
ಮೇಘನಾ ಹುಟ್ಟುಹಬ್ಬಕ್ಕೆ ಅಭಿಮಾನಿಗಳು, ಸ್ನೇಹಿತರು ಮತ್ತು ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಶುಭಕೋರುತ್ತಿದ್ದಾರೆ. ಮೇಘನಾ ಪಾಲಿಗೆ ಪತಿ ಚಿರಂಜೀವಿ ಸರ್ಜಾ ಇಲ್ಲದ ಮೊದಲ ವರ್ಷದ ಬರ್ತ್ಡೇ ಇದು.

ಕಳೆದ ವರ್ಷ ಪತಿಯ ಅಗಲಿಕೆ ಬಳಿಕ ಮೇಘನಾ ಬದುಕಿನಲ್ಲಿ ಹೊಸ ಭರವಸೆಯ ರೂಪದಲ್ಲಿ ಬಂದಿದ್ದು ಅವರ ಪತ್ರ. ಮುದ್ದಿನ ಕಂದನನ್ನು ಜ್ಯೂನಿಯರ್ ಚಿರು ಎಂದೇ ಅಭಿಮಾನಿಗಳಿಗೆ ಮೇಘನಾ ಪರಿಚಯಿಸಿದ್ದಾರೆ.

ಮೇ 2ರಂದು ಮೇಘನಾ-ಚಿರು ವಿವಾಹ ವಾರ್ಷಿಕೋತ್ಸವ. ಈ ಸಲುವಾಗಿ ಮೇಘನಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ವಿಡಿಯೋ ಗಮನ ಸೆಳೆಯುತ್ತಿದೆ.

ಸದ್ಯ ಪುತ್ರನ ಪಾಲನೆಯಲ್ಲಿ ಮೇಘನಾ ರಾಜ್ ತೊಡಗಿಕೊಂಡಿದ್ದಾರೆ. ಆದಷ್ಟು ಬೇಗ ಅವರು ಬಣ್ಣದ ಲೋಕಕ್ಕೆ ಕಮ್ಬ್ಯಾಕ್ ಮಾಡಲಿ ಎಂದು ಅವರ ಅಭಿಮಾನಿಗಳು ಹಾರೈಸುತ್ತಿದ್ದಾರೆ.

ಜ್ಯೂ. ಚಿರು ಫೋಟೋಗಳನ್ನು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಮೇಘನಾ ಹಂಚಿಕೊಳ್ಳುತ್ತಿರುತ್ತಾರೆ. ಅವುಗಳಿಗೆ ಚಿರು ಅಭಿಮಾನಿಗಳಿಗೆ ಸಖತ್ ಲೈಕ್ಸ್ ಸಿಗುತ್ತದೆ. ಜ್ಯೂ. ಚಿರುಗೆ ಸಿಂಬಾ ಎಂದು ಕೂಡ ಮೇಘನಾ ಕರೆಯುತ್ತಾರೆ.

2009ರಿಂದಲೂ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಮೇಘನಾ ರಾಜ್ ಅವರು ಕನ್ನಡ ಮಾತ್ರವಲ್ಲದೆ ಮಲಯಾಳಂ, ತಮಿಳು ಮತ್ತು ತೆಲುಗಿನಲ್ಲಿಯೂ ಅಭಿನಯಿಸಿದ್ದಾರೆ. ಮಲಯಾಳಂನಲ್ಲಿ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ.