ಸಕ್ಸಸ್ ಮೀಟ್ ಘೋಷಣೆ ಮಾಡಿದ ‘ಮಾರ್ಟಿನ್’ ತಂಡ; ಎಲ್ಲಿ, ಯಾವಾಗ?

|

Updated on: Oct 14, 2024 | 8:52 AM

ಬೆಂಗಳೂರಿನ ಜಿಟಿ ಮಾಲ್​​ನಲ್ಲಿರೋ ಎಂಎಂಬಿ ಲೆಗಸಿಯಲ್ಲಿ ಸೋಮವಾರ (ಅಕ್ಟೋಬರ್ 14) ಸಂಜೆ ಸಕ್ಸಸ್ ಮೀಟ್ ಆಯೋಜನೆ ಮಾಡಲಾಗಿದೆ. ಇದಕ್ಕೆ ಇಡೀ ಸಿನಿಮಾ ತಂಡ ಭಾಗಿ ಆಗುವ ಸಾಧ್ಯತೆ ಇದೆ. ‘ಮಾರ್ಟಿನ್’ ಸಿನಿಮಾದ ಗಳಿಕೆ ಮೂರು ದಿನಕ್ಕೆ 16 ಕೋಟಿ ರೂಪಾಯಿ ಆಗಿದೆ ಎನ್ನಲಾಗಿದೆ.

ಸಕ್ಸಸ್ ಮೀಟ್ ಘೋಷಣೆ ಮಾಡಿದ ‘ಮಾರ್ಟಿನ್’ ತಂಡ; ಎಲ್ಲಿ, ಯಾವಾಗ?
ಮಾರ್ಟಿನ್
Follow us on

ಬಿಗ್ ಬಜೆಟ್ ಸಿನಿಮಾ ‘ಮಾರ್ಟಿನ್’ ಸಿನಿಮಾ ದಸರಾ ಪ್ರಯುಕ್ತ ಅಕ್ಟೋಬರ್ 11ರಂದು ರಿಲೀಸ್ ಆಯಿತು. ಈ ಚಿತ್ರ ಉತ್ತಮ ಗಳಿಕೆ ಮಾಡುತ್ತಿದೆ. ಈ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಹೀಗಿರುವಾಗಲೇ ಚಿತ್ರತಂಡ ಸಕ್ಸಸ್​ಮೀಟ್ ಘೋಷಣೆ ಮಾಡಿದೆ. ಧ್ರುವ ಸರ್ಜಾ ಹೀರೋ ಆಗಿ ನಟಿಸಿರೋ ಈ ಚಿತ್ರಕ್ಕೆ, ಎಪಿ ಅರ್ಜುನ್ ನಿರ್ದೇಶನ ಇದೆ. ಉದಯ್ ಮೆಹತಾ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

‘ಮಾರ್ಟಿನ್’ ಸಿನಿಮಾ ಘೋಷಣೆ ಆಗಿ ಬಹಳ ಸಮಯ ಕಳೆದಿತ್ತು. ಕಾರಣಾಂತರಗಳಿಂದ ಚಿತ್ರದ ರಿಲೀಸ್ ದಿನಾಂಕ ಮುಂದಕ್ಕೆ ಹೋಗುತ್ತಲೇ ಬಂತು. ಆ ಬಳಿಕ ಇದನ್ನು ಪ್ಯಾನ್ ಇಂಡಿಯಾ ಸಿನಿಮಾ ಮಾಡುವ ಆಲೋಚನೆ ತಂಡದವರಿಗೆ ಬಂತು. ಅದೇ ರೀತಿ ಸಿನಿಮಾನ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿದ್ಧಪಡಿಸಿ ಅಕ್ಟೋಬರ್ 11ರಂದು ಬಿಡುಗಡೆ ಮಾಡಲಾಯಿತು. ಕನ್ನಡದ ಜೊತೆ ಹಿಂದಿ ಮೊದಲಾದ ಭಾಷೆಗಳಿಗೆ ಸಿನಿಮಾ ಡಬ್ ಆಗಿ ರಿಲೀಸ್ ಆಯಿತು. ಈಗ ಚಿತ್ರದ ಸಕ್ಸಸ್ ಮೀಟ್ ಹಮ್ಮಿಕೊಳ್ಳಲಾಗಿದೆ.

ಬೆಂಗಳೂರಿನ ಜಿಟಿ ಮಾಲ್​​ನಲ್ಲಿರೋ ಎಂಎಂಬಿ ಲೆಗಸಿಯಲ್ಲಿ ಸೋಮವಾರ (ಅಕ್ಟೋಬರ್ 14) ಸಂಜೆ ಸಕ್ಸಸ್ ಮೀಟ್ ಆಯೋಜನೆ ಮಾಡಲಾಗಿದೆ. ಇದಕ್ಕೆ ಇಡೀ ಸಿನಿಮಾ ತಂಡ ಭಾಗಿ ಆಗುವ ಸಾಧ್ಯತೆ ಇದೆ. ‘ಮಾರ್ಟಿನ್’ ಸಿನಿಮಾದ ಗಳಿಕೆ ಮೂರು ದಿನಕ್ಕೆ 16 ಕೋಟಿ ರೂಪಾಯಿ ಆಗಿದೆ ಎನ್ನಲಾಗಿದೆ. ಸಕ್ಸ್​ಸ್​ಮೋಟ್ ವೇಳೆ ಸಿನಿಮಾದ ಒಟ್ಟಾರೆ ಕಲೆಕ್ಷನ್ ಬಗ್ಗೆ ಮಾಹಿತಿ ಸಿಗೋ ಸಾಧ್ಯತೆ ಇದೆ.

ಇದನ್ನೂ ಓದಿ:  ‘ಮಾರ್ಟಿನ್’ ಸಿನಿಮಾ ಮೂರು ದಿನಕ್ಕೆ ಗಳಿಸಿದ್ದೆಷ್ಟು? ಇಲ್ಲಿದೆ ಕಲೆಕ್ಷನ್ ವಿವರ

‘ಮಾರ್ಟಿನ್’ ಚಿತ್ರದಲ್ಲಿ ಧ್ರುವ ಸರ್ಜಾ ಅವರು ದ್ವಿಪಾತ್ರದಲ್ಲಿ ನಟಿಸಿದ್ದಾರೆ. ಪರಭಾಷಿಗರು ಈ ಚಿತ್ರದ ಬಗ್ಗೆ ಅಪಸ್ವರ ತೆಗೆದಿದ್ದಾರೆ. ಸಿನಿಮಾ ಉತ್ತಮವಾಗಿಲ್ಲ ಎಂದು ಕೆಲವರು ಹೇಳಿದ್ದು ಇದೆ. ಆದರೆ, ಧ್ರುವ ಸರ್ಜಾ ಅಭಿಮಾನಿಗಳು ಇದನ್ನು ಒಪ್ಪುತ್ತಿಲ್ಲ. ಸಿನಿಮಾ ಬಗ್ಗೆ ಅಪ ಪ್ರಚಾರ ಮಾಡಲಾಗುತ್ತಿದೆ ಎನ್ನುವ ಆರೋಪವನ್ನು ಅವರು ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.