕ್ಕಿದೆ. ಈ ವಿಚಾರ ಮಾಳು ಅವರಿಗೂ ಕೂಡ ಅನಿಸಿದೆ.

‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಗಿಲ್ಲಿ ನಟ ಅವರು ಗೆಲ್ಲುವ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದಾರೆ. ಅವರಿಗೆ ಯಾರೂ ಸರಿಸಾಟಿಯಿಲ್ಲ ಎಂದು ಹೇಳಬಹುದು. ಆದರೆ, ಇತ್ತೀಚೆಗೆ ಗಿಲ್ಲಿ ನಟ ಅವರ ಆಟ ಹಳಿ ತಪ್ಪಿತೇ ಎಂಬ ಪ್ರಶ್ನೆ ಮೂಡುವಂತೆ ಆಗಿದೆ ಎಂದರೂ ತಪ್ಪಾಗಲಾರದು. ಈ ವಾರ ಗಿಲ್ಲಿ ನಟ ಅವರಿಗೆ ಕಿಚ್ಚನ ವಾರ್ನಿಂಗ್ ಬಂದಿದೆ. ಗಿಲ್ಲಿ ನಟ ಕ್ಷಮೆ ಕೇಳಿದರು.
ಗಿಲ್ಲಿ ನಟ ಅವರು ಒಳ್ಳೆಯ ರೀತಿಯಲ್ಲಿ ಆಟ ಆಡುತ್ತಿದ್ದಾರೆ. ಆದರೆ, ಇತ್ತೀಚೆಗೆ ಈಗ ಅವರು ಪ್ರತಿ ಹಂತದಲ್ಲೂ ತಪ್ಪುತ್ತಿರುವಂತೆ ಕಾಣುತ್ತಿದೆ. ಗಿಲ್ಲಿ ನಟ ಅವರಿಗೆ ಈಗ ಸುದೀಪ್ ಅವರಿಂದ ವಾರ್ನಿಂಗ್ ಬಂದಿದೆ. ಇದಕ್ಕೆ ಅವರು ಮಾಡಿದ ತಪ್ಪೇ ಕಾರಣ. ಆ ಬಗ್ಗೆ ಇಲ್ಲಿದೆ ವಿವರ.
ಈ ವಾರ ನಾಮಿನೇಷನ್ ನಡೆಯಿತು. ಈ ನಾಮಿನೇಷನ್ ಮಾಡುವ ಅಧಿಕಾರ ಕ್ಯಾಪ್ಟನ್ ಮಾಳುವಿಗೆ ಇತ್ತು. ಆಗ ಮಾಳು ಅವರು ಒಂದಷ್ಟು ಹೆಸರನ್ನು ನಾಮಿನೇಟ್ ಮಾಡಿದರು. ಅವರು ನೀಡಿದ ಕಾರಣ ಸರಿ ಇಲ್ಲ ಎಂಬ ಕಾರಣಕ್ಕೆ ಅವರಿಗೆ ಕಳಪೆ ಸಿಕ್ಕಿದೆ. ಈ ವಿಚಾರ ಮಾಳು ಅವರಿಗೂ ಕೂಡ ಅನಿಸಿದೆ.
ಆದರೆ, ಆ ದಿನ ಗಿಲ್ಲಿ ನಟ ಅವರು ಕ್ಯಾಪ್ಟನ್ ಮಾಳು ಅವರನ್ನು ಹೊಗಳಿದ್ದರು. ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಸುದೀಪ್ ಕೇಳಿದರು. ಆದರೆ, ಗಿಲ್ಲಿಗೆ ಮಾತು ಬರಲೇ ಇಲ್ಲ. ಈ ಸಂದರ್ಭದಲ್ಲಿ ಸುದೀಪ್ ಅವರು ಗಿಲ್ಲಿ ನಟನಿಗೆ ಎಚ್ಚರಿಕೆ ಕೊಟ್ಟಿದ್ದಾರೆ. ‘ಅಧಿಕ ಪ್ರಸಂಗ, ಓವರ್ ಕಾನ್ಫಿಡೆನ್ಸ್ ಬೇಡ’ ಎಂದು ಸುದೀಪ್ ಅವರು ಎಚ್ಚರಿಕೆ ನೀಡಿದರು ಎಂಬುದು ವಿಶೇಷ.
ಗಿಲ್ಲಿ ನಟ ಅವರು ಈ ವಾರ ಆಟ ಹಾಳು ಮಾಡಿದ್ದಾರೆ ಎಂದು ಹೇಳಲಾಗುತ್ತಾ ಇದೆ. ಈ ವಿಚಾರದಲ್ಲೂ ಸುದೀಪ್ ಅವರು ಕ್ಲಾಸ್ ತೆಗೆದುಕೊಂಡಿದ್ದಾರೆ. ರಕ್ಷಿತಾಗೂ ಪಾಠ ಮಾಡಿದ್ದಾರೆ.
ಇದನ್ನೂ ಓದಿ: ಯಾರೂ ಒಪ್ಪದ ಕೆಲಸ ಮಾಡಿದ ಜಾನ್ವಿ ಆ್ಯಂಡ್ ಟೀಂ; ಬಿಗ್ ಬಾಸ್ ದೊಡ್ಡ ಶಿಕ್ಷೆ
ಗಿಲ್ಲಿ ನಟ ಅವರು ಓವರ್ ಕಾನ್ಫಿಡೆನ್ಸ್ನಲ್ಲಿ ಇದ್ದಾರೆ ಎಂದು ಅನೇಕರಿಗೆ ಅನಿಸಿದೆ. ‘ಕಿಚ್ಚನ ಚಪ್ಪಾಳೆ ಸಿಕ್ಕಿದೆ’ ಎಂದು ಗಿಲ್ಲಿ ಬೀಗುತ್ತಾ ಇದ್ದರು. ಈಗ ಸುದೀಪ್ ಅವರು ಎಚ್ಚರಿಕೆ ನೀಡಿದ್ದರಿಂದ ಎಲ್ಲವೂ ಸರಿ ಆಗಬಹುದು ಎಂಬ ಊಹೆ ಅಭಿಮಾನಿಗಳದ್ದು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:18 pm, Sat, 15 November 25



