AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಕಾಶ್​ಗೆ ತಿಳಿದೋಯ್ತು ತಂದೆಯ ರಹಸ್ಯ; ಗೌತಮ್​ಗೆ ಬಿಗಿದಪ್ಪುಗೆ

Amruthadhaare Serial: ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್-ಭೂಮಿಕಾ ಐದು ವರ್ಷಗಳ ನಂತರ ಮತ್ತೆ ಒಂದಾಗಿದ್ದಾರೆ. ಶಕುಂತಲಾ ಕಾರಣದಿಂದ ದೂರವಿದ್ದ ಇವರ ಮಗ ಆಕಾಶ್‌ಗೆ ಈಗ ತನ್ನ ನಿಜವಾದ ತಂದೆ ಗೌತಮ್ ಎಂದು ಗೊತ್ತಾಗಿದೆ. ಸೂಟ್‌ಕೇಸ್‌ನಲ್ಲಿ ಸಿಕ್ಕ ಮದುವೆ ಫೋಟೋದಿಂದ ಆಕಾಶ್ ಸತ್ಯ ಅರಿತಿದ್ದಾನೆ.

ಆಕಾಶ್​ಗೆ ತಿಳಿದೋಯ್ತು ತಂದೆಯ ರಹಸ್ಯ; ಗೌತಮ್​ಗೆ ಬಿಗಿದಪ್ಪುಗೆ
ಅಮೃತಧಾರೆ
 ಶ್ರೀಲಕ್ಷ್ಮೀ ಎಚ್
| Edited By: |

Updated on: Nov 15, 2025 | 12:44 PM

Share

‘ಅಮೃತಧಾರೆ’ (Amruthadhaare) ಧಾರಾವಾಹಿಯಲ್ಲಿ ಇಷ್ಟು ದಿನ ಗೌತಮ್ ದೀವಾನ್ ಹಾಗೂ ಭೂಮಿಕಾ ದೀವಾನ್ ದೂರ ದೂರವೇ ಇದ್ದರು. ಐದು ವರ್ಷಗಳ ಹಿಂದೆ ಇವರು ಮನೆ ಬಿಟ್ಟು ಬಂದಿದ್ದರು. ಶಕುಂತಲಾ ಇದಕ್ಕೆಲ್ಲ ಕಾರಣ ಆಗಿದ್ದಳು. ಈಗ ಎಲ್ಲರೂ ಒಂದೇ ವಠಾರಕ್ಕೆ ತೆರಳಿದ್ದಾರೆ. ಭೂಮಿಕಾ ಮಗ ಆಕಾಶ್​ಗೆ ತಂದೆ ಯಾರು ಎಂಬ ವಿಚಾರ ತಿಳಿದಿರಲೇ ಇಲ್ಲ. ಈಗ ಈ ರಹಸ್ಯ ಅಪ್ಪುಗೆ ತಿಳಿದೇ ಹೋಗಿದೆ.

ಭೂಮಿಕಾಗೆ ಇಬ್ಬರು ಮಕ್ಕಳು ಜನಿಸಿದ್ದರು. ಈ ಪೈಕಿ ಒಂದು ಮಗುವನ್ನು ಜಯದೇವ್ ಕಳೆದು ಹಾಕಿದ್ದಾನೆ. ಈ ವಿಷಯ ಭೂಮಿಕಾಗೆ ಬೇಸರ ಮೂಡಿಸಿತ್ತು. ಇದೇ ಸಮಯದಲ್ಲಿ ಶಕುಂತಲಾ ಬೆದರಿಕೆ ಹಾಕಿದ್ದಳು. ಗೌತಮ್​ನಿಂದ ದೂರ ಇರುವಂತೆ ಸೂಚಿಸಿದ್ದಳು. ಇಲ್ಲವಾದಲ್ಲಿ ಕುಟುಂಬ ನಾಶ ಮಾಡೋದಾಗಿ ಹೇಳಿದ್ದಳು. ಇದರಿಂದ ಬೆದರಿದ ಭೂಮಿಕಾ ಮನೆ ಬಿಟ್ಟು ಹೋಗಿದ್ದಳು.

ಗೌತಮ್​ನಿಂದ ಐದು ವರ್ಷ ಭೂಮಿಕಾ ದೂರವೇ ಇದ್ದಳು. ಈಗ ಇಬ್ಬರು ಮತ್ತೆ ಒಂದಾಗಿದ್ದಾರೆ. ಒಂದೇ ವಠಾರದಲ್ಲಿ ಇವರಿದ್ದಾರೆ. ತಂದೆ ಯಾರು ಎಂಬ ವಿಚಾರವನ್ನು ಭೂಮಿಕಾ ಇಷ್ಟು ದಿನ ಅಪ್ಪುನಿಂದ ಮುಚ್ಚಿಟ್ಟಿದ್ದಳು. ಆದರೆ, ಈಗ ಆ ವಿಷಯ ಗೊತ್ತಾಗುವ ಸಮಯ. ಈ ವಿಷಯ ಅಚಾನಕ್ಕಾಗಿ ರಿವೀಲ್ ಆಗಿದೆ.

ಅಮೃತಧಾರೆ ಪ್ರೋಮೋ

View this post on Instagram

A post shared by Zee Kannada (@zeekannada)

ಭೂಮಿಕಾಳು ಕಪಾಟಿನ ಮೇಲ್ಭಾಗದ ಸ್ಯೂಟ್​ಕೇಸ್​​ನಲ್ಲಿ ಗೌತಮ್ ಜೊತೆಗಿನ ಮದುವೆ ಫೋಟೋ ಇಟ್ಟಿದ್ದಳು. ಬ್ಯಾಗ್ ತೆಗೆಯುವಾಗ ಫೋಟೋ ಇಟ್ಟ ಸ್ಯೂಟ್​ಕೇಸ್ ಬಿದ್ದು ಹೋಗಿದೆ. ಈ ವೇಳೆ ಫೋಟೋ ಕೂಡ ಬಿದ್ದಿದೆ. ಫೋಟೋ ನೋಡುತ್ತಿದ್ದಂತೆ ಆಕಾಶ್​ಗೆ ಶಾಕ್ ಆಗಿದೆ. ಆತನಿಗೆ ತಂದೆ ಯಾರು ಎಂಬ ಸತ್ಯ ಗೊತ್ತಾಗಿದೆ.

ಇದನ್ನೂ ಓದಿ: ‘ಅಮೃತಧಾರೆ’ ಧಾರಾವಾಹಿಯಲ್ಲಿ ರೋಚಕ ತಿರುವು; ಕಳೆದು ಹೋದ ಮಗಳು ಗೌತಮ್​ಗೆ ಸಿಕ್ಕೇ ಬಿಟ್ಟಳು

‘ಗೌತಮ್ ಅವರು ನನ್ನ ತಂದೆನಾ’ ಎಂದು ಮನಸ್ಸಿಲ್ಲೇ ಅಂದುಕೊಂಡಿದ್ದಾನೆ ಆಕಾಶ್. ನಂತರ ಓಡೋಡಿ ಬಂದು ಗೌತಮ್​ನ ಹಗ್ ಮಾಡಿಕೊಂಡಿದ್ದಾನೆ. ‘ನೀವು ನನ್ನ ತಂದೆನಾ’ ಎಂದು ಖುಷಿಪಟ್ಟಿದ್ದಾನೆ. ಇಷ್ಟು ದಿನ ತಂದೆ ಇಲ್ಲ ಎಂಬ ನೋವು ಆತನಿಗೆ ಬಹುವಾಗಿ ಕಾಡುತ್ತಾ ಇತ್ತು. ಈಗ ತಂದೆ ಸಿಕ್ಕಿರೋದು ಆತನಿಗೆ ಖುಷಿ ಕೊಟ್ಟಿದೆ. ಈಗ ಗೌತಮ್ ಹೆಣ್ಣು ಮಗುವೊಂದನ್ನು ದತ್ತು ಪಡೆದಿದ್ದಾನೆ. ಅದು ಗೌತಮ್-ಭೂಮಿಕಾ ಮಗಳೇ ಇರಬಹುದು ಎಂದು ವೀಕ್ಷಕರು ಊಹಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಇಂದು ಶೃಂಗೇರಿ ಬಂದ್, ಖಾಸಗಿ ಶಾಲೆ-ಕಾಲೇಜಿಗೂ ರಜೆ
ಇಂದು ಶೃಂಗೇರಿ ಬಂದ್, ಖಾಸಗಿ ಶಾಲೆ-ಕಾಲೇಜಿಗೂ ರಜೆ
ಬೀದರ್​ನಲ್ಲಿ ನಿವೃತ್ತ ಅಗ್ನಿಶಾಮಕ ಸಿಬ್ಬಂದಿ ಮನೆಯಲ್ಲಿ ಚಿನ್ನಾಭರಣ ಕಳ್ಳತನ
ಬೀದರ್​ನಲ್ಲಿ ನಿವೃತ್ತ ಅಗ್ನಿಶಾಮಕ ಸಿಬ್ಬಂದಿ ಮನೆಯಲ್ಲಿ ಚಿನ್ನಾಭರಣ ಕಳ್ಳತನ
ಗ್ಯಾಂಗ್​ಸ್ಟರ್ ಸಂದೀಪ್​ಗೆ ಡ್ರಮ್ ಬಾರಿಸಿ ಸ್ವಾಗತ ಕೋರಿದ ಗ್ರಾಮಸ್ಥರು
ಗ್ಯಾಂಗ್​ಸ್ಟರ್ ಸಂದೀಪ್​ಗೆ ಡ್ರಮ್ ಬಾರಿಸಿ ಸ್ವಾಗತ ಕೋರಿದ ಗ್ರಾಮಸ್ಥರು
ಬೆಂಗಳೂರಿನ ಹಲವೆಡೆ ತಡರಾತ್ರಿ ಮಳೆ ಅಬ್ಬರ: ವಾಹನ ಸವಾರರ ಪರದಾಟ
ಬೆಂಗಳೂರಿನ ಹಲವೆಡೆ ತಡರಾತ್ರಿ ಮಳೆ ಅಬ್ಬರ: ವಾಹನ ಸವಾರರ ಪರದಾಟ
ರವಿ ಕನ್ಯಾ, ಚಂದ್ರ ಧನು ರಾಶಿಯಲ್ಲಿ ಸಂಚಾರ: 12 ರಾಶಿಗಳ ಇಂದಿನ ದಿನ ಭವಿಷ್ಯ
ರವಿ ಕನ್ಯಾ, ಚಂದ್ರ ಧನು ರಾಶಿಯಲ್ಲಿ ಸಂಚಾರ: 12 ರಾಶಿಗಳ ಇಂದಿನ ದಿನ ಭವಿಷ್ಯ
ಸಾಮೂಹಿಕ ಗಣೇಶ ವಿಸರ್ಜನೆ ವೇಳೆ ಕೋಮು ಸೌಹಾರ್ದತೆ ಮೆರೆದ ಮುಸ್ಲಿಂ ಬಾಂಧವರು
ಸಾಮೂಹಿಕ ಗಣೇಶ ವಿಸರ್ಜನೆ ವೇಳೆ ಕೋಮು ಸೌಹಾರ್ದತೆ ಮೆರೆದ ಮುಸ್ಲಿಂ ಬಾಂಧವರು
ಬದರಿನಾಥದ ಮಹಿಳೆಯರ ಜೊತೆ ಜಾನಪದ ನೃತ್ಯ ಮಾಡಿದ ಸಿಎಂ ಪುಷ್ಕರ್ ಸಿಂಗ್ ಧಾಮಿ!
ಬದರಿನಾಥದ ಮಹಿಳೆಯರ ಜೊತೆ ಜಾನಪದ ನೃತ್ಯ ಮಾಡಿದ ಸಿಎಂ ಪುಷ್ಕರ್ ಸಿಂಗ್ ಧಾಮಿ!
ವೇದಿಕೆ ಮೇಲೆಯೇ ಶಿಡ್ಲಘಟ್ಟ ತಹಶೀಲ್ದಾರ್​​ಗೆ ಡಿಸಿ ಕ್ಲಾಸ್
ವೇದಿಕೆ ಮೇಲೆಯೇ ಶಿಡ್ಲಘಟ್ಟ ತಹಶೀಲ್ದಾರ್​​ಗೆ ಡಿಸಿ ಕ್ಲಾಸ್
ಸಿನಿಮಾ ಸೆನ್ಸಾರ್​​ಗೆ ಹೊಸ ಮಾರ್ಗಸೂಚಿ: ಇಲ್ಲಿದೆ ಪೂರ್ಣ ಮಾಹಿತಿ ವಿಡಿಯೋ
ಸಿನಿಮಾ ಸೆನ್ಸಾರ್​​ಗೆ ಹೊಸ ಮಾರ್ಗಸೂಚಿ: ಇಲ್ಲಿದೆ ಪೂರ್ಣ ಮಾಹಿತಿ ವಿಡಿಯೋ
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಸಿ. ಮಹದೇವಪ್ಪ ಟಾಂಗ್
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಸಿ. ಮಹದೇವಪ್ಪ ಟಾಂಗ್